logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ganesha Chaturthi: ಪ್ರತಿ ವರ್ಷ ಗಣೇಶ ಚತುರ್ಥಿ ಯಾಕೆ ಆಚರಿಸುತ್ತಾರೆ? ಇದರ ಹಿಂದಿರುವ ಕಾರಣ ತಿಳಿಯಿರಿ

Ganesha Chaturthi: ಪ್ರತಿ ವರ್ಷ ಗಣೇಶ ಚತುರ್ಥಿ ಯಾಕೆ ಆಚರಿಸುತ್ತಾರೆ? ಇದರ ಹಿಂದಿರುವ ಕಾರಣ ತಿಳಿಯಿರಿ

Raghavendra M Y HT Kannada

Sep 06, 2024 01:33 PM IST

google News

ಪ್ರತಿ ವರ್ಷ ಗಣೇಶ ಚತುರ್ಥಿ ಯಾಕೆ ಆಚರಿಸುತ್ತಾರೆ? ಇದರ ಹಿಂದಿರುವ ಕಾರಣ ತಿಳಿಯಿರಿ

    • ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲೆಡೆ ಗಣೇಶ ಉತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯನ್ನು ಯಾಕೆ ಆಚರಿಸುತ್ತೇವೆ, ಇದರ ಹಿಂದಿರುವ ಕಥೆಯ ಬಗ್ಗೆ ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ವಿವರಿಸಿದ್ದಾರೆ.
ಪ್ರತಿ ವರ್ಷ ಗಣೇಶ ಚತುರ್ಥಿ ಯಾಕೆ ಆಚರಿಸುತ್ತಾರೆ? ಇದರ ಹಿಂದಿರುವ ಕಾರಣ ತಿಳಿಯಿರಿ
ಪ್ರತಿ ವರ್ಷ ಗಣೇಶ ಚತುರ್ಥಿ ಯಾಕೆ ಆಚರಿಸುತ್ತಾರೆ? ಇದರ ಹಿಂದಿರುವ ಕಾರಣ ತಿಳಿಯಿರಿ

Ganesha Chaturthi 2024: ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದ್ದು, ವಿನಾಯ ಮೂರ್ತಿ ಪ್ರತಿಷ್ಠಾಪನೆಗೆ ಅಂತಿಮ ಹಂತದ ಸಿದ್ಧತೆಗಳನ್ನು ನಡೆಯುತ್ತಿವೆ. ಕೆಲವೆಡೆ ಮಾರುಕಟ್ಟೆಯಿಂದ ಮನೆ, ಮಂಟಪಗಳಿಗೆ ಗಣಪತಿ ಬಂದಾಗಿದೆ. ಪ್ರತಿಷ್ಠಾಪನೆಗೆ ಅಲಂಕಾರ ಸೇರಿದಂತೆ ಮತ್ತಿತರ ಸಿದ್ಧತೆಗಳು ನಡೆಯುತ್ತಿವೆ. ಹಬ್ಬದ ಸಂಭ್ರಮದ ಜೊತೆ ಜೊತೆಗೆ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ, ಮಹತ್ವವನ್ನು ತಿಳಿಯಬೇಕು. ಈ ಬಗ್ಗೆ ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ವಿವರಿಸಿದ್ದಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಯಾವುದೇ ರೀತಿಯ ಶುಭ-ಸಮಾರಂಭಗಳನ್ನು ಆಚರಿಸುವ ಮೊದಲು ಗಣೇಶನಿಗೆ ಪೂಜೆಯನ್ನು ಮಾಡಲಾಗುತ್ತದೆ. ಸ್ವಾಮಿಯ ಮುಂದೆ ಕುಳಿತು ಪ್ರಾರ್ಥಿಸಬೇಕು. ಎಲ್ಲರೂ ಸಂಪೂರ್ಣವಾಗಿ ಗಮನಹರಿಸಬೇಕು. 'ಗಣಪತಿ ದೇವರು ನಮಗೆ ಸಮಸ್ಯೆಗಳನ್ನು ನಿವಾರಿಸುವವನಾಗಿದ್ದಾನೆ, ಅವನೇ ನಿಜವಾದವನು. ‘ಏಕದಂತ ಗಣಸ್ತ ಶಿವಗೌರಿ ತನಯ ಶರಣು ಗಣೇಶ’ ಎಂದು ವೈಭವೀಕರಿಸಲಾಗುತ್ತೆ. ಓ ಭಕ್ತ! ಓ ಸೌಂದರ್ಯ! ಓ ಧನ್ಯ! ಓ ದೇವರೇ! ಜಗತ್ತಿಗೆ ಒಳ್ಳೆಯದಾಗಲಿ!' ಭಕ್ತಲೋಕ ಮನೋಮಂದಿರಂ ಎಂದು ಪ್ರಾರ್ಥಿಸುತ್ತೇನೆ.

ಗಣೇಶ ಚತುರ್ಥಿಯು ಆಚರಣೆಯ ಉತ್ಸಾಹದ ಜೊತೆಗೆ ಸಾಂಪ್ರದಾಯಿಕ, ಸಾಂಸ್ಕೃತಿಕ ಮತ್ತು ಏಕತೆಯ ಅಂಶಗಳಿಂದ ಕೂಡಿದೆ. ಮನೆಗಳು, ಬೀದಿಗಳು ಮತ್ತು ಹಳ್ಳಿಗಳು ಭಕ್ತಿಯಿಂದ ತುಂಬಿರುತ್ತವೆ. ಆನಂದಮಯ ವಾತಾವರಣ ಎದ್ದು ಕಾಣುತ್ತೆ. ಕವಿತೆಗಳು, ಹಾಡುಗಳು, ಸ್ತೋತ್ರಗಳು, ಭಜನೆಗಳು, ನೃತ್ಯ ಸಂಗೀತವು ಹೀಗೆ ಗಣೇಶ ಉತ್ಸವ ಸಮಯದಲ್ಲಿ ಭಕ್ತಿ ಪರಾಕಾಷ್ಠೆಯ ಎಲ್ಲವನ್ನು ಕಾಣಬಹುದು.

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಮಹತ್ವ

ಒಮ್ಮೆ ಪಾರ್ವತಿ ಸ್ನಾನಕ್ಕೆ ಹೋಗುವ ಮುನ್ನ ಸ್ನಾನಕ್ಕೆ ಹೋಗುವ ಮುನ್ನ ಒಂದು ಗೊಂಬೆಯನ್ನು ಮಾಡಿ ಅದಕ್ಕೆ ಜೀವವನ್ನು ಕೊಡುತ್ತಾಳೆ. ನಂತರ ಆ ಹುಡುಗನನ್ನು ಕಾವಲುಗಾರನನ್ನಾಗಿ ಇಟ್ಟು ತಾನು ಸ್ನಾನ ಮಾಡಿ ಬರುವವರೆಗೆ ಯಾರನ್ನೂ ಒಳಗೆ ಬಿಡಬೇಡ ಅಂತ ಹೇಳಿ ಒಳಗೆ ಹೋಗುತ್ತಾನೆ. ಅದಂತೆ ಕಾವಲುಗಾರ ಹುಡುಗು ಮನೆಯೊಳಗೆ ಯಾರನ್ನೂ ಬಿಡುವುದಿಲ್ಲ. ಅದೇ ಸಂದರ್ಭದಲ್ಲಿ ಶಿವನು ಬಂದು ಮನೆಯೊಳಗೆ ಹೋಗಲು ಮುಂದಾಗುತ್ತಾನೆ. ಆದರೆ ಕಾವಲುಗಾರ ಹುಡುಗು ಶಿವನಿಗೂ ಒಳಗಡೆ ಹೋಗಲು ಪ್ರವೇಶ ನೀಡುವುದಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆಯೇ ಮಾತಿನ ಜಟಾಪಟಿ ನಡೆಯುತ್ತೆ. ಇದರಿಂದ ಕೋಪಗೊಂಡು ಶಿವ ತನ್ನ ತ್ರಿಶೂಲದಿಂದ ಹುಡುಗನ ತಲೆಯನ್ನು ಕಡಿಯುತ್ತಾನೆ.

ಸ್ನಾನ ಮುಗಿಸಿ ಬಂದ ಪಾರ್ವತಿ ಹುಡುಗ ತಲೆ ಕಡಿದಿರುವುದನ್ನು ಕಂಡ ಗೋಳಾಡುತ್ತಾಳೆ. ಈಕೆಯನ್ನು ಸಮಾಧಾನ ಮಾಡುವ ಸಲುವಾಗಿ ಶಿವನು ಉತ್ತರ ದಿಕ್ಕಿಗೆ ತಲೆಹಾಕಿ ಮಲಗಿರುವ ವ್ಯಕ್ತಿಯ ತಲೆಯನ್ನು ಕಡಿದು ತನ್ನ ಎಂದು ತನ್ನ ಬೆಂಬಲಿಗರಿಗೆ ಆದೇಶಿಸುತ್ತಾನೆ. ಅದರಂತೆ ಉತ್ತರಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ತಲೆಯನ್ನು ಕಡಿದು ತರುತ್ತಾರೆ. ಹುಡುಗನಿಗೆ ಆನೆಯ ತಲೆಯನ್ನು ಜೋಡಿಸಿ ಜೀವವನ್ನು ನೀಡಲಾಗುತ್ತದೆ. ನಂತರ ಈಶ್ವರನ ಸೂಚನೆಯಂತೆ ಎಲ್ಲಾ ದೇವತೆಗಳು ಗಣಪತಿಯನ್ನು ಪೂಜಿಸುತ್ತಾರೆ.

ಪ್ರತಿ ವರ್ಷ ಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಈ ವರ್ಷ 2024ರ ಸೆಪ್ಟೆಂಬರ್ 7 ರಂದು (ಶನಿವಾರ) ಗಣೇಶ ಉತ್ಸವ ಆರಂಭವಾಗುತ್ತಿದೆ. ಒಟ್ಟು 10 ದಿನಗಳ ಅದ್ಧೂರಿ ಉತ್ಸವ ಬಳಿಕ ನಿಮಜ್ಜನ ಮಾಡಲಾಗುತ್ತದೆ.

ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ -94949 81000
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ