ಕಾನೂನಿನ ಅರಿವು ಎಲ್ಲರಿಗೂ ಇರಬೇಕು. ಅದರಲ್ಲೂ ಉದ್ಯೋಗಸ್ಥರು ಅಂದ ಮೇಲೆ ಜ್ಞಾನ ಇದ್ದೇ ಇರಬೇಕು. ಇಲ್ಲಿ ಉದ್ಯೋಗಸ್ಥ ಮಹಿಳೆಯರು ತಿಳಿದಿರಬೇಕಾದ ಕಾನೂನುಗಳ ಕುರಿತು ನೋಡೋಣ.
pixabay
ಹೆರಿಗೆ ಪ್ರಯೋಜನ ಕಾಯಿದೆ: 1961ರ ಕಾಯಿದೆಯು ಉದ್ಯೋಗಸ್ಥ ಮಹಿಳೆಯರಿಗೆ ಗರ್ಭಧಾರಣೆಯ ನಂತರ ತಮ್ಮ ವೃತ್ತಿಜೀವನ ಮುಂದುವರೆಸಲು 26 ವಾರಗಳ ರಜೆ ಒದಗಿಸುತ್ತದೆ. ಈ ರಜೆಗೆ ವೇತನ ನೀಡಲಾಗುತ್ತದೆ.
pixabay
ಕೆಲಸದ ಸ್ಥಳದಲ್ಲಿ ಕಿರುಕುಳ: ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಕಿರುಕುಳದ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ಕಾಯಿದೆ 2013; ಇದನ್ನು PoSH ಕಾಯಿದೆ ಎಂದೂ ಕರೆಯಲಾಗುತ್ತದೆ. ಕಚೇರಿಗಳಲ್ಲಿ ಅನುಚಿತ ವರ್ತನೆಯಿಂದ ಮಹಿಳೆಯರನ್ನು ರಕ್ಷಿಸಲು ನೆರವಾಗುತ್ತದೆ.
pixabay
ಕಾರ್ಖಾನೆಗಳ ಕಾಯಿದೆ, 1948: ಇದರ ಪ್ರಕಾರ, ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಪ್ರತ್ಯೇಕ ಹಾಗೂ ನೈರ್ಮಲ್ಯವಿರುವ ಶೌಚಾಲಯ, ತೊಳೆಯುವ ಪ್ರದೇಶ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ವಿಶ್ರಾಂತಿ ಕೊಠಡಿ ಸೌಲಭ್ಯ ಒದಗಿಸಬೇಕು.
Pexel
ಸಮಾನ ವೇತನ ಕಾಯಿದೆ: 1976ರ ಸಮಾನ ವೇತನ ಕಾಯಿದೆಯು ಭಾರತದಲ್ಲಿ ಪುರುಷರು ಮತ್ತು ಮಹಿಳೆಯರ ನಡುವಿನ ಸಂಭಾವನೆ ಅಂತರವನ್ನು ಕಡಿಮೆ ಮಾಡುತ್ತದೆ.
pixabay
ಅಂಗಡಿಗಳು ಮತ್ತು ಸಂಸ್ಥೆಗಳ ಕಾಯಿದೆ: ಸೂಕ್ತ ಕೆಲಸದ ಸಮಯ, ವಿರಾಮ, ರಜೆಗಳು, ನೈರ್ಮಲ್ಯ ಮತ್ತು ಕಾರ್ಮಿಕರಿಗೆ ಅಗತ್ಯವಾದ ಸೌಲಭ್ಯಗಳು ಸೇರಿದಂತೆ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕಾರ್ಮಿಕರ ಕೆಲಸದ ಪರಿಸ್ಥಿತಿಗಳನ್ನು ಕಾಯಿದೆ ನಿಯಂತ್ರಿಸುತ್ತದೆ.
Pexels
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ