ಮೇಷ ರಾಶಿ ವಾರ ಭವಿಷ್ಯ; ಕೆಲಸ ಕಾರ್ಯಗಳಲ್ಲಿ ಅಡಚಣೆ ಇಲ್ಲ, ಹಣಕಾಸಿನ ವಿಚಾರದಲ್ಲಿ ಆತುರ ಸಲ್ಲದು
Jul 14, 2024 09:33 AM IST
ಮೇಷ ರಾಶಿ ವಾರ ಭವಿಷ್ಯ; ಕೆಲಸ ಕಾರ್ಯಗಳಲ್ಲಿ ಅಡಚಣೆ ಇಲ್ಲ, ಹಣಕಾಸಿನ ವಿಚಾರದಲ್ಲಿ ಆತುರ ಸಲ್ಲದು ಎನ್ನುತ್ತಿದೆ ಈ ವಾರದ (ಜುಲೈ 14- 20) ರಾಶಿ ಭವಿಷ್ಯ.
Aries Weekly Horoscope 2024 July 14 - 20: ರಾಶಿಚಕ್ರ ಚಿಹ್ನೆಗಳ ಪೈಕಿ ಮೇಷ ಮೊದಲನೇಯದು. ಜನನದ ಸಮಯದಲ್ಲಿ ಚಂದ್ರನು ಮೇಷ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯೇ ಮೇಷ. ಮೇಷ ರಾಶಿ ವಾರ ಭವಿಷ್ಯದ ಪ್ರಕಾರ, ಕೆಲಸ ಕಾರ್ಯಗಳಲ್ಲಿ ಅಡಚಣೆ ಇಲ್ಲ, ಹಣಕಾಸಿನ ವಿಚಾರದಲ್ಲಿ ಆತುರ ಸಲ್ಲದು ಎನ್ನುತ್ತಿದೆ ರಾಶಿ ಭವಿಷ್ಯ.
ಬಹುತೇಕ ಜನರು ತಮ್ಮ ದಿನಚರಿ ಆರಂಭಿಸುವ ಮೊದಲು, ಮಹತ್ವದ ಕೆಲಸ ಕೈಗೊಳ್ಳುವ ಮೊದಲು ತಮ್ಮ ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ನೀಡಿರುವ ವಾರ ಭವಿಷ್ಯವನ್ನು ಆಧರಿಸಿದ ಮೇಷ ರಾಶಿಯ ವಾರ ಭವಿಷ್ಯ ಇಲ್ಲಿದೆ.
ತಾಜಾ ಫೋಟೊಗಳು
ಮೇಷ ರಾಶಿ ವಾರ ಭವಿಷ್ಯ ಪ್ರಕಾರ ಈ ವಾರ ಅಂದರೆ ಜುಲೈ 14 ರಿಂದ 20ರ ಅವಧಿಯಲ್ಲಿ ಬಹುತೇಕ ಶುಭಫಲವೇ ಇದೆ. ಆದಾಗ್ಯೂ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಮೇಷ ರಾಶಿ ಲವ್ ಲೈಫ್ (Aries Love Horoscope): ವಾರದ ಅವಧಿಯಲ್ಲಿ ಈ ರಾಶಿಯವರ ದಾಂಪತ್ಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಇರುತ್ತವೆ. ಪ್ರೇಮ ಸಂಬಂಧದಲ್ಲಿ ಇರುವಂಥವರು ಕೂಡ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಬದುಕು ನೀರಸವಾಗದಂತೆ ಅಗತ್ಯ ಮನರಂಜನೆ, ಕಾರ್ಯಕ್ರಮಗಳ ಕಡೆಗೂ ಗಮನಹರಿಸುವುದು ಒಳಿತು.
ಮೇಷ ರಾಶಿ ವಾರ ಭವಿಷ್ಯ; ಉದ್ಯೋಗ, ಆದಾಯ, ಆರೋಗ್ಯ
ಮೇಷ ರಾಶಿ ವೃತ್ತಿ ಭವಿಷ್ಯ (Aries Professional Horoscope): ಈ ರಾಶಿಯವರ ಕೆಲಸ ಕಾರ್ಯಗಳಲ್ಲಿ ಯಾವುದೆ ಅಡಚಣೆ ಇರುವುದಿಲ್ಲ. ಎಲ್ಲವೂ ಯೋಜಿತ ರೀತಿಯಲ್ಲೇ ಸಾಗಲಿದೆ. ಕಾಲಾನುಕ್ರಮದಲ್ಲಿ ಇದಕ್ಕೆ ಉತ್ತಮ ಫಲಿತಾಂಶವೂ ಸಿಗಲಿದೆ. ಯಾವುದೇ ಕೆಲಸವಾದರೂ ದಿನ ಕಳೆದಂತೆ ಪ್ರಯತ್ನಕ್ಕೆ ತಕ್ಕ ಶುಭಫಲಗಳನ್ನು ಪಡೆಯುವಿರಿ. ಉದ್ಯೋಗವನ್ನು ಬದಲಾಯಿಸುವ ಯತ್ನದಲ್ಲಿ ಸಫಲತೆ ಕಾಣುತ್ತದೆ. ಸ್ವಂತ ಕೆಲಸ ಕಾರ್ಯಗಳಿಗೆ ವೇಳೆ ಸಾಲದಾಗುತ್ತದೆ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ.
ಮೇಷ ರಾಶಿ ಆರ್ಥಿಕ ಜೀವನ (Aries Money Horoscope): ಹಣಕಾಸಿನ ಕೊರತೆಯು ಕಡಿಮೆಯಾಗಿ ಮಾನಸಿಕವಾಗಿ ಸದೃಡವಾಗುವಿರಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವಿರಿ. ಹಾಗೆ ಮಾಡಿದ ಕಷ್ಟ ನಷ್ಟ ಹೆಚ್ಚು. ವಿವೇಚನೆಯಿಂದ ಬುದ್ಧಿವಂತಿಕೆ ಬಳಸಿಕೊಂಡು ಹಣಕಾಸು ವ್ಯವಹಾರ ನಡೆಸಿದರಷ್ಟೆ ಲಾಭ. ಕಷ್ಟದ ಸಂದರ್ಭದಲ್ಲಿ ಸ್ನೇಹಿತರಿಗೆ ಸಹಾಯ ಮಾಡುವಿರಿ. ಅತಿಯಾದ ಜವಾಬ್ದಾರಿಯಿಂದ ಬೇಸರಗೊಳ್ಳುವಿರಿ.
ಮೇಷ ರಾಶಿ ಆರೋಗ್ಯ (Aries Health Horoscope): ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಶರೀರದ ನೀರಿನ ಮಟ್ಟ ಕಾಪಾಡಿಕೊಳ್ಳಿ. ಉತ್ತಮ ಆಹಾರ ಕ್ರಮ ರೂಢಿಸಿಕೊಂಡರೆ ಶರೀರದ ಆರೋಗ್ಯಕ್ಕೂ ಮನಸ್ಸಿನ ಆರೋಗ್ಯಕ್ಕೂ ಕ್ಷೇಮ.
ಮೇಷ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮೇಷ ರಾಶಿಯ ಅಧಿಪತಿ: ಮಂಗಳ, ಮೇಷ ರಾಶಿಯವರಿಗೆ ಶುಭ ದಿನಾಂಕಗಳು: 1, 2, 3, 12, 13, 29, 31. ಮೇಷ ರಾಶಿಯವರಿಗೆ ಶುಭ ವಾರಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ. ಮೇಷ ರಾಶಿಯವರಿಗೆ ಶುಭ ವರ್ಣ: ಬಿಳಿ ಮತ್ತು ಕೆಂಪು. ಮೇಷ ರಾಶಿಯವರಿಗೆ ಅಶುಭ ವರ್ಣ: ಕಪ್ಪು ಮತ್ತು ಹಸಿರು. ಮೇಷ ರಾಶಿಯವರಿಗೆ ಶುಭ ದಿಕ್ಕು: ಪೂರ್ವ, ಉತ್ತರ ಮತ್ತು ಈಶಾನ್ಯ. ಮೇಷ ರಾಶಿಯವರಿಗೆ ಶುಭ ತಿಂಗಳು: ಜುಲೈ 15ರಿಂದ ಸೆ 15 ಮತ್ತು ಡಿಸೆಂಬರ್ 15ರಿಂದ ಜನವರಿ 14. ಮೇಷ ರಾಶಿಯವರಿಗೆ ಶುಭ ಹರಳು: ಹವಳ, ಮಾಣಿಕ್ಯ ಮತ್ತು ಕನಕ ಪುಷ್ಯರಾಗ. ಮೇಷ ರಾಶಿಯವರಿಗೆ ಶುಭ ರಾಶಿ: ಕಟಕ, ಸಿಂಹ, ವೃಶ್ಚಿಕ ಮತ್ತು ಧನಸ್ಸ. ಮೇಷ ರಾಶಿಯವರಿಗೆ ಅಶುಭ ರಾಶಿ: ಮಿಥುನ, ಕನ್ಯಾ ಮತ್ತು ಕುಂಭ.
ಮೇಷ ರಾಶಿಯವರಿಗೆ ಶುಭಫಲಕ್ಕಾಗಿ ಸರಳ ಪರಿಹಾರಗಳು
1) ಆದಿತ್ಯಹೃದಯ: ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2) ಈ ದಾನಗಳಿಂದ ಶುಭ ಫಲ: ಕಪ್ಪುಬಣ್ಣದ ಬಟ್ಟೆ ಮತ್ತು ಉದ್ದಿನಬೇಳೆಯನ್ನು ದಾನ ನೀಡುವುದರಿಂದ ಖರ್ಚು ವೆಚ್ಚಗಳು ಕಡಿಮೆ ಆಗಲಿವೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ವಿಭೂತಿ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲೂ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಕೆಂಪು ಹೂಬಿಡುವ (ಗುಲಾಬಿ ಗಿಡವಲ್ಲ) ಗಿಡವನ್ನು ಪೂರ್ವ ದಿಕ್ಕಿನಲ್ಲಿ ಇಟ್ಟು, 12 ಬಾರಿ ನೀರನ್ನು ಹಾಕಿದಲ್ಲಿ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಮನೆಯ ಮುಂಬಾಗಿಲಿಗೆ ದುರ್ಗಾದೇವಾಲಯದ ಕುಂಕುಮವನ್ನು ಇಡುವುದರಿಂದ ಋಣಾತ್ಮಕ ಶಕ್ತಿಯು ಕಡಿಮೆ ಆಗಲಿವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ, ಕೆಂಪು ಮತ್ತು ಕೇಸರಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.