ಸ್ಥಳ ಬದಲಾವಣೆ, ಪರ್ಯಾಯ ಟಿಪ್ಪಣಿ, ವಿಭಿನ್ನ ತಂತ್ರಗಳೊಂದಿಗೆ ನಿಮ್ಮ ಓದಿನ ದಿನಚರಿಯಲ್ಲಿ ವೈವಿಧ್ಯತೆಯನ್ನ ಅಳವಡಿಸಿಕೊಳ್ಳಿ. ಇದು ಬೇಸರವನ್ನ ತಡೆದು, ವಿಮರ್ಶಾತ್ಮಕ ಚಿಂತನೆ ಹೆಚ್ಚಿಸುತ್ತೆ
ಹೆಚ್ಚು ಚಿಂತಿಸದೆ, ಮಾನಸಿಕ ಗೊಂದಲಗಳನ್ನು ಕಡಿಮೆ ಮಾಡಿ. ಇದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಅಗತ್ಯವಾದರೆ ಸ್ನೇಹಿತರು, ಶಿಕ್ಷಕರ ಸಲಹೆ ಪಡೆಯಿರಿ
ಅಧ್ಯಯನಕ್ಕಾಗಿ ಸಮಯವನ್ನ ಮೀಸಲು ಇಡುವ ಮನಸ್ಥಿತಿಯನ್ನ ಬೆಳೆಸಿಕೊಳ್ಳಿ. ನಿಶ್ಯಬ್ದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಅಧ್ಯಯನದ ಅಗತ್ಯಗಳ ಬಗ್ಗೆ ಪೋಷಕರೊಂದಿಗೆ ಚರ್ಚಿಸಿ, ಅಗತ್ಯ ಬೆಂಬಲ ಪಡೆಯಿರಿ
ಶಾಲೆಯಲ್ಲಿ ಶಿಕ್ಷಕರು ವಿಷಯಗಳ ಬಗ್ಗೆ ಹೇಳುವಾಗ ಗುರುತು ಮಾಡಿಟ್ಟುಕೊಳ್ಳಿ. ಒಂದಕ್ಕೊಂದು ಅಂತರ್ಸಂಪರ್ಕಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಿ
ತಿಳಿದಿರುವುದನ್ನು ಇತರರಿಗೆ ಹೇಳಿಕೊಡುವ ಮೂಲಕ ಗ್ರಹಿಕೆಯನ್ನು ಹೆಚ್ಚಿಸಿ. ಓದಿದನ್ನು ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ವಿವರಿಸಿದಾಗ ನಿಮ್ಮ ತಿಳುವಳಿಕೆ ಬಲಗೊಳ್ಳುತ್ತದೆ
ಹೊಸದಾಗಿ ಕಲಿತದ್ದನ್ನು ವರ್ಕ್‌ಶೀಟ್‌ಗಳಲ್ಲಿ ಬರೆದು ಪ್ರಾಯೋಗಿಕ ಪರೀಕ್ಷೆ ಮಾಡಿಕೊಳ್ಳಿ. ಕಲಿತಿರುವುದು ತಲೆಯಲ್ಲಿ ಉಳಿಯಲು ನೆರವಾಗುತ್ತದೆ
ಮಲ್ಟಿ ಟಾಸ್ಕ್‌ಗಳ ಪ್ರಯೋಗ ಮಾಡಬೇಡಿ. ಒಂದು ಸಮಯದಲ್ಲಿ ಒಂದು ಕಾರ್ಯದ ಮೇಲೆ ಮಾತ್ರ ಗಮನ ಹರಿಸಿ. ಕಲಿಕೆಗೆ ಇದು ಹೆಚ್ಚು ಪರಿಣಾಮಕಾರಿ ಹಾಗೂ ದೋಷಗಳನ್ನು ಕಡಿಮೆ ಮಾಡುತ್ತದೆ
ಪರೀಕ್ಷೆಗಳನ್ನು ಪ್ರಬಲ ಕಲಿಕಾ ಸಾಧನವಾಗಿ ಅಳವಡಿಸಿಕೊಳ್ಳಿ. ನಿಯಮಿತ ಪರೀಕ್ಷೆ ಸ್ಮರಣೆಯನ್ನು ಹೆಚ್ಚಿಸಿ ಕಲಿಕೆಯನ್ನು ಬಲಪಡಿಸುತ್ತದೆ
ಕಲಿಕೆಯ ಅಭ್ಯಾಸ, ಶೈಲಿಗಳನ್ನು ಅರ್ಥಮಾಡಿಕೊಳ್ಳುವುದು ದಕ್ಷತೆಗೆ ನಿರ್ಣಾಯಕವಾಗಿರುತ್ತದೆ. ಕಲಿಕಾ ಮಾದರಿಗಳೊಂದಿಗೆ ನಿಮ್ಮ ಅಧ್ಯಯನ ವಿಧಾನವನ್ನು ಸರಿಹೊಂದಿಸಿಕೊಳ್ಳಿ
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ