logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Purva Bhadra Nakshatra: ಕೋಪಿಷ್ಠರು, ಅಷ್ಟೇ ಸಂಕೋಚ ಸ್ವಭಾವದವರು; ಪೂರ್ವಾಭಾದ್ರ ನಕ್ಷತ್ರದವರ ಗುಣ ಲಕ್ಷಣಗಳು ಹೀಗಿವೆ

Purva Bhadra Nakshatra: ಕೋಪಿಷ್ಠರು, ಅಷ್ಟೇ ಸಂಕೋಚ ಸ್ವಭಾವದವರು; ಪೂರ್ವಾಭಾದ್ರ ನಕ್ಷತ್ರದವರ ಗುಣ ಲಕ್ಷಣಗಳು ಹೀಗಿವೆ

HT Kannada Desk HT Kannada

Aug 15, 2023 06:30 PM IST

google News

ಪೂರ್ವಾಭಾದ್ರ ನಕ್ಷತ್ರದವರ ಗುಣ ಲಕ್ಷಣಗಳು

  • ಸಾಮಾನ್ಯವಾಗಿ ಇವರಿಗೆ ಹಣದ ತೊಂದರೆ ಕಾಣದು. ಆದರೆ ಇರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಯೋಚನೆ ಮಾಡುವುದಿಲ್ಲ. ತಮ್ಮದೇ ತಪ್ಪಿನಿಂದಾಗಿ ತೊಂದರೆಗೆ ಸಿಲುಕುತ್ತಾರೆ. ಸೇಡಿನ ಗುಣವಿರುತ್ತದೆ. ಚಿಕ್ಕ ಪುಟ್ಟ ತಪ್ಪುಗಳನ್ನು ಮನ್ನಿಸುವುದಿಲ್ಲ.

ಪೂರ್ವಾಭಾದ್ರ ನಕ್ಷತ್ರದವರ ಗುಣ ಲಕ್ಷಣಗಳು
ಪೂರ್ವಾಭಾದ್ರ ನಕ್ಷತ್ರದವರ ಗುಣ ಲಕ್ಷಣಗಳು

ರುದ್ರ, ಪೂರ್ವಾಭಾದ್ರ ನಕ್ಷತ್ರದ ದೇವತೆ. ಕೆಲವೊಂದು ಗ್ರಂಥಗಳಲ್ಲಿ ರುದ್ರ ಎಂಬ ಪದದ ಬದಲು ಶಿವನ ಬೇರೆ ಬೇರೆ ಹೆಸರುಗಳನ್ನು ಉಪಯೋಗಿಸಲಾಗಿದೆ. ಈ ನಕ್ಷತ್ರವು ಶಿವನಿಗೆ ಸಂಬಂಧಪಟ್ಟಿದ್ದಾಗಿದೆ. ಈ ನಕ್ಷತ್ರದ ಅಧಿಪತಿ ಗ್ರಹ ಗುರು, ಆದ್ದರಿಂದ ಈ ನಕ್ಷತ್ರಕ್ಕೆ ದಶಾಕಾರವು 16 ವರ್ಷಗಳಾಗುತ್ತವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಸುಲಭವಾಗಿ ಸೋಲು ಒಪ್ಪಿಕೊಳ್ಳುತ್ತಾರೆ

ಪೂರ್ವಾಭಾದ್ರ ನಕ್ಷತ್ರದ ಒಂದು, ಎರಡು ಮತ್ತು ಮೂರನೇ ಪಾದಗಳು ಕುಂಭ ರಾಶಿಯಲ್ಲಿ ಬರುತ್ತವೆ. ಆದ್ದರಿಂದ ರಾಶ್ಯಾಧಿಪತಿಯು ಶನಿ ಆಗುತ್ತಾನೆ. ಹಾಗೆಯೇ ಪೂರ್ವಾಭಾದ್ರ ನಕ್ಷತ್ರದ ನಾಲ್ಕನೇ ಪಾದವು ಮೀನ ರಾಶಿಯಲ್ಲಿ ಬರುತ್ತದೆ. ಈ ಕಾರಣದಿಂದಾಗಿ ನಾಲ್ಕನೇ ಪಾದದಲ್ಲಿ ಜನಿಸಿದವರ ರಾಶ್ಯಾಧಿಪತಿಯು ಗುರು ಆಗುತ್ತಾನೆ. ಗುರು ಗ್ರಹವನ್ನು ಅತ್ಯಂತ ಶುಭ ಗ್ರಹ ಎಂದು ಪರಿಗಣಿಸುತ್ತೇವೆ. ಆದರೆ ಯಾವುದೇ ಶುಭ ಕಾರ್ಯಗಳಿಗೆ ಪೂರ್ವಭಾದ್ರ ನಕ್ಷತ್ರವನ್ನು ನೀಡುವುದಿಲ್ಲ. ಕಾರಣ ಈ ನಕ್ಷತ್ರದ ಅಧಿಪತಿ ಲಯಕಾರಕ ಶಿವನಾಗುತ್ತಾನೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಬೇಗನೆ ಕೋಪ ಬರುತ್ತದೆ. ಆದರೆ ಸುಲಭವಾಗಿ ಸೋಲನ್ನು ಒಪ್ಪುತ್ತಾರೆ.

ಹಣದ ನಿರ್ವಹಣೆಯಲ್ಲಿ ಗೊಂದಲ

ಸಾಮಾನ್ಯವಾಗಿ ಇವರಿಗೆ ಹಣದ ತೊಂದರೆ ಕಾಣದು. ಆದರೆ ಇರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಯೋಚನೆ ಮಾಡುವುದಿಲ್ಲ. ತಮ್ಮದೇ ತಪ್ಪಿನಿಂದಾಗಿ ತೊಂದರೆಗೆ ಸಿಲುಕುತ್ತಾರೆ. ಸೇಡಿನ ಗುಣವಿರುತ್ತದೆ. ಚಿಕ್ಕ ಪುಟ್ಟ ತಪ್ಪುಗಳನ್ನು ಮನ್ನಿಸುವುದಿಲ್ಲ. ಇವರು ಬಹುಮುಖ ಪ್ರತಿಭೆ ಉಳ್ಳವರು. ಬುದ್ಧಿವಂತಿಕೆಯ ಮಾತುಗಳಿಂದಲೇ ಎದುರಾಗುವ ತೊಂದರೆಯಿಂದ ಪಾರಾಗುವರು. ಜನಸೇವೆ ಮಾಡುವ ಆಸೆ ಇರುತ್ತದೆ. ಸಮಾಜದಲ್ಲಿ ಜನಪ್ರಿಯತೆ ದೊರೆತರೂ ಅದನ್ನು ಸಮಪರ್ಕವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಬೇಸಾಯದಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಆದರೆ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು. ಯಾರಿಗೂ ಇವರ ಮನಸ್ಸು ಸುಲಭವಾಗಿ ಅರ್ಥವಾಗುವುದಿಲ್ಲ. ಬೇರೆಯವರ ಮಾತನ್ನು ಕೇಳದೆ ಕಷ್ಟ ಪಟ್ಟು ಮೇಲೆ ಬರುತ್ತಾರೆ. ನೋಡಲು ಶಾಂತಿಯಿಂದ ಇದ್ದರೂ ಸಮಯ ಬಂದಾಗ ಉಗ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆತ್ಮೀಯರೊಂದಿಗೆ ವೈಯಕ್ತಿಕ ವಿಚಾರಗಳನ್ನು ರಹಸ್ಯವಾಗಿ ಇಡುತ್ತಾರೆ. ದೇವಾಲಯಗಳು ಕಲ್ಯಾಣ ಮಂಟಪ, ಹೋಟೆಲ್ ,ಶಾಲಾ, ಕಾಲೇಜುಗಳ ನಿರ್ವಹಣೆ, ಇವರಿಗೆ ಸರಿಹೊಂದುವ ವೃತ್ತಿಯಾಗುತ್ತದೆ.

ಸಂಕೋಚದ ಸ್ವಭಾವದವರು

ಆತ್ಮೀಯರು ಮತ್ತು ಬಂಧು ಬಳಗದವರು ಸಹಾಯ ಮಾಡಲು ಬಂದರೂ ತಿರಸ್ಕರಿಸುವ ಗುಣ ಉಳ್ಳವರು. ಸ್ಥಾನ ಪ್ರತಿಷ್ಠೆಯ ವಿಚಾರ ಅಲ್ಲದೇ ಹೋದರೂ ಸಂಕೋಚವೂ ಅಧಿಕವಾಗಿರುತ್ತದೆ. ತಮ್ಮಲ್ಲಿರುವ ವಿಶೇಷ ಜ್ಞಾನವನ್ನು ಜನಸಾಮಾನ್ಯರ ಅಭಿವೃದ್ಧಿಗೆ ಬಳಸುತ್ತಾರೆ. ವೈವಾಹಿಕ ಜೀವನ ಸಂತಸದಿಂದ ಕೂಡಿರುತ್ತದೆ. ಆದರೆ ಹೆಚ್ಚು ವೆಚ್ಚಗಳ ಬಗ್ಗೆ ಕಡಿವಾಣ ಇರಬೇಕು. ಇಲ್ಲವಾದಲ್ಲಿ ದಂಪತಿಗಳು ಇಬ್ಬರು ಸಂಪಾದಿಸುವ ಹಣವನ್ನೆಲ್ಲಾ ಅನಾವಶ್ಯಕವಾಗಿ ಖರ್ಚು ಮಾಡುತ್ತಾರೆ. ಹೆತ್ತವರ ಬಗ್ಗೆ ವಿಶೇಷವಾದ ಅಕ್ಕರೆ ಇರುತ್ತದೆ. ಸೋದರ ಅಥವಾ ಸೋದರಿಗೆ ಸಹಾಯ ಮಾಡುತ್ತಾರೆ. ಕೇವಲ ಸಂಗಾತಿಯ ದಿಟ್ಟ ನಿಲುವಿನಿಂದ ಮನೆ ಅಥವಾ ಜಮೀನನ್ನು ಉಳಿಸಿಕೊಳ್ಳುತ್ತಾರೆ. ಕುಟುಂಬದ ಬಗ್ಗೆ ಇದ್ದರೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ