logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Finance Horoscope: 2024ರ ಧನು, ಮಕರ ರಾಶಿಯ ಹಣಕಾಸು ಭವಿಷ್ಯ; ಆದಾಯದಷ್ಟೇ ಖರ್ಚು ಇರಲಿದೆ, ಷೇರು ಹೂಡಿಕೆಗೂ ಮುನ್ನ ತಜ್ಞರ ಸಲಹೆ ಪಡೆಯಿರಿ

Finance Horoscope: 2024ರ ಧನು, ಮಕರ ರಾಶಿಯ ಹಣಕಾಸು ಭವಿಷ್ಯ; ಆದಾಯದಷ್ಟೇ ಖರ್ಚು ಇರಲಿದೆ, ಷೇರು ಹೂಡಿಕೆಗೂ ಮುನ್ನ ತಜ್ಞರ ಸಲಹೆ ಪಡೆಯಿರಿ

HT Kannada Desk HT Kannada

Dec 29, 2023 02:42 PM IST

google News

2024ರ ಧನು, ಮಕರ ರಾಶಿಯ ಹಣಕಾಸು ಭವಿಷ್ಯ

    • Money Horoscope 2024: ಹೊಸ ವರ್ಷದಲ್ಲಿ ನಮ್ಮ ಹಣಕಾಸಿನ ಪರಿಸ್ಥಿತಿ ಹೇಗಿರಬಹುದು ಎಂದು ತಿಳಿದುಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ 2024ರ ಧನು ಹಾಗೂ ಮಕರ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಲಿದೆ ಈ ಲೇಖನ.
2024ರ ಧನು, ಮಕರ ರಾಶಿಯ ಹಣಕಾಸು ಭವಿಷ್ಯ
2024ರ ಧನು, ಮಕರ ರಾಶಿಯ ಹಣಕಾಸು ಭವಿಷ್ಯ

2023ನೇ ವರ್ಷ ಮುಗಿದು 2024ನೇ ವರ್ಷದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರುವುದು ಸಹಜ. ಅದರಲ್ಲೂ ಮುಂದಿನ ವರ್ಷದ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಬಹುತೇಕರಲ್ಲಿ ಕುತೂಹಲವಿರುತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ಧನು ಹಾಗೂ ಮಕರ ರಾಶಿಯವರ ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಧನಸ್ಸು

ಈ ವರ್ಷದಲ್ಲಿ ಹಣಕಾಸಿನ ವಿಚಾರದಲ್ಲಿ ಯಾವುದೇ ಹಿನ್ನೆಡೆ ಉಂಟಾಗುವುದಿಲ್ಲ. ಏಪ್ರಿಲ್ ಮುಗಿಯುವವರೆಗೂ ಉತ್ತಮ ಮಟ್ಟದಲ್ಲಿ ಹಣ ಗಳಿಸುವಿರಿ. ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇಲ್ಲದೆ ನಿರೀಕ್ಷಿಸಿದ ಆದಾಯ ದೊರೆಯುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಆದರೆ ಪ್ರಯತ್ನಕ್ಕೆ ತಕ್ಕಷ್ಟು ಹಣ ಸುಲಭವಾಗಿ ದೊರೆಯುತ್ತದೆ. ಭೂಮಿಗೆ ಸಂಬಂಧಿಸಿದ ವ್ಯವಹಾರದಿಂದ ಉತ್ತಮ ಆದಾಯ ದೊರೆಯುತ್ತದೆ. ವಂಶದಿಂದ ಬರಬೇಕಿದ್ದ ಹಣದ ಬಹುಭಾಗ ಸುಲಭವಾಗಿ ದೊರೆಯುತ್ತದೆ.

ಯಾವುದೇ ಅಸಹನೀಯ ಪರಿಸ್ಥಿತಿಯಲ್ಲಿಯು ಧೈರ್ಯಗೆಡದೆ ಮುಂದುವರೆಯುವುದು ಉತ್ತಮ. ಹಣದ ಕೊರತೆಯಿಂದ ಹೊರಬರಲು ಸಣ್ಣಪುಟ್ಟ ವ್ಯಾಪಾರಗಳನ್ನು ಅವಲಂಬಿಸುವಿರಿ. ತಾಯಿಯಿಂದ ಅಥವಾ ಮಕ್ಕಳಿಂದ ಹಣ ಸಹಾಯ ದೊರೆಯುತ್ತದೆ. ಉತ್ತಮ ಬುದ್ಧಿ ಇರುವ ನಿಮಗೆ ಸಮಯಕ್ಕೆ ತಕ್ಕಂತೆ ವರ್ತಿಸುವ ಗುಣ ವರವಾಗಿ ಬಂದಿದೆ. ಕೆಲವೊಮ್ಮೆ ತೆಗೆದುಕೊಂಡ ಬದಲಾವಣೆಗಳನ್ನು ಬದಲಾಯಿಸುವ ಕಾರಣ ತೊಂದರೆ ಎದುರಾಗಬಹುದು. ಕೇವಲ ಹಣ ಗಳಿಸುವ ಕೆಲಸ ಕಾರ್ಯಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವಲ್ಲಿ ತಾಯಿಯವರ ಪಾತ್ರ ದೊಡ್ಡದಾಗಿರುತ್ತದೆ.

ಇದನ್ನೂ ಓದಿ: Sagittarius Astrology in 2024: ಉಪವೃತ್ತಿಯಿಂದ ಹೆಚ್ಚಿನ ಹಣ, 2024ರ ಮೊದಲಾರ್ಧ ಸಂಪೂರ್ಣ ಶುಭಫಲ ; ಧನು ರಾಶಿಯ ವರ್ಷ ಭವಿಷ್ಯ ಹೀಗಿದೆ

ಮೇ ತಿಂಗಳಿನಿಂದ ಹಣಕಾಸಿನ ಪರಿಸ್ಥಿತಿಯಲ್ಲಿ ಕೊಂಚ ವ್ಯತ್ಯಾಸ ಉಂಟಾಗುತ್ತದೆ. ಕೇವಲ ಹೆಚ್ಚಿನ ಪ್ರಯುಕ್ತದಿಂದ ಮಾತ್ರ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಅವಕಾಶಗಳು ನಿಮ್ಮದಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮುಖ್ಯವಾಗಿ ಸೋದರ ಅಥವಾ ಸೋದರಿಯೂ ಹಣದ ಸಹಾಯ ಮಾಡುತ್ತಾರೆ. ಆದರೆ ಯಾವುದೇ ವಿಚಾರದಲ್ಲಿಯೂ ಯಾರನ್ನು ಅವಲಂಬಿಸುವುದಿಲ್ಲ. ಶನಿಯು ಕುಂಭದಲ್ಲಿರುವ ಕಾರಣ ಆದಾಯವು ನಿಧಾನಗತಿಯಲ್ಲಿ ಹೆಚ್ಚುತ್ತದೆ. ಎದುರಾಗುವ ಸವಾಲುಗಳನ್ನು ಎದುರಿಸಿ ಗೆಲುವು ಸಾಧಿಸುವಿರಿ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಖರ್ಚು ವೆಚ್ಚಗಳು ಅಧಿಕವಾಗಿರುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಹಣಕಾಸಿನ ವಿಚಾರದ ಬಗ್ಗೆ ಎಚ್ಚರಿಕೆ ವಹಿಸಿ. ಸಾಧ್ಯವಾದಷ್ಟು ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿ. ಉಳಿದಂತೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದಾಯ ಮತ್ತು ಖರ್ಚು ವೆಚ್ಚಗಳನ್ನು ಸರಿದೂಗಿಸದೆ ಹೋದಲ್ಲಿ ತೊಂದರೆ ಎದುರಾಗುತ್ತದೆ.

ಮಕರ

ನಿಜಕ್ಕೂ ನೀವು ಅದೃಷ್ಟವಂತರೇ ಸರಿ. ಈ ವರ್ಷದಲ್ಲಿ ಹಣಕಾಸಿನ ಗಳಿಕೆಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ದುಡುಕುತನದ ಮಾತುಗಳನ್ನು ಆಡದೆ ಬುದ್ದಿವಂತಿಕೆಯಿಂದ ಸಮಸ್ಯೆಗಳನ್ನು ಎದುರಿಸಿ. ಏಪ್ರಿಲ್ ಮುಗಿಯುವವರೆಗೂ ಆದಾಯದಲ್ಲಿ ಅಲ್ಪ ಮಟ್ಟಿನ ಕೊರತೆ ಕಂಡು ಬರುತ್ತದೆ. ಆದರೆ ದಿನ ಕಳೆದಂತೆ ಉತ್ತಮ ಮಟ್ಟವನ್ನು ತಲುಪಿವಿರಿ. ಹಣವನ್ನು ಖರ್ಚು ಮಾಡುವ ಮುನ್ನ ಒಮ್ಮೆ ಯೋಚಿಸಿ. ದುಡುಕುತನದ ನಿರ್ಧಾರದಿಂದ ಕೂಡಿಟ್ಟ ಹಣ ಖರ್ಚಾಗಬಹುದು. ಭೂಮಿಗೆ ಸಂಬಂಧ ಸಂಬಂಧಿಸಿದ ವಿಚಾರದಲ್ಲಿ ಉತ್ತಮ ಆದಾಯ ಗಳಿಸುವಿರಿ. ಸಮಯಕ್ಕೆ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ ಹಣದ ಕೊರತೆ ಎದುರಾಗದು. ಪಾಲುದಾರಿಕೆಯ ವ್ಯಾಪಾರವಿದ್ದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ತಂದೆಯವರ ವ್ಯಾಪಾರವನ್ನು ಮುಂದುವರೆಸುವ ಸೂಚನೆಗಳಿವೆ. ಆಪ್ತರಿಗೆ ನೀಡಿದ್ದ ಹಣ ಮರಳಿ ಕೈ ಸೇರಲಿದೆ. ಉತ್ತಮ ಆದಾಯವಿದ್ದಾಗ ಸಂಪತ್ತನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುವಿರಿ. ಕುಟುಂಬದ ಎಲ್ಲಾ ಸದಸ್ಯರಿಗೂ ಹಣಕಾಸಿನ ಸಹಾಯ ಒದಗಿಸುವಿರಿ.

ಇದನ್ನೂ ಓದಿ: Capricorn Astrology in 2024: ದಾಂಪತ್ಯ ಸಮಸ್ಯೆ ದೂರ, ನೀರಿರುವ ಸ್ಥಳಗಳಲ್ಲಿ ತೊಂದರೆ, ಉದ್ಯೋಗದಲ್ಲಿ ಬದಲಾವಣೆ; ಮಕರ ರಾಶಿಯ ವರ್ಷ ಭವಿಷ್ಯ

ಏಪ್ರಿಲ್ ಮುಗಿದ ನಂತರ ಹೊಸ ಜೀವನ ಆರಂಭಿಸುವಿರಿ. ಕೆಲಸ ಕಾರ್ಯಗಳಲ್ಲಿ ಉನ್ನತ ಮಟ್ಟವನ್ನು ತಲುಪುವುದರ ಜೊತೆಗೆ ಆದಾಯವು ಹೆಚ್ಚುತ್ತದೆ. ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳುವ ತೀರ್ಮಾನಗಳು ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ಮಕ್ಕಳಿಗೆ ಹಣಕಾಸಿನ ನೆರವು ದೊರೆಯುವ ಕಾರಣ ನಿಮ್ಮ ಜವಾಬ್ದಾರಿಯು ಕಡಿಮೆಯಾಗುತ್ತದೆ. ಈ ಸಮಯವನ್ನು ಬಳಸಿಕೊಂಡು ಹಣ ಸಂಗ್ರಹಿಸುವಿರಿ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ನಿರೀಕ್ಷೆಯಂತೆ ಲಾಭ ದೊರೆಯುತ್ತದೆ. ಆದರೆ ಸಂಪೂರ್ಣ ವಿಶ್ಲೇಷಣೆ ಇಲ್ಲದೆ ಯಾವುದೇ ಯೋಜನೆಯಲ್ಲಿಯೂ ಹಣವನ್ನು ವಿನಿಯೋಗಿಸದಿರಿ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ಕಾನೂನಿನ ಮೂಲಕ ಹಣಕಾಸಿನ ವಿವಾದ ಒಂದನ್ನು ಗೆಲ್ಲುವಿರಿ. ಅಕ್ಟೋಬರ್ ನಂತರ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಹೊಗಳಿಕೆಗೆ ಮರುಳಾದಲ್ಲಿ ಹಣಕಾಸಿನ ಕೊರತೆಯನ್ನು ಎದುರಿಸಬೇಕಾಗುತ್ತದೆ. ಸಾಲದ ವ್ಯವಹಾರದಿಂದ ತೊಂದರೆ ಎದುರಾಗುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ