logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕರ ರಾಶಿ ಭವಿಷ್ಯ ಆಗಸ್ಟ್‌ 23: ಕೆಲಸದ ನಡುವೆ ವಿರಾಮದ ಅಗತ್ಯವಿದೆ, ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡಿ

ಮಕರ ರಾಶಿ ಭವಿಷ್ಯ ಆಗಸ್ಟ್‌ 23: ಕೆಲಸದ ನಡುವೆ ವಿರಾಮದ ಅಗತ್ಯವಿದೆ, ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡಿ

Suma Gaonkar HT Kannada

Aug 23, 2024 09:02 AM IST

google News

ಮಕರ ರಾಶಿ ಭವಿಷ್ಯ ಆಗಸ್ಟ್‌ 23

    • Capricorn Daily Horoscope July 17, 2024: ರಾಶಿಚಕ್ರಗಳ ಪೈಕಿ 10 ನೇ ಚಿಹ್ನೆ ಮಕರ ರಾಶಿಯದ್ದು. ಜನನದ ಸಮಯದಲ್ಲಿ ಚಂದ್ರನು ಮಕರದಲ್ಲಿ ಸಾಗುತ್ತಿರುವ ಜನರು ಮಕರ ರಾಶಿಯವರು. ಜುಲೈ 17ರ ಮಕರ ರಾಶಿ ಭವಿಷ್ಯ ಪ್ರಕಾರ, ಕೆಲಸದ ನಡುವೆ ವಿರಾಮದ ಅಗತ್ಯವಿದೆ, ನಿಮ್ಮ ಮನಸಿಗೆ ವಿಶ್ರಾಂತಿ ಬೇಕಿದೆ.
ಮಕರ ರಾಶಿ ಭವಿಷ್ಯ ಆಗಸ್ಟ್‌ 23
ಮಕರ ರಾಶಿ ಭವಿಷ್ಯ ಆಗಸ್ಟ್‌ 23

ಮಕರ ರಾಶಿ ದಿನ ಭವಿಷ್ಯ ಆಗಸ್ಟ್‌ 23: ನಿಮ್ಮ ಪ್ರಣಯ ಜೀವನ ಇನ್ನಷ್ಟು ಚೆನ್ನಾಗಿರಬೇಕೆಂದರೆ ನಿಮ್ಮ ನಡುವಿನ ಸಣ್ಣ ಪುಟ್ಟ ಮನಸ್ತಾಪವನ್ನು ಪರಿಹರಿಸಿಕೊಳ್ಳಿ. ಕಚೇರಿಯಲ್ಲಿ ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ಮತ್ತು ಸವಾಲಿನ ಕೆಲಸವನ್ನು ಸಹ ತೆಗೆದುಕೊಳ್ಳಿ. ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮಕರ ರಾಶಿ ಪ್ರೇಮ ಜಾತಕ (Capricorn Love Horoscope): ನೀವು ಸಂಬಂಧದಲ್ಲಿದ್ದರೆ, ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳಿ. ಇದು ನಿಮ್ಮ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಅವಿವಾಹಿತರು ಇಂದು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ನೀವು ನಿಮ್ಮ ಸಂಗಾತಿ ಜೊತೆಗೆ ಹೇಗಿದ್ದೀರಾ ಎನ್ನುವುದರ ಮೇಲೆ ನಿಮ್ಮ ಸಂಗಾತಿಯ ವರ್ತನೆ ಇರುತ್ತದೆ. ಆ ಕಾರಣಕ್ಕಾಗಿ ಆದಷ್ಟು ಹೊಂದಾಣಿಕೆ ಮಾಡಿಕೊಂಡು ಜೀವನ ಮಾಡಿ. ನಿಮ್ಮನ್ನು ಭಾವನಾತ್ಮಕವಾಗಿ ಸಿದ್ಧಪಡಿಸಿಕೊಳ್ಳಲು ಇದೀಗ ಸಮಯ ಬಂದಂತೆ ತೋರುತ್ತದೆ.

ಮಕರ ರಾಶಿ ಉದ್ಯೋಗ ಜಾತಕ (Capricorn Professional Horoscope): ನಿಮ್ಮ ವೃತ್ತಿಯು ಇಂದು ನಿಮ್ಮ ಗಮನವನ್ನು ಬಯಸುತ್ತದೆ. ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸುವುದರತ್ತ ಗಮನಹರಿಸಿ ಹೊಸ ಅವಕಾಶಗಳು ಬರಬಹುದು ಎಂಬ ಒಂದು ಅಂದಾಜು ನಿಮ್ಮಲ್ಲಿರಲಿ. ಹೀಗಿದ್ದರೆ ಮಾತ್ರ ನೀವು ನಿಮ್ಮ ಮುಂದಿನ ಅವಕಾಶಕ್ಕೆ ರೆಡಿ ಆಗಿರಲು ಸಾಧ್ಯ. ಇಲ್ಲವಾದಲ್ಲಿ ಅವಕಾಶ ನಿಮ್ಮ ಕಣ್ಣೆದುರೇ ಇದ್ದರೂ ನೀವದನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ನಿಮ್ಮ ಕೆಲಸದಲ್ಲಿ ಅಗತ್ಯವಾದ ಅಂಶವಾಗಿರುತ್ತದೆ. ಆ ಕಾರಣದಿಂದ ಆಗಾಗ ವಿರಾಮ ತೆಗೆದುಕೊಳ್ಳಿ.

ಮಕರ ರಾಶಿ ಆರ್ಥಿಕ ಭವಿಷ್ಯ (Capricorn Money Horoscope): ಆರ್ಥಿಕವಾಗಿ, ಇಂದು ಎಚ್ಚರಿಕೆಯಿಂದ ಇದ್ದು ಹೊಸ ಯೋಜನೆಯನ್ನು ಆರಂಭಿಸಬೇಕು. ನಿಮ್ಮ ಬಜೆಟ್ ಅನ್ನು ಪರಿಶೀಲಿಸಿ ಮತ್ತು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿ. ದೀರ್ಘಕಾಲೀನ ಹೂಡಿಕೆ ಮತ್ತು ಉಳಿತಾಯದ ಬಗ್ಗೆ ಯೋಚಿಸಿ. ಹೀಗೆ ಮಾಡಿದರೆ ಮಾತ್ರ ನೀವು ಮುಂದಿನ ದಿನದಲ್ಲಿ ಹೆಚ್ಚಿನ ಆದಾಯ ಹೊಂದಲು ಸಾಧ್ಯವಾಗುತ್ತದೆ. ಎಷ್ಟೇ ಹಣ ನಿಮ್ಮ ಬಳಿ ಬಂದರೂ ನೀವು ಅದನ್ನು ಕೂಡಿಟ್ಟಿಲ್ಲ ಎಂದಾದರೆ ಅದು ವ್ಯರ್ಥವೇ ಆಗುತ್ತದೆ. ಆರ್ಥಿಕ ಭದ್ರತೆಯನ್ನು ನಿರ್ಮಿಸುವತ್ತ ಗಮನಹರಿಸಿ. ಪ್ರಮುಖ ಹಣಕಾಸಿನ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ.

ಮಕರ ರಾಶಿ ಆರೋಗ್ಯ ಭವಿಷ್ಯ (Capricorn Health Horoscope): ನಿಮ್ಮ ಆರೋಗ್ಯಕ್ಕೆ ಇಂದು ಗಮನ ಬೇಕು, ವಿಶೇಷವಾಗಿ ನಿಮ್ಮ ಮಾನಸಿಕ ಯೋಗಕ್ಷೇಮ. ಧ್ಯಾನ ಅಥವಾ ಪ್ರಕೃತಿಯಲ್ಲಿ ನಡಿಗೆಯಂತಹ ವಿಶ್ರಾಂತಿ ನಿಮ್ಮ ದೇಹ ಹಾಗೂ ಮನಸು ಎರಡಕ್ಕೂ ಬೇಕಾಗಿದೆ. ಆದಷ್ಟು ವಿರಾಮವನ್ನು ತೆಗೆದುಕೊಳ್ಳಿ. ದೇಹದ ಆರೈಕೆಯನ್ನು ಮಾಡಿಕೊಳ್ಳಿ. ದಿನನಿತ್ಯ ನಿಮ್ಮ ಆರೋಗ್ಯದ ಬಗ್ಗೆ ನೀವೇ ಕಾಳಜಿಮಾಡಿಕೊಳ್ಳುವ ಒಂದು ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಆರೋಗ್ಯಕ್ಕೆ ಅನುಕೂಲ ಆಗುತ್ತದೆ.

ಮಕರ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಮಕರ ರಾಶಿಯ ಅಧಿಪತಿ: ಶನಿ, ಮಕರ ರಾಶಿಯವರಿಗೆ ಶುಭ ದಿನಾಂಕಗಳು: 6, 8 ಮತ್ತು 9. ಮಕರ ರಾಶಿಯವರಿಗೆ ಶುಭ ವಾರಗಳು: ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ. ಮಕರ ರಾಶಿಯವರಿಗೆ ಶುಭ ವರ್ಣ: ನೀಲಿ, ಬಿಳಿ ಮತ್ತು ಕೆಂಪು. ಮಕರ ರಾಶಿಯವರಿಗೆ ಅಶುಭ ವರ್ಣ: ಹಳದಿ ಮತ್ತು ಬಾದಾಮಿ ಬಣ್ಣ. ಮಕರ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ. ಮಕರ ರಾಶಿಯವರಿಗೆ ಶುಭ ತಿಂಗಳು: ಸೆಪ್ಟೆಂಬರ್ 15ರಿಂದ ಅಕ್ಟೋಬರ್ 14. ಮಕರ ರಾಶಿಯವರಿಗೆ ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ. ಮಕರ ರಾಶಿಯವರಿಗೆ ಹೊಂದಾಣಿಕೆ ಇರುವ ರಾಶಿ: ಕುಂಭ, ವೃಷಭ ಮತ್ತು ಕನ್ಯಾ. ಮಕರ ರಾಶಿಯವರಿಗೆ ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ, ಸಿಂಹ ಮತ್ತು ಧನು.

ಮಕರ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು

1) ಮಹಾ ಮೃತ್ಯುಂಜಯ ಮಂತ್ರ: ಪ್ರತಿದಿನ ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.

2) ಈ ದಾನಗಳಿಂದ ಶುಭ ಫಲ: ಕಡಲೆ ಬೇಳೆ ಮತ್ತು ಹಳದಿ ವಸ್ತ್ರವನ್ನು ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ.

3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ವಿಷ್ಣು ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ. ದಂಪತಿ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ