ಜೀವನದಲ್ಲಿ ಏಳು ಬೀಳು ಸಹಜ, ವೈವಾಹಿಕ ಜೀವನದಲ್ಲಿ ಕೂಡಾ ಪತಿ ಪತ್ನಿ ನಡುವೆ ಕಲಹ ಇದ್ದೇ ಇರುತ್ತದೆ.
By HT Kannada Desk Jul 19, 2023
Hindustan Times Kannada
ಪ್ರತಿಯೊಬ್ಬ ಪುರುಷನು ತನ್ನ ಪತ್ನಿಯ ದೃಷ್ಟಿಯಲ್ಲಿ ಅತ್ಯುತ್ತಮ ಪತಿಯಾಗಬೇಕೆಂದು ಬಯಸುತ್ತಾನೆ.
ಆದರೆ ತಾವು ಮಾಡುವ ಕೆಲವೊಂದು ತಪ್ಪಿನಿಂದ ಪತಿ-ಪತ್ನಿಯ ನಡುವೆ ಮನಸ್ತಾಪ ಉಂಟಾಗುತ್ತದೆ.
ನಿಮಗೂ ಈ ಅಭ್ಯಾಸಗಳು ಇದ್ದರೆ ಅದನ್ನು ಬಿಡುವುದು ಒಳ್ಳೆಯದು. ನಂತರ ನಿಮ್ಮ ವೈವಾಹಿಕ ಜೀವನದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಿ.
ನಿಮ್ಮ ಪತ್ನಿಯ ವರ್ತನೆಯನ್ನಾಗಲೀ, ಆಕೆ ಮಾಡುವ ಅಡುಗೆಯನ್ನಾಗಲೀ ಎಂದಿಗೂ ಇತರರ ಎದುರು ನಿಂದಿಸಬೇಡಿ.
Video Credit: Pexels
ಅಡ್ಡಿಪಡಿಸುವವರನ್ನು ಯಾರೂ ಇಷ್ಟಪಡುವುದಿಲ್ಲ. ಮದುವೆ ನಂತರ, ಅನೇಕ ಗಂಡಂದಿರು ತಮ್ಮ ಪತ್ನಿಯರಿಗೆ ಭಾರೀ ನಿರ್ಬಂಧಿಸುತ್ತಾರೆ, ಅದು ಒಳ್ಳೆಯದಲ್ಲ.
ಮದುವೆ ನಂತರ ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಪ್ರೀತಿಗೆ ಕೊರತೆ ಇರಬಾರದು. ಗಂಡಂದಿರು ಸಾಮಾನ್ಯವಾಗಿ ಪ್ರೀತಿ ತೋರಿಸಲು ಮರೆಯುತ್ತಾರೆ, ಹೆಂಡತಿಯರು ಇದರಿಂದ ಬೇಸರ ವ್ಯಕ್ತಪಡಿಸುತ್ತಾರೆ.
ನಾನು ಹೊರಗೆ ಕೆಲಸ ಮಾಡುತ್ತೇನೆ, ನೀನು ಮನೆಯಲ್ಲಿ ಏನು ಮಾಡುತ್ತೀಯ ಎಂದು ಗಂಡ ಆಗಾಗ್ಗೆ ಪ್ರಶ್ನಿಸುತ್ತಾನೆ. ಮನೆಯ ನಿರ್ವಹಣೆ, ಅಡುಗೆ ಮಾಡುವುದು ಸುಲಭದ ಕೆಲಸವಲ್ಲ ಎಂಬುದನ್ನು ನೀವು ಗಮನದಲ್ಲಿಡಬೇಕು.
ಮಹಿಳೆಯರು ಸುಳ್ಳನ್ನು ಬಹಳ ದ್ವೇಷಿಸುತ್ತಾರೆ, ಒಂದು ವೇಳೆ ಪತಿ ಸುಳ್ಳು ಹೇಳಿ ಸಿಕ್ಕಿಬಿದ್ದಾಗ, ಗಲಾಟೆ ಉಂಟಾಗುತ್ತದೆ. ಸುಳ್ಳು ಹೇಳುವ ಅಭ್ಯಾಸವನ್ನು ಬದಲಾಯಿಸಿ.
ಸಾಮಾನ್ಯವಾಗಿ ಪುರುಷರು ತಮ್ಮ ಹೆಂಡತಿಯರೊಂದಿಗೆ ಏರು ಧ್ವನಿಯಲ್ಲಿ ಮಾತನಾಡುತ್ತಾರೆ, ಅವರಿಗೆ ಮಾತನಾಡಲು ಬಿಡುವುದಿಲ್ಲ. ಈ ರೀತಿ ಮಾಡುವುದು ತಪ್ಪು.
ಎಲ್ಲಾ ಜವಾಬ್ದಾರಿಗಳನ್ನು ಹೆಂಡತಿಯ ಮೇಲೆ ಹೊರಿಸಬೇಡಿ. ಮನೆ, ಮಕ್ಕಳು, ಸಂಸಾರ ಎಲ್ಲಾ ವಿಚಾರದಲ್ಲೂ ಸಮನಾಗಿ ಕಷ್ಟ ಸುಖ ಹಂಚಿಕೊಂಡರೆ ಉತ್ತಮ.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಟಗಾರರ ಬೆಸ್ಟ್ ಪ್ಲೇಯಿಂಗ್ XI