Astrology: ಮುಡುಪು ಕಟ್ಟುವುದು ಎಂದರೇನು? ವೆಂಕಟೇಶ್ವರ ಸ್ವಾಮಿ ಮುಡುಪು ಕಟ್ಟುವುದು ಹೇಗೆ, ಹರಕೆ ತೀರಿದ ಬಳಿಕ ಏನು ಮಾಡಬೇಕು?
Feb 26, 2024 02:17 PM IST
ದೇವರಿಗೆ ಮುಡುಪು ಕಟ್ಟುವುದು
Astrology: ಕಷ್ಟ ಬಂದಾಗ ದೇವರಲ್ಲಿ ಹರಕೆ ಕಟ್ಟುವುದು ಸಾಮಾನ್ಯ. ಹರಕೆ ಕಟ್ಟಲೂ ಕೂಡಾ ಒಂದು ವಿಧಾನವಿದೆ. ದೇವರಿಗೆ ಹಳದಿ ಬಟ್ಟೆಯಲ್ಲಿ 5 ರೂ, 11 ರೂ ಅಥವಾ 21 ರೂ ನಂತೆ ದುಡ್ಡು ಇಟ್ಟು ಮನಸ್ಸಿನಲ್ಲಿ ಪ್ರಾರ್ಥಿಸಿಕೊಳ್ಳಬೇಕು.
Astrology: ಜೀವನದಲ್ಲಿ ಪ್ರಯತ್ನ ನಮ್ಮದು ಫಲಾಫಲ ದೇವರದ್ದು ಎಂಬ ಮಾತಿದೆ. ಭಗವದ್ಗೀತೆಯಲ್ಲಿ ಸ್ವತ: ಶ್ರೀಕೃಷ್ಣ ಈ ಮಾತನ್ನು ಹೇಳಿದ್ದಾನೆ. ಆದರೂ ನಮ್ಮೆಲ್ಲರ ದಿನ ಆರಂಭವಾಗುವುದು ದೇವರನ್ನು ಪ್ರಾರ್ಥಿಸುವುದರಿಂದಲೇ. ಮನುಷ್ಯರು ತಮ್ಮ ಜೀವನದಲ್ಲಿ ಸದಾಚಾರಗಳನ್ನು ಮಾಡಬೇಕು. ಹೀಗೆ ಸದಾಚಾರಗಳ ಪೂರ್ಣತೆ ಅಥವಾ ನೆರವೇರಿಕೆಗಾಗಿ , ಸಂಕಲ್ಪಗಳ ಈಡೇರಿಕೆಗಾಗಿ ದೇವರ ಮೊರೆ ಹೋಗುತ್ತಾರೆ.
ತಾಜಾ ಫೋಟೊಗಳು
ಮನೆ ದೇವರಿಗೆ ಮುಡುಪು ಕಟ್ಟುವುದು
ಮಕ್ಕಳಿಗೆ ಉತ್ತಮ ಶಿಕ್ಷಣ, ಮಕ್ಕಳಿಲ್ಲದವರಿಗೆ ಮಕ್ಕಳಾಗಲು, ನಿರುದ್ಯೋಗಿಗಳಿಗೆ ಉದ್ಯೋಗ, ಉದ್ಯಮಿಗಳಿಗೆ ವ್ಯಾಪಾರ ಅಭಿವೃದ್ಧಿ, ಅನಾರೋಗ್ಯ ಪೀಡಿತರಿಗೆ ಆರೋಗ್ಯ, ಅವಿವಾಹಿತರಿಗೆ ವಿವಾಹ ಮುಂತಾದ ಧಾರ್ಮಿಕ ಆಶಯಗಳನ್ನು ಈಡೇರಿಸಿಕೊಳ್ಳಲು ಮುಡುಪು ಕಟ್ಟುವುದು ಅಭ್ಯಾಸ. ಕೆಲವರು ಮನೆ ದೇವರಿಗೆ ಮುಡುಪು ಕಟ್ಟಿದರೆ ಇನ್ನೂ ಕೆಲವರು ಇಷ್ಟದೇವತೆಗೆ ಕಟ್ಟುತ್ತಾರೆ. ಸಂಕಲ್ಪ ಮಾಡಿ ತಮ್ಮ ಪ್ರಾರ್ಥನೆಗಳನ್ನು ದೇವರ ಬಳಿ ಭಕ್ತಿಯಿಂದ ಕೇಳಿಕೊಂಡು ಮುಡುಪು ಕಟ್ಟಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಶ್ರೀಮಂತರು , ಬಡವರು ಎನ್ನದೆ ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳಲು ದೇವರಿಗೆ ಮುಡುಪು ಕಟ್ಟುತ್ತಾರೆ.
ವೆಂಕಟೇಶ್ವರ ಸ್ವಾಮಿಗೆ ಕಟ್ಟುವುದು ಹೇಗೆ?
ಮುಡುಪು ಕಟ್ಟಲು ಕೂಡಾ ಇಂತದ್ದೇ ಸಮಯ, ದಿನ, ವಾರ ಎಂಬುದಿದೆ. ನೀವು ವೆಂಕಟೇಶ್ವರ ಸ್ವಾಮಿಗೆ ಮುಡುಪು ಕಟ್ಟಲು ಬಯಸಿದರೆ, ಶನಿವಾರ ಬೆಳಗ್ಗೆ ಬೇಗ ನಿದ್ರೆಯಿಂದ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಮೊದಲು ಗಣೇಶನಿಗೆ ಪೂಜೆ ಮಾಡಿ ನಂತರ ನಿತ್ಯ ದೀಪ ಪ್ರದಾನ ಮಾಡಿ. ನಿಮ್ಮ ಇಷ್ಟಾರ್ಥವನ್ನು ಪ್ರಾರ್ಥನೆ ಮಾಡಿ ಭಗವಂತನಿಗೆ ನೈವೇದ್ಯ ಮಾಡಿ ನಿಮ್ಮ ಇಷ್ಟಾರ್ಥ ನೆರವೇರಿಸುವಂತೆ ಕೇಳಿಕೊಳ್ಳಬೇಕು. ಮುಡುಪು ಕಟ್ಟಲು ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಒದ್ದೆ ಮಾಡಿ ಅದರ ಮೇಲೆ ಅರಿಶಿನವನ್ನು ಲೇಪಿಸಿ ಒಣಗಿಸಿ. ಆ ಬಟ್ಟೆಯ ನಾಲ್ಕೂ ಕಡೆ ಕುಂಕುಮ ಹಚ್ಚಿ ಅದರಲ್ಲಿ 11 ರೂಪಾಯಿ ಅಥವಾ 5 ರೂ ನಾಣ್ಯ ಇಟ್ಟು ಸಂಕಲ್ಪ ಮಾಡಿಕೊಂಡು ಮುಡುಪು ಕಟ್ಟಬೇಕು.
ನಿಮ್ಮ ಆಸೆ ನೆರವೇರಿದಾಗ ತಪ್ಪದೆ ದೇವರಿಗೆ ನೀವು ಕಟ್ಟಿಕೊಂಡ ಹರಕೆಯನ್ನು ತೀರಿಸಿ ಎಂದು ಖ್ಯಾತ ಆಧ್ಯಾತ್ಮಿಕ ಹಾಗೂ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳಿದ್ದಾರೆ.