logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Buddha Purnima 2024: ಈ ವರ್ಷ ಬುದ್ಧ ಪೂರ್ಣಿಮೆ ಯಾವಾಗ? ಮಹತ್ವ, ದಿನಾಂಕ, ಶುಭ ಮುಹೂರ್ತದ ಬಗ್ಗೆ ವಿವರ ಇಲ್ಲಿದೆ

Buddha Purnima 2024: ಈ ವರ್ಷ ಬುದ್ಧ ಪೂರ್ಣಿಮೆ ಯಾವಾಗ? ಮಹತ್ವ, ದಿನಾಂಕ, ಶುಭ ಮುಹೂರ್ತದ ಬಗ್ಗೆ ವಿವರ ಇಲ್ಲಿದೆ

Rakshitha Sowmya HT Kannada

Apr 24, 2024 07:46 AM IST

google News

ಮೇ 23 ರಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತಿದೆ

  • Buddha Purnima 2024: ಮೇ 23 ರಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಈ ದಿನ ಬುದ್ಧ ಜನಿಸಿದ ದಿನ ಹಾಗೂ ಇದೇ ದಿನಾಂಕದಂದು ಬುದ್ಧನಿಗೆ ಜ್ಞಾನೋದಯವಾಗಿ, ಮೋಕ್ಷ ಪಡೆದ ದಿನ ಎಂದು ನಂಬಲಾಗಿದೆ. ಆದ್ದರಿಂದ ಪ್ರತಿ ವರ್ಷ ವೈಶಾಖ ಪೂರ್ಣಿಮೆ ಅಥವಾ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. 

ಮೇ 23 ರಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತಿದೆ
ಮೇ 23 ರಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತಿದೆ (PC: Pixabay)

Buddha Purnima 2024: ಭಾರತೀಯರಿಗೆ ಇತರ ಹಬ್ಬಗಳಂತೆ ಪ್ರತಿ ತಿಂಗಳು ಬರುವ ಹುಣ್ಣಿಮೆಯೂ ಅಷ್ಟೇ ಮುಖ್ಯ. ಏಪ್ರಿಲ್‌ 23 ರಂದು ಚೈತ್ರ ಹುಣ್ಣಿಮೆಯನ್ನು ಆಚರಿಸಲಾಗಿದೆ. ಅದೇ ದಿನ ಹನುಮ ಜಯಂತಿ ಕೂಡಾ ಬಂದಿರುವುದು ಭಕ್ತರ ಸಂಭ್ರಮವನ್ನು ಹೆಚ್ಚಿಸಿತ್ತು. ಮುಂದಿನ ತಿಂಗಳು ಬುದ್ಧ ಪೂರ್ಣಿಮೆ ಇದ್ದು ದಿನಾಂಕ, ಶುಭ ಮುಹೂರ್ತದ ಬಗ್ಗೆ ವಿವರ ಇಲ್ಲಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಪ್ರತಿ ತಿಂಗಳು, ಶುಕ್ಲ ಪಕ್ಷದ ಚತುರ್ದಶಿ ತಿಥಿಯ ಮರುದಿನ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ಮೇ 23 ರಂದು ವೈಶಾಖ ಪೂರ್ಣಿಮೆ ಇದೆ. ಇದನ್ನು ಬುದ್ಧ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ವೈಶಾಖ ಪೂರ್ಣಿಮಾ ತಿಥಿಯಂದು ಭಗವಾನ್ ಬುದ್ಧ ಜನಿಸಿದನು ಎಂದು ಧರ್ಮ ಗ್ರಂಥಗಳಲ್ಲಿ ಸೂಚಿಸಲಾಗಿದೆ. ಆದ್ದರಿಂದ ಪ್ರತಿ ವರ್ಷ ವೈಶಾಖ ಪೂರ್ಣಿಮೆಯಂದು ಬುದ್ಧ ಜಯಂತಿಯನ್ನು ಆಚರಿಸಲಾಗುತ್ತದೆ. ಒಟ್ಟಿನಲ್ಲಿ ಬುದ್ಧ ಪೂರ್ಣಿಮೆಯನ್ನು ಬುದ್ಧ ಪೂರ್ಣಿಮೆಯನ್ನು ಬುದ್ಧನ ಜ್ಞಾನೋದಯದ ದಿನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನ ವಿಶೇಷವಾಗಿ ಬುದ್ಧನನ್ನು ಪೂಜಿಸಲಾಗುತ್ತದೆ.

ವೈಶಾಖ ಪೂರ್ಣಿಮೆಯಂದು ಬುದ್ಧನು ಜ್ಞಾನ ಮತ್ತು ಮೋಕ್ಷ ಪಡೆದನು ಎಂದು ನಂಬಲಾಗಿದೆ. ಆದ್ದರಿಂದಲೇ ಪ್ರತಿ ವರ್ಷ ಈ ಮುಹೂರ್ತದಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನರು ಗಂಗಾ ಸೇರಿದಂತೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಪೂಜೆಯ ಮೂಲಕ ದಾನ, ಧರ್ಮ ಕೈಗೊಳ್ಳುತ್ತಾರೆ.

ಶುಭ ಮುಹೂರ್ತ

ಬುದ್ಧ ಪೂರ್ಣಿಮೆ ಮುಹೂರ್ತವು ಮೇ 22 ರಂದು ಸಂಜೆ 06.47 ಕ್ಕೆ ಆರಂಭವಾಗಿ ಮರುದಿನ ಅಂದರೆ ಮೇ 23 ರಂದು ಸಂಜೆ 07.22 ಕ್ಕೆ ಕೊನೆಗೊಳ್ಳುತ್ತದೆ. ಸನಾತನ ಧರ್ಮದಲ್ಲಿ ಉದಯ ತಿಥಿ ಮಾನ್ಯವಾಗಿದೆ. ಆದ್ದರಿಂದ ಬುದ್ಧ ಪೂರ್ಣಿಮೆಯನ್ನು ಮೇ 23 ರಂದು ಆಚರಿಸಲಾಗುವುದು.

ಭದ್ರವಾಸ ಯೋಗ

ಜ್ಯೋತಿಷಿಗಳ ಪ್ರಕಾರ, ಬುದ್ಧ ಪೂರ್ಣಿಮೆಯಂದು ಭದ್ರವಾಸ್ ಯೋಗವು ರೂಪುಗೊಳ್ಳುತ್ತದೆ. ಈ ಯೋಗದ ರಚನೆಯು ಸಂಜೆ 07:09 ರವರೆಗೆ ಇರುತ್ತದೆ. ಈ ಸಮಯದಲ್ಲಿ ಭದ್ರನು ಸ್ವರ್ಗದಲ್ಲಿ ಉಳಿಯುತ್ತಾನೆ. ಭದ್ರನು ಪಾತಾಳಲೋಕದಲ್ಲಿ ಮತ್ತು ಸ್ವರ್ಗದಲ್ಲಿ ನೆಲೆಸಿದಾಗ ಮಾನವ ಕಲ್ಯಾಣವು ಪ್ರಾಪ್ತವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಪಂಚಾಂಗ

ಮೇ 23 ಹುಣ್ಣಿಮೆಯಂದು ಬೆಳಗ್ಗೆ 05:26ಕ್ಕೆ ಸೂರ್ಯೋದಯವಾದರೆ ಸಂಜೆ 07:10ಕ್ಕೆ ಸೂರ್ಯಾಸ್ತವಾಗುತ್ತದೆ. ಸಂಜೆ 07:12ಕ್ಕೆ ಚಂದ್ರೋದಯವಾಗುತ್ತದೆ. ಆ ದಿನ ಬೆಳಗ್ಗೆ 04:04 ರಿಂದ 05:45 ವರೆಗೆ ಬ್ರಹ್ಮ ಮುಹೂರ್ತ, ಮಧ್ಯಾಹ್ನ 02:35 ರಿಂದ 03:30 ರವರೆಗೆ ವಿಜಯ ಮುಹೂರ್ತ, ರಾತ್ರಿ 11:57 ರಿಂದ 12:38 ರವರೆಗೆ ನಿಶಿತಾ ಮುಹೂರ್ತವಿದೆ. ಮಧ್ಯಾಹ್ನ 02:01 ರಿಂದ 03:44 ರವರೆಗೆ ರಾಹುಕಾಲ, ರಾತ್ರಿ 08:52 ರಿಂದ 10:35 ವರೆಗೂ ಗುಳಿಕ ಕಾಲವಿದೆ.

ಬುದ್ಧನು ಬೌದ್ಧ ಧರ್ಮದ ಸಂಸ್ಥಾಪಕ. ಹಿಂದೂ ಧರ್ಮದಲ್ಲಿ ಬುದ್ಧನನ್ನು ವಿಷ್ಣುವಿನ ಅವತಾರ ಎಂದು ನಂಬಲಾಗಿದೆ. ಬುದ್ಧನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ಸುಖ, ಸಂತೋಷ ದೊರೆಯುವುದರಲ್ಲಿ ಎರಡನೇ ಮಾತಿಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ