ಕಟಕ ರಾಶಿ ಭವಿಷ್ಯ ಆಗಸ್ಟ್ 10: ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದರಿಂದ ಲಾಭ, ಕೋಪದ ಕೈಗೆ ಬುದ್ಧಿ ಕೊಡದಿರಿ
Aug 10, 2024 06:16 AM IST
ಕಟಕ ರಾಶಿ ಭವಿಷ್ಯ ಆಗಸ್ಟ್ 10: ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದರಿಂದ ಲಾಭ, ಕೋಪದ ಕೈಗೆ ಬುದ್ಧಿ ಕೊಡದಿರಿ
- Cancer Daily Horoscope August 10, 2024: ರಾಶಿಚಕ್ರಗಳ ಪೈಕಿ ನಾಲ್ಕನೇಯದು ಕಟಕ. ಜನನದ ಸಮಯದಲ್ಲಿ ಚಂದ್ರನು ಕರ್ಕಾಟಕದಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ಕರ್ಕ. ಆಗಸ್ಟ್ 10ರ ಕಟಕ ರಾಶಿ ಭವಿಷ್ಯ ಪ್ರಕಾರ, ಕೋಪದ ಕೈಗೆ ಬುದ್ಧಿ ಕೊಡುವುದರಿಂದ ಸಂಬಂಧ ಕೆಡುತ್ತದೆ. ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆಯಿಂದ ಲಾಭ.
ಕಟಕ ರಾಶಿ ಭವಿಷ್ಯ ಆಗಸ್ಟ್ 10: ಸಂಗಾತಿಗೆ ಪ್ರೀತಿ ತೋರಿ. ಇದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಪರಿಣಾಮ ಬೀರಲು ಕಾರಣವಾಗುತ್ತದೆ. ಕಚೇರಿಯಲ್ಲಿ ಸವಾಲುಗಳು ನಿಮ್ಮ ಸಾಮರ್ಥ್ಯವನ್ನು ತೋರಿಸಬಹುದು. ಇಂದು ನೀವು ನಿಮ್ಮ ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯುವ ಪ್ರಣಯ ದಿನವಾಗಿರುತ್ತದೆ. ಇಂದು ವೃತ್ತಿ ಜೀವನದಲ್ಲಿ ಯಶಸ್ಸಿಗಾಗಿ ಮುನ್ನಡೆಯಿರಿ. ಇಂದು ಹಣದ ಮಳೆ ಇರುತ್ತದೆ. ನೀವು ಸ್ಮಾರ್ಟ್ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ಕಟಕ ರಾಶಿಯವರ ಪ್ರೇಮ ಭವಿಷ್ಯ (Cancer Love Horoscope)
ಸಂಬಂಧದಲ್ಲಿ ಇಂದು ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಸಂಗಾತಿ ನಿಮ್ಮ ಪ್ರಾಮಾಣಿಕತೆಯನ್ನು ಅನುಮಾನಿಸಬಹುದು. ಯಾವುದೇ ವಿಚಾರದಲ್ಲಿ ಕಾಮೆಂಟ್ ಮಾಡುವಾಗ ಜಾಗರೂಕರಾಗಿರಿ. ಕೋಪದ ಕೈಗೆ ಬುದ್ಧಿಕೊಡಿದಿರಿ. ಇದರಿಂದ ಸಂಬಂಧ ಇನ್ನಷ್ಟು ಕೆಡಬಹುದು. ವಿವಾಹಿತರು ಹೊರಗಿನ ಪ್ರಣಯ ವ್ಯವಹಾರಗಳಿಂದ ದೂರವಿರಬೇಕು. ಇದು ನಿಮ್ಮ ವೈವಾಹಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ನೆನಪಿರಲಿ. ಭೂತಕಾಲದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ ಮತ್ತು ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿರಿ. ಮನೆಯ ಹಿರಿಯರಿಗೆ ನಿಮ್ಮ ಪ್ರೇಮಿಯನ್ನು ಪರಿಚಯಿಸಿ.
ಕಟಕ ರಾಶಿಯವರ ವೃತ್ತಿ ಭವಿಷ್ಯ (Cancer Professional Horoscope)
ಕಚೇರಿಯಲ್ಲಿ ಉತ್ತಮ ಅವಕಾಶಗಳು ನಿಮಗಾಗಿ ಬರಬಹುದು. ಇಂದು ನಿಮ್ಮ ಕೆಲಸವು ಕಚೇರಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಂತೆ ಮಾಡಬಹುದು. ಐಟಿ, ಸಿವಿಲ್ ಎಂಜಿನಿಯರ್ಗಳು, ಆರೋಗ್ಯ, ಸಾರಿಗೆ ಮತ್ತು ಆತಿಥ್ಯಕ್ಕೆ ಸಂಬಂಧಿಸಿದ ಕೆಲಸದಲ್ಲಿರುವವರಿಗೆ ವೃತ್ತಿಜೀವನವನ್ನು ಮುನ್ನಡೆಸಲು ಹೊಸ ಅವಕಾಶಗಳು ಎದುರಾಗಬಹುದು. ದಿನದ ದ್ವಿತೀಯಾರ್ಧವು ವೃತ್ತಿಜೀವನದಲ್ಲಿ ಪ್ರಯೋಗಗಳಿಗೆ ಉತ್ತಮವಾಗಿದೆ. ನೀವು ಉದ್ಯೋಗ ಬದಲಾಯಿಸಲು ಯೋಚಿಸುತ್ತಿದ್ದರೆ, ನಿಮ್ಮ ರೆಸ್ಯೂಮ್ ಅನ್ನು ನವೀಕರಿಸಿ, ಏಕೆಂದರೆ ಹೊಸ ಅವಕಾಶಗಳು ಬಾಗಿಲು ತಟ್ಟುತ್ತವೆ. ವ್ಯಾಪಾರಿಗಳು ಹೊಸ ವ್ಯವಹಾರದ ಬಗ್ಗೆ ಗಂಭೀರವಾಗಿರುತ್ತಾರೆ. ದಿನದ ದ್ವಿತೀಯಾರ್ಧವು ಹೊಸ ಹೂಡಿಕೆಗಳಿಗೆ ಉತ್ತಮವಾಗಿದೆ.
ಕಟಕ ರಾಶಿಯವರ ಹಣಕಾಸು ಭವಿಷ್ಯ (Cancer Money Horoscope)
ಹಣದ ಮಳೆ ಇರುತ್ತದೆ ಮತ್ತು ನೀವು ಜೀವನದ ಸೌಕರ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲವು ಮಹಿಳೆಯರು ಪೂರ್ವಜರ ಆಸ್ತಿಯಲ್ಲಿ ಪಾಲು ಪಡೆಯಬಹುದು. ಆದರೆ ಪುರುಷರು ತಮ್ಮ ಒಡಹುಟ್ಟಿದ ಸಹೋದರ ಅಥವಾ ಸ್ನೇಹಿತನೊಂದಿಗೆ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಈ ವಾರಾಂತ್ಯದಲ್ಲಿ ಮನೆಯಲ್ಲಿ ಸಂಭ್ರಮಾಚರಣೆ ಇರುತ್ತದೆ, ಇದರಲ್ಲಿ ನೀವು ಗಮನಾರ್ಹ ಮೊತ್ತದ ಹಣವನ್ನು ನೀಡಬೇಕಾಗುತ್ತದೆ. ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ.
ಕಟಕ ರಾಶಿಯವರ ಆರೋಗ್ಯ ಭವಿಷ್ಯ(Cancer Health Horoscope)
ಇಂದು, ಯಾವುದೇ ಪ್ರಮುಖ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಕೆಲವು ವಯಸ್ಸಾದವರು ತಮ್ಮ ಮೊಣಕಾಲು ನೋವಿನ ಬಗ್ಗೆ ದೂರು ನೀಡಬಹುದು. ರಾತ್ರಿಯಲ್ಲಿ ಚಾಲನೆ ಮಾಡುವ ಅಪಾಯವೂ ಇರಬಹುದು.
ಕಟಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಕಟಕ ರಾಶಿಯ ಅಧಿಪತಿ: ಚಂದ್ರ, ಶುಭ ದಿನಾಂಕಗಳು: 4, 5, 6, 15, 16, 30. ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ಸಂಖ್ಯೆಗಳು: 1, 2, 3, 4, 6, 7, 9. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು. ಶುಭ ದಿಕ್ಕು: ಪೂರ್ವ ಮತ್ತು ಉತ್ತರ. ಶುಭ ತಿಂಗಳು: ಏಪ್ರಿಲ್ 15 ರಿಂದ ಮೇ 14, ಆಗಸ್ಟ್ 15ರಿಂದ ಸೆಪ್ಟೆಂಬರ್ 14. ಶುಭ ಹರಳು: ಮಾಣಿಕ್ಯ, ಹವಳ ಮತ್ತು ಹಳದಿ ಪುಷ್ಯ ರಾಗ. ಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೀನ. ಅಶುಭ ರಾಶಿ: ಕನ್ಯಾ, ಮಕರ, ಕುಂಭ ಮತ್ತು ಮಿಥುನ.
ಕಟಕ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ದಕ್ಷಿಣಾಮೂರ್ತಿ ಸ್ತೋತ್ರ: ಪ್ರತಿದಿನ ದಕ್ಷಿಣಾಮೂರ್ತಿಯ ಸ್ತೋತ್ರ ಪಠಿಸುವುದರಿಂದ ಅಥವ ಕೇಳುವುದರಿಂದ ಆತ್ಮಶಕ್ತಿ ಹೆಚ್ಚುತ್ತದೆ. ವಾಕ್ ಶುದ್ಧಿ ಉಂಟಾಗಲಿದೆ.
2) ಈ ದಾನಗಳಿಂದ ಶುಭ ಫಲ: ಬಂಗಾರದ ಬಣ್ಣದ ಬಟ್ಟೆ ಮತ್ತು ಅಕ್ಕಿಯನ್ನು ದಾನ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮ. ಮನೆಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆ ಮಾಡಬಹುದು. ಗುರುಗಳನ್ನು ಸತ್ಕರಿಸಿದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಬಿಳಿ ಮತ್ತು ಕೆಂಪು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.