ಪಾಕಿಸ್ತಾನದ ವಿರುದ್ಧ ಒಂದು ವಿಕೆಟ್ ಪಡೆದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ವಿಶ್ವಕಪ್ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ಗಳ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ವೇಗಿ ವಾಸೀಂ ಅಕ್ರಮ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಾಕ್ ಎದುರಿನ ಪಂದ್ಯದಲ್ಲಿ 8 ಓವರ್ಗಳಲ್ಲಿ 65 ರನ್ ನೀಡಿ 1 ವಿಕೆಟ್ ಪಡೆದರು. ಆ ಮೂಲಕ ಈ ಸಾಧನೆ ಮಾಡಿದರು.
ಆ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ವಾಸೀಂ ಅಕ್ರಮ್ ಜೊತೆಗೆ ಜಂಟಿ 4ನೇ ಸ್ಥಾನ ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯನ್ನು ಈ ಮುಂದೆ ನೋಡೋಣ.
ಆಸ್ಟ್ರೇಲಿಯಾದ ಗ್ಲೇನ್ ಮೆಗ್ರಾತ್ 39 ಪಂದ್ಯಗಳಲ್ಲಿ 71 ವಿಕೆಟ್ ಪಡೆದು ಅಗ್ರಸ್ಥಾನ ಪಡೆದಿದ್ದಾರೆ.
ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್, 40 ಪಂದ್ಯಗಳಲ್ಲಿ 68 ವಿಕೆಟ್ ಉರುಳಿಸಿ 2ನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾದ ಲಸಿತ್ ಮಾಲಿಂಗ 29 ಪಂದ್ಯಗಳಲ್ಲಿ 56 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.
ಸದ್ಯ ಮಿಚೆಲ್ ಸ್ಟಾರ್ಕ್ 22 ಪಂದ್ಯಗಳಲ್ಲಿ 55 ವಿಕೆಟ್ ಪಡೆದಿದ್ದಾರೆ. ವಾಸೀಂ ಅಕ್ರಮ್ ಸಹ 55 ವಿಕೆಟ್ ಪಡೆದಿದ್ದಾರೆ. 4ನೇ ಸ್ಥಾನದಲ್ಲಿದ್ದಾರೆ. ಸ್ಟಾರ್ಕ್ ವೇಗವಾಗಿ ಇಷ್ಟು ವಿಕೆಟ್ ಪಡೆದಿದ್ದಾರೆ.
ಇದೇ ವಿಶ್ವಕಪ್ನಲ್ಲಿ ಇನ್ನೆರಡು ವಿಕೆಟ್ ಪಡೆದರೆ, ಅಕ್ರಮ್ ಮತ್ತು ಮಾಲಿಂಗ ದಾಖಲೆಯನ್ನು ಮುರಿದು 57 ವಿಕೆಟ್ಗಳೊಂದಿಗೆ 3ನೇ ಸ್ಥಾನಕ್ಕೆ ಏರಿಕೆ ಕಾಣಲಿದ್ದಾರೆ.
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ