logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Birth Date Astrology: ಸ್ವತಂತ್ರ ಜೀವನ ಇಷ್ಟಪಡುವ ನಿಮಗೆ ಆತ್ಮವಿಶ್ವಾಸವೇ ಬಲ; 14ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣಗಳಿವು

Birth Date Astrology: ಸ್ವತಂತ್ರ ಜೀವನ ಇಷ್ಟಪಡುವ ನಿಮಗೆ ಆತ್ಮವಿಶ್ವಾಸವೇ ಬಲ; 14ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣಗಳಿವು

Reshma HT Kannada

Apr 05, 2024 04:08 PM IST

google News

14ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ

    • Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 14ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ. 
14ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ
14ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ

14ನೇ ತಾರೀಕಿನಂದು ಜನಿಸಿದವರಿಗೆ ವಿಶೇಷವಾದಂತಹ ಆತ್ಮವಿಶ್ವಾಸ ಮತ್ತು ಆತ್ಮಶಕ್ತಿ ಇರುತ್ತದೆ. ಆದರೆ ಸಣ್ಣಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸ್ನೇಹಿತರು ಮತ್ತು ಸಂಬಂಧಿಕರು ತಾವಾಗಿಯೇ ಸಹಾಯ ಮಾಡಲು ಬಂದರು ತಿರಸ್ಕರಿಸುತ್ತಾರೆ. ಯಾರ ಮೇಲೂ ಅವಲಂಬಿತರಾಗದೆ ಸ್ವತಂತ್ರವಾಗಿ ಜೀವನ ನಡೆಸುವ ಅಭಿಲಾಷೆ ಹೊಂದಿರುತ್ತಾರೆ. ಅಗತ್ಯವಿದ್ದಲ್ಲಿ ಕುಟುಂಬ ಸದಸ್ಯರ ಸಲಹೆಯನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಇವರಿಗೆ ಬೇಗನೆ ಕೋಪ ಬರುತ್ತದೆ. ಆದರೆ ಅದರಿಂದ ಯಾವುದೇ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ದುಡುಕುತನದಿಂದ ಯಾವುದೇ ಕೆಲಸ ಮಾಡದ ಕಾರಣ ಸುಖ ಶಾಂತಿ ಇವರ ಜೀವನದಲ್ಲಿ ನೆಲೆಸಿರುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಮಮಕಾರ ಗುಣದವರು

ಮಕ್ಕಳೆಂದರೆ ಅತಿಯಾದ ಪ್ರೀತಿ ಇರುತ್ತದೆ. ಕೇವಲ ತಮ್ಮ ಮಕ್ಕಳಲ್ಲದೆ ಬೇರೆಯವರನ್ನು ಸಹ ಮಮತೆಯಿಂದ ಕಾಣುತ್ತಾರೆ. ಯಾವಾಗಲೂ ಒಂದೇ ರೀತಿ ಬದುಕುವುದು ಇವರಿಗೆ ಇಷ್ಟವಾಗುವುದಿಲ್ಲ. ಸದಾಕಾಲ ಯಾವುದಾದರೊಂದು ಬದಲಾವಣೆಗಳನ್ನು ನಿರೀಕ್ಷಿಸುತ್ತಾರೆ. ಆದರೆ ಅತಿಯಾದ ನಿದ್ದೆ ಇವರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ಕುಟುಂಬದಲ್ಲಿ ಎಲ್ಲರ ಪ್ರೀತಿ ಗಳಿಸುತ್ತಾರೆ. ಇವರಿಗೆ ತಾಯಿ, ಸಹೋದರಿ, ಪತ್ನಿ ಮತ್ತು ಮಗಳ ಮೇಲೆ ವಿಶೇಷ ಒಲವಿರುತ್ತದೆ. ಸ್ತ್ರೀಯರನ್ನು ಹೆಚ್ಚಾಗಿ ಗೌರವಿಸುವ ಇವರು ಸಮಾಜದಲ್ಲಿ ವಿಶೇಷವಾದ ಸ್ಥಾನಮಾನವನ್ನು ಪಡೆಯುತ್ತಾರೆ. ಅನಾವಶ್ಯಕವಾಗಿ ಸಣ್ಣಪುಟ್ಟ ವಿಚಾರಗಳಿಗೂ ಅತಿಯಾಗಿ ಚಿಂತೆ ಇವರಿಗಿರುತ್ತದೆ. ಸಾಮಾನ್ಯವಾಗಿ ಇವರು ಯಾರನ್ನು ದ್ವೇಷಿಸುವುದಿಲ್ಲ.

ಹಣಕಾಸಿನ ವಿಚಾರದಲ್ಲಿ ಎಚ್ಚರವಿರಬೇಕು

ಇವರು ತೆಗೆದುಕೊಳ್ಳುವ ತಪ್ಪು ನಿರ್ಧಾರದಿಂದ ಕುಟುಂಬದ ಸದಸ್ಯರು ಗಲಿಬಿಲಿಗೆ ಒಳಗಾಗುತ್ತಾರೆ. ಪ್ರವಾಸ ಮಾಡುವುದೆಂದರೆ ಇವರಿಗೆ ಅಚ್ಚುಮೆಚ್ಚು. ಅದರಲ್ಲಿಯೂ ಯಾತ್ರಾಸ್ಥಳಗಳಿಗೆ ಭೇಟಿ ನೀಡುವಲ್ಲಿ ಇವರೇ ಮೊದಲಿಗರು. ಧಾರ್ಮಿಕ ಕಾರ್ಯಕ್ರಮಗಳಿಗೆ ಯಥೇಚ್ಛವಾಗಿ ಹಣವನ್ನು ವಿನಿಯೋಗಿಸುತ್ತಾರೆ. ಉದ್ಯೋಗಕ್ಕಿಂತಲೂ ಸ್ವಂತ ವ್ಯಾಪಾರವನ್ನು ಮಾಡಲು ಹಾತೊರೆಯುತ್ತಾರೆ. ಉದ್ಯೋಗವಾದರೂ ತಿರುಗಾಟಕ್ಕೆ ಸಂಬಂಧಿಸಿದ ಕೆಲಸವಿರುತ್ತದೆ. ವ್ಯಾಪಾರ ವ್ಯವಹಾರಗಳಾದರೂ ತಿರುಗಾಟವನ್ನೇ ಅವಲಂಬಿಸಿರುತ್ತಾರೆ. ಆದರೆ ಇವರ ವರಮಾನಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಕೈತುಂಬಾ ಹಣವಿದ್ದಾಗ ಉಳಿಸುವ ಮಾತಾಡುತ್ತಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವವರೆಗೆ ಇವರಲ್ಲಿ ಹಣವೇ ಇರುವುದಿಲ್ಲ. ಆದ್ದರಿಂದ ಮುಖ್ಯವಾಗಿ ಹಣಕಾಸಿನ ವಿಚಾರಗಳನ್ನು ಮುಂದೂಡದೆ ತಕ್ಷಣವೇ ಕಾರ್ಯರೂಪಕ್ಕೆ ತರುವುದು ಒಳ್ಳೆಯದು. ಇವರಿರುವ ಪರಿಸರವನ್ನು ಸದಾ ಕಾಲ ಶುಚಿಯಾಗಿ ಇಡುತ್ತಾರೆ. ಬಹುಕಾಲ ಒಂದೇ ರೀತಿಯ ಬಟ್ಟೆಯನ್ನೂ ಧರಿಸುವುದಿಲ್ಲ. ಇವರ ಸಂಗಾತಿಯಾಗಲಿ ಮಕ್ಕಳಾಗಲಿ ಪದೇ ಪದೇ ಒಂದೇ ರೀತಿಯ ಬಟ್ಟೆಯನ್ನೂ ಧರಿಸಲು ಇಷ್ಟಪಡುವುದಿಲ್ಲ. ಒಡವೆವಸ್ತ್ರಗಳಿಗೆ ಸಂಪಾದಿಸಿದ ಬಹುಪಾಲು ಹಣವನ್ನು ಖರ್ಚು ಮಾಡುತ್ತಾರೆ. ತಮ್ಮದೇ ಆದ ತಪ್ಪಿನಿಂದ ಇವರು ಕಷ್ಟಕ್ಕೆ ಸಿಲುಕುತ್ತಾರೆ. ಯೋಚಿಸಿ ಕೆಲಸ ಕಾರ್ಯಗಳಲ್ಲಿ ನಿರತರಾದರೆ ಜೀವನವು ಸುಖಮಯವಾಗಿರುತ್ತದೆ.

ಸ್ವಾಭಿಮಾನದ ಗುಣ ಕೆಲವೊಮ್ಮೆ ಸೋಲಿಗೂ ಕಾರಣವಾಗಬಹುದು

ತಾವು ಕಷ್ಟದಲ್ಲಿದ್ದರೂ ಬೇರೆಯವರಿಗೆ ಸಹಾಯ ಮಾಡುತ್ತಾರೆ. ಯಾರೊಬ್ಬರ ಪ್ರಭಾವಕ್ಕೆ ಒಳಗಾಗದೆ ತಾವಾಗಿಯೇ ಬೇರೆಯವರಿಗೆ ಆಶ್ರಯ ನೀಡುತ್ತಾರೆ. ಜನಸೇವೆ ಮಾಡುವ ಸಲುವಾಗಿ ಸಂಘಸಂಸ್ಥೆಗಳನ್ನು ಆರಂಭಿಸುವರು. ಬಾಲ್ಯದಲ್ಲಿ ಸಾಮಾನ್ಯವಾಗಿ ಇವರು ಕಷ್ಟದಲ್ಲಿಯೇ ಬೆಳೆಯುತ್ತಾರೆ. ವಿವಾಹವಾದ ನಂತರ ಕೆಲ ದಿನಗಳು ಸಾಮಾನ್ಯ ಜೀವನ ನಡೆಸುತ್ತಾರೆ. ಸಂತಾನವಾದ ನಂತರವೂ ಕೆಲವು ಕಾಲ ಜೀವನದಲ್ಲಿ ಹಿನ್ನೆಡೆಯನ್ನು ಎದುರಿಸುತ್ತಾರೆ. ಆದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ದೃಢವಾದ ಮನಸ್ಸಿನಿಂದ ದೈನಂದಿನ ಜೀವನಗಳಿಗೆ ಹೊಂದಿಕೊಂಡು ನಡೆಯುವವರು. ಇವರಲ್ಲಿರುವ ಸ್ವಾಭಿಮಾನದ ಗುಣ ಕೆಲವೊಮ್ಮೆ ಸೋಲಿಗೂ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದ ಬುದ್ಧಿಶಕ್ತಿಯನ್ನು ಹೊಂದಿರುತ್ತಾರೆ. ಆದರೆ ಅದರ ಸದ್ಬಳಕೆ ಮಾಡಿಕೊಳ್ಳುವುದು ಬಲುಮುಖ್ಯ. ನೀರಿರುವ ಪ್ರದೇಶಗಳಲ್ಲಿ ಇವರು ಸಂತಸದಿಂದ ಇರುತ್ತಾರೆ. ಈ ಕಾರಣದಿಂದ ನದೀ ಮತ್ತು ಸಮುದ್ರ ಇರುವ ಪ್ರದೇಶಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇವರಿಗೆ ಸಂಗಾತಿಯ ಸಹಾಯ ಸಹಕಾರ ಸದಾ ಕಾಲ ಇರುತ್ತದೆ. ಸಹಜವಾಗಿ ಕ್ರಮೇಣವಾಗಿ ಇವರ ಜೀವನದಲ್ಲಿ ನಿರೀಕ್ಷಿತ ಮಟ್ಟದ ಬದಲಾವಣೆಗಳು ಕಂಡು ಬರುತ್ತದೆ. ಕೂಡು ಕುಟುಂಬದ ಜೀವನ ಇವರಿಗೆ ಉತ್ತಮ ಫಲಗಳನ್ನು ನೀಡುತ್ತದೆ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ