ಮೇಷ ರಾಶಿ ಭವಿಷ್ಯ ಜುಲೈ 24: ವ್ಯಾಯಾಮ ಮಾಡುವಾಗ ಜಾಗರೂಕರಾಗಿರಿ, ಅತಿಯಾಗಿ ಖರ್ಚು ಮಾಡಿದರೆ ಪಶ್ಚಾತಾಪ ಪಡಬೇಕಾದೀತು
Jul 24, 2024 05:42 AM IST
ಮೇಷ ರಾಶಿ ಭವಿಷ್ಯ ಜುಲೈ 24: ವ್ಯಾಯಾಮ ಮಾಡುವಾಗ ಜಾಗರೂಕರಾಗಿರಿ, ಅತಿಯಾಗಿ ಖರ್ಚು ಮಾಡಿದರೆ ಪಶ್ಚಾತಾಪ ಪಡಬೇಕಾದೀತು
Aries Daily Horoscope 24 July 2024: ರಾಶಿಚಕ್ರ ಚಿಹ್ನೆಗಳ ಪೈಕಿ ಇದು ಮೊದಲನೆಯದು. ಜನನದ ಸಮಯದಲ್ಲಿ ಚಂದ್ರನು ಮೇಷ ರಾಶಿಯಲ್ಲಿ ಸಾಗುತ್ತಿರುವ ಜನರು ರಾಶಿಚಕ್ರ ಚಿಹ್ನೆಯನ್ನು ಮೇಷ ರಾಶಿಯವರು ಎಂದು ಪರಿಗಣಿಸಲಾಗುತ್ತದೆ. ಜುಲೈ 24ರ ಮೇಷ ರಾಶಿ ಭವಿಷ್ಯ ಪ್ರಕಾರ, ವ್ಯಾಯಾಮ ಮಾಡುವಾಗ ಜಾಗರೂಕರಾಗಿರಿ, ಅನಾವಶ್ಯಕ ಖರ್ಚುಗಳನ್ನು ತಪ್ಪಿಸಿ.
ಮೇಷ ರಾಶಿ ಭವಿಷ್ಯ ಜುಲೈ 24: ಹೊಸ ಅವಕಾಶಗಳನ್ನು ಬಳಸಿಕೊಂಡು ಯಶಸ್ಸು ಗಳಿಸಲು ಇಂದು ಉತ್ತಮ ದಿನ. ಆದರೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಮರೆಯದಿರಿ. ಆರೋಗ್ಯ ಮತ್ತು ಹಣಕಾಸಿನ ಬಗ್ಗೆ ಬಹಳ ಜಾಗರೂಕರಾಗಿರಿ. ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ಮೇಷ ರಾಶಿ ಪ್ರೇಮ ಭವಿಷ್ಯ (Taurus Love Horoscope)
ಇಂದು ನಿಮ್ಮ ಭಾವನೆಗಳು ಹೆಚ್ಚಾಗೇ ಇರುತ್ತದೆ. ಇದು ನಿಮ್ಮ ಪ್ರಣಯ ಸಂಬಂಧಗಳನ್ನು ಗಾಢವಾಗಿಸಲು ಸೂಕ್ತ ದಿನವಾಗಿದೆ. ನೀವು ಸಂಬಂಧದಲ್ಲಿದ್ದರೆ, ನಿಮ್ಮ ಸಂಗಾತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಹಾಗೂ ಯಾವುದೇ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲು ಸಮಯ ತೆಗೆದುಕೊಳ್ಳಿ. ಒಂಟಿಯಾಗಿರುವವರು ಹೊಸ ವ್ಯಕ್ತಿಗಳನ್ನು ಭೇಟಿ ಆಗುವ ಸಾಧ್ಯತೆ ಇದೆ. ಮನಸ್ತಾಪಗಳನ್ನು ಪರಿಹರಿಸಿಕೊಳ್ಳಲು, ಪ್ರೀತಿ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲು ಸಂವಹನವು ಬಹಳ ಪರಿಣಾಮಕಾರಿ ಅಸ್ತ್ರವಾಗಿದೆ. ನಿಮ್ಮ ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸಿ. ಪ್ರೀತಿ ಮತ್ತು ಮೆಚ್ಚುಗೆಯ ಸಣ್ಣ ಸನ್ನೆಗಳು ಇಂದು ಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮೇಷ ರಾಶಿ ವೃತ್ತಿ ಭವಿಷ್ಯ (Taurus Professional Horoscope)
ಇಂದು ನಿಮ್ಮ ವೃತ್ತಿಜೀವನದಲ್ಲಿ ದಿಟ್ಟ ನಿರ್ಧಾರಗಳಿಗೆ ಸೂಕ್ತವಾಗಿದೆ. ನಿಮ್ಮ ಸ್ವಾಭಾವಿಕ ನಾಯಕತ್ವದ ಕೌಶಲ್ಯಗಳು ಮತ್ತು ನಿರ್ಣಯವನ್ನು ಹಿರಿಯ ಅಧಿಕಾರಿಗಳು ಗುರುತಿಸಲಿದ್ದಾರೆ. ಇದು ಸಮಸ್ಯೆ-ಪರಿಹರಿಸುವ ವ್ಯಕ್ತಿಯಾಗಿ ನಿಮ್ಮನ್ನು ಮಾರ್ಪಡಿಸುತ್ತದೆ. ಹೊಸ ಅವಕಾಶಗಳು ಮತ್ತು ಸಹಯೋಗಗಳಿಗೆ ಮುಕ್ತರಾಗಿರಿ, ಏಕೆಂದರೆ ಅವು ಗಮನಾರ್ಹ ಪ್ರಗತಿಗೆ ಕಾರಣವಾಗಬಹುದು. ಆದರೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಜಾಗರೂಕರಾಗಿರಿ. ನಿಮ್ಮ ತಂಡದೊಂದಿಗೆ ಸ್ಪಷ್ಟವಾದ ಸಂವಹನ ಮಾಡಿ.
ಮೇಷ ರಾಶಿಯ ಆರ್ಥಿಕ ಭವಿಷ್ಯ (Taurus Money Horoscope)
ಮೇಷ ರಾಶಿಯ ಇಂದು ಆರ್ಥಿಕ ಭವಿಷ್ಯವು ಭರವಸೆಯನ್ನು ನೀಡುತ್ತಿದೆ. ಅನಿರೀಕ್ಷಿತ ಲಾಭ ಅಥವಾ ಹೊಸ ಆದಾಯದ ಹರಿವು ನಿಮ್ಮ ಖುಷಿಗೆ ಕಾರಣವಾಗಲಿದೆ. ನಿಮ್ಮ ಹಣಕಾಸಿನ ಯೋಜನೆಗಳನ್ನು ಪರಿಶೀಲಿಸಲು ಮತ್ತು ಉಳಿತಾಯ ಮತ್ತು ಹೂಡಿಕೆಗಳ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಅವಧಿಯ ಲಾಭ ಪಡೆದುಕೊಳ್ಳಿ. ಮುಂದಿನ ಭವಿಷ್ಯಕ್ಕಾಗಿ ಅನಾವಶ್ಯಕ ಖರ್ಚುಗಳನ್ನು ತಪ್ಪಿಸಿ. ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಭದ್ರಪಡಿಸುವತ್ತ ಗಮನಹರಿಸಿ. ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚನೆಯು ನಿಮ್ಮ ಮುಂದಿನ ಜೀವನಕ್ಕೆ ಒಳಿತು ಉಂಟು ಮಾಡಬಹುದು.
ಮೇಷ ರಾಶಿಯ ಆರೋಗ್ಯ ಭವಿಷ್ಯ (Taurus Health Horoscope)
ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮಗೆ ಸವಾಲಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದು ಉತ್ತಮ ದಿನವಾಗಿದೆ. ಹೊರಗೆ ಜಿಮ್ ಅಥವಾ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದರೆ ಜಾಗರೂಕರಾಗಿರಿ. ಅತಿಯಾದ ವರ್ಕೌಟ್ ಮಾಡದಂತೆ ಎಚ್ಚರವಹಿಸಿ. ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಧ್ಯಾನ ಅಥವಾ ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಸಮತೋಲಿತ ಆಹಾರದಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ಮೇಷ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮೇಷ ರಾಶಿಯ ಅಧಿಪತಿ: ಮಂಗಳ, ಮೇಷ ರಾಶಿಯವರಿಗೆ ಶುಭ ದಿನಾಂಕಗಳು: 1, 2, 3, 12, 13, 29, 31. ಮೇಷ ರಾಶಿಯವರಿಗೆ ಶುಭ ವಾರಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ. ಮೇಷ ರಾಶಿಯವರಿಗೆ ಶುಭ ವರ್ಣ: ಬಿಳಿ ಮತ್ತು ಕೆಂಪು. ಮೇಷ ರಾಶಿಯವರಿಗೆ ಅಶುಭ ವರ್ಣ: ಕಪ್ಪು ಮತ್ತು ಹಸಿರು. ಮೇಷ ರಾಶಿಯವರಿಗೆ ಶುಭ ದಿಕ್ಕು: ಪೂರ್ವ, ಉತ್ತರ ಮತ್ತು ಈಶಾನ್ಯ. ಮೇಷ ರಾಶಿಯವರಿಗೆ ಶುಭ ತಿಂಗಳು: ಜುಲೈ 15ರಿಂದ ಸೆ 15 ಮತ್ತು ಡಿಸೆಂಬರ್ 15ರಿಂದ ಜನವರಿ 14. ಮೇಷ ರಾಶಿಯವರಿಗೆ ಶುಭ ಹರಳು: ಹವಳ, ಮಾಣಿಕ್ಯ ಮತ್ತು ಕನಕ ಪುಷ್ಯರಾಗ. ಮೇಷ ರಾಶಿಯವರಿಗೆ ಶುಭ ರಾಶಿ: ಕಟಕ, ಸಿಂಹ, ವೃಶ್ಚಿಕ ಮತ್ತು ಧನಸ್ಸ. ಮೇಷ ರಾಶಿಯವರಿಗೆ ಅಶುಭ ರಾಶಿ: ಮಿಥುನ, ಕನ್ಯಾ ಮತ್ತು ಕುಂಭ.
ಮೇಷ ರಾಶಿಯವರಿಗೆ ಶುಭಫಲಕ್ಕಾಗಿ ಸರಳ ಪರಿಹಾರಗಳು
1)ಆದಿತ್ಯಹೃದಯ: ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2)ಈ ದಾನಗಳಿಂದ ಶುಭ ಫಲ: ಕಪ್ಪುಬಣ್ಣದ ಬಟ್ಟೆ ಮತ್ತು ಉದ್ದಿನಬೇಳೆಯನ್ನು ದಾನ ನೀಡುವುದರಿಂದ ಖರ್ಚು ವೆಚ್ಚಗಳು ಕಡಿಮೆ ಆಗಲಿವೆ.
3) ದೇವಸ್ಥಾನ ಮತ್ತು ದೇವರ ಪೂಜೆ:ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಭೂತಿ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲೂ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಕೆಂಪು ಹೂಬಿಡುವ (ಗುಲಾಬಿ ಗಿಡವಲ್ಲ) ಗಿಡವನ್ನು ಪೂರ್ವ ದಿಕ್ಕಿನಲ್ಲಿ ಇಟ್ಟು, 12 ಬಾರಿ ನೀರನ್ನು ಹಾಕಿದಲ್ಲಿ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಮನೆಯ ಮುಂಬಾಗಿಲಿಗೆ ದುರ್ಗಾದೇವಾಲಯದ ಕುಂಕುಮವನ್ನು ಇಡುವುದರಿಂದ ಋಣಾತ್ಮಕ ಶಕ್ತಿಯು ಕಡಿಮೆ ಆಗಲಿವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ, ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.