ವಿದೇಶದಲ್ಲಿ ಓದೋಕೆ ಹೋಗ್ತೀರಾ; ವಿಮಾನ ಟಿಕೆಟ್ ಬುಕ್ ಮಾಡಲು 4 ಸರಳ ಟಿಪ್ಸ್
By Raghavendra M Y Jan 19, 2024
Hindustan Times Kannada
ವಿದ್ಯಾರ್ಥಿ ವೀಸಾದಡಿ ಮೊದಲ ಬಾರಿಗೆ ವಿದೇಶದಲ್ಲಿ ವ್ಯಾಸಂಗಕ್ಕೆ ಹೋಗುವ ವಿದ್ಯಾರ್ಥಿಗಳು ಸಖತ್ ಖುಷಿ ಪಡುತ್ತಾರೆ
ವಿದೇಶದಲ್ಲಿ ವ್ಯಾಸಂಗಕ್ಕೆ ಹೋಗಲು ವಿದ್ಯಾರ್ಥಿಗಳು ವಿಮಾನ ಟಿಕೆಟ್ ಬುಕ್ ಮಾಡುವಾಗ ಗಮನಿಸಬೇಕಾದ ಮುಖ್ಯವಾದ 4 ಟಿಪ್ಸ್ ಇಲ್ಲಿವೆ
ಮೊದಲು ವಿದ್ಯಾರ್ಥಿಗಳ ಪ್ರಯಾಣಕ್ಕೆ ಯಾವುದಾದರೂ ರಿಯಾಯ್ತಿಗಳು ಇವೆ ಎಂದು ಪರಿಶೀಲಿಸಿಕೊಳ್ಳಿ
ಬಹುತೇಕ ವಿಮಾನಯಾನ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಲಗೇಜ್ ಸೇರಿದಂತೆ ಒಂದಷ್ಟು ರಿಯಾಯ್ತಿಗಳನ್ನು ನೀಡುತ್ತವೆ. ವಿದ್ಯಾರ್ಥಿ ಗುರುತಿನ ಚೀಟಿ, ಕಾಲೇಜು ಪ್ರವೇಶಾತಿ ಪ್ರತಿ ತಪ್ಪದೇ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ
ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಎಷ್ಟು ಕೆಜಿ ಲಗೇಜ್‌ಗೆ ಅವಕಾಶ ನೀಡಿದ್ದಾರೆ ಎಂಬುದನ್ನು ಪರಿಶೀಲಿಸಿಕೊಳ್ಳಿ
ಇದರಿಂದ ಹೆಚ್ಚುವರಿ ಲಗೇಜ್ ಶುಲ್ಕ ಪಾವತಿಯನ್ನ ತಪ್ಪಿಸಬಹುದು. ಟಿಕೆಟ್ ಬುಕ್ ಮಾಡುವಾಗ ಹೆಚ್ಚು ಲಗೇಜ್‌ಗೆ ಅವಕಾಶ ನೀಡುವ ವಿಮಾನ ಸಂಸ್ಥೆಗಳಿಗೆ ಮೊದಲ ಆದ್ಯತೆ ಇರಲಿ
ದಿನಾಂಕವನ್ನು ಬದಲಾಯಿಸಿಕೊಳ್ಳಲು ಅವಕಾಶ ಇರುವ ಟಿಕೆಟ್‌ಗಳನ್ನೇ ಬುಕ್ ಮಾಡಿಕೊಳ್ಳಿ
ವಿದ್ಯಾರ್ಥಿ ವೀಸಾ ತಡ ಆಗುವುದು ಅಥವಾ ಕೊನೆ ಕ್ಷಣದ ಬದಲಾವಣೆಗಳಿಗಾಗಿ ದಿನಾಂಕವನ್ನು ಬದಲಾಯಿಸಿಕೊಳ್ಳಲು ಅವಕಾಶ ಇರುವ ಟಿಕೆಟ್ ಬುಕಿಂಗ್ ಉತ್ತಮ ಆಯ್ಕೆ
ನೀವು ತಲುಪಬೇಕಾದ ಸ್ಥಳಕ್ಕೆ ನೇರ ವಿಮಾನ ಸೇವೆಯ ಟಿಕೆಟ್‌ಗಳನ್ನೇ ಬುಕ್ ಮಾಡಿ
ಹೆಚ್ಚಿನ ಲಗೇಜ್ ಜೊತೆಗೆ ನೀವು ಒಬ್ಬರೇ ವಿದೇಶ ಪ್ರಯಾಣ ಮಾಡುವಾಗ ನೇರ ವಿಮಾನ ಟಿಕೆಟ್ ಬುಕಿಂಗ್ ಒಳ್ಳೆಯದು
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ