logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Astrology News: ಗರ್ಭಿಣಿಯರ ಜೀವನದಲ್ಲಿ 9 ಗ್ರಹಗಳ ಪಾತ್ರ; ಯಾವ ಹಂತದಲ್ಲಿ ಯಾವ ಗ್ರಹಗಳು ಪ್ರಭಾವ ಬೀರುತ್ತವೆ? ಇಲ್ಲಿದೆ ಉತ್ತರ

Astrology News: ಗರ್ಭಿಣಿಯರ ಜೀವನದಲ್ಲಿ 9 ಗ್ರಹಗಳ ಪಾತ್ರ; ಯಾವ ಹಂತದಲ್ಲಿ ಯಾವ ಗ್ರಹಗಳು ಪ್ರಭಾವ ಬೀರುತ್ತವೆ? ಇಲ್ಲಿದೆ ಉತ್ತರ

HT Kannada Desk HT Kannada

Jul 08, 2023 06:30 AM IST

google News

ಗರ್ಭಿಣಿಯರ ಜೀವನದಲ್ಲಿ 9 ಗ್ರಹಗಳ ಪಾತ್ರ

  • ಜನಸಾಮಾನ್ಯರ ಜೀವನದ ಪ್ರತಿಯೊಂದು ವಿಚಾರದಲ್ಲಿಯೂ ಪ್ರತಿಯೊಂದು ಹಂತದಲ್ಲಿಯೂ ಎಲ್ಲಾ 9 ಗ್ರಹಗಳ ಪಾತ್ರ ಅತಿ ಮುಖ್ಯವಾಗುತ್ತವೆ. ಸಾಮಾನ್ಯವಾಗಿ ಸಂತಾನದ ವಿಚಾರದಲ್ಲಿ ಯಾವುದೇ ತೊಂದರೆ ಉಂಟಾದರೂ ನಾಗದೋಷ ಅಥವಾ ಸರ್ಪ ದೋಷ ಎಂದು ಭಾವಿಸುತ್ತೇವೆ. ಆದ್ದರಿಂದ ಸಂತಾನದ ವಿಚಾರದಲ್ಲಿ ಪ್ರತಿಯೊಂದು ಗ್ರಹಗಳು ಬಹಳ ಮುಖ್ಯ ಎನಿಸುತ್ತದೆ.

ಗರ್ಭಿಣಿಯರ ಜೀವನದಲ್ಲಿ 9 ಗ್ರಹಗಳ ಪಾತ್ರ
ಗರ್ಭಿಣಿಯರ ಜೀವನದಲ್ಲಿ 9 ಗ್ರಹಗಳ ಪಾತ್ರ (PC: Twitter,‍Freepik)

ಜ್ಯೋತಿಷ್ಯ ಶಾಸ್ತ್ರದಲ್ಲಿ ಪಿತೃ ದೋಷ ಅಥವಾ ಪಿತೃ ಶಾಪ ಎಂದರೆ ಅದು ಕೇವಲ ರವಿ ಗ್ರಹಕ್ಕೆ ಸಂಬಂಧಪಟ್ಟದ್ದಲ್ಲ. ಒಂಬತ್ತನೇ ಮನೆಯಲ್ಲಿ ಇರುವ ಗ್ರಹ ಲಗ್ನಾಧಿಪತಿ ಪಂಚಮಾಧಿಪತಿಗೆ ಇರುವ ದೃಷ್ಟಿಗಳು ಹೀಗೆ ಹತ್ತು ಹಲವು ಅಂಶಗಳು ಮುಖ್ಯವಾಗುತ್ತವೆ. ಇದೇ ರೀತಿ ಗರ್ಭಿಣಿಯಾದ ನಂತರ ಎದುರಾಗುವ ತೊಂದರೆಯೂ ಸಾಕಷ್ಟು ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಒಂದೊಂದು ತಿಂಗಳಿಗೂ ಒಂದೊಂದು ಗ್ರಹದ ಪ್ರಭಾವವು ವಿಶೇಷವಾಗಿರುತ್ತದೆ. ಕೇವಲ ಪೂಜೆ ಹೋಮ ಹವನಗಳಲ್ಲದೆ ಕುಟುಂಬದ ಹಿರಿಯರ ಆಶೀರ್ವಾದವೂ ಅತಿ ಮುಖ್ಯ. ಗರ್ಭಿಣಿಯಾದ ನಂತರ ಮಾಡಬಾರದ ಕೆಲಸಗಳು ಸಹ ಕೆಲವೊಂದು ಇರುತ್ತವೆ. ಉದಾಹರಣೆಗೆ ಅರುಣ ಪ್ರಶ್ನೆ ಎಂಬ ಮಂತ್ರ ಭಾಗವಿದೆ. ಇದರಲ್ಲಿ ಕೆಲವೊಂದು ಮಂತ್ರಗಳ ಸಾಲುಗಳನ್ನು ಕೇಳಿದರೆ ಗರ್ಭಸ್ರಾವ ಆಗುವ ಸಾಧ್ಯತೆಗಳು ಇರುತ್ತವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಇದೇ ರೀತಿ ಅನುಭವಸ್ಥರು ಹೇಳುವಂತೆ ಗರ್ಭಿಣಿಗೆ ಆರು ತಿಂಗಳು ಕಳೆದ ನಂತರ ಯಾವುದೇ ದೇವಾಲಯಕ್ಕೂ ಹೋಗಬಾರದು. ಮುಖ್ಯವಾಗಿ ದುರ್ಗಾ ದೇವಸ್ಥಾನಕ್ಕೆ ಹೋಗಬಾರದು. ಒಬ್ಬ ವ್ಯಕ್ತಿಯಾಗಲಿ, ಮನೆಯಾಗಲಿ ದೃಷ್ಠಿ ಪರಿಹರಿಸಲು ಬೂದಗುಂಬಳಕಾಯಿ ಬಳಸುತ್ತಾರೆ. ಅದನ್ನು ನೆಲಕ್ಕೆ ಅಪ್ಪಳಿಸಿ ಹೊಡೆಯುವ ವೇಳೆ ಗರ್ಭಿಣಿಯು ಅದರ ಎದುರು ನಿಂತಿರಬಾರದು .ಇದೇ ರೀತಿ ಗೃಹಪ್ರವೇಶ ಮಾಡುವ ವೇಳೆ ಅಥವಾ ಕೆಲವು ದೇವಾಲಯಗಳಲ್ಲಿ ಅನ್ನ ಬಲಿ ಹಾಕುವ ವೇಳೆ ಗರ್ಭಿಣಿಯರು ಅದರ ಎದುರು ನಿಲ್ಲಬಾರದು. ಗೃಹಪ್ರವೇಶ ಆದ ನಂತರ ಗರ್ಭಿಣಿಯರು ಆ ಮನೆಯಲ್ಲಿ ಮಲಗಬಾರದು ಮುಖ್ಯವಾಗಿ ಮುಂಬಾಗಿಲ ಎದುರು ಅಡ್ಡವಾಗಿ ಮಲಗಬಾರದು. ಯಾವುದೇ ಹೋಮ ಮಾಡಿದ ನಂತರ ನೀಡುವ ಪೂರ್ಣಾಹುತಿಯ ವೇಳೆ ಎದುರಿಗೆ ನಿಲ್ಲಬಾರದು. ಇಂತಹ ಅನೇಕ ವಿಚಾರಗಳಿವೆ.

ಗರ್ಭಿಣಿಯಾದ ಮೊದಲ ತಿಂಗಳಿನಿಂದ ಹೆರಿಗೆಯ ವೇಳೆಯವರೆಗೂ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಪ್ರಭಾವ ಇರುತ್ತದೆ.

  • ಮೊದಲನೆ ತಿಂಗಳಿನಲ್ಲಿ ಶುಕ್ರ ಗ್ರಹದ ಪಾತ್ರವಿರುತ್ತದೆ. ಇದರಿಂದ ಮಗುವಿಗೆ ಯಾವುದೇ ಆಕಾರ ಬಂದಿರುವುದಿಲ್ಲ. ಗರ್ಭಿಣಿಯ ಜಾತಕದಲ್ಲಿ ಶುಕ್ರನು ಶಕ್ತಿಶಾಲಿ ಅಲ್ಲದೆ ಹೋದಲ್ಲಿ ಅಥವಾ ಗೋಚಾರದಲ್ಲಿ ಶುಕ್ರನು ಸುಸ್ಥಿತಿಯಲ್ಲಿ ಇರದೆ ಹೋದಲ್ಲಿ ಗರ್ಭಿಣಿಗೆ ತೊಂದರೆ ಇರುತ್ತದೆ. ಆದ್ದರಿಂದ ಶುಕ್ರ ಶಾಂತಿ ಮಾಡುವುದು ಒಳ್ಳೆಯದು. ದೇವಾಲಯಕ್ಕೆ ಬಿಳಿ ಬಟ್ಟೆ, ಅವರೆ ಕಾಳನ್ನು ನೀಡಬೇಕು. ಐದು ಜನ ಕನ್ಯಾ ಮುತ್ತೈದೆಯರಿಗೆ ಅವರಿಗೆ ಇಷ್ಟವೆನಿಸುವ ಪದಾರ್ಥಗಳನ್ನು ನೀಡಬೇಕು, ಇದರಿಂದ ಶುಕ್ರ ದೋಷ ಪರಿಹಾರವಾಗುತ್ತದೆ.
  • ಎರಡನೇ ತಿಂಗಳಲ್ಲಿ ಕುಜನ ಪಾತ್ರವಿರುತ್ತದೆ ಈ ವೇಳೆಯಲ್ಲಿ ಮಾಂಸ, ಪಿಂಡ ಮತ್ತು ಶಿರಸ್ಸು ರಚನೆಯಾಗುತ್ತದೆ. ಗರ್ಭಿಣಿಯ ಜಾತಕದಲ್ಲಿ ಅಥವಾ ಗೋಚಾರದಲ್ಲಿ ಕುಜನು ಸುಸ್ಥಿತಿಯಲ್ಲಿ ಇರದೇ ಹೋದಲ್ಲಿ ಗರ್ಭಿಣಿಗೆ ತೊಂದರೆಯಾಗುವ ಸಾಧ್ಯತೆಗಳಿರುತ್ತದೆ. ಈ ಕಾರಣದಿಂದ ಕುಜ ಶಾಂತಿಯನ್ನು ಮಾಡಬೇಕು. ದೇವಾಲಯಕ್ಕೆ ಕೆಂಪು ಬಟ್ಟೆ , ತೊಗರಿ ಬೆಳೆಯನ್ನು ನೀಡಬೇಕು. ಷಷ್ಠಿ ಪೂಜೆಯನ್ನು ಮಾಡಬೇಕು. ಬ್ರಹ್ಮಚಾರಿಗಳಿಗೆ ಕುಡಿಯಲು ಹಸುವಿನ ಹಾಲನ್ನು ನೀಡಬೇಕು. ಇದರಿಂದ ದೋಷ ಪರಿಹಾರವಾಗುತ್ತದೆ
  • ಮೂರನೆಯ ತಿಂಗಳಲ್ಲಿ ಗುರುವಿನ ಪ್ರಭಾವ ಹೆಚ್ಚಾಗಿರುತ್ತದೆ ಈ ವೇಳೆಯಲ್ಲಿ ಅವಯವಗಳ ರಚನೆ ಆಗುತ್ತದೆ. ಗರ್ಭಿಣಿಯ ಜಾತಕದಲ್ಲಿ ಅಥವಾ ಗೋಚಾರದಲ್ಲಿ ಗುರು ಸುಸ್ಥಿತಿಯಲ್ಲಿ ಇರದೆ ಹೋದಲ್ಲಿ ಗುರುವಿನ ತೊಂದರೆ ಉಂಟಾಗುತ್ತದೆ. ಆದ್ದರಿಂದ ಗುರು ಶಾಂತಿಯನ್ನು ಮಾಡಬೇಕು. ಹಳದಿ ಬಟ್ಟೆ ಮತ್ತು ಕಡಲೆಕಾಳು ಅಥವಾ ಕಡಲೆ ಬೇಳೆಯನ್ನು ದೇವಾಲಯಕ್ಕೆ ನೀಡುವುದರಿಂದ ಶುಭ ಉಂಟಾಗುತ್ತದೆ. ಅಲ್ಲದೆ ಗುರುಗಳ ಆಶೀರ್ವಾದವನ್ನು ಪಡೆಯುವುದು ಬಹಳ ಮುಖ್ಯ
  • ನಾಲ್ಕನೇ ತಿಂಗಳಲ್ಲಿ ರವಿಯ ಪ್ರಭಾವ ಸಾಕಷ್ಟು ಇರುತ್ತದೆ. ಈ ಅವಧಿಯಲ್ಲಿ ಜಠರ ಮತ್ತು ಕಟಿ ಪ್ರದೇಶಗಳು ರಚನೆಯಾಗುತ್ತವೆ. ಒಂದು ವೇಳೆ ಗರ್ಭಿಣಿಯ ಜಾತಕದಲ್ಲಿ ಅಥವಾ ಗೋಚಾರದಲ್ಲಿ ರವಿಯು ಅಶುಭನಾಗಿದ್ದಲ್ಲಿ ರವಿಯಿಂದ ತೊಂದರೆಯಾಗುತ್ತದೆ. ಆದ್ದರಿಂದ ರವಿಶಾಂತಿ ಮಾಡಬೇಕು. ದೇವಾಲಯಕ್ಕೆ ಕೆಂಪು ಬಟ್ಟೆ, ಗೋಧಿ ರವೆ ನೀಡುವುದರಿಂದ ಶುಭ ಫಲಗಳು ದೊರೆಯುತ್ತವೆ. ವಯೋವೃದ್ಧರಿಗೆ ಗೋಧಿ ಅಥವಾ ರವೆಯಿಂದ ಮಾಡಿದ ಸಿಹಿ ತಿಂಡಿಯನ್ನು ನೀಡುವ ಮೂಲಕ ಶುಭ ಫಲಗಳನ್ನು ಪಡೆಯಬಹುದು.
  • ಐದನೇ ತಿಂಗಳಿನಲ್ಲಿ ಚಂದ್ರನ ಪ್ರಭಾವ ಅತಿಯಾಗಿರುತ್ತದೆ. ಈ ವೇಳೆ ಚರ್ಮ ರಚನೆಯಾಗುತ್ತದೆ. ಗರ್ಭಿಣಿಯ ಜಾತಕದಲ್ಲಿ ಚಂದ್ರನು ಶಕ್ತಿ ಹೀನನಾಗಿ ಅಥವಾ ಗೋಚಾರದ ಶಕ್ತಿ ಹೀನನಾಗಿದ್ದಲ್ಲಿ ತೊಂದರೆ ಉಂಟಾಗಬಹುದು. ಆದ್ದರಿಂದ ಚಂದ್ರನ ಶಾಂತಿಯ ಅಗತ್ಯತೆ ಇರುತ್ತದೆ. ದೇವಾಲಯಕ್ಕೆ ಅಕ್ಕಿ ಹಾಲು ನೀಡಿದಲ್ಲಿ ದೋಷ ಪರಿಹಾರವಾಗುತ್ತದೆ ಮತ್ತು ಈ ಸಮಯದಲ್ಲಿ ತಾಯಿಯ ಆಶೀರ್ವಾದ ಬಹಳ ಮುಖ್ಯ .
  • 6 ನೇ ತಿಂಗಳಿನಲ್ಲಿ ಶನಿಯ ಪ್ರಭಾವ ಇರುತ್ತದೆ. ರೋಮನಾಳ, ರಂಧ್ರಗಳು ರಚನೆಯಾಗುತ್ತವೆ. ಆದ್ದರಿಂದ ಗರ್ಭಿಣಿಯ ಕುಂಡಲಿಯಲ್ಲಿ ಅಥವಾ ಗೋಚಾರದಲ್ಲಿ ಶನಿಯು ದೋಷಿತನಾಗಿದ್ದಲ್ಲಿ ತೊಂದರೆ ಉಂಟಾಗಬಹುದು. ಶನಿ ಶಾಂತಿಯಿಂದ ಶುಭ ಉಂಟಾಗುತ್ತದೆ. ದೇವಸ್ಥಾನಕ್ಕೆ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆ ಎಳ್ಳನ್ನು ನೀಡಬೇಕು. ಅಲ್ಲದೆ ಕೂಲಿ ಕಾರ್ಮಿಕರಿಗೆ ಸಹಾಯ ಮಾಡಬೇಕು. ಹಿರಿಯಣ್ಣನ ಆಶೀರ್ವಾದದಿಂದ ಶುಭ ಉಂಟಾಗುತ್ತದೆ
  • ಬುದನು ಏಳನೇ ತಿಂಗಳಿನಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಾನೆ ಈ ಅವಧಿಯಲ್ಲಿ ಪಂಚೇಂದ್ರಿಯಗಳು ರಚಿತವಾಗುತ್ತದೆ. ಭುದನು ಕುಂಡಲಿಯಲ್ಲಿ ಅಥವಾ ಗೋಚಾರದಲ್ಲಿ ಶಕ್ತಿ ಹೀನನಾಗಿದ್ದಲ್ಲಿ ತೊಂದರೆ ಉಂಟಾಗುತ್ತದೆ. ಆದ್ದರಿಂದ ಬುಧ ಶಾಂತಿ ಮಾಡಬೇಕು ದೇವಾಲಯಕ್ಕೆ ಹಸಿರು ಬಟ್ಟೆ ಹೆಸರುಕಾಳು ಅಥವಾ ಹೆಸರು ಬೇಳೆ ನೀಡುವದರಿಂದ ಶುಭ ಉಂಟಾಗುತ್ತದೆ
  • ಎಂಟನೇ ತಿಂಗಳಿನಲ್ಲಿ ಹಸಿವು ರಕ್ತ ಸಂಚಾರ ಆರಂಭವಾಗುತ್ತದೆ. ಈ ವೇಳೆಯಲ್ಲಿ ನವಗ್ರಹಗಳ ಪೂಜೆ ಮಾಡಬೇಕು ನವಗ್ರಹವನ್ನು ದಾನವಾಗಿ ನೀಡಬೇಕು
  • ಅಂತಿಮವಾಗಿ ಚಂದ್ರನು ಒಂಬತ್ತನೇ ತಿಂಗಳಿನಲ್ಲಿ ತನ್ನ ಪ್ರಭಾವ‌ ಬೀರುತ್ತಾನೆ. ಈ ವೇಳೆ ಪ್ರಸವ ವೇದನೆ ಆರಂಭವಾಗುತ್ತದೆ. ಆಗಲೂ ಚಂದ್ರನ ಶಾಂತಿ ಮಾಡಬೇಕು. ದೇವಾಲಯಕ್ಕೆ ಬಿಳಿ ಬಟ್ಟೆ ,ಅಕ್ಕಿ ನೀಡುವುದು ಒಳ್ಳೆಯದು. ತಂದೆ,ತಾಯಿ, ಅತ್ತೆ, ಮಾವರ ಆಶೀರ್ವಾದದಿಂದ ಶುಭವಾಗುತ್ತದೆ.

ಈ ರೀತಿ ಜನಸಾಮಾನ್ಯರ ಜೀವನದ ಪ್ರತಿಯೊಂದು ವಿಚಾರದಲ್ಲಿಯೂ ಪ್ರತಿಯೊಂದು ಹಂತದಲ್ಲಿಯೂ ನವಗ್ರಹಗಳ ಪಾತ್ರ ಅತಿ ಮುಖ್ಯವಾಗುತ್ತವೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ