ಪ್ರೇಮಿಗಳ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಟಿಪ್ಸ್
By Rakshitha Sowmya
Feb 08, 2024
Hindustan Times
Kannada
ಫೆ 8 ರಂದು ಪ್ರಪೋಸ್ ಡೇ ಆಚರಿಸಲಾಗುತ್ತಿದೆ. ಈ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಕೆಲವೊಂದು ಟಿಪ್ಸ್ ಇಲ್ಲಿದೆ
ಆಕಾಶದಲ್ಲಿ ನಕ್ಷತ್ರಗಳು ಮಿನುಗುವವರೆಗೂ, ಸಮುದ್ರದ ನೀರು ಬತ್ತಿ ಹೋಗುವವರೆಗೂ ನನ್ನ ಜೀವನದ ಕೊನೆವರೆಗೂ ಪ್ರೀತಿಸುತ್ತಲೇ ಇರುತ್ತೇನೆ, ಪ್ರೇಮಿಗಳ ದಿನದ ಶುಭಾಶಯಗಳು
ಗೆಳತಿ ನೀನೆಂದರೆ ಮುಗಿಯದ ಕವನ ನಾ ಹೇಗೆ ಮರೆಯಲಿ ನಿನ್ನ ಪ್ರೇಮಿಗಳ ದಿನದ ಶುಭಾಶಯಗಳು
ಉಸಿರಿನ ಕೊನೆ ಕ್ಷಣದವರೆಗೂ ನಿನ್ನ ನಗುವಿಗಾಗಿ ಜೀವ ಮುಡುಪಿಡುವೆ ನನ್ನ ಪ್ರೀತಿಯನ್ನು ಸ್ವೀಕರಿಸು
ನಿನ್ನ ಕಷ್ಟಗಳ ಸಂಕೋಲೆಯಿಂದ ಬಿಡಿಸಿ ನನ್ನ ಪ್ರೀತಿ ಎಂಬ ಬಂಧನದಲ್ಲಿ ನಿನ್ನನ್ನು ಸೆರೆಯಾಗಿಸುವೆ, ನನ್ನನ್ನು ವರಿಸು ಚೆಲುವೆ
ನಿನ್ನ ಪ್ರತಿ ಹೆಜ್ಜೆಯಲ್ಲೂ, ನಿನ್ನ ಪ್ರತಿ ನೋವು ನಲಿವಿನಲ್ಲೂ ನಾನಿರುತ್ತೇನೆ ಮನಸಾರೆ ನಿನ್ನ ಪ್ರೀತಿಸುವೆ
ನೀ ನಕ್ಕರೆ ನಗುವೆ, ಅತ್ತರೆ ಕಣ್ಣೀರ ಒರೆಸುವೆ ಎಂದೆಂದಿಗೂ ನಿನ್ನ ಜೊತೆಯಾಗಿರುವೆ
ಬೆಲೆ ಬಾಳುವ ಉಡುಗೊರೆ ಕೊಡಲಾಗದಿದ್ದರೂ ಬೆಲೆ ಕಟ್ಟಲಾಗದ ನನ್ನ ಪ್ರೀತಿ ಕೊಡುವೆ ಈ ಪ್ರೀತಿ ನಿನಗಾಗಿ
ಎಂದೆಂದಿಗೂ ನೀ ನನ್ನ ವ್ಯಾಲೆಂಟೈನ್. ಕಷ್ಟಗಳಿಗೆ ಆಸರೆಯಾಗಿ ನಿನ್ನ ಬೆನ್ನುಲುಬಾಗಿ ಸದಾ ನಿನ್ನೊಂದಿಗೆ ಇರುವೆ ಪ್ರೇಮಿಗಳ ದಿನದ ಶುಭಾಶಯಗಳು
ನಟಿ ಜ್ಯೋತಿ ರೈ ಹಂಚಿಕೊಂಡ ಸ್ಪೂರ್ತಿದಾಯಕ ನುಡಿಮುತ್ತುಗಳು; ನಿಮಗೂ ಸ್ಪೂರ್ತಿಯಾಗಬಲ್ಲದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ