ಮಕ್ಕಳು ಪೋಷಕರಿಂದ ಕಲಿಯುವ ಪ್ರಮುಖ ದುರಾಭ್ಯಾಸಗಳಿವು

By Reshma
Mar 29, 2024

Hindustan Times
Kannada

ಬಾಲ್ಯದಲ್ಲಿ ಮಕ್ಕಳು ಹೆಚ್ಚು ಸಮಯವನ್ನು ಪೋಷಕರ ಜೊತೆ ಕಳೆಯುವುದರಿಂದ ಅವರನ್ನು ಹೆಚ್ಚು ಅನುಕರಣೆ ಮಾಡುತ್ತಾರೆ. ತಂದೆ-ತಾಯಿ ಆಡುವ ಮಾತು, ನಡೆದುಕೊಳ್ಳುವ ವರ್ತನೆ ಎಲ್ಲವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲ ಅವುಗಳನ್ನು ಅದನ್ನೇ ರೂಢಿಸಿಕೊಳ್ಳುತ್ತವೆ. 

ಮಕ್ಕಳು ಪೋಷಕರಿಂದ ಕಲಿಯುವ ಅಭ್ಯಾಸ ಹಾಗೂ ವರ್ತನೆಗಳು ಅವರ ಭವಿಷ್ಯದ ಜೀವನದಲ್ಲೂ ಮುಂದುವರಿಯಬಹುದು. ಅಂತಹ ಕೆಲವು ಅಭ್ಯಾಸಗಳು ಇಲ್ಲಿವೆ. 

ಅಶಿಸ್ತಿನ ನಡವಳಿಕೆ: ಪೋಷಕರು ಸ್ನಾನದ ನಂತರ ಒದ್ದೆ ಟವಲ್‌ ಅನ್ನು ಬೆಡ್‌ ಮೇಲೆ ಎಸೆಯುವುದು, ಶೂಗಳನ್ನು ಎಲ್ಲೆಂದರಲ್ಲಿ ಇಡುವುದು, ಬಟ್ಟೆಗಳನ್ನು ಸಿಕ್ಕ ಸಿಕ್ಕಲ್ಲಿ ಹರಡಿ ಹಾಕುವುದು ಮಾಡಿದರೆ ಮಕ್ಕಳು ಕೂಡ ಅದೇ ಅಭ್ಯಾಸ ಮುಂದುವರಿಸುತ್ತಾರೆ. 

ವಿಪರೀತ ಪೈಪೋಟಿ: ಇತ್ತೀಚಿನ ದಿನಗಳಲ್ಲಿ ಓದಿನ ವಿಚಾರದಲ್ಲಿ ಮಕ್ಕಳು ವಿಪರೀತ ಪೈಪೋಟಿ ಎದುರಿಸುತ್ತಿದ್ದಾರೆ. ಹಲವು ಪೋಷಕರು ಪರೀಕ್ಷೆಯಲ್ಲಿ ಮಕ್ಕಳು ಗಳಿಸುವ ಅಂಕಗಳ ಮೂಲಕ ಅವರ ಯಶಸ್ಸನ್ನು ಅಳೆಯುತ್ತಾರೆ. ಆದರೆ ಇದು ಕೆಲವು ಮಕ್ಕಳಿಗೆ ಹತಾಶೆ, ನಿರಾಸೆ ಹಾಗೂ ಖಿನ್ನತೆ ದೂಡಬಹುದು. 

ವೈಯಕ್ತಿಕ ಸ್ವಚ್ಛತೆ: ಕೆಲವರು ಪ್ರತಿನಿತ್ಯ ಸ್ನಾನ ಮಾಡುವುದು, ಊಟಕ್ಕೂ ಕೈ ತೊಳೆಯದೇ ಇರುವುದು, ರಾತ್ರಿ ಮಲಗುವ ಮುನ್ನ ಬ್ರಷ್‌ ಮಾಡದಿರುವುದು ಇಂತಹ ಅಭ್ಯಾಸಗಳನ್ನು ಹೊಂದಿದ್ದರೆ ಮಕ್ಕಳು ಇದನ್ನೇ ಅನುಸರಿಸುತ್ತಾರೆ. 

ಹೊಡೆಯುವುದು: ಹಲವು ಮಕ್ಕಳಿಗೆ ಶಾಲೆಯಲ್ಲಿ ಬೇರೆ ಮಕ್ಕಳಿಗೆ ಹೊಡೆಯುವ ಅಭ್ಯಾಸವಿದೆ. ಇದನ್ನು ತಿಳಿದ ಪೋಷಕರು ಮಗುವಿಗೆ ದಂಡಿಸುತ್ತಾರೆ. ಇದರಿಂದ ಮಕ್ಕಳ ವರ್ತನೆ ಇನ್ನಷ್ಟು ಕ್ರೂರವಾಗುತ್ತದೆ. ನೀನೇ ಹೊಡೆಯುತ್ತೀಯಾ ನಾನು ಹೊಡೆಯಬಾರದಾ ಎಂಬ ಹಠ ಮೂಡುತ್ತದೆ. ಮಕ್ಕಳಿಗೆ ಹೊಡೆಯುವ ಮುನ್ನ ಯೋಚಿಸಿ. 

ಅಶ್ಲೀಲ ಪದ ಬಳಕೆ: ನೀವು ಮನೆಯಲ್ಲಿ ಜಗಳವಾಡುವಾಗ ಅಥವಾ ಫೋನ್‌ನಲ್ಲಿ ಮಾತನಾಡುವಾಗ ಅಶ್ಲೀಲ ಪದ ಬಳಕೆ ಮಾಡಿದರೆ ಮಕ್ಕಳು ಅದನ್ನು ಬೇಗ ಕಲಿಯುತ್ತಾರೆ. ಹಾಗಾಗಿ ಮಕ್ಕಳ ಮುಂದೆ ಮಾತನಾಡುವಾಗ ಎಚ್ಚರದಿಂದಿರಿ. 

ಬಯಸಿದ್ದೆಲ್ಲವೂ ಸಿಗಬೇಕು ಎನ್ನುವ ಹಠ: ಮಕ್ಕಳಿಗೆ ತಾವು ಬಯಸಿದ್ದೆಲ್ಲವೂ ತಮಗೆ ಸಿಗಬೇಕು ಎನ್ನುವ ಹಠ ಇರುವುದು ಸಹಜ. ಆದರೆ ಇದಕ್ಕೆ ಪೋಷಕರು ವರ್ತನೆಯೂ ಕಾರಣವಾಗಬಹುದು. ಹಾಗಾಗಿ ಈ ವಿಚಾರದಲ್ಲೂ ಎಚ್ಚರ ವಹಿಸುವುದು ಅವಶ್ಯ. 

ಉಗುರು ಕಡಿಯುವುದು: ಒತ್ತಡ, ಆತಂಕವಾದಾಗ ಉಗುರು ಕಡಿಯುವ ಅಭ್ಯಾಸ ನಿಮಗೂ ಇದ್ಯಾ, ಹಾಗಿದ್ರೆ ಈ ಅಭ್ಯಾಸವನ್ನು ಇಂದೇ ಬಿಡಿ. ಯಾಕೆಂದರೆ ನಿಮ್ಮ ಈ ಅಭ್ಯಾಸವನ್ನು ಮಗು ಕೂಡ ರೂಢಿಸಿಕೊಳ್ಳುತ್ತದೆ. 

ಅತಿಯಾದ ಸ್ಕ್ರೀನ್‌ ಟೈಮ್‌: ಮಕ್ಕಳಲ್ಲಿ ಅತಿಯಾದ ಸ್ಕ್ರೀನ್‌ ಟೈಮ್‌ಗೆ ಪೋಷಕರೇ ಕಾರಣ. ಪೋಷಕರು ಹೆಚ್ಚು ಹೆಚ್ಚು ಮೊಬೈಲ್‌ ನೋಡುತ್ತಿದ್ದರೆ, ಮಕ್ಕಳಿಗೆ ತಮಗೂ ನೋಡಬೇಕು ಎನ್ನಿಸುತ್ತದೆ. ಕೆಲವೊಮ್ಮೆ ಮಕ್ಕಳ ಹಠ, ಗಲಾಟೆ ಮಾಡುತ್ತಾರೆ ಎಂದು ಪೋಷಕರೇ ಪೋನ್‌ ನೀಡಿರುತ್ತಾರೆ. ಇದು ಮುಂದುವರಿದುಕೊಂಡು ಬಂದಿರುತ್ತದೆ. 

ಅನಾರೋಗ್ಯ ಆಹಾರ ಸೇವನೆ: ಪೋಷಕರು ಮನೆಯಲ್ಲಿ ಅಥವಾ ಹೊರಗಡೆ ಹೋದಾಗ ಯಾವ ರೀತಿ ಆಹಾರ ಸೇವಿಸುತ್ತಾರೋ ಮಕ್ಕಳು ಅದನ್ನೇ ಅನುಸರಿಸುತ್ತಾರೆ. ಹಾಗಾಗಿ ಮಕ್ಕಳ ಮುಂದೆ ತಿನ್ನುವ ವಿಚಾರದಲ್ಲಿ ಪೋಷಕರು ಎಚ್ಚರದಿಂದಿರಬೇಕು. 

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ