Saturn Transit: ಶನಿ ಸಂಕ್ರಮಣ: ಈ ರಾಶಿಯವರು ಎಷ್ಟು ಎಚ್ಚರದಿಂದ ಇದ್ದರೂ ಸಾಲದು
Jan 19, 2024 08:36 PM IST
ಶನಿ ಸಂಕ್ರಮಣ: ಈ ರಾಶಿಯವರು ಎಷ್ಟು ಎಚ್ಚರದಿಂದ ಇದ್ದರೂ ಸಾಲದು
- Saturn Transit: ಶನಿ ಸಂಕ್ರಮಣದ ಪ್ರಯುಕ್ತ ಈ ಬಾರಿ ಶನಿಯು 30 ವರ್ಷಗಳ ಬಳಿಕ ಈ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಶನಿ ಪ್ರವೇಶಿಸಿದ ರಾಶಿಯಲ್ಲಿ ಜನಿಸಿದವರು ಈ ಬಾರಿ ಸಾಕಷ್ಟು ಸವಾಲುಗಳನ್ನು ಎದುರಿಸಲಿದ್ದಾರೆ. ಆರ್ಥಿಕ ಲಾಭವಿದ್ದರೂ ಪಾಲುದಾರಿಕೆ ವ್ಯವಹಾರದಲ್ಲಿ ಅನೇಕ ತೊಡಕುಗಳು ಎದುರಾಗಲಿದೆ.
ಶನಿಗ್ರಹದ ವಕ್ರದೃಷ್ಠಿ ಒಮ್ಮೆ ಒಂದು ರಾಶಿಯ ಮೇಲೆ ಬಿತ್ತು ಎಂದರೆ ಮುಗೀತು ಆಮೇಲೆ ಅವರ ಏಳ್ಗೆ ಅಂದುಕೊಂಡಷ್ಟು ಸುಲಭವಲ್ಲ. ಶನಿಗ್ರಹವನ್ನು ಜ್ಯೋತಿಷ್ಯಶಾಸ್ತ್ರವು ನವಗ್ರಹಗಳ ರಕ್ಷಕ ಎಂದು ಹೇಳುತ್ತದೆ. ಶನೇಶ್ಚರ ಕೇವಲ ಕೆಟ್ಟದ್ದನ್ನು ಮಾತ್ರ ಮಾಡುವುದಿಲ್ಲ. ಆತ ಒಳ್ಳೆಯದನ್ನೂ ಮಾಡುತ್ತಾನೆ. ಒಳ್ಳೆಯದು ಹಾಗು ಕೆಟ್ಟದ್ದು ಎರಡನ್ನೂ ಸಮನಾಗಿ ನೀಡುವ ಏಕೈಕ ಗ್ರಹವೆಂದರೆ ಅದು ಶನಿಗ್ರಹ. ಇದೇ ಕಾರಣಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಅತ್ಯಂತ ಪ್ರಮುಖ ಗ್ರಹ ಎಂದು ಹೇಳಲಾಗುತ್ತದೆ.
ತಾಜಾ ಫೋಟೊಗಳು
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನ ಸಂಚಾರಕ್ಕೆ ಬಹಳ ಮಹತ್ವವಿದೆ. ಶನಿದೇವನ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿಯು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. 30 ಸಂವತ್ಸರಗಳ ಬಳಿಕ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಇದ್ದಾನೆ. ಈ ಬಾರಿಯ ಶನಿ ಸಂಕ್ರಮಣದಿಂದ ಕೆಲವು ರಾಶಿಗಳಲ್ಲಿ ಜನಿಸಿದವರಿಗೆ ದೈಹಿಕ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಸ್ವಸ್ಥತೆ ಕಂಡು ಬರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳಿದ್ದಾರೆ. ಕೆಲವು ರಾಶಿಯಲ್ಲಿ ಜನಿಸಿದವರು ತಮ್ಮ ಕೋಪದಲ್ಲಿ ನಿಯಂತ್ರಣ ತಂದುಕೊಳ್ಳಬೇಕಿದೆ. ಏಕೆಂದರೆ ಇವರಿಗೆ ಇವರ ಕೋಪದಿಂದ ವೃತ್ತಿ ಜೀವನದಲ್ಲಿ ಕೇಡು ಉಂಟಾಗುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಲಿದೆ. ಶಿವ ಹಾಗೂ ಆಂಜನೇಯನ ಆರಾಧನೆಯಿಂದ ನೀವು ಅನೇಕ ಸಂಕಷ್ಟಗಳಿಂದ ಪಾರಾಗಬಹುದಾಗಿದೆ.
ಈ ವರ್ಷ ಕಟಕ ರಾಶಿಯವರಿಗೆ ಅಷ್ಟಮ ಶನಿಯ ಕಾಟವಿದ್ದರೂ ಸಹ ರಾಜಯೋಗ ಕೂಡ ನಿಮ್ಮೊಂದಿಗೆ ಇರಲಿದೆ. ನಿಮಗೆ ಹಣದ ಹರಿವಿನ ಕೊರತೆಯಾಗುವುದಿಲ್ಲ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯಲಿದ್ದೀರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಶನಿಯು ನಿಮ್ಮ ರಾಶಿ ಚಕ್ರದಲ್ಲಿ ಎಂಟನೇ ಮನೆಯನ್ನು ಆಳಲಿದ್ದಾನೆ. ಇಲ್ಲಿಯವರೆಗೆ ನಿಮ್ಮ ಜೀವನದಲ್ಲಿದ್ದ ಅನೇಕ ಸಮಸ್ಯೆಗಳು ಕೊನೆಯಾಗುವ ಸಾಧ್ಯತೆಯಿದೆ.
ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಇದು ಸೂಕ್ತವಾದ ವರ್ಷವಾಗಿದ್ದರೂ ಸಹ ಪಾಲುದಾರಿಕೆಯ ಉದ್ಯಮವನ್ನು ಹೊಂದಿರುವವರು ನಿಮ್ಮ ಪಾರ್ಟ್ನರ್ ವಿಚಾರದಲ್ಲಿ ಭಾರೀ ಜಾಗರೂಕತೆಯಿಂದ ಇರಬೇಕು. ಸಹಿ ಹಾಕುವ ಸಂದರ್ಭ ಬಂದಾಗ ಯಾರನ್ನೂ ನಂಬಬೇಡಿ. ದಾಖಲೆಗಳನ್ನು ಸರಿಯಾಗಿ ಓದಿಕೊಂಡೇ ಸಹಿ ಹಾಕಿ. ಶನಿಯಿಂದ ಆಸೆಗಳು ಹೆಚ್ಚಾದರೂ ಸಹ ಅವುಗಳನ್ನು ನೀವೇ ನಿಯಂತ್ರಿಸಿಕೊಳ್ಳಬೇಕು.
ಕಟಕ ರಾಶಿಯವರು ತಮ್ಮ ಪಾಲುದಾರಿಕೆಯ ಉದ್ಯಮಯೊಂದಿಗೆ ಅನಗತ್ಯವಾಗಿ ವಾದಕ್ಕೆ ಇಳಿಯಬೇಕಾಗಿ ಬರಬಹುದು. ಹೊಸ ಹೊಸ ಹೂಡಿಕೆ ಮಾಡುವ ವಿಚಾರದಲ್ಲಿ ಜಾಗರೂಕತೆಯಿಂದ ಇರುವುದು ಉತ್ತಮ. ಖರ್ಚು ವೆಚ್ಚಗಳ ನಿರ್ವಹಣೆಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇರಲಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)