Amavasya 2024: ಜನವರಿಯಿಂದ ಡಿಸೆಂಬರ್‌ವರೆಗೆ 2024ರಲ್ಲಿ ಬರುವ ಅಮಾವಾಸ್ಯೆ ದಿನಾಂಕ , ಶುಭ ಮುಹೂರ್ತ ಹೀಗಿದೆ
Dec 14, 2023 02:02 PM IST
2024 ಅಮಾವಾಸ್ಯೆ ದಿನಾಂಕ, ಶುಭ ಮುಹೂರ್ತ
Amavasya 2024: ಹಿಂದೂ ಧರ್ಮದಲ್ಲಿ ಹುಣ್ಣಿಮೆಯಂತೆ ಅಮವಾಸ್ಯೆಗೂ ಹೆಚ್ಚಿನ ಮಹತ್ವವಿದೆ. ಈ ದಿನ ಪವಿತ್ರ ಸ್ನಾನ, ವಿವಿಧ ಪೂಜೆ ಪುನಸ್ಕಾರ, ದಾನ ಮಾಡುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗಿ ನಮ್ಮನ್ನು ಆಶೀರ್ವದಿಸುತ್ತಾರೆ. ಕುಟುಂಬದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.
Amavasya 2024:ಅಮಾವಾಸ್ಯೆಯಂದು ಧಾರ್ಮಿಕ ಕಾರ್ಯಗಳನ್ನು ಮಾಡುವುದರಿಂದ ಪಿತೃದೋಷದಿಂದ ಮುಕ್ತಿ ದೊರೆಯುತ್ತದೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಈ ದಿನ ಮಾಡುವ ಕಾರ್ಯಗಳಿಂದ ಪೂರ್ವಜರ ಆಶೀರ್ವಾದ ದೊರೆಯಲಿದೆ.
ತಾಜಾ ಫೋಟೊಗಳು
2024 ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೂ ಅಮವಾಸ್ಯೆ ಯಾವ ದಿನ ಬರಲಿದೆ ಎಂಬ ಪಟ್ಟಿ ಇಲ್ಲಿದೆ.
ಜನವರಿ 11 ಗುರುವಾರ - ಪುಷ್ಯ ಅಮಾವಾಸ್ಯೆ
ಶುಭ ಮುಹೂರ್ತ: ಜನವರಿ 10 ರಂದು ರಾತ್ರಿ 8:10 ಕ್ಕೆ ಆರಂಭವಾಗಿ ಜನವರಿ 11 ರಂದು ಸಂಜೆ 5:26 ರವರೆಗೆ ಇರುತ್ತದೆ.
ಫೆಬ್ರವರಿ 9 ಶುಕ್ರವಾರ - ಮಾಘ ಅಮಾವಾಸ್ಯೆ
ಶುಭ ಮುಹೂರ್ತ: ಫೆಬ್ರವರಿ 9 ರಂದು ಬೆಳಗ್ಗೆ 8:02 ಕ್ಕೆ ಆರಂಭವಾಗಿ ಸಂಜೆ 4:28 ರವರೆಗೆ ಇರುತ್ತದೆ.
ಮಾರ್ಚ್ 10 ಭಾನುವಾರ - ಫಾಲ್ಗುಣ ಅಮಾವಾಸ್ಯೆ
ಶುಭ ಮುಹೂರ್ತ: ಮಾರ್ಚ್ 9 ರಂದು ಸಂಜೆ 6:17 ಕ್ಕೆ ಪ್ರಾರಂಭವಾಗಿ ಮಾ 10 ಮಧ್ಯಾಹ್ನ 2:29 ವರೆಗೆ ಇರುತ್ತದೆ.
ಏಪ್ರಿಲ್ 8 ಸೋಮವಾರ - ಚೈತ್ರ ಅಮಾವಾಸ್ಯೆ
ಶುಭ ಮುಹೂರ್ತ: ಏಪ್ರಿಲ್ 8 ರಂದು ಮುಂಜಾನೆ 3:21 ಕ್ಕೆ ಆರಂಭವಾಗಿ ರಾತ್ರಿ 11:50 ಕ್ಕೆ ಮುಕ್ತಾಯವಾಗಲಿದೆ.
ಮೇ 7 ಮಂಗಳವಾರ - ವೈಶಾಖ ಅಮಾವಾಸ್ಯೆ
ಶುಭ ಮುಹೂರ್ತ: ಮೇ 7 ರಂದು ಬೆಳಗ್ಗೆ 11:40 ಕ್ಕೆ ಶುರುವಾಗಿ ಮೇ 8, ಬೆಳಗ್ಗೆ 8:51 ಕ್ಕೆ ಕೊನೆಗೊಳ್ಳುತ್ತದೆ.
ಜೂನ್ 6 ಬುಧವಾರ - ಜ್ಯೇಷ್ಠ ಅಮಾವಾಸ್ಯೆ
ಶುಭ ಮುಹೂರ್ತ: ಜೂನ್ 5 ರಂದು ಸಂಜೆ 7:54 ಕ್ಕೆ ಪ್ರಾರಂಭವಾಗಿ ಜೂನ್ 6 ರಂದು ಸಂಜೆ 6:07 ರವರೆಗೆ ಇರುತ್ತದೆ.
ಜುಲೈ 5 ಶುಕ್ರವಾರ ಆಷಾಢ ಅಮಾವಾಸ್ಯೆ
ಶುಭ ಮುಹೂರ್ತ: ಜುಲೈ 5 ರಂದು ಬೆಳಗ್ಗೆ 4:57 ಕ್ಕೆ ಪ್ರಾರಂಭವಾಗಿ ಜುಲೈ 6 ರ ಬೆಳಗ್ಗೆ 4:26 ಕ್ಕೆ ಕೊನೆಗೊಳ್ಳುತ್ತದೆ.
ಆಗಸ್ಟ್ 4 ಭಾನುವಾರ - ಶ್ರಾವಣ ಅಮಾವಾಸ್ಯೆ
ಶುಭ ಸಮಯ: ಆಗಸ್ಟ್ 3 ಮಧ್ಯಾಹ್ನ 3:40 ರಿಂದ ಆಗಸ್ಟ್ 4 ಸಂಜೆ 4:42 ರವರೆಗೆ ಅಮಾವಾಸ್ಯೆ ಇರಲಿದೆ.
ಸೆಪ್ಟೆಂಬರ್ 2 ಸೋಮವಾರ - ಭಾದ್ರಪದ ಅಮಾವಾಸ್ಯೆ
ಶುಭ ಮುಹೂರ್ತ: ಸೆಪ್ಟೆಂಬರ್ 2ರಂದು ಬೆಳಗ್ಗೆ 5.21ಕ್ಕೆ ಆರಂಭವಾಗಿ ಮರುದಿನ ಬೆಳಗ್ಗೆ 7.24ರವರೆಗೆ ಇರಲಿದೆ.
ಅಕ್ಟೋಬರ್ 2 ಬುಧವಾರ - ಅಶ್ವಿನ್ ಅಮಾವಾಸ್ಯೆ
ಶುಭ ಮುಹೂರ್ತ: ಅಕ್ಟೋಬರ್ 1 ರಂದು ರಾತ್ರಿ 9.39 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 3 ರ ಮಧ್ಯರಾತ್ರಿ 12.18 ರವರೆಗೆ ಇರಲಿದೆ.
ನವೆಂಬರ್ 1 ಶುಕ್ರವಾರ - ಕಾರ್ತಿಕ ಅಮಾವಾಸ್ಯೆ
ಶುಭ ಮುಹೂರ್ತ: ಅಕ್ಟೋಬರ್ 31 ರಂದು ಮಧ್ಯಾಹ್ನ 3:52 ಕ್ಕೆ ಪ್ರಾರಂಭವಾಗಿ ನವೆಂಬರ್ 1 ಸಂಜೆ 6:16 ಕ್ಕೆ ಕೊನೆಗೊಳ್ಳುತ್ತದೆ.
ನವೆಂಬರ್ 30 ಶನಿವಾರ - ಮಾರ್ಗಶಿರ ಅಮಾವಾಸ್ಯೆ
ಶುಭ ಮುಹೂರ್ತ: ನವೆಂಬರ್ 30 ರಂದು ಬೆಳಗ್ಗೆ 10.29 ಕ್ಕೆ ಪ್ರಾರಂಭವಾಗಿ ಡಿಸೆಂಬರ್ 1 ಬೆಳಗ್ಗೆ 11.50 ಕ್ಕೆ ಮುಕ್ತಾಯವಾಗಲಿದೆ.
ಡಿಸೆಂಬರ್ 1 ಭಾನುವಾರ -ಮಾರ್ಗಶಿರ ಅಮಾವಾಸ್ಯೆ
ಶುಭ ಮುಹೂರ್ತ: ನವೆಂಬರ್ 30 ರಂದು ಬೆಳಗ್ಗೆ 10.29 ಕ್ಕೆ ಪ್ರಾರಂಭವಾಗಿ ಡಿಸೆಂಬರ್ 1 ರಂದು ಬೆಳಿಗ್ಗೆ 11.50 ಕ್ಕೆ ಮುಕ್ತಾಯವಾಗಲಿದೆ.
ಡಿಸೆಂಬರ್ 30 ಸೋಮವಾರ -ಪುಷ್ಯ ಅಮಾವಾಸ್ಯೆ
ಶುಭ ಮುಹೂರ್ತ: ಡಿಸೆಂಬರ್ 30 ರಂದು ಬೆಳಗ್ಗೆ 4:01 ಕ್ಕೆ ಪ್ರಾರಂಭವಾಗಿ ಡಿಸೆಂಬರ್ 31 ರಂದು ಮುಂಜಾನೆ 3:56 ಕ್ಕೆ ಕೊನೆಗೊಳ್ಳುತ್ತದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವಿಭಾಗ