Finance Horoscope 2024: ಲಾಭವೋ, ನಷ್ಟವೋ; ತುಲಾ, ವೃಶ್ಚಿಕ ರಾಶಿಯವರ ಹಣಕಾಸು ಭವಿಷ್ಯ ಹೇಗಿದೆ ನೋಡಿ
Dec 27, 2023 04:34 PM IST
ತುಲಾ, ವೃಶ್ವಿಕ ರಾಶಿಯವರ ಹಣಕಾಸು ಭವಿಷ್ಯ
Money Horoscope 2024: ಹೊಸ ವರ್ಷದಲ್ಲಿ ನಮ್ಮ ಹಣಕಾಸಿನ ಪರಿಸ್ಥಿತಿ ಹೇಗಿರಬಹುದು ಎಂದು ತಿಳಿದುಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 2024ರ ಸಿಂಹ ಹಾಗೂ ಕನ್ಯಾ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಲಿದೆ ಈ ಲೇಖನ.
2024 Money Horoscope : 2023ನೇ ವರ್ಷ ಮುಗಿದು 2024ನೇ ವರ್ಷದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ಮುಂದಿನ ವರ್ಷದ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಬಹುತೇಕರಲ್ಲಿ ಕುತೂಹಲವಿರುತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ಸಿಂಹ ಹಾಗೂ ಕನ್ಯಾ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.
ತಾಜಾ ಫೋಟೊಗಳು
ತುಲಾ
ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಎದುರಾದರೂ ಕುಟುಂಬದ ಸದಸ್ಯರ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆವ ಕಾರಣ ಆದಾಯ ಹೆಚ್ಚುತ್ತದೆ. ಉತ್ತಮ ಜೀವನ ನಿರ್ವಹಣೆಯಲ್ಲದೆ ಮುಂದಿನ ದಿನಗಳಿಗಾಗಿ ಹಣವನ್ನು ಉಳಿತಾಯ ಮಾಡುವಿರಿ. ಸೋಲು ಒಪ್ಪದೆ ಉತ್ತಮ ಪ್ರಯುತ್ನದಿಂದ ಹೆಚ್ಚಿನ ಹಣ ಗಳಿಸುವಿರಿ.
ಕಾನೂನಿನ ಪ್ರಕ್ರಿಯೆಯೊಂದರಲ್ಲಿ ಜಯಗಳಿಸುವ ಕಾರಣ ಹಣದ ಕೊರತೆ ಕಡಿಮೆಯಾಗುತ್ತದೆ. ಏಪ್ರಿಲ್ ಅಂತ್ಯದವರೆಗೂ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಇರುತ್ತದೆ. ಸಂಗಾತಿಯ ಸಹಾಯ ಸದಾಕಾಲ ದೊರೆಯುತ್ತದೆ. ಇದರಿಂದಾಗಿ ಆದಾಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮಕ್ಕಳಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುವ ಕಾರಣ ಜವಾಬ್ದಾರಿ ಕಡಿಮೆ ಆಗುತ್ತದೆ. ಆತ್ಮೀಯರ ಜೊತೆ ಮಾಡುವ ಪಾಲುದಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಸ್ವಂತ ಮನೆ ಕೊಳ್ಳಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಕಷ್ಟ ಕಾಲ ಎಂದು ಕೂಡಿಟ್ಟ ಹಣವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುತ್ತದೆ. ನಿಧಾನವಾದರೂ ಆದಾಯದಲ್ಲಿ ಅಭಿವೃದ್ಧಿ ಇರುತ್ತದೆ. ಕಾನೂನು ಪ್ರಕ್ರಿಯೆ ಸಂಪೂರ್ಣಗೊಳ್ಳದೆ ಹಣದ ವ್ಯವಹಾರ ಮುಂದುವರೆಸಬೇಡಿ. ನಂಬಿಸಿ ಹಣ ನೀಡದ ಮಂದಿ ಸುತ್ತಲೂ ಇರುತ್ತಾರೆ. ಕುಟುಂಬದ ಹಿರಿಯರ ಸಲಹೆಯನ್ನು ಪಾಲಿಸಿದರೆ ಹಣದ ತೊಂದರೆ ಬಾರದು.
ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಹೋದಲ್ಲಿ ದೊರೆಯಬೇಕಿದ್ದ ಆದಾಯವು ಪರರ ಪಾಲಾಗುತ್ತದೆ. ಏಪ್ರಿಲ್ ಕಳೆದ ನಂತರ ಹಣ ಗಳಿಕೆ ಬಲು ನಿಧಾನಗತಿಯಲ್ಲಿ ಸಾಗುತ್ತದೆ. ಸಣ್ಣಪುಟ್ಟ ವ್ಯವಹಾರಗಳಿಗೂ ಬೇರೆಯವರನ್ನು ಆಶ್ರಯಿಸುವಿರಿ. ಅತಿಯಾದ ವಿಶ್ವಾಸ ಆರ್ಥಿಕ ಪರಿಸ್ಥಿತಿಯಲ್ಲಿ ತೊಂದರೆ ಎದುರಾಗಬಹುದು. ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುವ ಕಾರಣ ಹಣ ಗಳಿಕೆಯಲ್ಲಿ ಹಿನ್ನೆಡೆ ಉಂಟಾಗುತ್ತದೆ. ಭೂಮಿಗೆ ಸಂಬಂಧಿಸಿದ ಕೆಲಸ ಅಥವಾ ವ್ಯಾಪಾರ ವ್ಯವಹಾರಗಳಿಂದ ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಸಾಲವಾಗಿ ಹಣ ಕೊಡುವುದು ಅಥವಾ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಹೊಸ ಪಾಲುದಾರಿಕೆಯ ವ್ಯಾಪಾರ ಆರಂಭಿಸುವ ಮನಸ್ಸಿದ್ದಲ್ಲಿ ವರ್ಷದ ಪೂರ್ವಾರ್ಧದಲ್ಲಿ ಸಾಧ್ಯವಾಗುತ್ತದೆ.
ವೃಶ್ಚಿಕ
ಗೆಲ್ಲಲೇ ಬೇಕೆಂಬ ಹಟದ ಮನಸ್ಸಿನಿಂದ ಈ ವರ್ಷದಲ್ಲಿ ಉತ್ತಮ ಆದಾಯ ಗಳಿಸುವಿರಿ. ಏಪ್ರಿಲ್ ತಿಂಗಳ ಕೊನೆಯವರೆಗೂ ಇಲ್ಲಸಲ್ಲದದ ಮನಸ್ತಾಪಗಳು ಉಂಟಾಗುತ್ತದೆ. ಈ ಕಾರಣದಿಂದಾಗಿ ಯಾರಿಂದಲೂ ಹಣದ ಸಹಾಯ ದೊರೆಯುವುದಿಲ್ಲ. ಆದರೆ ಹಿರಿಯ ಸೋದರಿಯ ಮಧ್ಯಸ್ಥಿಕೆ, ಪರಿಸ್ಥಿತಿಯನ್ನು ತಿಳಿಗೊಳ್ಳುತ್ತದೆ. ನಂತರ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಎದುರಾಗದು.
ಕುಟುಂಬ ನಿರ್ವಹಣೆಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆದರೆ ಸುಲಭವಾಗಿ ಯಾರ ಮಾತನ್ನೂಒಪ್ಪದೆ ಹಣಕಾಸಿನ ಯೋಜನೆಗಳಲ್ಲಿ ಹಣವನ್ನು ತೊಡಗಿಸುವಿರಿ. ಬೇಸಾಯಕ್ಕೆ ಸಂಬಂಧಿಸಿದಂತೆ ಉತ್ತಮ ಗಳಿಕೆ ಕಂಡುಬರುತ್ತದೆ. ಸಿಡುಕದೆ ಬುದ್ದಿವಂತಿಕೆಯಿಂದ ಹಣಕಾಸಿನ ವಿವಾದ ಬಗೆಹರಿಸುವಿರಿ. ಇದರಿಂದಾಗಿ ದೊಡ್ಡ ಮೊತ್ತದ ಹಣ ನಿಮ್ಮದಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡದೆ ಹೋದಲ್ಲಿ ಉಳಿತಾಯ ಮಾಡಿದ ಹಣಕ್ಕೆ ಸಂಚಕಾರ ಬರುತ್ತದೆ. ಉದ್ಯೋಗ ಕ್ಷೇತ್ರದಲ್ಲಿನ ಸಾಧನೆಗೆ ಪ್ರೋತ್ಸಾಹ ಧನ ದೊರೆಯುತ್ತದೆ.
ಉದ್ಯೋಗದಲ್ಲಿ ಬಡ್ತಿ ದೊರೆಯುವ ಕಾರಣ ಸಂಬಳದ ಹಣ ದ್ವಿಗುಣಗೊಳ್ಳುತ್ತದೆ. ಸ್ವಂತ ವ್ಯಾಪಾರಿ ಸಂಸ್ಥೆ ಇದ್ದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಸುಲಭವಾಗಿ ನಂಬದಿರಿ. ಮೇ ತಿಂಗಳಿನಿಂದ ಆದಾಯದಲ್ಲಿ ಏರುಪೇರು ಉಂಟಾಗಬಹುದು. ಬುದ್ಧಿವಂತಿಕೆಯ ಮಾತುಕತೆಯಿಂದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಶಾಲಾ ಕಾಲೇಜುಗಳ ಮುಖಾಂತರ ಹಣದ ಜೊತೆ ಜನಪ್ರಿಯತೆಯೂ ದೊರೆಯಲಿದೆ. ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಹಣದ ಸಹಾಯ ದೊರೆಯುತ್ತದೆ. ಪಾರುದಾರಿಕೆಯ ವ್ಯಾಪಾರ ವ್ಯವಹಾರ ಆದಾಯಕ್ಕೆ ಕೊರತೆ ಇರುವುದಿಲ್ಲ. ನವೆಂಬರ್ ತಿಂಗಳ ಉತ್ತರಾರ್ಧ ಮತ್ತು ಆಗಸ್ಟ್ ತಿಂಗಳಲ್ಲಿ ಸರ್ಕಾರದಿಂದ ಹಣದ ನೆರವು ದೊರೆಯುತ್ತದೆ. ಕೈ ತುಂಬಾ ಹಣವಿದ್ದಾಗ ಹಣ ಉಳಿಸುವ ಯೋಚನೆ ಮಾಡಿ. ಬೇರೆಯವರ ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸದಿರಿ. ವಂಶದ ಹಳೆಯ ಮನೆಯನ್ನು ನವೀಕರಿಸಲು ಹೆಚ್ಚಿನ ಹಣ ಖರ್ಚು ಮಾಡಲಿದ್ದೀರಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).