Finance Horoscope: ತೆರೆಮರೆಯ ಕಲಾವಿದರಿಗೆ ಹೆಚ್ಚಿನ ಲಾಭ, ಮೇ ನಂತರ ನಿರೀಕ್ಷೆಗೂ ಮೀರಿದ ಆದಾಯ; 2024ರ ಮಿಥುನ, ಕಟಕ ರಾಶಿಯ ಹಣಕಾಸು ಭವಿಷ್ಯ
Dec 26, 2023 05:48 PM IST
ಮಿಥುನ ಹಾಗೂ ಕಟಕ ರಾಶಿಯ 2024ರ ಹಣಕಾಸು ಭವಿಷ್ಯ
- Money Horoscope 2024: ಹೊಸ ವರ್ಷದಲ್ಲಿ ನಮ್ಮ ಹಣಕಾಸಿನ ಪರಿಸ್ಥಿತಿ ಹೇಗಿರಬಹುದು ಎಂದು ತಿಳಿದುಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 2024ರ ಮಿಥುನ ಹಾಗೂ ಕಟಕ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಲಿದೆ ಈ ಲೇಖನ.
2023ನೇ ವರ್ಷ ಮುಗಿದು 2024ನೇ ವರ್ಷದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ಮುಂದಿನ ವರ್ಷದ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಬಹುತೇಕರಲ್ಲಿ ಕುತೂಹಲವಿರುತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ಮಿಥುನ ಹಾಗೂ ಕಟಕ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.
ತಾಜಾ ಫೋಟೊಗಳು
ಮಿಥುನ
ಮನಸ್ಸಿನ ಮೇಲೆ ಹತೋಟಿ ಇರುವುದಿಲ್ಲ. ಈ ಕಾರಣದಿಂದಾಗಿ ಗುರುಗ್ರಹದ ಸಹಾಯದಿಂದ ಉತ್ತಮ ಆದಾಯವಿದ್ದರೂ ಹಣವನ್ನು ಉಳಿಸಲು ವಿಫಲರಾಗುವಿರಿ. ಬೇರೆಯವರಿಗೆ ತಿಳಿಯದಂತೆ ಗುಟ್ಟಾಗಿ ಹಣ ಸಂಪಾದನೆ ಮಾಡುವಿರಿ. ಗಳಿಸಿದ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಆದಾಯದ ವಿಚಾರದಲ್ಲಿ ಅನಾವಶ್ಯಕ ಮಾನಸಿಕ ಒತ್ತಡ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾರನ್ನು ಸುಲಭವಾಗಿ ನಂಬುವುದಿಲ್ಲ. ಏಪ್ರಿಲ್ ತಿಂಗಳವರೆಗೂ ಆದಾಯದಲ್ಲಿ ಯಾವುದೇ ತೊಂದರೆ ಕಾಣುವುದಿಲ್ಲ. ಸ್ನೇಹಿತರು ಅಥವಾ ಕುಟುಂಬದ ಸದಸ್ಯರ ಸಹಾಯ ಸಹಕಾರದಿಂದ ಇರುವಷ್ಟು ಹಣವನ್ನು ಸಂಪಾದಿಸಬಹುದು. ತೆರೆ ಮರೆಯ ಕಲಾವಿದರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಬಳಸಿದ ಪ್ರಾಚೀನ ಕಾಲದ ವಸ್ತುಗಳ ಮಾರಾಟದಲ್ಲಿ ಉತ್ತಮ ಹಣಗಳಿಗೆ ಇರುತ್ತದೆ.
ಸಾತ್ವಿಕ ರೀತಿಯಲ್ಲಿ ಹಣವನ್ನು ಗಳಿಸುವಿರಿ. ಒಂದೇ ಮನಸ್ಸಿನಿಂದ ಮಾಡುವ ಹಣಕಾಸಿನ ವ್ಯವಹಾರಗಳಲ್ಲಿ ಲಾಭಕ್ಕೆ ಕೊರತೆ ಇರುವುದಿಲ್ಲ. ಶನಿ ಗ್ರಹದ ಪ್ರಭಾವದಿಂದ ಅನಿರೀಕ್ಷಿತ ಲಾಭ ದೊರೆಯುತ್ತದೆ. ಮೊದಲು ಬರುವ ಆದಾಯವನ್ನು ಲೆಕ್ಕಾಚಾರ ಮಾಡಿ ಅನಂತರ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ.
ಇದನ್ನೂ ಓದಿ: BBK 10: ನನ್ನ ಪ್ರಕಾರ ಈ ಐದೇ ಜನ ಟಾಪ್‌ನಲ್ಲಿರ್ತಾರೆ, ಆ ಐವರಲ್ಲಿ ಈ ಸ್ಪರ್ಧಿಯೇ ಗೆಲ್ಲಬೇಕು; ಅವಿನಾಶ್ ಶೆಟ್ಟಿ ಹೇಳಿದ್ದು ಯಾರಿಗೆ?
ಮೇ ತಿಂಗಳಿಂದ ಖರ್ಚು ವೆಚ್ಚಗಳು ಹೆಚ್ಚಲಿವೆ. ಬೇರೆಯವರ ಸಹಾಯ ಸಹಕಾರದಿಂದ ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ಉತ್ತಮ ಆದಾಯದ ಜೊತೆಯಲ್ಲಿ ಹಣ ಗಳಿಸುವ ಮೂಲಗಳು ದೊರೆಯುತ್ತವೆ. ನಿಮ್ಮ ಪ್ರಯತ್ನಕ್ಕೆ ತಕ್ಕಂತಹ ಪ್ರತಿಫಲವು ದೊರೆಯಲಿದೆ. ಸಾರಿಗೆ ಸಂಪರ್ಕ ಒದಗಿಸುವ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ. ವಿದೇಶಿ ಸಂಸ್ಥೆಯ ನಿರ್ವಹಣೆಯ ಅಧಿಕಾರವು ದೊರೆತು ಸ್ಥಿರವಾದ ಆದಾಯ ದೊರೆಯುತ್ತದೆ. ಆಗಸ್ಟ್ ತಿಂಗಳ ನಂತರ ಬೇರೆಯವರ ಒತ್ತಡಕ್ಕೆ ಮಣಿದು ವ್ಯವಹಾರದಲ್ಲಿ ಬಂಡವಾಳವನ್ನು ತೊಡಗಿಸುವಿರಿ. ಇದರಿಂದ ಉತ್ತಮ ಲಾಭ ಗಳಿಸುವಿರಿ. ಮಕ್ಕಳ ಸಹಾಯ ದೊರೆಯಲಿದೆ. ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಯಶಸ್ವಿಯಾಗುವಿರಿ. ನವಂಬರ್ ತಿಂಗಳಲ್ಲಿ ಹಣಕಾಸಿನ ಕೊರತೆ ಕಂಡು ಬಂದು ಕೂಡಿಟ್ಟ ಹಣವನ್ನು ಬಳಸಲೇ ಬೇಕಾಗುತ್ತದೆ. ಒಟ್ಟಾರೆ ಹಣಕಾಸನ್ನು ಉಳಿಸಿದಲ್ಲಿ ಮಾತ್ರ ಸಂತೃಪ್ತಿಯ ಜೀವನ ನಡೆಸಬಹುದು.
ಇದನ್ನೂ ಓದಿ: Finance Horoscope: 2024ರ ಮೇಷ, ವೃಷಭ ರಾಶಿಯ ಹಣಕಾಸು ಭವಿಷ್ಯ; ದುಡ್ಡಿನ ವಿಚಾರದಲ್ಲಿ ಸ್ಥಿರತೆ ಇರುವುದಿಲ್ಲ, ಅನಾರೋಗ್ಯದಿಂದ ಖರ್ಚು
ಕಟಕ
ಕಟಕ ರಾಶಿಗೆ ವರ್ಷಪೂರ್ತಿ ಹಣಕಾಸಿನ ತೊಂದರೆ ಕಾಣುವುದಿಲ್ಲ. ಸಪ್ತಮಾಧಿಪತಿ ಶನಿ ಕುಂಭದಲ್ಲಿ ಇರುವ ಕಾರಣ ಗಳಿಸಿದ ಆದಾಯದಲ್ಲಿನ ಸ್ವಲ್ಪ ಭಾಗವನ್ನು ಭವಿಷ್ಯಕ್ಕಾಗಿ ಉಳಿಸುವಿರಿ. ಅನಿರೀಕ್ಷಿತ ಧನ ಲಾಭ ಆರ್ಥಿಕ ಪರಿಸ್ಥಿತಿಯಲ್ಲಿ ಹೊಸ ಚೈತನ್ಯವನ್ನು ಉಂಟುಮಾಡುತ್ತದೆ. ಅನಿರೀಕ್ಷಿತ ಮೂಲಗಳಿಂದ ಹಣದ ಸಹಾಯ ದೊರೆಯುತ್ತದೆ. ಒಟ್ಟಾರೆ ಆದಾಯ ಮತ್ತು ಖರ್ಚು ವೆಚ್ಚಗಳಲ್ಲಿ ಸಮತೋಲನವನ್ನು ಕಾಪಾಡುವಿರಿ. ಮೇ ತಿಂಗಳವರೆಗೂ ಕಷ್ಟಪಟ್ಟು ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಉತ್ತಮ ಆದಾಯವನ್ನು ಗಳಿಸುವಿರಿ. ವಿದೇಶಿ ವಿನಿಮಯವಿದ್ದಲ್ಲಿ ಆದಾಯದ ತೊಂದರೆ ಕಾಣುವುದಿಲ್ಲ. ಯಂತ್ರೋಪಕರಣಗಳ ಸರಬರಾಜು ಅಥವಾ ವ್ಯಾಪಾರದಲ್ಲಿ ಹೆಚ್ಚಿನ ಹಣವನ್ನು ಗಳಿಸುವಿರಿ. ಕುಟುಂಬದ ಸದಸ್ಯರ ಸಹಕಾರ ಹಣಕಾಸಿನ ತೊಂದರೆಯಿಂದ ಬಿಡುಗಡೆ ದೊರೆಯುವಂತೆ ಮಾಡುತ್ತದೆ. ಮೇ ತಿಂಗಳ ನಂತರ ನಿರೀಕ್ಷೆಗೂ ಮೀರಿದ ಆದಾಯ ದೊರೆಯುತ್ತದೆ. ಹೊಸ ವಸ್ತುಗಳನ್ನು ಕೊಳ್ಳಲು ಗಳಿಸಿದ ಹಣದಲ್ಲಿ ಬಹುಪಾಲು ವೆಚ್ಚವಾಗುತ್ತದೆ. ಬೇರೆಯವರಿಗೆ ಹಣಕಾಸಿನ ವಿಚಾರದಲ್ಲಿ ಸಲಹೆಗಳನ್ನು ಕೊಟ್ಟು ಹಣವನ್ನು ಸಂಪಾದಿಸುವಿರಿ.
ಇದನ್ನೂ ಓದಿ: Gemini Horoscope in 2024: ಹೊಸ ವರ್ಷದಲ್ಲಿ ಮಿಥುನ ರಾಶಿಯವರ ಭವಿಷ್ಯ ಹೇಗಿದೆ; 2024ರ ರಾಶಿಫಲ
ತಾಯಿಯವರಿಂದ ಹಣದ ಸಹಾಯ ದೊರೆಯಲಿದೆ. ಭೂಮಿಯನ್ನು ಮಾರಾಟ ಮಾಡುವ ಸಾಧ್ಯತೆ ಇದೆ. ಭೂವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ತಂದೆಯವರ ಅಥವಾ ಕುಟುಂಬದ ಹಿರಿಯರ ಜೊತೆಯಲ್ಲಿ ವ್ಯಾಪಾರವನ್ನು ಆರಂಭಿಸುವಿರಿ. ವಿದೇಶಕ್ಕೆ ಸಿದ್ಧಪಡಿಸಿದ ಉಡುಪನ್ನು ರಫ್ತು ಮಾಡುವ ಮೂಲಕ ಹಣಕಾಸಿನ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವಿರಿ. ಆಗಸ್ಟ್ ತಿಂಗಳಲ್ಲಿ ಹಿರಿಯರ ವೃತ್ತಿಯೊಂದನ್ನು ಮುಂದುವರಿಸುವ ಮೂಲಕ ಹಣ ಗಳಿಕೆಯನ್ನು ಹೆಚ್ಚಿಸಿಕೊಳ್ಳುವಿರಿ. ಜೂನ್, ಜುಲೈ ತಿಂಗಳಲ್ಲಿ ಅನಾವಶ್ಯಕವಾದ ಖರ್ಚು ವೆಚ್ಚಗಳನ್ನು ಹೊರತುಪಡಿಸಿದಲ್ಲಿ ದಿನಗಳಲ್ಲಿ ಗಳಿಸಿದ ವರಮಾನದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಉಳಿಸುವಿರಿ. ಅಕ್ಟೋಬರ್ ಉತ್ತರಾರ್ಧ ಮತ್ತು ನವೆಂಬರ್ ತಿಂಗಳಲ್ಲಿ ಕೊಂಚ ಎಚ್ಚರಿಕೆಯಿಂದ ವರ್ತಿಸಿ. ಒಟ್ಟಾರೆ ಈ ವರ್ಷದಲ್ಲಿ ಹಣಕಾಸಿನ ಪರಿಸ್ಥಿತಿಯಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).