ಈ ದೇವಿಗೆ ಪೂಜಿಸಿದರೆ ಅವಿವಾಹಿತರಿಗೆ ವಿವಾಹ ಭಾಗ್ಯ ಗ್ಯಾರಂಟಿ; ಡಾಬಸ್ ಪೇಟೆ ಸಮೀಪದ ಶಿವಗಂಗೆ ದೇವಾಲಯದ ಮಹತ್ವ ತಿಳಿಯಿರಿ
Aug 29, 2024 09:26 AM IST
ಡಾಬಸ್ ಪೇಟೆ ಸಮೀಪದಲ್ಲಿರುವ ಶಿವಗಂಗೆ ದೇವಾಲಯ.
- Shivagange Temple in Dabaspet: ಜನರ ಸಂಕಷ್ಟಗಳನ್ನು ಈಡೇರಿಸುವ ಮೂಲಕ ಕೆಲವೊಂದು ದೇವಾಲಯಗಳು ತುಂಬಾ ಜನಪ್ರಿಯವಾಗಿರುತ್ತವೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆ ಸಮೀಪದಲ್ಲಿರುವ ಶಿವಗಂಗೆ ದೇವಾಲಯೂ ಒಂದು. ಇಲ್ಲಿನ ದೇವಿ ನೀಡುವ ವರಗಳು ಮತ್ತು ಮಹತ್ವವನ್ನು ತಿಳಿಯಿರಿ.
ಬೆಂಗಳೂರು: ಒಂದೊಂದು ಕಡೆ ಒಂದೊಂದು ದೇವಾಲಯ ತನ್ನದೇ ಆದ ಮಹಿಮೆ, ಮಹತ್ವವನ್ನು ಹೊಂದಿರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆ ಸಮೀಪದಲ್ಲಿರುವ ಶಿವಗಂಗೆಯ ದೇವಾಲಯ (Shivagange Temple in Dabaspet) ವಿಸ್ಮಯ ಮತ್ತು ಅಗಾಧ ಶಕ್ತಿಯಾಗಿದೆ. ಈ ದೇವಾಲಯಕ್ಕೆ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ. ಅದರಲ್ಲೂ ವಿಶೇಷವಾಗಿ ಅವಿವಾಹಿತಕರು ದೇವಿಗೆ ಪೂಜೆ ಮಾಡಿದರೆ ಶೀಘ್ರದಲ್ಲೇ ಮದುವೆಯ ಭಾಗ್ಯ ಸಿಗುತ್ತದೆ, ಕುಟುಂಬದಲ್ಲಿನ ಸಮಸ್ಯೆಗಳು ದೂರವಾಗಿ ಸಂತೋಷವಾಗಿರು ಬದುಕುತ್ತಾರೆ. ಹೀಗೆ ಹಲವಾರು ವರಗಳು, ಆಶೀರ್ವಾದವನ್ನು ದೇವಿ ನೀಡುತ್ತಾಳೆ ಎಂಬ ನಂಬಿಕೆ ಭಕ್ತರು. ಈ ದೇವಾಲಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ತಾಜಾ ಫೋಟೊಗಳು
ಶಿವಗಂಗೆಯು 4,488 ಅಡಿ ಎತ್ತರವಿರುವ ಪರ್ವತ ಶಿಖರವಾಗಿದೆ. ರಸ್ತೆಯ ಬದಿಯಿಂದ ನೋಡಿದಲ್ಲಿ, ಒಂದು ಭಾಗದಿಂದ ನಂದಿ, ಇನ್ನೊಂದು ಭಾಗದಿಂದ ಶಿವಲಿಂಗ ಮತ್ತು ಮತ್ತೊಂದು ಭಾಗದಿಂದ ಗಣಪತಿಯಂತೆ ಕಾಣುವುದು ಇಲ್ಲಿನ ವಿಶೇಷ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ ಪೇಟೆಯ ಬಳಿಯ ಈ ಪರ್ವತ ಸುಪ್ರಸಿದ್ದ ತೀರ್ಥಯಾತ್ರಾ ಕೇಂದ್ರವಾಗಿದೆ. ಇಲ್ಲಿ ಅಂತರ್‌ಗಂಗೆ ಎಂಬ ಚಿಲುಮೆಯು ಹರಿಯುತ್ತದೆ. ಇದರಿಂದಾಗಿ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ. ಇದನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ಇಲ್ಲಿ ಗಂಗಾಧರೇಶ್ವರ ದೇವಸ್ಥಾನ, ಶ್ರೀ ಹೊನ್ನಮ್ಮದೇವಿ ದೇವಸ್ಥಾನ, ಒಳಕಲ್ ತೀರ್ಥ, ನಂದಿ ಪ್ರತಿಮೆ, ಪಾತಾಳಗಂಗೆ ಶಾರದಾಂಬೆ ದೇವಸ್ಥಾನ ಮತ್ತು ಅಗಸ್ತ್ಯ ತೀರ್ಥ, ಕಣ್ವ ತೀರ್ಥ, ಕಪಿಲ ತೀರ್ಥ, ಇನ್ನೂ ಮುಂತಾದ ಹಲವಾರು ತೀರ್ಥಗಳು ಇವೆ.
ಹೊನ್ನಮ್ಮದೇವಿ ಮತ್ತು ಗವಿ ಗಂಗಾಧರೆ ದೇವಸ್ಥಾನವು ಗುಹೆಯೊಳಗೆ ಇದೆ. ಆದ್ದರಿಂದ ಇದನ್ನು ಗವಿಗಂಗಾದರೇಶ್ವರ ಎಂದೂ ಕರೆಯುತ್ತಾರೆ. ಪ್ರತಿ ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಗಂಗಾಧರೇಶ್ವರ ಮತ್ತು ಹೊನ್ನಮ್ಮದೇವಿಯ ವಿವಾಹ ಮಹೋತ್ಸವವನ್ನು ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ಬೆಟ್ಟದ ತುದಿಯಲ್ಲಿರುವ ಬಂಡೆಯಿಂದ ಗಂಗಾ ಪವಿತ್ರ ನೀರು ಬರುತ್ತದೆ. ಇದೇ ನೀರನ್ನು ಧಾರ್ಮಿಕ ಆಚರಣೆ ಮತ್ತು ಮದುವೆಯ ಕಾರ್ಯಕ್ಕೆ ಮಾಡಲು ಬಳಸಲಾಗುತ್ತದೆ.
ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದವರೆಗೆ ರಹಸ್ಯ ಸುರಂಗ
ಶಿವಲಿಂಗದ ಮೇಲೆ ತುಪ್ಪದಿಂದ ಅಭಿಷೇಕವನ್ನು ಮಾಡಿದಾಗ, ತುಪ್ಪ ಬೆಣ್ಣೆಯಾಗಿ ಮಾರ್ಪಟ್ಟಾಗುವ ಪವಾಡವನ್ನು ಇಂದಿಗೂ ಕಣ್ಣಾರೆ ಕಾಣಬಹುದು. ಈ ತುಪ್ಪವು ಔಷಧೀಯ ಶಕ್ತಿಯನ್ನು ಹೊಂದಿದೆ. ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ತಿಳಿದುಬರುತ್ತದೆ. ಇಲ್ಲಿನ ದೇವಾಲಯದ ಗರ್ಭಗುಡಿಯಿಂದ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದವರೆಗೆ ರಹಸ್ಯ ಸುರಂಗದ ಮೂಲಕ ಬರಬಹುದಾಗಿದೆ.
ಕುಮುದ್ವತಿ ನದಿಯ ಮೂಲವು ಶಿವಗಂಗೆ ಬೆಟ್ಟಗಳಲ್ಲಿ ಇರುವುದು ಕಂಡುಬರುತ್ತದೆ. ಇದು ಅರ್ಕಾವತಿ ನದಿಯ ಉಪನದಿಯಾಗಿದೆ. ಕುಮುದ್ವತಿ ನದಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಕೆಲವು ಭಾಗ ಮತ್ತು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಹರಿಯುತ್ತದೆ. ಇಲ್ಲಿ ವಿಫಲವಾದ ಅರಣ್ಯ ಅಂತರ್ಜಲವಿದೆ. ಇಲ್ಲಿ ಹರಿವ ನೀರಿನಲ್ಲಿ ಸ್ನಾನ ಮಾಡಿದಲ್ಲಿ ಚರ್ಮದೋಷವು ನಿವಾರಣೆ ಆಗುತ್ತದೆ. ಈ ಸ್ಥಳದಲ್ಲಿ ನಡೆಯುವ ಕಲ್ಯಾಣೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡಲ್ಲಿ ಅವಿವಾಹಿತರಿಗೆ ವಿವಾಹವಾಗುತ್ತದೆ. ಅಮಾವಾಸ್ಯೆಯ ದಿನ ಮತ್ತು 16 ಸೋಮವಾರದಂದು ಶಿವ ಪಾರ್ವತಿಗೆ ಪೂಜೆಯನ್ನು ಮಾಡಿದಲ್ಲಿ ಕುಟುಂಬದಲ್ಲಿ ಇರುವ ಮನಸ್ತಾಪವು ದೂರವಾಗಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಿ ಸುಖಜೀವನ ನಡೆಸಬಹದು.
ಮಕ್ಕಳಿಗೆ ಸಂಬಂಧಿಸಿದ ದಂತಕತೆಯೊಂದು ಕೇಳಿ ಬರುತ್ತದೆ. ಅದರ ಅನ್ವಯ ಶಿವ ಪಾರ್ವತಿಯರಲ್ಲಿ ನಂಬಿಕೆ ಇಟ್ಟಿದ್ದ ದಂಪತಿ ಆ ಪರ್ವತದ ಶಿಖರದ ಆಸು ಪಾಸಿನಲ್ಲಿ ವಾಸವಿರುತ್ತಾರೆ. ಅವರಿಗೆ ಒಬ್ಬ ಮುದ್ದಾದ ಮಗನಿರುತ್ತಾನೆ. ವಯಸ್ಸು ಚಿಕ್ಕದಾದರೂ ಸಹ ತಂದೆ ತಾಯಿಯ ಪ್ರೀತಿ ಅಧಿಕವಾದ ಕಾರಣ ನಯ ವಿನಯವಿಲ್ಲದೆ ಬೆಳೆದಿರುತ್ತಾನೆ. ಇವನಲ್ಲಿ ಇರುವ ಕೆಟ್ಟ ಹವ್ಯಾಸಗಳು ಏನೇ ಆದರೂ ಶಿವ ಪಾರ್ವತಿಯಲ್ಲಿ ಅತಿಯಾದ ಭಕ್ತಿಯನ್ನು ಹೊಂದಿರುತ್ತಾನೆ.
ಮಗನ ಬಗ್ಗೆ ಯೋಚನೆಗೀಡಾದ ದಂಪತಿ ಹದಿನಾರು ಸೋಮವಾರಗಳನ್ನು ಶಿವ ಪಾರ್ವತಿಯರ ಪೂಜೆಯನ್ನು ಮಾಡಿ ಗೋದಿ ಹಿಟ್ಟಿನಿಂದ ತಯಾರಿಸಿದ ಸಿಹಿ ತಿಂಡಿಯನ್ನು ಪ್ರತಿ ಸೋಮವಾರವು ದೇವರಿಗೆ ಅರ್ಪಿಸುತ್ತಾ ಇರುತ್ತಾರೆ. ಆದರೆ ಒಂದು ಸೋಮವಾರ ಮಗನಿಗೆ ಹಸಿವೆ ಆಗುತ್ತದೆ. ಆದ್ದರಿಂದ ಪೂಜೆಗೆ ಮುನ್ನವೇ ಪ್ರಸಾದಕ್ಕೆಂದು ತಯಾರಿಸಿದ ಸಿಹಿಪದಾರ್ಥವನ್ನು ಸೇವಿಸುತ್ತಾನೆ. ಪಾತ್ರೆಯನ್ನು ಬರಿದು ಮಾಡುತ್ತಾನೆ. ಆದರೆ ದಂಪತಿಗಳು ಬಂದು ನೋಡಿದಾಗ ಪ್ರಸಾದಕ್ಕೆಂದು ಮಾಡಿದ ಪದಾರ್ಥವು ಸಂಪೂರ್ಣ ಇರುತ್ತದೆ. ಅಲ್ಲದೆ ಅಚಾನಕ್ ಆಗಿ ಮಗನಲ್ಲಿ ಇದ್ದ ಕೆಟ್ಟ ಅಭ್ಯಾಸಗಳು ದೂರವಾಗಿ ಒಳ್ಳೆಯ ಹಾದಿಯಲ್ಲಿ ಬೆಳೆಯುತ್ತಾನೆ. ಇದರಿಂದ ಇಲ್ಲಿ ಪೂಜೆ ಸಲ್ಲಿಸಿದಲ್ಲಿ ಕುಟುಂಬದಲ್ಲಿ ಒಮ್ಮತ ಮೂಡುತ್ತದೆ ಎಂದು ತಿಳಿಯಬಹುದು.