logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Astrology: ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಮಿಥುನ ಯೋಗ; ಕುಜ ಶುಕ್ರ ಸಂಯೋಗದಿಂದ ದಂಪತಿ ನಡುವೆ ಇದ್ದ ಮನಸ್ತಾಪ ದೂರ

Astrology: ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಮಿಥುನ ಯೋಗ; ಕುಜ ಶುಕ್ರ ಸಂಯೋಗದಿಂದ ದಂಪತಿ ನಡುವೆ ಇದ್ದ ಮನಸ್ತಾಪ ದೂರ

HT Kannada Desk HT Kannada

Feb 18, 2024 06:30 AM IST

google News

ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಮಿಥುನ ಯೋಗ;

  • Astrology: ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ರೂಪುಗೊಳ್ಳುವ ಮಿಥುನ ಯೋಗದಿಂದ ಪತಿ ಪತ್ನಿ ನಡುವೆ ಇದ್ದ ಮನಸ್ತಾಪ ದೂರಾಗುತ್ತದೆ. ಆದರೆ ಅದಕ್ಕೂ ಮುನ್ನ ದಂಪತಿ ಲಕ್ಷ್ಮೀ ನಾರಾಯಣ ಯೋಗ, ಲಕ್ಷ್ಮೀ ನಾರಾಯಣ ಹೋಮ ಮಾಡಿದರೆ ಉತ್ತಮ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಮಿಥುನ ಯೋಗ;
ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಮಿಥುನ ಯೋಗ; (PC: Unsplash)

Astrology: ಜನ್ಮ ಕುಂಡಲಿಯಲ್ಲಿ ಮಂಗಳನು ಪತಿಯನ್ನು ಸೂಚಿಸುತ್ತಾನೆ. ಹಾಗೆಯೇ ಶುಕ್ರನು ಪತ್ನಿಯನ್ನು ಸೂಚಿಸುತ್ತಾನೆ. ಆದ್ದರಿಂದ ಯಾವುದೇ ಕುಂಡಲಿಯಲ್ಲಿ ಮಂಗಳ ಮತ್ತು ಶುಕ್ರಗ್ರಹಗಳು ಒಂದೇ ಭಾವದಲ್ಲಿದ್ದರೆ ಅಥವಾ ಪರಸ್ಪರ ದೃಷ್ಟಿಯನ್ನು ಹೊಂದಿದ್ದರೆ ಅದನ್ನು ಮಿಥುನ ಯೋಗ ಎಂದು ಕರೆಯುತ್ತೇವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ದಂಪತಿ ನಡುವೆ ಉತ್ತಮ ಹೊಂದಾಣಿಕೆ

ಸಾಮಾನ್ಯವಾಗಿ ಮಿಥುನ ಯೋಗವಿದ್ದರೆ ಪರಸ್ಪರ ಒಬ್ಬರನ್ನೊಬ್ಬರು ಮೆಚ್ಚಿ ವಿವಾಹವಾಗುತ್ತಾರೆ. ಇಲ್ಲವಾದರೆ ವಿವಾಹ ಆದ ನಂತರ ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಏರ್ಪಡುತ್ತದೆ. ಒಬ್ಬರಿಗೊಬ್ಬರು ಕ್ಷಣ ಕಾಲ ದೂರವಾಗಲು ಇಷ್ಟಪಡುವುದಿಲ್ಲ. ಮೇಷ, ಕಟಕ, ಸಿಂಹ, ವೃಶ್ಚಿಕ, ಧನಸ್ಸು ಮತ್ತು ಮೀನ ಲಗ್ನಗಳಲ್ಲಿ ಜನಿಸಿದ್ದರೆ ಪತಿಗೆ ಪತ್ನಿಯ ಮೇಲೆ ವಿಶೇಷವಾದ ಪ್ರೀತಿ ಇರುತ್ತದೆ. ಪತ್ನಿಯು ಪತಿಯ ಮಾತನ್ನು ಕೇಳದೆ ತನ್ನ ಮಾತಿಗೆ ಅಥವಾ ತೀರ್ಮಾನಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಒಂದು ವೇಳೆ ಲಗ್ನವು ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಮತ್ತು ಕುಂಭ ಲಗ್ನಗಳಾದರೆ ದಂಪತಿಗಳಲ್ಲಿ ಉತ್ತಮ ಅನ್ಯೋನ್ಯತೆ ಇರುತ್ತದೆ. ವಿಶೇಷವಾದಂತಹ ಪ್ರೀತಿ ಇರುತ್ತದೆ. ಪತಿಯ ತೀರ್ಮಾನಗಳೇ ಅಂತಿಮವಾಗುತ್ತದೆ.

ಈ ಯೋಗವು ಪತಿ ಮತ್ತು ಪತ್ನಿ ಇಬ್ಬರ ಕುಂಡಲಿಯಲ್ಲೂ ಇದ್ದರೆ, ದಂಪತಿ ನಡುವೆ ವಿಶೇಷ ಪ್ರೀತಿ ವಿಶ್ವಾಸ ಅಕ್ಕರೆ ಇರುತ್ತವೆ. ಒಂದು ವೇಳೆ ದಂಪತಿಗಳಲ್ಲಿ ಯಾರಾದರೂ ಒಬ್ಬರ ಕುಂಡಲಿಯಲ್ಲಿಈ ಯೋಗವಿದ್ದರೆ, ಉತ್ತಮ ಅನ್ಯೋನ್ಯತೆ ಇದ್ದರೂ ಕೂಡ ಪ್ರತಿ ಬಾರಿಯೂ ಯಾರಾದರೂ ಒಬ್ಬರು ಸೋಲಬೇಕಾಗುತ್ತದೆ. ಮತ್ತೊಂದು ವಿಚಾರ ಎಂದರೆ ದಂಪತಿ ನಡುವೆ ಅನಾವಶ್ಯಕ ವಾದ ವಿವಾದ ಮನಸ್ತಾಪ ಇರುತ್ತವೆ. ಪರಸ್ಪರ ಒಬ್ಬರಿಂದ ಒಬ್ಬರು ದೂರವಾಗಬೇಕೆಂದು ನಿರ್ಧರಿಸುತ್ತಾರೆ. ದಿನಗಟ್ಟಲೆ ಪರಸ್ಪರ ಮಾತುಕತೆಯು ನಿಲ್ಲುತ್ತದೆ. ಆದರೆ ಪತಿ ಅಥವಾ ಪತ್ನಿಯರಲ್ಲಿ ಯಾರಾದರೂ ಒಬ್ಬರು ಮಾತನ್ನು ಆರಂಭಿಸಿದರೆ ದಂಪತಿ ನಡುವೆ ಇದ್ದ ಕಂದಕ ಮರೆಯಾಗಿ ಹೋಗುತ್ತದೆ.

ಕುಜ ಶುಕ್ರ ಸಂಯೋಗ

ಇಂತಹ ಗ್ರಹ ಸಂಯೋಜನೆಯು ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಗೋಚಾರದಲ್ಲಿ ಉಂಟಾಗಲಿದೆ. ಮಾರ್ಚ್ ತಿಂಗಳ 7ಳನೇ ದಿನಾಂಕದವರೆಗೂ ಕುಜ ಶುಕ್ರದ ಸಂಯೋಗವು ಮಕರ ರಾಶಿಯಲ್ಲಿ ಇರುತ್ತದೆ. ಆನಂತರ ಮಾರ್ಚ್ ತಿಂಗಳ 15ರಿಂದ ಅದೇ ತಿಂಗಳ 31ರವರೆಗೂ ಕುಂಭ ರಾಶಿಯಲ್ಲಿ ಮುಂದುವರೆಯುತ್ತದೆ. ಯಾವುದೇ ಕುಟುಂಬದಲ್ಲಿ ಪತಿಯ ಪ್ರಾಮುಖ್ಯತೆ ಹೆಚ್ಚಾಗಿದ್ದಲ್ಲಿ ಅಥವಾ ಪತಿಯು ಸಹಬಾಳ್ವೆಗೆ ಒಪ್ಪದೇ ಹೋದಲ್ಲಿ ಮಾರ್ಚ್ 7ರವರೆಗೂ ಪತಿಯ ಮನಸ್ಸನ್ನು ಬದಲಿಸಲು ಪ್ರಯತ್ನಿಸಬಹುದು. ಕಾರಣ ಈ ಅವಧಿಯಲ್ಲಿ ಮಂಗಳನು ಉಚ್ಚ ಕ್ಷೇತ್ರದಲ್ಲಿ ನೆಲೆಸಿರುತ್ತಾನೆ. ಹಾಗೇ ಶುಕ್ರನು ಅಲ್ಲೇ ಇರುತ್ತಾನೆ. ಈ ಕಾರಣದಿಂದಾಗಿ ಉತ್ತಮ ಪ್ರಯತ್ನದಿಂದ ಒಳ್ಳೆಯ ಫಲಗಳನ್ನು ಪಡೆಯಬಹುದು. ಕುಟುಂಬದ ಅಥವಾ ಸಮಾಜದ ಹಿರಿಯರ ಮಧ್ಯಸ್ಥಿಕೆಯಿಂದ ಸಂಧಾನ ಯಶಸ್ವಿಯಾಗುತ್ತದೆ.

ನಂತರ ಅಂದರೆ ಮಾರ್ಚ್ ತಿಂಗಳ ಕೊನೆಯ 15 ದಿನಗಳಲ್ಲಿ ಮಂಗಳ ಮತ್ತು ಶುಕ್ರರು ಕುಂಭ ರಾಶಿಯಲ್ಲಿ ಇರುತ್ತಾರೆ. ಶುಕ್ರನಿಗೆ ಮಿತ್ರ ಕ್ಷೇತ್ರವಾದರೆ ಮಂಗಳನಿಗೆ ಶತ್ರು ಕ್ಷೇತ್ರವಾಗುತ್ತದೆ. ಶನಿಯು ಕುಂಭದಲ್ಲಿ ಇರುವ ಕಾರಣ ಮಿತ್ರನಾದ ಶುಕ್ರನಿಗೆ ಸಂಪೂರ್ಣ ಬೆಂಬಲ ನೀಡುತ್ತಾನೆ. ಶನಿಯು ಕರ್ಮಕಾರಕನಾಗುತ್ತಾನೆ. ನಮ್ಮಲ್ಲಿರುವ ಭಯದಂತೆ ಶನಿಯಿಂದ ನಮಗೆ ತೊಂದರೆ ನೀಡುವುದಿಲ್ಲ. ಶನಿದೆಶೆ ಅಥವಾ ಏಳೂವರೆ ವರ್ಷಗಳ ಶನಿಕಾಟವಿದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಲು ಶನಿಯು ಪ್ರಚೋದಿಸುತ್ತಾನೆ. ಜೊತೆಗೆ ಉತ್ತಮ ಅವಕಾಶವನ್ನು ನೀಡುತ್ತಾನೆ. ಈ ವೇಳೆಯಲ್ಲಿ ಮಂಗಳ ಮತ್ತು ಶುಕ್ರರ ಜೊತೆಯಲ್ಲಿ ಶನಿಯು ಕುಂಭದಲ್ಲಿ ಸಂಚರಿಸುತ್ತಾನೆ. ಈ ಕಾರಣದಿಂದಾಗಿ ಹಿರಿಯರ ಸಂಧಾನದಿಂದ ಮತ್ತೆ ದಂಪತಿಗಳಲ್ಲಿ ಉತ್ತಮ ಅನ್ಯೋನ್ಯತೆ ಬೆಳೆಯುತ್ತದೆ.

ಲಕ್ಷ್ಮೀ ನಾರಾಯಣ ಹೋಮ

ಆದರೆ ಸಂಧಾನಕ್ಕೆ ಮುನ್ನ ಲಕ್ಷ್ಮೀನಾರಾಯಣರ ಪೂಜೆಯನ್ನು ಮಾಡಬೇಕು. ಹಾಗೆಯೇ ಲಕ್ಷ್ಮೀನಾರಾಯಣ ಹೋಮವನ್ನು ಮಾಡಬೇಕು. ಆನಂತರ ನಿಮ್ಮ ಕುಲದೇವರ ಕಲ್ಯಾಣೋತ್ಸವವನ್ನು ಆಚರಿಸಬೇಕು. ಆನಂತರ ಬುಧವಾರ ಅಥವಾ ಶುಕ್ರವಾರಗಳಂದು ದಂಪತಿಯೊಬ್ಬರನ್ನು ಮನೆಗೆ ಆಹ್ವಾನಿಸಿ ಅವರಿಗೆ ಇಷ್ಟವಾದ ಭೋಜನ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಹಣದ ಕೊರತೆ ಇದ್ದಲ್ಲಿ ನಿಮ್ಮ ಕುಲ ದೇವರ ದೇವಾಲಯಕ್ಕೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಬೇಕು. ಹಣದ ತೊಂದರೆ ಇಲ್ಲದೆ ಇರುವವರು ಬಡವರ ಮನೆಯ ವಿವಾಹಕಾರ್ಯಕ್ಕೆ ಸಹಾಯ ಮಾಡಬೇಕು. ಇದರಿಂದ ದಂಪತಿ ನಡುವಿನ ಮನಸ್ತಾಪ ಮರೆಯಾಗಿ ಮತ್ತೊಮ್ಮೆ ಸುಖಮಯ ದಾಂಪತ್ಯ ಜೀವನ ಆರಂಭಿಸುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ