logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಾಡಿನೆಲ್ಲೆಡೆ ಶ್ರೀರಾಮನದ್ಧೇ ಜಪ; ರಾಮಮಂದಿರ ಉದ್ಘಾಟನೆಗೂ ಮುನ್ನ ಬೆಂಗಳೂರಿನ ರಾಮನವಮಿ ಸಂಗೀತೋತ್ಸವವನ್ನ ಮೆಲುಕು ಹಾಕಿ

ನಾಡಿನೆಲ್ಲೆಡೆ ಶ್ರೀರಾಮನದ್ಧೇ ಜಪ; ರಾಮಮಂದಿರ ಉದ್ಘಾಟನೆಗೂ ಮುನ್ನ ಬೆಂಗಳೂರಿನ ರಾಮನವಮಿ ಸಂಗೀತೋತ್ಸವವನ್ನ ಮೆಲುಕು ಹಾಕಿ

HT Kannada Desk HT Kannada

Jan 21, 2024 02:31 PM IST

google News

ಬೆಂಗಳೂರಿನ ರಾಮನವಮಿ ಸಂಗೀತೋತ್ಸವದಲ್ಲಿ ಪಾಲ್ಗೊಂಡ ಹಿರಿಯ ಕಲಾವಿದರು

    • ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಎಲ್ಲೆಲ್ಲೂ ರಾಮನ ಜಪವೇ ಕೇಳಿ ಬರುತ್ತಿದೆ. ರಾಮ ಎಂದಾಕ್ಷಣ ಬೆಂಗಳೂರಿಗರಿಗೆ ನೆನಪಿಗೆ ಬರುವುದು ರಾಮನವಮಿ. ರಾಮನವಮಿ ಸಂದರ್ಭ ಬೆಂಗಳೂರಿನಲ್ಲಿ ನಡೆಯುವ ಸಂಗೀತೋತ್ಸವ ಜಗತ್ಪ್ರಸಿದ್ಧ. ರಾಮಮಂದಿರ ಉದ್ಘಾಟನೆಯ ಸಂದರ್ಭ ಬೆಂಗಳೂರಿನ ರಾಮನವಮಿ ಸಂಗೀತೋತ್ಸವವನ್ನು ನೆನೆದಿದ್ದಾರೆ ಮಾರುತಿ ಎಚ್‌.
ಬೆಂಗಳೂರಿನ ರಾಮನವಮಿ ಸಂಗೀತೋತ್ಸವದಲ್ಲಿ ಪಾಲ್ಗೊಂಡ ಹಿರಿಯ ಕಲಾವಿದರು
ಬೆಂಗಳೂರಿನ ರಾಮನವಮಿ ಸಂಗೀತೋತ್ಸವದಲ್ಲಿ ಪಾಲ್ಗೊಂಡ ಹಿರಿಯ ಕಲಾವಿದರು

ಬೆಂಗಳೂರು: ದೇಶದಾದ್ಯಂತ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನದ್ದೇ ಜಪ. ನಾಳೆ (ಜ.22)ಯಾವಾಗ ಬೆಳಗು ಹರಿಯುವುದೋ ಎಂದು ಕಾತರದಿಂದ ಕೋಟಿ ಕೋಟಿ ಭಾರತೀಯರು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಸಾವಿರಾರು ಕೋಟಿ ಭಾರತೀಯರು ಈ ಐತಿಹಾಸಿಕ ಕ್ಷಣಕ್ಕಾಗಿ ಎದುರು ನೋಡುತ್ತಿದ್ದಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಇದು ಈ ಕ್ಷಣದ ವರ್ತಮಾನವಾದರೆ ರಾಮನವಮಿ ಆಚರಣೆಯದ್ದು ಮತ್ತೊಂದು ಲೋಕ. ರಾಮನವಮಿ ಎಂದರೆ ಬೆಂಗಳೂರಿನ ನಾಗರಿಕರಿಗೆ ನೆನಪಿಗೆ ಬರುವುದು ಸಂಗೀತೋತ್ಸವ ಕಾರ್ಯಕ್ರಮಗಳು. ಬೆಂಗಳೂರಿನ ಹತ್ತಾರು ಬಡಾವಣೆಗಳಲ್ಲಿ ಸಂಗೀತೋತ್ಸವ ನಡೆಯುತ್ತದೆ.

ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಳಿ, ಶೇಷಾದ್ರಿಪುರಂ ಶ್ರೀರಾಮ ಸೇವಾ ಸಮಿತಿ, ಜಯನಗರದ ಶ್ರೀ ಜಯರಾಮ ಸೇವಾ ಸಮಿತಿ ಆಯೋಜಿಸುವ ಸಂಗೀತ ಕಾರ್ಯಕ್ರಮಗಳು ಪ್ರಸಿದ್ದಿ ಪಡೆದಿವೆ.

ಅದರಲ್ಲೂ ಶ್ರೀರಾಮ ಸೇವಾ ಮಂಡಳಿ ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಹಮ್ಮಿಕೊಳ್ಳುವ ಸಂಗೀತೋತ್ಸವ ಜಗತ್ಪ್ರಸಿದ್ಧ. ಇಲ್ಲಿ ಕಾರ್ಯಕ್ರಮ ನೀಡದ ಸಂಗೀತ ನೀಡದ ದಿಗ್ಗಜರೇ ಇಲ್ಲ ಎಂದು ಹೇಳಬಹುದು. ಶ್ರೀರಾಮನವಮಿ ಸಂಗೀತೋತ್ಸವದಲ್ಲಿ ಒಮ್ಮೆ ಹಾಡಿದರೆ ಜೀವನ ಸಾರ್ಥಕ ಎಂದು ಭಾವಿಸುವ ಕಲಾವಿದರಿದ್ದಾರೆ.

ದಶಕಗಳ ಹಿಂದಕ್ಕೆ ಹೋದರೆ ಸಂಗೀತ ಕ್ಷೇತ್ರದ ಮೇರು ಕಲಾವಿದರಾದ ಬಿಡಾರಂ ಕೃಷ್ಣಪ್ಪ, ಪಿಟೀಲು ಚೌಡಯ್ಯ, ಚೆಂಬೈ ವೈದ್ಯನಾಥ ಭಾಗವತರ್‌ ಅಂತಹವರು ಇಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಕನ್ನಕ್ಕುಡಿ ವೈದ್ಯನಾಥನ್, ಉಸ್ತಾದ್ ಅಮ್ಜದ್ ಖಾನ್, ಮಿಶ್ರಾ ಸಹೋದರರು, ಕೆಜೆ ಯೇಸುದಾಸ್‌, ಎಸ್‌.ಪಿ ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಸೇರಿದಂತೆ ಹತ್ತಾರು ಗಾಯಕರ ಸಂಗೀತ ಸುಧೆಯನ್ನು ಆಸ್ವಾದಿಸುವ ಅವಕಾಶ ರಾಮನವಮಿ ಅಂಗವಾಗಿ ಬೆಂಗಳೂರಿಗರಿಗೆ ದಕ್ಕಿತ್ತು.

ದಂಡಪಾಣಿ ದೇಶಿಕರ್, ಆರ್.ಆರ್.ಕೇಶವಮೂರ್ತಿ, ಸೇಲಂ ಚೆಲ್ಲಂ ಅಯ್ಯಂಗಾರ್, ವೀಣಾ ದೊರೆಸ್ವಾಮಿ ಅಯ್ಯಂಗಾರ್, ಸೇಲಂ ರಾಘವನ್, ಪಿ.ಭುವನೇಶ್ವರಯ್ಯ, ಲಾಲ್ಗುಡಿ ಜಿ.ಜಯರಾಮನ್, ಎಂ.ಎಸ್.ಗೋಪಾಲಕೃಷ್ಣನ್, ಕೆ.ಎಸ್. ಗೋಪಾಲಕೃಷ್ಣನ್, ಕೆ.ಎಸ್. ಟಿ.ಎನ್. ಶೇಷಗೋಪಾಲನ್, ಸುಧಾ ರಘುನಾಥನ್, ಬಾಂಬೆ ಜಯಶ್ರೀ, ಸೌಮ್ಯ ಮತ್ತು ನಿತ್ಯಶ್ರೀ ಮಹದೇವನ್ ಅವರೂ ಸಂಗೀತ ಕಚೇರಿ ನಡೆಸಿ ಕೊಟ್ಟಿದ್ದಾರೆ.

1952ರಿಂದ ಮೊದಲ್ಗೊಂಡು 1992ರವರೆಗೆ ಒಟ್ಟು ಮೂವತ್ತೊಂದು ಕಛೇರಿಗಳನ್ನು ಎಂ.ಎಸ್‌. ಸುಬ್ಬುಲಕ್ಷ್ಮಿ ಇಲ್ಲಿ ನೀಡಿದ್ದಾರೆ. 1980ರ ಸುಬ್ಬುಲಕ್ಷ್ಮಿ ಕಛೇರಿಯನ್ನು ದಕ್ಷಿಣ ಭಾರತದ ಎಲ್ಲ ಆಕಾಶವಾಣಿ ಕೇಂದ್ರಗಳು ಏಕಕಾಲದಲ್ಲಿ ಪ್ರಸಾರ ಮಾಡಿದ್ದವು ಎಂಬುದು ಮೈಲಿಗಲ್ಲು.

ರಾಮನವಮಿ ಆಚರಣೆಗಳನ್ನು ಮೂವರು ರಾಷ್ಟ್ರಪತಿಗಳು, ನಾಲ್ವರು ಉಪರಾಷ್ಟ್ರಪತಿಗಳು ಉದ್ಘಾಟಿಸಿದ್ದಾರೆ ಮತ್ತು ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಭಾಗವಹಿಸಿದ್ದಾರೆ.

ಆರಂಭವಾಗಿದ್ದು ಹೇಗೆ?

ಶ್ರೀರಾಮನವಮಿ ಆಚರಣೆಗೆ ಕಾರಣಕರ್ತರು ಎಸ್‌.ವಿ. ನಾರಾಯಣ ಸ್ವಾಮಿ ಎಂಬ ಸಮಾಜ ಸೇವಕರು. ಇವರು 14 ವರ್ಷದ ಬಾಲಕನಾಗಿದ್ದಾಗ ತಮ್ಮ ವಾರಗೆಯ ಹುಡುಗರ ಜೊತೆಯಲ್ಲಿ ಬಡಾವಣೆಯಲ್ಲಿ ಚಂದಾ ಸಂಗ್ರಹಿಸಿ ಕಾಮನಹಬ್ಬ, ಗಣೇಶನ ಹಬ್ಬವನ್ನು ಸಂಘಟಿಸುತ್ತಿದ್ದರು. ಮೊದಲ ವರ್ಷದ ಹಬ್ಬಗಳ ನಂತರ ಸಂಗ್ರಹಿಸಿದ ಮೊತ್ತದಲ್ಲಿ ಸ್ವಲ್ಪ ಹಣ ಉಳಿಯಿತು. ಆಗ ನಾರಾಯಣಸ್ವಾಮಿಗೆ ಹೊಳೆದದ್ದೇ ಮುಂಬರುವ ಶ್ರೀರಾಮನವಮಿ. ಹೀಗೆ ಆಕಸ್ಮಿಕ ರೀತಿಯಲ್ಲಿ 1939ರಲ್ಲಿ ಶ್ರೀರಾಮೋತ್ಸವವನ್ನು ಸ್ನೇಹಿತರ ಜೊತೆಗೂಡಿ ಪ್ರಾರಂಭಿಸಿದರು. ನಂತರ ನಿರಂತರವಾಗಿ ನಡೆಯುತ್ತಾ ಬಂದಿತು.

ಆರಂಭದ ಕೆಲವು ವರ್ಷ ಹರಿಕಥೆ, ಉಪನ್ಯಾಸ ಮತ್ತು ದೇವರ ನಾಮಕ್ಕೆ ಸೀಮಿತವಾಗಿತ್ತು. ಶಾಸ್ತ್ರೀಯ ಸಂಗೀತದ ಅಭಿರುಚಿ ಇದ್ದ ಸ್ವಾಮಿ ಅವರು ಮಂಡಳಿಯಲ್ಲಿ ಸಂಗೀತ ಕಚೇರಿ ನಡೆಸಲು ಮುಂದಾಗುತ್ತಾರೆ.

ಮೊದಲ ಕೆಲವು ವರ್ಷ ಚಾಮರಾಜಪೇಟೆಯ 3ನೇ ರಸ್ತೆಯಲ್ಲಿ ನಡೆಯುತ್ತಿದ್ದ ಉತ್ಸವ ನಂತರ ವಿಶಾಲವಾದ ಶ್ರೀರಾಮೇಶ್ವರ ದೇವಸ್ಥಾನದ ಮೈದಾನಕ್ಕೆ ಸ್ಥಳಾಂತರವಾಯಿತು. 1949 ರಿಂದ ರಾಮನವಮಿ ಸಂಗೀತೋತ್ಸವ ಬಿ.ಡಿ.ಸಿ.ಸಿ ಬ್ಯಾಂಕಿನ ಆವರಣದಲ್ಲಿ ನಡೆದರೆ 1952ರಲ್ಲಿ ಮಂಡಳಿಯ ರಾಮೋತ್ಸವವು ಕೋಟೆ ಸಿಟಿ ಇನ್‌ಸ್ಟಿಟ್ಯೂಟ್‌ ಪಕ್ಕದ ಖಾಲಿ ನಿವೇಶನಕ್ಕೆ ಸ್ಥಳಾಂತರವಾಯಿತು. ಇಲ್ಲಿ ಆಗಮಿಸುವ ಎಲ್ಲರೂ ಸಂಗಿತಾಸಕ್ತರು ಎನ್ನುವುದು ವಿಶೇಷ. ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಅವರು ಸಾಮಾನ್ಯರಂತೆ ಇಲ್ಲಿ ಕುಳಿತು ಸಂಗೀತವನ್ನು ಅಲಿಸಿದ್ದಾರೆ.

ವಿಶೇಷ ಲೇಖನ: ಮಾರುತಿ ಎಚ್‌.

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ