ಓದಿದ್ದು ತಲೆಯಲ್ಲಿ ಉಳೀತಿಲ್ವಾ; ನೆನಪಿನ ಶಕ್ತಿ ಹೆಚ್ಚಿಸಲು ಇಲ್ಲಿವೆ ಟಿಪ್ಸ್
By Raghavendra M Y
Jan 20, 2024
Hindustan Times
Kannada
ಕೆಲವರಿಗೆ ಮರೆವು ಜಾಸ್ತಿ. ಓದಿದ್ದು ತಲೆಯಲ್ಲೇ ಉಳಿಯಬೇಕಾದರೆ ಏನು ಮಾಡಬೇಕು ಅನ್ನೋದನ್ನ ತಿಳಿಯಿರಿ
ನಿಮಗೆ ನೆನಪಿನಲ್ಲಿ ಉಳಿಯಬೇಕು ಎನ್ನಿಸಿದ ವಿಷಯಕ್ಕೆ ಸಂಬಂಧಿಸಿದ ಚಿತ್ರವನ್ನು ದೊಡ್ಡದಾಗಿ ರಚಿಸಿ ಅದು ನಿಮ್ಮ ಕಣ್ಣ ಮುಂದೆಯೇ ಕಾಣುವಂತೆ ಇಟ್ಟುಕೊಳ್ಳಿ
ಓದಿದ್ದು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವವರು ದೊಡ್ಡ ಪ್ರಮಾಣದ ಮಾಹಿತಿಯನ್ನ ಸಣ್ಣ ಭಾಗಗಳನ್ನಾಗಿ ಮಾಡಿಕೊಳ್ಳಿ. ನೆನಪಿಸಿಕೊಳ್ಳಲು ಇದು ಸುಲಭ ವಿಧಾನ
ನೆನಪಿನಲ್ಲಿಟ್ಟುಕೊಳ್ಳಬೇಕಾದ ಪದಗಳ ಆರಂಭಿಕ ಅಕ್ಷರಗಳನ್ನ ಬಳಸಿಕೊಂಡು ಸಂಕ್ಷಿಪ್ತ ರೂಪಗಳನ್ನು ರಚಿಸಿಕೊಳ್ಳಿ
ನೆನಪಿಡಲುು ಬಯಸುವ ಮಾಹಿತಿಯ ಕುರಿತ ಪ್ರಾಸ, ಹಾಡುಗಳು ಪದಗುಚ್ಚಗಳನ್ನು ರೂಪಿಸಿ. ಇದು ಮೆಮೊರಿಗೆ ನೆರವಾಗುವ ಒಂದು ಸುಲಭ ಮಾರ್ಗ
ಒಂದು ಪರಿಚಿತ ಸ್ಥಳವನ್ನು ಕಲ್ಪಿಸಿಕೊಂಡು ಅದರಲ್ಲಿ ಪ್ರತಿಯೊಂದು ಮಾಹಿತಿಯನ್ನ ನಿರ್ದಿಷ್ಟ ಸ್ಥಳಕ್ಕೆ ನಿಯೋಜಿಸಿ
ಪರೀಕ್ಷೆ ವೇಳೆ ಹಲವು ಬಾರಿ ನಡೆಸುವ ಪುನರಾವರ್ತನೆ ಕೂಡ ಓದಿದ್ದನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ
ಓದಿದ್ದು ನೆನಪಿಗೆ ಬರಲು ದೃಶ್ಯ ರೇಖಾಚಿತ್ರಗಳು ಇಲ್ಲವೇ ಮನಸ್ಸಿನಲ್ಲೇ ನಕ್ಷೆಗಳನ್ನ ಹಾಕಿಕೊಳ್ಳಿ. ಚರ್ಚೆ ಪ್ರಾಯೋಗಿಕ ಚಟುವಟಿಕೆಗಳು ನೆನಪಿನ ಶಕ್ತಿ ಹೆಚ್ಚಿಸುತ್ತವೆ
ನೀವು ಕಲಿತಿರುವುದನ್ನು ಬೇರೆಯರಿಗೆ ಹೇಳಿಕೊಡುವುದು ಅಥವಾ ಕಲಿಸಿದರೆ ನಿಮ್ಮ ಮನಸ್ಸಿನಲ್ಲಿ ಆ ಮಾಹಿತಿ ಗಟ್ಟಿಯಾಗಿ ಉಳಿಯುತ್ತದೆ
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ತಿಳಿಯಿರಿ
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ