Revati Nakshatra: ರೇವತಿ ನಕ್ಷತ್ರದಲ್ಲಿ ಜನಿಸಿದವರು ಈ ವಿಚಾರದಲ್ಲಿ ತುಂಬ ಲಕ್ಕಿ; ಕಾರಣ ಹೀಗಿದೆ
Aug 19, 2023 06:00 AM IST
Revati Nakshatra: ರೇವತಿ ನಕ್ಷತ್ರದಲ್ಲಿ ಜನಿಸಿದವರು ಈ ವಿಚಾರದಲ್ಲಿ ತುಂಬ ಲಕ್ಕಿ; ಕಾರಣ ಹೀಗಿದೆ
- ರೇವತಿ ನಕ್ಷತ್ರದ ಎಲ್ಲಾ ನಾಲ್ಕು ಪಾದಗಳು ಮೀನ ರಾಶಿಯಲ್ಲಿ ಬರುತ್ತದೆ. ಮೀನ ರಾಶಿಯ ಅಧಿಪತಿ ಗುರು. ಈ ಕಾರಣದಿಂದಾಗಿ ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೆ ವಿಶೇಷವಾದ ವಿದ್ಯಾ ಬುದ್ಧಿ ಲಭ್ಯವಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರ ಮುಖದಲ್ಲಿ ವಿಶೇಷವಾದಂತಹ ಕಾಂತಿ ಇರುತ್ತದೆ.
Revati Nakshatra: ನಕ್ಷತ್ರಗಳಲ್ಲಿ ಕೊನೆಯ ನಕ್ಷತ್ರ ರೇವತಿ ಆಗುತ್ತದೆ. ಈ ನಕ್ಷತ್ರದ ದೇವತೆ ಪೂಷಾ. ಪೂಷಾ ಎಂಬುದು ಸೂರ್ಯನ ಮತ್ತೊಂದು ಹೆಸರು. ಈ ನಕ್ಷತ್ರದ ಅಧಿಪತಿ ಬುಧ. ಆದ್ದರಿಂದ ಇದರ ದಶಾಕಾಲವು 17 ವರ್ಷವಾಗುತ್ತದೆ. ರೇವತಿ ನಕ್ಷತ್ರದ ಎಲ್ಲಾ ನಾಲ್ಕು ಪಾದಗಳು ಮೀನ ರಾಶಿಯಲ್ಲಿ ಬರುತ್ತದೆ. ಮೀನ ರಾಶಿಯ ಅಧಿಪತಿ ಗುರು. ಈ ಕಾರಣದಿಂದಾಗಿ ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೆ ವಿಶೇಷವಾದ ವಿದ್ಯಾ ಬುದ್ಧಿ ಲಭ್ಯವಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರ ಮುಖದಲ್ಲಿ ವಿಶೇಷವಾದಂತಹ ಕಾಂತಿ ಇರುತ್ತದೆ. ಸಾಮಾನ್ಯವಾಗಿ ಇವರಿಗೆ ಹಣದ ತೊಂದರೆ ಬಾರದು. ಕುಟುಂಬದವರ ವಿರೋಧದ ನಡುವೆಯೂ ಜನಸಾಮಾನ್ಯರ ಸೇವೆಯಲ್ಲಿ ಸಂತೋಷವನ್ನು ಕಾಣುತ್ತಾರೆ.
ತಾಜಾ ಫೋಟೊಗಳು
ಸಾಮಾನ್ಯವಾಗಿ ಇವರು ಯಾರನ್ನು ಅಗೌರವ ಭಾವದಿಂದ ನೋಡುವುದಿಲ್ಲ. ಶ್ರೀಮಂತಿಕೆ ಹೆಚ್ಚಿದಂತೆಲ್ಲ ತಾನೇ ದೊಡ್ಡವ ಎಂಬುದು ಭಾವನೆ ಹೆಚ್ಚಾಗುತ್ತದೆ. ಇವರಿಗೆ ಅಧಿಕವಾದ ಧೈರ್ಯ ಇರುತ್ತದೆ. ಧಾರ್ಮಿಕ ವಿಧಿ ವಿಧಾನದಲ್ಲಿ ಹೆಚ್ಚಿನ ನಂಬಿಕೆ ಇರುತ್ತದೆ. ಎದುರಾಗುವ ಅಡ್ಡಿ ಆತಂಕಗಳನ್ನು ಸುಲಭದಲ್ಲಿ ವಿವರಿಸಬಲ್ಲರು. ಹಣದ ತೊಂದರೆ ಕಂಡು ಬರದು ಜೀವನವನ್ನು ಸಂತೋಷವಾಗಿಸಲು ಯಾವುದೇ ತ್ಯಾಗವನ್ನು ಮಾಡಬಲ್ಲರು.
ವಿದೇಶದಲ್ಲಿ ನೆಲೆಸುವ ಸಾಧ್ಯತೆಗಳಿವೆ. ಬೇರೆಯವರ ಅವಕಾಶಗಳನ್ನು, ಹಣವನ್ನು ಎಂದಿಗೂ ಇಷ್ಟಪಡುವುದಿಲ್ಲ. ಯಾವುದೇ ರೀತಿಯ ಕಷ್ಟ ನಷ್ಟಗಳು ಎದುರಾದರೂ ಬುದ್ಧಿವಂತಿಕೆ ಮತ್ತು ಮಾತಿನ ಬಲದಿಂದ ಗೆಲ್ಲಬಲ್ಲರು. ಸಂಪೂರ್ಣ ವಿದ್ಯಾಭ್ಯಾಸ ಲಭಿಸುತ್ತದೆ. ವಿದ್ಯಾಭ್ಯಾಸಕ್ಕಿಂತಲೂ ಅತಿಯಾದ ಬುದ್ಧಿ ಇವರಿಗಿರುತ್ತದೆ. ದಾಂಪತ್ಯ ಜೀವನ ವಿಶೇಷವಾಗಿರುತ್ತದೆ. ಅತಿ ಬೆಲೆ ಬಾಳುವ ವಸ್ತುಗಳ ಸರಬರಾಜಿನ ಕೆಲಸ ಕಾರ್ಯದಿಂದ ಹೆಚ್ಚಿನ ಲಾಭ ದೊರೆಯುತ್ತದೆ.
ಸ್ತ್ರೀಯರು ಸದಾ ಸಂತೋಷದಿಂದ ಜೀವನ ನಡೆಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿರುವ ಸ್ತ್ರೀಯರು ಎಲ್ಲರಿಂದಲೂ ಗೌರವಾದರಗಳನ್ನು ಬಯಸುತ್ತಾರೆ. ಮಾಡುವ ಚಿಕ್ಕ ಪುಟ್ಟ ಕೆಲಸಗಳಿಗೂ ಹೆಚ್ಚಿನ ಪ್ರಶಸ್ತಿ ಹೊಗಳಿಕೆಗಳನ್ನು ನಿರೀಕ್ಷಿಸುತ್ತಾರೆ. ಇವರುಗಳು ಸಾಮಾನ್ಯವಾಗಿ ಸಮಯ ತಕ್ಕಂತೆ ಮನಸ್ಸನ್ನು ಬದಲಾಯಿಸಿಕೊಂಡು ಜೀವನ ಮಾಡುತ್ತಾರೆ ಇವರ ಪಾಲಿಗೆ ವಿವಾಹ ಎಂಬುದು ಕೇವಲ ಒಂದು ಕರ್ತವ್ಯ. ಹೆಚ್ಚಿನ ಬೇಡಿಕೆ ಇಲ್ಲದೆ ಒಳ್ಳೆಯ ಮನಸಿರುವ ವರನನ್ನು ಆಯ್ಕೆ ಮಾಡುತ್ತಾರೆ.
ಪುರುಷರು ಕೊಂಚ ವಿಭಿನ್ನ ಗುಣವನ್ನು ಹೊಂದಿರುತ್ತಾರೆ. ಯಾರ ಮಾತನ್ನು ಕೇಳುವುದಿಲ್ಲ. ತಾವು ಮಾಡಿದ್ದೆಲ್ಲ ಸರಿ ಎಂಬ ಮನೋಭಾವನೆ ಇರುತ್ತದೆ. ಮನಸ್ಸಿನಲ್ಲಿರುವ ಪ್ರೀತಿ ವಿಶ್ವಾಸ ಗೌರವವನ್ನು ಎಂದಿಗೂ ತೋರ್ಪಡಿಸುವುದಿಲ್ಲ. ಉತ್ತಮ ಆದಾಯವಿದ್ದಾಗ ಅನಾವಶ್ಯಕ ಖರ್ಚು ವೆಚ್ಚಗಳನ್ನು ಅನುಭವಿಸುತ್ತಾರೆ. ಹಣ ಉಳಿಸುವ ಯೋಚನೆಯಾಗಲಿ ಯೋಜನೆಯಾಗಲಿ ಇವರಿಗೆ ಇರುವುದಿಲ್ಲ. ಒಂದೇ ಮಾದರಿಯ ಜೀವನವನ್ನು ಹೆಚ್ಚಿಸದೆ ಸದಾ ಕಾಲ ಬದಲಾವಣೆಯ ನಿರೀಕ್ಷೆಯಲ್ಲಿ ಬದುಕುತ್ತಾರೆ. ರುಚಿಕರವಾದ ಊಟ ಸುಖಕರವಾದ ನಿದ್ದೆ ಇದ್ದಲ್ಲಿ ವಾಸ್ತವಿಕತೆಯ ಜೀವನವನ್ನೇ ಮರೆಯುತ್ತಾರೆ.
ಇವರ ಜೀವನ ಕೇವಲ ಕಲಿತ ವಿದ್ಯೆಯನ್ನು ಆಧರಿಸುತ್ತದೆ. ಯಾವುದೇ ಕೆಲಸ ಮಾಡುವುದಿಲ್ಲ. ಐಷಾರಾಮಿ ಜೀವನ ಮತ್ತು ಐಷಾರಾಮಿ ವಾಹನಕ್ಕೆ ಮನಸ್ಸು ಸೋಲುತ್ತದೆ. ಗಣ್ಯ ವ್ಯಕ್ತಿಗಳ ಮತ್ತು ಅತಿ ವಿದ್ಯಾವಂತರ ಸಂಪರ್ಕ ದೊರೆತರೂ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದಿಲ್ಲ.
ಸ್ವತಂತ್ರವಾಗಿ ಮಾಡುವ ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರುತ್ತದೆ. ಆದರೆ ಕುಟುಂಬದವರ ಅಥವಾ ಆತ್ಮೀಯರ ಜೊತೆ ಮಾಡುವ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಅಂಶ ದೊರೆಯುತ್ತದೆ. ಸ್ವಂತ ಶಾಲಾ ಕಾಲೇಜನ್ನು ಆರಂಭಿಸುವ ಆಸೆ ಇದ್ದರೂ ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುತ್ತಾರೆ. ಯಾವ ಕೆಲಸ ಕಾರ್ಯವಾದರೂ ಸೋಮಾರಿತನ ಇವರಿಗೆ ಸೋಲಿನ ಬಳುವಳಿ ನೀಡುತ್ತದೆ. ಬೇಕರಿ ಅಥವಾ ಸ್ಟಾರ್ ಮಟ್ಟದ ಹೋಟೆಲ್ ನಿರ್ವಹಣೆಯಲ್ಲಿ ಉತ್ತಮ ಆದಾಯ ತರುತ್ತದೆ. ತಂದೆಗೆ ಸಂಬಂಧಿಸಿದ ಆಸ್ತಿ ಪರರ ಪಾಲಾಗುವ ಸಾಧ್ಯತೆ ಇದೆ. ಸುಲಭವಾಗಿ ಆತ್ಮೀಯರಿಂದಲೇ ಇವರು ಮೋಸ ಹೋಗುತ್ತಾರೆ. ಮನಸಿಟ್ಟು ದೇವತಾ ಕಾರ್ಯಗಳಲ್ಲಿ ಭಾಗವಹಿಸುವ ಕಾರಣ ಯಶಸ್ಸಿನ ಕೊರತೆ ಕಂಡು ಬರದು.
ರಾಶಿ ಫಲ, ಆಧ್ಯಾತ್ಮ, ಕುಂಡಲಿ ಕುರಿತ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ