ಭಾರತದ ಟಿ20 ಕ್ರಿಕೆಟ್ನ ಸ್ಟೈಲಿಶ್ ಬ್ಯಾಟರ್ ಸೂರ್ಯಕುಮಾರ್ ಯಾದವ್, ಇಂದು 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
53 ಟಿ20 ಪಂದ್ಯಗಳಲ್ಲಿ 46.02 ರ ಬ್ಯಾಟಿಂಗ್ ಸರಾಸರಿಯಲ್ಲಿ 15 ಅರ್ಧಶತಕ, 3 ಶತಕಗಳ ನೆರವಿನಿಂದ 1841 ರನ್ ಗಳಿಸಿದ್ದಾರೆ.
ಸೂರ್ಯಕುಮಾರ್ ಸದ್ಯ ಏಷ್ಯಾಕಪ್ ಟೂರ್ನಿಯನ್ನು ಆಡುತ್ತಿದ್ದಾರೆ. ಆದರೆ ಆಡುವ ಅವಕಾಶ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ನಂಬರ್ 1 ಬ್ಯಾಟ್ಸ್ಮನ್ ಆಗಿರುವ ಸೂರ್ಯ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು.
ಬಿಸಿಸಿಐ ವೇತನ (ವಾರ್ಷಿಕ 3 ಕೋಟಿ), ಐಪಿಎಲ್ ವೇತನ (ಪ್ರತಿ ಸೀಸನ್ಗೆ 8 ಕೋಟಿ), ಜಾಹೀರಾತು ಸೇರಿದಂತೆ ವಿವಿಧ ಮೂಲಗಳಿಂದ ಸೂರ್ಯಗೆ ಹಣ ಹರಿದು ಬರುತ್ತದೆ.
ಸೂರ್ಯಕುಮಾರ್ ಅವರ ನಿವ್ವಳ ಆಸ್ತಿ ಮೌಲ್ಯ 45 ರಿಂದ 55 ಕೋಟಿ ಎಂದು ವರದಿಯಾಗಿದೆ.
ಮರ್ಸಿಡಿಸ್ ನಿಂದ BMW-Audi ವರೆಗಿನ ದುಬಾರಿ ಕಾರುಗಳು ಸೂರ್ಯ ಬಳಿ ಇವೆ. ಮರ್ಸಿಡಿಸ್ ಬೆಂಝ್ ಜಿಎಲ್ಇ ಕೂಪೆಯನ್ನು (2.15 ಕೋಟಿ), ನಿಸ್ಸಾನ್ ಜೊಂಗಾ (15 ಲಕ್ಷ), ರೇಂಜ್ ರೋವರ್ ವೆಲಾರ್ (90 ಲಕ್ಷ), MINI ಕೂಪರ್ ಎಸ್ ಮತ್ತು ಆಡಿ A6 (60 ಲಕ್ಷ) ಕಾರುಗಳಿವೆ.
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ