ಮಳೆಗಾಲದಲ್ಲಿ ನಮ್ಮ ಬಳಿ ಇರಲೇಬೇಕಾದ 10 ಅಗತ್ಯ ವಸ್ತುಗಳಿವು
By Reshma
May 25, 2024
Hindustan Times
Kannada
ದೇಶದೆಲ್ಲೆಡೆ ಮಳೆ ಸುರಿಯಲು ಆರಂಭವಾಗಿದೆ. ಮಳೆಗಾಲಕ್ಕೆ ಈಗಿನಿಂದಲೇ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳುವುದು ಅವಶ್ಯ.
ಮಳೆಗಾಲದಲ್ಲಿ ನಾವು ಅಗತ್ಯವಾಗಿ ಒಂದಿಷ್ಟು ವಸ್ತುಗಳನ್ನು ನಮ್ಮ ಬಳಿ ಹೊಂದಿರಬೇಕು. ಈಗಲೇ ಈ ವಸ್ತುಗಳನ್ನೆಲ್ಲಾ ನಿಮ್ಮ ಬಳಿ ಸಿದ್ಧ ಇರಿಸಿಕೊಂಡು ಮಳೆರಾಯನನ್ನು ಸ್ವಾಗತಿಸಿ.
ಮಳೆಗಾಲದ ಎಂದಾಕ್ಷಣ ಮೊದಲು ನೆನಪಾಗುವುದು ಛತ್ರಿ. ಹೌದು ಇದು ಮಳೆಗಾಲಕ್ಕೆ ಮಸ್ಟ್.
ನೀವು ವಾಹನಗಳಲ್ಲಿ ಓಡಾಡುವವರಾಗಿದ್ದರೆ, ನಿಮ್ಮ ಮನೆಯಲ್ಲಿ ಶಾಲಾ ಮಕ್ಕಳಿದ್ರೆ ನೀವು ರೈನ್‌ಕೋಟ್ ಖರೀದಿ ಮಾಡುವುದು ಉತ್ತಮ.
ಸೊಳ್ಳೆ ನಿವಾರಕಗಳು ಇಲ್ಲ ಅಂದ್ರೆ ಮಳೆಗಾಲದ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಮಳೆಗಾಲಕ್ಕೆ ಇವು ಮಸ್ಟ್.
ಮಳೆಗಾಲಕ್ಕೆ ಹೊಂದುವ ಚಪ್ಪಲಿಯಂತೂ ಖಂಡಿತ ಅವಶ್ಯ. ಇಲ್ಲದಿದ್ದರೆ ಬಟ್ಟೆ ಕೆಸರಾಗುವ ಜೊತೆಗೆ ಕೈ ಕಾಲು ಮುರಿಯುವ ಸಾಧ್ಯತೆಯೂ ಇದೆ.
ವಾಟರ್ ಫ್ರೂಪ್ ಬ್ಯಾಕ್‌ಪ್ಯಾಕ್ ಎಲ್ಲ ಅಂದ್ರೆ ಮಳೆಗಾಲದಲ್ಲಿ ನಿಮ್ಮೊಂದಿಗೆ ನಿಮ್ಮ ಬಳಿ ಇರುವ ವಸ್ತುಗಳೂ ನೆನೆಯುತ್ತವೆ.
ಬ್ಯಾಕ್‌ಪ್ಯಾಕ್ ಕವರ್ ಕೂಡ ಖರೀದಿಸಿಟ್ಟುಕೊಳ್ಳುವುದು ಉತ್ತಮ.
ಮಳೆಗಾಲಕ್ಕೆ ಹೊಂದುವ ಬಟ್ಟೆಗಳು, ಜಾಕೆಟ್ ಕೂಡ ಈಗಲೇ ಸಿದ್ಧ ಮಾಡಿಟ್ಟುಕೊಳ್ಳಿ.
ಮಳೆಗಾಲದಲ್ಲಿ ಜ್ವರ ನೆಗಡಿಯಂತಹ ಸಮಸ್ಯೆಗಳು ಪದೇ ಪದೇ ಕಾಡುವ ಕಾರಣ ಅದರ ನಿವಾರಣೆಗೆ ಅವಶ್ಯವಿರುವ ಔಷಧಿಗಳು ನಿಮ್ಮ ಬಳಿ ಇರಲಿ.
ಸ್ಮಾರ್ಟ್‌ಫೋನ್ ಪ್ರೊಟೆಕ್ಷನ್ ಕವರ್‌ಗಳು ಅವಶ್ಯ.
ಎಮರ್ಜೆನ್ಸಿ ಲೈಟ್ ಅಂತೂ ಇರಲೇಬೇಕು.
ಪವರ್‌ಬ್ಯಾಂಕ್ ಕೂಡ ಈಗಲೇ ಖರೀದಿಸಿಟ್ಟುಕೊಳ್ಳಿ. ಮಳೆಗಾಲದಲ್ಲಿ ಯಾವಾಗ ಕರೆಂಟ್ ಕೈ ಕೊಡುತ್ತದೆ ಹೇಳಲು ಆಗುವುದಿಲ್ಲ.
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ