ಅತಿಯಾದ ಸ್ಕ್ರೀನ್‌ಟೈಮ್‌ನಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಬೆಸ್ಟ್‌ ಟಿಪ್ಸ್‌

By Reshma
Feb 14, 2024

Hindustan Times
Kannada

ಅತಿಯಾದ ಸ್ಕ್ರೀನ್‌ ಟೈಮ್‌ ನಮ್ಮ ಕಣ್ಣು ಹಾಗೂ ಒಟ್ಟಾರೆ ಯೋಗಕ್ಷೇಮದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದಾಗುವ ಪರಿಣಾಮಗಳನ್ನು ತಗ್ಗಿಸಲು ಇಲ್ಲಿದೆ 5 ಬೆಸ್ಟ್‌ ಟಿಪ್ಸ್‌, ನೀವೂ ಪಾಲಿಸಿ. 

ಆಗಾಗ ಕಣ್ಣು ಮಿಟುಕಿಸಿ: ಹೆಚ್ಚಿದ ಸ್ಕ್ರೀನ್‌ ಟೈಮ್‌ ಕಾರಣದಿಂದ ನಾವು ಕಣ್ಣು ಮಿಟುಕಿಸುವುದನ್ನು ಮರೆತಿರುತ್ತೇವೆ. ಇದು ಕಣ್ಣಿನ ಪಾಪೆ ಒಣಗಲು ಕಾರಣವಾಗುತ್ತದೆ. ಕಣ್ಣುಗಳಲ್ಲಿ ತೇವಾಂಶ ಉಳಿಯುವಂತೆ ಮಾಡಲು ಆಗಾಗ ಕಣ್ಣು ಮಿಟುಕಿಸುವುದು ಬಹಳ ಮುಖ್ಯ.

ಬ್ರೈಟ್‌ನೆಸ್‌ ಅಡ್ಜಸ್ಟ್‌ ಮಾಡಿ: ಅತಿ ಹೆಚ್ಚು ಹಾಗೂ ಅತಿ ಕಡಿಮೆ ಬ್ರೈಟ್‌ನೆಸ್‌ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸುತ್ತಲಿನ ಪರಿಸರಕ್ಕೆ ಹೊಂದುವಂತೆ ಸ್ಕ್ರೀನ್‌ ಬ್ರೈಟ್‌ನೆಸ್‌ ಅಡ್ಜಸ್ಟ್‌ ಮಾಡಿಕೊಳ್ಳಿ. ಬ್ಲೂಲೈಟ್‌ ಪರಿಣಾಮ ತಡೆಯಲು ರಾತ್ರಿ ವೇಳೆ ನೈಟ್‌ ಮೋಡ್‌ ಆನ್‌ ಮಾಡಿ. 

20-20 ರೂಲ್ಸ್‌ ಫಾಲೋ ಮಾಡಿ: ಪ್ರತಿ 20 ನಿಮಿಷಕ್ಕೊಮ್ಮೆ ಬ್ರೇಕ್‌ ತೆಗೆದುಕೊಳ್ಳಿ. ನಿಮ್ಮ ಕಣ್ಣುಗಳನ್ನು ಸ್ಕ್ರೀನ್‌ ನೋಡುವುದರಿಂದ ತಪ್ಪಿಸಿ. 20 ಅಡಿ ದೂರ ನೋಡಿ. 

ಸ್ಕ್ರೀನ್‌ ಅಡ್ಜಸ್ಟ್‌ಮೆಂಟ್‌: ನಿಮ್ಮ ಸ್ಕ್ರೀನ್‌ ಅನ್ನು ಕಣ್ಣಿಗೆ ಹತ್ತಿರವಾಗಿ ಇರಿಸಬೇಡಿ. ನಿಮ್ಮ ಕೈಚಾಚಿದಾಗ ಎಷ್ಟು ದೂರ ಇರುವುದೋ ಅಷ್ಟು ದೂರಕ್ಕೆ ಸ್ಕ್ರೀನ್‌ ಇರುವುದು ಮುಖ್ಯ. 

ಆಂಟಿಗ್ಲೇರ್‌ ಗ್ಲಾಸ್‌ ಬಳಸಿ: ನೀವು ಬಳಸುವ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ಗೆ ಆಂಟಿಗ್ಲೇರ್‌ ಗ್ಲಾಸ್‌ ಬಳಸಿ. ಕೆಲಸದ ಸಮಯದಲ್ಲಿ ಕಣ್ಣುಗಳ ಮೇಲೆ ಉಂಟಾಗುವ ಒತ್ತಡ ತಡೆಯಲು ಆಂಟಿಗ್ಲೇರ್‌ ಗ್ಲಾಸ್‌ ಬಳಸಿ. 

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ