logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhishma Ekadashi 2024: ಫೆ 20ಕ್ಕೆ ಭೀಷ್ಮ ಏಕಾದಶಿ; ಜಯ ಏಕಾದಶಿ ಎಂದೂ ಕರೆಯಲ್ಪಡುವ ದಿನ ಕೆಲವು ರಾಶಿಯವರಿಗೆ ಕಾದಿದೆ ಶುಭ ಯೋಗ

Bhishma Ekadashi 2024: ಫೆ 20ಕ್ಕೆ ಭೀಷ್ಮ ಏಕಾದಶಿ; ಜಯ ಏಕಾದಶಿ ಎಂದೂ ಕರೆಯಲ್ಪಡುವ ದಿನ ಕೆಲವು ರಾಶಿಯವರಿಗೆ ಕಾದಿದೆ ಶುಭ ಯೋಗ

HT Kannada Desk HT Kannada

Feb 18, 2024 06:30 AM IST

google News

ಫೆ 20ಕ್ಕೆ ಭೀಷ್ಮ ಏಕಾದಶಿ

  • Bhishma Ekadashi 2024: ಹಿಂದೂ ಧರ್ಮದಲ್ಲಿ ಏಕಾದಶಿ ಆಚರಣೆಗೆ ತುಂಬಾನೇ ಮಹತ್ವವಿದೆ. ಈ ಬಾರಿ ಭೀಷ್ಮ ಏಕಾದಶಿಯು ಫೆಬ್ರವರಿ 20ರಂದು ಬರಲಿದ್ದು ಈ ರಾಶಿಯಲ್ಲಿ ಜನಿಸಿದವರು ಸಾಕಷ್ಟು ಯೋಗಗಳನ್ನು ಸಂಪಾದಿಸಲಿದ್ದಾರೆ. ಇವರ ಅದೃಷ್ಟವೇ ಬದಲಾಗಲಿದೆ .

ಫೆ 20ಕ್ಕೆ ಭೀಷ್ಮ ಏಕಾದಶಿ
ಫೆ 20ಕ್ಕೆ ಭೀಷ್ಮ ಏಕಾದಶಿ

Bhishma Ekadashi 2024: ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳು ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷದ ಏಕಾದಶಿಯಂದು ವಿಷ್ಣುವನ್ನು ಆರಾಧನೆ ಮಾಡುತ್ತಾರೆ ಎನ್ನುವುದು ತಿಳಿದಿರುವ ವಿಚಾರ. ಮಾಘ ಮಾಸದ ಶುಕ್ಲ ಪಕ್ಷ ಏಕಾದಶಿ ದಿನದಂದು ಜಯ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜಯ ಏಕಾದಶಿ ಫೆಬ್ರವರಿ 20ರಂದು ಆಚರಿಸಲಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಉತ್ತರ ಭಾರತದಲ್ಲಿ ಜಯ ಏಕಾದಶಿಯನ್ನು ಆಚರಿಸಿದರೆ ದಕ್ಷಿಣ ಭಾರತೀಯರು ಇದನ್ನು ಭೀಷ್ಮ ಏಕಾದಶಿ ಎಂದು ಕರೆಯುತ್ತಾರೆ. ಉತ್ತರಾಯಣ ಪುಣ್ಯ ಕಾಲದಲ್ಲಿ ಭೀಷ್ಮ ಮರಣ ಹೊಂದುತ್ತಾನೆ. ಭೀಷ್ಮನು ಮರಣ ಹೊಂದುವ ಮುನ್ನ ವಿಷ್ಣುವಿನ ಸಹಸ್ರನಾಮವನ್ನು ಧರ್ಮರಾಜನಿಗೆ ಭೋದಿಸಿದ್ದ ಎಂದು ಪುರಾಣ ಹೇಳುತ್ತದೆ. ಈ ಮಂಗಳಕರ ದಿನವನ್ನೇ ಭೀಷ್ಮ ಏಕಾದಶಿ ಎಂದು ಕರೆಯಲಾಗುತ್ತದೆ. ಭೀಷ್ಮ ಏಕಾದಶಿಯ ದಿನದಂದು ಭೀಷ್ಮನಿಗೆ ತರ್ಪಣವನ್ನು ಅರ್ಪಿಸುವುದು ಹಾಗೂ ಭಗವಾನ್​ ವಿಷ್ಣುವನ್ನು ಪೂಜಿಸುವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಭೀಷ್ಮ ಏಕಾದಶಿಯ ದಿನದಂದು ಉಪವಾಸ ಕೈಗೊಳ್ಳುವುದು ಅತ್ಯಂತ ಶ್ರೇಷ್ಟ ಎಂದು ಪರಿಗಣಿಸಲಾಗಿದೆ. ಈ ದಿನ ಉಪವಾಸ ಮಾಡಿದರೆ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಸಿಗುತ್ತದೆ ಹಾಗೂ ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಜಯ ಏಕಾದಶಿಯ ದಿನದಂದು ಉಪವಾಸವನ್ನು ಕೈಗೊಂಡು ವಿಷ್ಣುವನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಈ ಬಾರಿ ಫೆಬ್ರವರಿ 20ರಂದು ಬುಧನು ಶನಿ ಸಂಕ್ರಮಿಸುವ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಶುಭ ಯೋಗವು ಅನೇಕರಿಗೆ ಅದೃಷ್ಟವನ್ನು ತಂದುಕೊಡಲಿದೆ ಎಂಬ ನಂಬಿಕೆಯಿದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಶುಭಯೋಗ ಕಾದಿದೆ ಎಂದು ತಿಳಿದುಕೊಳ್ಳೋಣ.

ಮೇಷ ರಾಶಿ : ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಪೂರ್ವಿಕರ ಆಸ್ತಿಯಿಂದ ನಿಮಗೆ ಆರ್ಥಿಕ ಲಾಭ ಸಿಗಲಿದೆ. ವೈಯಕ್ತಿಕ ಜೀವನದಲ್ಲಿ ಸಂತೋಷವನ್ನು ಕಾಣಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಪ್ರೇಮ ಸಂಬಂಧಗಳಲ್ಲಿ ಸಂತೋಷ ಇರಲಿದೆ.

ವೃಷಭ ರಾಶಿ : ಭೀಷ್ಮ ಏಕಾದಶಿಯು ವೃಷಭ ರಾಶಿಯವರಿಗೂ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ವೃತ್ತಿಯಲ್ಲಿ ಹೊಸ ಯಶಸ್ಸನ್ನು ಸಂಪಾದಿಸಲಿದ್ದೀರಿ. ಹಣದ ಹರಿವಿನ ಹಾದಿ ಸುಗಮವಾಗಲಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಗತಿಗಳೂ ಸುಧಾರಿಸಲಿವೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ.

ಸಿಂಹ ರಾಶಿ : ಮಿತ್ರರ ಸಹಾಯದಿಂದ ಅಂದುಕೊಂಡ ಕಾರ್ಯವನ್ನು ನೆರವೇರಿಸಲಿದ್ದೀರಿ. ನೀವು ಕೈಗೆತ್ತಿಕೊಂಡಿದ್ದ ಕಾರ್ಯದ ನಡುವೆ ಎದುರಾಗುವ ಎಲ್ಲಾ ಅಡೆತಡೆಗಳಿಗೆ ಪರಿಹಾರ ಸಿಗಲಿದೆ. ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಕಚೇರಿ ಕೆಲಸಗಳಲ್ಲಿ ಮೇಲಾಧಿಕಾರಿಗಳಿಂದ ಬೆಂಬಲ ಸಿಗಲಿದೆ. ವೃತ್ತಿ ಜೀವನದಲ್ಲಿ ಅಪಾರ ಪ್ರಮಾಣದಲ್ಲಿ ಯಶಸ್ಸನ್ನು ಸಂಪಾದಿಸಲಿದ್ದೀರಿ. ವೈಯಕ್ತಿಕ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ.

ತುಲಾ ರಾಶಿ : ಕುಟುಂಬಸ್ಥರೊಂದಿಗೆ ಸದಸ್ಯರೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಲಿದ್ದೀರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವೈಯಕ್ತಿಕ ಜೀವನದಲ್ಲಿ ಸುಖ ಹಾಗೂ ಶಾಂತಿ ಇರಲಿದೆ. ಸಂಗಾತಿಯಿಂದ ಎಲ್ಲಾ ರೀತಿಯ ಬೆಂಬಲ ಪಡೆಯಲಿದ್ದೀರಿ. ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗುವಂತಹ ಘಟನೆಗಳು ಜರುಗಲಿವೆ.

ಧನಸ್ಸು ರಾಶಿ: ಉದ್ಯೋಗಿಗಳಿಗೆ ಎಲ್ಲಾ ವಿಚಾರದಲ್ಲೂ ಶುಭವಾಗಲಿದೆ. ನೀವು ಈ ಹಿಂದೆ ಮಾಡಿರುವ ಹೂಡಿಕೆಗಳಿಂದ ಉತ್ತಮ ಲಾಭ ಪಡೆಯಲಿದ್ದೀರಿ . ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ಹೊಸ ಅವಕಾಶವನ್ನು ಪಡೆಯುವಿರಿ. ವ್ಯಾಪಾರದಲ್ಲಿ ಕೂಡ ಉತ್ತಮ ಲಾಭ ನಿಮ್ಮದಾಗಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ