logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Cancer Horoscope In 2024: ಏಪ್ರಿಲ್‌ ನಂತರ ಮದುವೆ ನಿಶ್ಚಯ, ಜೂನ್‌ನಲ್ಲಿ ಉದ್ಯೋಗ ಬದಲಿಸುವ ಸಾಧ್ಯತೆ; ಕಟಕ ರಾಶಿಯ ವರ್ಷ ಭವಿಷ್ಯ

Cancer Horoscope in 2024: ಏಪ್ರಿಲ್‌ ನಂತರ ಮದುವೆ ನಿಶ್ಚಯ, ಜೂನ್‌ನಲ್ಲಿ ಉದ್ಯೋಗ ಬದಲಿಸುವ ಸಾಧ್ಯತೆ; ಕಟಕ ರಾಶಿಯ ವರ್ಷ ಭವಿಷ್ಯ

HT Kannada Desk HT Kannada

Dec 26, 2023 08:06 AM IST

google News

ಕಟಕ ರಾಶಿಯವರ ವರ್ಷ ಭವಿಷ್ಯ

  • Gemini Horoscope in 2024: ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಆಗಮನವಾಗುತ್ತಿದೆ. ಕಷ್ಟ, ನೋವುಗಳು ದೂರವಾಗಿ ಹೊಸ ವರ್ಷದಲ್ಲಿ ಹೊಸ ಜೀವನ ದೊರೆಯಲಿದೆ, ಸುಖ, ಸಂತೋಷ ನೆಲೆಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ. ಹೊಸ ವರ್ಷ ದ್ವಾದಶ ರಾಶಿಗಳ ಜೀವನದಲ್ಲಿ ಏನೆಲ್ಲಾ ಬದಲಾವಣೆ ತರಲಿದೆ ನೋಡೋಣ.

ಕಟಕ ರಾಶಿಯವರ ವರ್ಷ ಭವಿಷ್ಯ
ಕಟಕ ರಾಶಿಯವರ ವರ್ಷ ಭವಿಷ್ಯ

Gemini Horoscope in 2024: ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ದಿನ ಉರುಳುತ್ತಿದ್ದಂತೆ ಎಲ್ಲರ ಜೀವನದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ, ವೈಯಕ್ತಿಕ ಜೀವನ ಉತ್ತವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಈ ಆಸೆ ಆಕಾಂಕ್ಷೆಗಳ ನಡುವೆ ಹೊಸ ವರ್ಷ ಆಗಮನವಾಗುತ್ತಿದೆ. 2024ರಲ್ಲಿ ಗ್ರಹಗತಿಗಳ ಸ್ಥಾನ ಪಲ್ಲಟದೊಂದಿಗೆ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. 2024 ವರ್ಷ ಭವಿಷ್ಯವನ್ನು ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರಸ್ತುತಪಡಿಸುತ್ತಿದ್ದಾರೆ. ಕಟಕ ರಾಶಿಯವರ ವರ್ಷ ಭವಿಷ್ಯ ಹೀಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಕಟಕ ರಾಶಿಯ ವರ್ಷ ಭವಿಷ್ಯ

ಮನದಲ್ಲಿ ಬೇಸರವಿದ್ದರೂ ಅನಿವಾರ್ಯವಾಗಿ ಕೆಲಸ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ನಿಮ್ಮ ಕಾರ್ಯವೈಖರಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಕೆಲವರಿಗೆ ಮನದಲ್ಲಿ ಮತ್ಸರ ಇರುತ್ತದೆ. ಈ ಕಾರಣದಿಂದಾಗಿ ಕೆಲಸ ಕಾರ್ಯಗಳು ಒಂದು ಹಂತದವರೆಗೆ ಬರುವವರೆಗೂ ಎಲ್ಲಾ ವಿಚಾರಗಳನ್ನು ರಹಸ್ಯವಾಗಿ ಇಡಲು ಪ್ರಯತ್ನಿಸಿ. ವೃತ್ತಿಜೀವನದಲ್ಲಿಯೂ ಹೆಚ್ಚಿನ ಜವಾಬ್ದಾರಿ ನಿಮ್ಮದಾಗುತ್ತದೆ. ಆದ್ದರಿಂದ ಕೊಂಚ ಕಷ್ಟವೆನಿಸಿದರೂ ಕೌಟುಂಬಿಕ ಜೀವನ ಮತ್ತು ವೃತ್ತಿ ಜೀವನದ ನಡುವೆ ಒಂದು ಸಮತೋಲನವನ್ನು ಕಾಯ್ದುಕೊಳ್ಳುವಿರಿ. ಒಟ್ಟಾರೆ ನಿಮ್ಮ ಬುದ್ಧಿಶಕ್ತಿಯೇ ನಿಜವಾದ ಅಸ್ತ್ರವಾಗುತ್ತದೆ.

ಏಪ್ರಿಲ್ ತಿಂಗಳ ನಂತರ ಆದಾಯದಲ್ಲಿ ಹೆಚ್ಚಳ ಇರುತ್ತದೆ. ಅದೇ ವೇಳೆ ಜವಾಬ್ದಾರಿಯೂ ಹೆಚ್ಚುತ್ತದೆ. ಮಾನಸಿಕ ಒತ್ತಡವಿದ್ದರೂ ಕ್ರಿಯಾಶೀಲತೆ ಸದಾ ಕಾಪಾಡುತ್ತದೆ. ಆಧುನಿಕತೆಗೆ ಮಾರುಹೋಗದೆ ಸಂಪ್ರದಾಯದ ಧಾರ್ಮಿಕ ಕೆಲಸಗಳಿಗೆ ಪ್ರಥಮ ಆದ್ಯತೆ ನೀಡುವಿರಿ. ಕೊಂಚ ಪ್ರಯತ್ನ ಪಟ್ಟರೆ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ. ಹಲವು ಬಾರಿ ಸಾಮರ್ಥ್ಯಕ್ಕೆ ಮೀರಿದ ಕೆಲಸ ಕಾರ್ಯಗಳು ಎದುರಾಗುತ್ತವೆ. ಸೋಲಲೊಪ್ಪದೆ ಆತ್ಮೀಯರ ನೆರವಿನಿಂದ ಕೆಲಸ ಸಾಧಿಸುವಿರಿ. ಕುಟುಂಬದ ಸದಸ್ಯರ ಜೊತೆಗೂಡಿ ತೀರ್ಥಯಾತ್ರೆಗೆ ಭೇಟಿ ನೀಡುವಿರಿ. ಧಾರ್ಮಿಕ ವಿಚಾರಗಳಿಗೆ ಹೆಚ್ಚಿನ ಹಣ ವಿನಿಯೋಗಿಸುವಿರಿ.

ಏಪ್ರಿಲ್‌ ತಿಂಗಳ ನಂತರ ಮದುವೆ ನಿಶ್ಚಯ

ಅವಿವಾಹಿತರಿಗೆ ಏಪ್ರಿಲ್ ತಿಂಗಳ ನಂತರ ಪರಿಚಯಸ್ಠರ ಸಹಾಯದಿಂದ ವಿವಾಹವಾಗುತ್ತದೆ. ಅತಿಥಿ ಅಭ್ಯಾಗತರ ಆಗಮನದಿಂದ ಖರ್ಚು ವೆಚ್ಚಗಳು ಹೆಚ್ಚಲಿವೆ. ಜೊತೆಯಲ್ಲಿರುವ ಆತ್ಮೀಯರು ತೆಗೆದುಕೊಳ್ಳುವ ನಿರ್ಧಾರಗಳು ಅತಿ ತಡವಾಗುವ ಕಾರಣ ಪರಸ್ಪರ ವಾದ ವಿವಾದಗಳು ತಲೆದೋರಬಹುದು. ಅನಾರೋಗ್ಯದಿಂದ ತೊಂದರೆ ಎದುರಾದರೂ ರವಿ ಗ್ರಹದ ಪ್ರಭಾವದಿಂದ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ಬುದ್ಧಿವಂತಿಕೆಯ ಮತ್ತು ಸಂದರ್ಭಕ್ಕೆ ಅನುಸಾರ ಮಾತನಾಡುವ ಕಾರಣ ಎದುರಾಗುವ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು. ದಿನ ಕಳೆದಂತೆ ಕುಟುಂಬದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ.

ಕೆಲಸ ಕಾರ್ಯಗಳಲ್ಲಿ ಜಾಗರೂಕತೆ ಅವಶ್ಯಕತೆ ಇದೆ. ಅವಿವಾಹಿತರು ಇಷ್ಟಪಟ್ಟವರೊಂದಿಗೆ ವಿವಾಹವಾಗುತ್ತಾರೆ. ದಾಂಪತ್ಯದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ. ಜೂನ್ ನಂತರ ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆ ಇದೆ. ಹಣಕಾಸಿನ ಸಮಸ್ಯೆ ನೀಗಿಸಲು ಹಲವಾರು ಉಳಿತಾಯ ಯೋಜನೆಗಳಲ್ಲಿ ಪಾಲ್ಗೊಳ್ಳುವಿರಿ. ಆನಂತರ ಉದ್ಯೋಗದಲ್ಲಿ ಚಿಕ್ಕ ಪುಟ್ಟ ವಿಚಾರಗಳಿಗೂ ಅಧಿಕ ಮಟ್ಟದ ಒತ್ತಡ ಹೆಚ್ಚಾಗುತ್ತದೆ. ಮಾನಸಿಕ ಒತ್ತಡಕ್ಕೆ ಮಣಿದು ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಆದ್ದರಿಂದ ಕಾದು ನೋಡುವ ಪರಿಪಾಠ ಬೆಳೆಸಿಕೊಳ್ಳಿ. ಸೋಲನ್ನು ಒಪ್ಪದೆ ಹೆಚ್ಚಿನ ಪ್ರಯತ್ನಗಳಿಗೆ ಗಮನ ನೀಡುವಿರಿ. ಗುರು ಹಿರಿಯರ ಮಾರ್ಗದರ್ಶನ ದೊರೆಯುವ ಕಾರಣ ಕೆಲಸ ಕಾರ್ಯಗಳಿಂದ ಯಶಸ್ಸು ಗಳಿಸುವಿರಿ. ತಂದೆಯ ಜೊತೆ ಅನಾವಶ್ಯಕವಾಗಿ ಸದಾ ಕಾಲ ವಾದ ವಿವಾದಗಳಿರುತ್ತವೆ. ಜೀವನದ ಎಲ್ಲಾ ವಿಚಾರಗಳಲ್ಲಿಯೂ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸುವಿರಿ.

ಉದ್ಯೋಗದಲ್ಲಿ ಉತ್ತುಂಗ ಸ್ಥಾನ

ಉದ್ಯೋಗ ಬದಲಾಯಿಸಿದ ನಂತರ ಉತ್ತಮ ಸನ್ನಿವೇಶದಲ್ಲಿ ಕೆಲಸ ನಿರ್ವಹಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿ ಆಗದೇ ಹೋದರೂ ಅಧಿಕಾರಿಗಳಿಗೆ ಸಮನಾದ ಸ್ಥಾನಮಾನ ಗಳಿಸುವಿರಿ. ಹಿರಿಯ ಸಹೋದ್ಯೋಗಿಗಳು ಉತ್ತಮ ಸಹಕಾರ ನೀಡಲಿದ್ದಾರೆ. ಕಾಲಕ್ರಮೇಣ ಉದ್ಯೋಗದಲ್ಲಿ ಉತ್ತುಂಗದ ಸ್ಥಾನ ಅಲಂಕರಿಸುವಿರಿ. ಸಮಯ ವ್ಯರ್ಥ ಮಾಡದೆ, ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ವಿದ್ಯಾರ್ಥಿಗಳು ಉತ್ತಮ ಪ್ರಯತ್ನದಿಂದ ಅಧ್ಯಯನದಲ್ಲಿ ಸದಾ ಕಾಲ ಮುಂಚೂಣಿಯಲ್ಲಿ ಇರುತ್ತಾರೆ. ಹೆಚ್ಚಿನ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವಿರಿ. ಕುಟುಂಬದ ಹಿರಿಯರ ಆಶೀರ್ವಾದ, ಮಾರ್ಗದರ್ಶನದಲ್ಲಿ ಸ್ವಂತ ಉದ್ದಿಮೆಯನ್ನು ಆರಂಭಿಸುವ ಸಾಧ್ಯತೆಗಳಿವೆ. ಕುಟುಂಬದ ಹಿರಿಯರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುವ ಅವಶ್ಯಕತೆಗಳಿವೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ