ವಿವಾಹ ಭಾಗ್ಯ, ಆರೋಗ್ಯ, ಧನ ಕರುಣಿಸುವ ಈಶ್ವರ; ಗೌಹಾಟಿಯ ಶಕ್ತಿಶಾಲಿ ರುದ್ರೇಶ್ವರ ದೇವಾಲಯದ ಇತಿಹಾಸ ಹೀಗಿದೆ
Jul 24, 2024 05:30 PM IST
ವಿವಾಹ ಭಾಗ್ಯ, ಆರೋಗ್ಯ, ಧನ ಕರುಣಿಸುವ ಈಶ್ವರ; ಗೌಹಾಟಿಯ ಶಕ್ತಿಶಾಲಿ ರುದ್ರೇಶ್ವರ ದೇವಾಲಯದ ಇತಿಹಾಸ ಹೀಗಿದೆ
- ಭಾರತದಲ್ಲಿ ಶಿವನ ಅನೇಕ ದೇವಸ್ಥಾನಗಳನ್ನು ಕಾಣಬಹುದು. ಬ್ರಹ್ಮಪುತ್ರ ನದಿಯ ದಂಡೆಯ ಮೇಲಿರುವ ಶಿವನ ಈ ದೇವಸ್ಥಾನ ಬಹಳ ವಿಶೇಷವಾಗಿದೆ. ತಂದೆಯ ನೆನಪಿಗಾಗಿ ನಿರ್ಮಿಸಿದ ಈ ದೇವಸ್ಥಾನ ಅಸ್ಸಾಂನ ಗೌಹಾಟಿಯಲ್ಲಿದೆ. ರುದ್ರೇಶ್ವರ ದೇವಾಲಯದ ಹಿಂದಿರುವ ಆಸಕ್ತಿಕರ ಕಥೆ ಹೀಗಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ರುದ್ರೇಶ್ವರ ದೇವಸ್ಥಾನವು ಅಸ್ಸಾಮಿನ ಗೌಹಾಟಿಯ ಉತ್ತರ ಭಾಗದಲ್ಲಿದೆ. ಈ ದೇವಾಲಯವು ಬ್ರಹ್ಮಪುತ್ರ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. 1749 ರಲ್ಲಿಅಹೋಮ್ ರಾಜ ಪ್ರಮತ್ತ ಸಿಂಹನು ತನ್ನ ತಂದೆ ಸ್ವರ್ಗದೇವರುದ್ರಸಿಂಹನ ನೆನಪಿಗಾಗಿ ನಿರ್ಮಿಸಿದನು, ಈ ಕಾರಣದಿಂದಲೇ ಈ ದೇವಾಲಯದಲ್ಲಿ ಇರುವ ದೇವರಿಗೆ ರುದ್ರೇಶ್ವರ ಎಂದು ಕರೆಯಲಾಗಿದೆ. ಈ ದೇವಾಲಯವು ಅಹೋಮ್ ಮತ್ತು ಮೊಘಲರಿಗೆ ಸಂಬಂಧಿಸಿದ ವಾಸ್ತುಶಿಲ್ಪದ ಮಿಶ್ರಣವಾಗಿದೆ.
ತಾಜಾ ಫೋಟೊಗಳು
ಕೆಲವು ಮೂಲಗಳ ಪ್ರಕಾರ, ಉತ್ತರ ಗುವಾಹಟಿಯಲ್ಲಿ ಹಿಂದೂ ಪದ್ಧತಿಯ ಪ್ರಕಾರ ರುದ್ರ ಸಿಂಹನನ್ನು ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಆದರೆ ಕೆಲವರು ಅವರ ಒಂದು ಸಣ್ಣ ಬೆರಳನ್ನು ಮಾತ್ರ ಈ ರೀತಿ ಸುಟ್ಟುಹಾಕಿದ್ದಾರೆಂದು ಸೂಚಿಸುತ್ತಾರೆ. ಅವನ ಎರಡನೆಯ ಮಗ, ಪ್ರಮತ್ತ ಸಿಂಹ, ಸಿಂಹಾಸನವನ್ನು ಏರಿದ ನಂತರ, ಗುವಾಹಟಿಯಲ್ಲಿ ತನ್ನ ತಂದೆಯ ನೆನಪಿಗಾಗಿ ಶಿವನ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದನು. ಅವರ ತಂದೆಯ ಮರಣದ ಸ್ಥಳವನ್ನು ದೇವಾಲಯದ ನಿರ್ಮಾಣಕ್ಕಾಗಿ ಆಯ್ಕೆ ಮಾಡಲಾಯಿತು. ಈ ರೀತಿಯಲ್ಲಿ ರುದ್ರಸಿಂಹನ ಅಂತ್ಯಸಂಸ್ಕಾರ ಆದ ಜಾಗದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ.
ದೇವಾಲಯವು 1749 ರಲ್ಲಿ ಪೂರ್ಣಗೊಳ್ಳುತ್ತದೆ. ದೇವಾಲಯದ ಪೂರ್ಣಗೊಂಡ ನಂತರ, ಪ್ರಮತ್ತ ಸಿಂಹನು ಶಿವಲಿಂಗವನ್ನು ಸ್ಥಾಪಿಸಿ ತನ್ನ ತಂದೆ ಸ್ವರ್ಗದೇವ್ ರುದ್ರ ಸಿಂಹನ ನೆನಪಿಗಾಗಿ ರುದ್ರೇಶ್ವರ ಶಿವಲಿಂಗ ಎಂದು ಹೆಸರಿಸಿದನು. ಈ ದೇವಾಲಯವನ್ನು ನಿರ್ಮಿಸಿದ ಗ್ರಾಮವನ್ನು ರುದ್ರೇಶ್ವರ ಎಂದೂ ಕರೆಯಲಾಗುತ್ತದೆ. ರಾಜನು ದೇವಾಲಯವನ್ನು ನಿರ್ವಹಿಸಲು ಅರ್ಚಕರು ಮತ್ತು ಜನರಿಗೆ ವ್ಯವಸ್ಥೆಗಳನ್ನು ಮಾಡಿದನು ಮತ್ತು ದೇವಾಲಯದ ಹೆಸರಿನಲ್ಲಿ ದೊಡ್ಡ ಪ್ರಮಾಣದ ಭೂಮಿಯನ್ನು ದಾನ ಮಾಡಿದನು.
ಈ ದೇವಾಲಯದ ವಿನ್ಯಾಸವು ಮೊಘಲ್ ಸಮಾಧಿಯ ಅನುಕರಣೆಯಾಗಿದೆ. ದೇವಾಲಯವು ಭೂಗತ ಕೋಣೆಗಳನ್ನು ಹೊಂದಿದೆ, ಅದರ ಪ್ರವೇಶದ್ವಾರಗಳು ದೇವಾಲಯದ ಮುಂಭಾಗದಲ್ಲಿ ಇವೆ. ಈ ಭೂಗತ ಕೋಣೆಗಳನ್ನು ನಿರ್ಮಿಸಲಾದ ಕಾರಣ ಇಲ್ಲಿಯವರೆಗೂ ನಿಖರವಾಗಿ ತಿಳಿದಿಲ್ಲ, ಆದರೆ, ದೇವಾಲಯದ ದೈನಂದಿನ ಕಾರ್ಯಚಟುವಟಿಕೆಗೆ ಅಗತ್ಯವಿರುವ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಇದನ್ನು ನಿರ್ಮಿಸಲಾಗಿದೆ ಎಂಬುದು ಕೆಲವರ ಅಭಿಮತ. ರತ್ನಗಳಿಂದ ನಿರ್ಮಿಸಿದ ಗುಡಿಸಲನ್ನು ಇಲ್ಲಿ ಕಾಣಬಹುದು. ಇಂದಿನ ಆಧುನೀಕತೆಗೆ ಹೋಲುವ ಗಾಳಿಯ ವಾತಾಯನ ವ್ಯವಸ್ಥೆ ಇಲ್ಲಿದೆ. ಆಧುನಿಕತೆಯನ್ನು ನಾಚಿಸಬಲ್ಲ ಒಳಚರಂಡಿ ವ್ಯವಸ್ಥೆಯನ್ನು ಸಹ ಇಲ್ಲಿದೆ. ದೇವಾಲಯವು ಎಲ್ಲಾ ಬದಿಯಲ್ಲಿಯೂ ಇಟ್ಟಿಗೆ ಗೋಡೆಯಿಂದ ಆವೃತವಾಗಿದೆ. ಗೋಡೆಯು ಅಹೋಮ್ ಕಾಲದ ಎರಡು ಕಲ್ಲಿನ ಶಾಸನಗಳನ್ನು ಹೊಂದಿದ್ದು, ಅವುಗಳನ್ನು ಪ್ರಸ್ತುತ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ದೇವಾಲಯದ ಸಮೀಪದಲ್ಲಿ ರಾಜಕುಮಾರಿಯ ಕೊಳ ಇದೆ. ಈಕೊಳದಲ್ಲಿ ರಾಜ ರುದ್ರ ಸಿಂಹನ ರಾಣಿ ಮತ್ತು ರಾಜಕುಮಾರಿಯರು ಬಂಗಾಳದ ಮಿಲಿಟರಿ ದಂಡಯಾತ್ರೆಗಾಗಿ ಇಲ್ಲಿ ಬೀಡುಬಿಟ್ಟಿದ್ದಾಗ ಈ ಕೊಳವನ್ನು ಸ್ನಾನಕ್ಕಾಗಿ ಬಳಸುತ್ತಿದ್ದರು ಎಂದು ತಿಳಿದುಬರುತ್ತದೆ.
ವರ್ಷದ ಎಲ್ಲಾ ದಿನಗಳಲ್ಲಿಯೂ ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕಾರ್ತಿಕ ಮಾಸ ಮತ್ತು ಶಿವರಾತ್ರಿಯ ದಿನಗಳನ್ನು ದೇಶ ವಿದೇಶಗಳಿಂದ ಜನರ ಆಗಮನವಾಗುತ್ತದೆ. ಈ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇದಿಸಿದರೆ ಕುಟುಂಬದ ಯಾವುದೇ ವಿವಾದಗಳು ದೂರವಾಗುತ್ತವೆ. ವಿವಾಹದಲ್ಲಿ ವಿಳಂಬವಿದ್ದಲ್ಲಿ ಇಲ್ಲಿನ ಪೂಜಾ ಕಾರ್ಯದಿಂದ ವಿವಾಹ ನಿಶ್ಚಯವಾಗುತ್ತದೆ. ಇಲ್ಲಿ ನೀಡುವ ಬಿಲ್ವಪತ್ರೆ ಅಥವಾ ವಿಭೂತಿಯನ್ನು ಬಳಸುವುದರಿಂದ ಉತ್ತಮ ಆರೋಗ್ಯ ಉಂಟಾಗುತ್ತದೆ. ಸ್ವಂತ ಉದ್ಧಿಮೆ ಇರುವವರು ಈ ದೇವಾಲಯದಲ್ಲಿ ಪೂಜೆಯನ್ನು ಕೈಗೊಂಡಲ್ಲಿ ತಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಬಹುದು. ಇಂದಿಗೂ ಹೊಸ ವಾಹನಗಳನ್ನು ಕೊಂಡಾಗ ಇಲ್ಲಿ ಪೂಜೆ ಮಾಡಿಸುವ ಸಂಪ್ರದಾಯವಿದೆ. ಇಲ್ಲಿ ಪುಣ್ಯ ಸ್ನಾನ ಮಾಡಿದರೆ ಚರ್ಮ ರೋಗಗಳು ಸಹ ದೂರವಾಗುತ್ತವೆ.
(ಬರಹ: ಎಚ್. ಸತೀಶ್, ಜ್ಯೋತಿಷಿ)