logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ganesha Decoration: ಗಣೇಶ ಚತುರ್ಥಿಗೆ ನಿಮ್ಮ ಮನೆ, ದೇವಸ್ಥಾನದ ಅಲಂಕಾರ ಹೇಗಿರಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್

Ganesha Decoration: ಗಣೇಶ ಚತುರ್ಥಿಗೆ ನಿಮ್ಮ ಮನೆ, ದೇವಸ್ಥಾನದ ಅಲಂಕಾರ ಹೇಗಿರಬೇಕು? ಇಲ್ಲಿವೆ ಸಿಂಪಲ್ ಟಿಪ್ಸ್

Raghavendra M Y HT Kannada

Aug 30, 2024 12:26 PM IST

google News

ಗಣೇಶ ಚತುರ್ಥಿಗೆ ನಿಮಗೆ ಯಾವ ರೀತಿಯ ಡಿಕೋರೇಷನ್ ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಿ. ಅಲಂಕಾರ ಮಾಡುವ ವಿಧಾನವನ್ನು ತಿಳಿಯಿರಿ.

    • ಗಣೇಶ ಉತ್ಸವಕ್ಕೆ ಡೆಕೋರೇಷನ್ ಹೇಗಿರಬೇಕು ಅಂತ ನಿಮ್ಮ ತಲೆಯಲ್ಲಿ ನಾನಾ ರೀತಿಯ ಐಡಿಯಾಗಳು  ಬಂದು ಹೋಗುತ್ತಿರುತ್ತವೆ. ನಿಮ್ಮ ಐಡಿಯಾಗಳಿಗೆ ನೆರವಾಗಲೆಂದು ನಾವು ಒಂದಿಷ್ಟು ಟಿಪ್ಸ್‌ಗಳನ್ನು ಇಲ್ಲಿ ನೀಡಿದ್ದೇವೆ. ಈ ರೀತಿ ಮಾಡಿದರೆ ಗಣೇಶ ಪ್ರತಿಷ್ಠಾನೆಯ ಅಂದ ಹೆಚ್ಚಾಗುತ್ತದೆ.
ಗಣೇಶ ಚತುರ್ಥಿಗೆ ನಿಮಗೆ ಯಾವ ರೀತಿಯ ಡಿಕೋರೇಷನ್ ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಿ. ಅಲಂಕಾರ ಮಾಡುವ ವಿಧಾನವನ್ನು ತಿಳಿಯಿರಿ.
ಗಣೇಶ ಚತುರ್ಥಿಗೆ ನಿಮಗೆ ಯಾವ ರೀತಿಯ ಡಿಕೋರೇಷನ್ ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಿ. ಅಲಂಕಾರ ಮಾಡುವ ವಿಧಾನವನ್ನು ತಿಳಿಯಿರಿ.

ಬೆಂಗಳೂರು: ಗಣೇಶ ಚತುರ್ಥಿಗೆ ಇನ್ನ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಡೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಮಾರುಕಟ್ಟೆಗೆ ಗಣೇಶ ಮೂರ್ತಿಗಳು ಬಂದಾಗಿದೆ. ಮಂಡಳಿಗಳು, ಸಂಘಟನೆಗಳು, ಯುವಕ ಸಂಘಗಳ ಸದಸ್ಯರು ಈಗಾಗಲೇ ಮಾರುಕಟ್ಟೆಗೆ ಹೋಗಿ ತಾವು ಪ್ರತಿಷ್ಠಾನೆ ಮಾಡುವ ಗಣೇಶ ಮೂರ್ತಿ ಹೇಗಿರಬೇಕು ಎಂದು ನೋಡಿಕೊಂಡು ಬಂದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಅಲಂಕಾರ ಹೇಗಿರಬೇಕು ಎಂಬ ಲೆಕ್ಕಾಚಾರಗಳು, ಪ್ಲಾನ್‌ಗಳು ಕೂಡ ಮಾಡಿಕೊಂಡಿದ್ದಾರೆ. ಕೆಲವರು ಮನೆಯಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡುತ್ತಾರೆ. ಇದಕ್ಕಾಗಿ ಸಣ್ಣ ಮಟ್ಟದ ಸಿದ್ಧತೆಗಳು ನಡೆದಿರುತ್ತವೆ. ಅದು ಮನೆಯೇ ಇರಲಿ, ಸಾರ್ವಜನಿಕ ಸ್ಥಳವೇ ಆಗಿರಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವೇದಿಕೆಯ ಡೆಕೋರೇಷನ್ ಹೇಗಿರಬೇಕು ಅನ್ನೋದನ್ನು ಇಲ್ಲಿ ತಿಳಿಯಿರಿ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

2024 ರ ಸೆಪ್ಟೆಂಬರ್ 7 ರಂದು ದೇಶಾದ್ಯಂತ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಅಂದು ವಿನಾಯಕನನ್ನು ಸ್ವಾಗತಿಸಲು ಭಕ್ತ ಸಮೂಹ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಸಮಯದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಸ್ಥಳವನ್ನು ಬಜೆಟ್ ಅಧಾರದ ಮೇಲೆ ಅಲಂಕರಿಸಲಾಗುತ್ತದೆ. ನೀವೇನಾದರೂ ಕಡಿಮೆ ಬಜೆಟ್‌ನಲ್ಲಿ ಸ್ವಲ್ಪ ನೋಡೊಕೆ ಚೆನ್ನಾಗಿರಬೇಕು ಅಂತ ಅಂದುಕೊಂಡಿದ್ದರೆ ನೀವು ಈ ಸಿಂಪಲ್ ಡೆಕೋರೇಷನ್‌ಗಳನ್ನು ಪ್ರಯತ್ನಿಸಬಹುದು.

ಸರಳ ಅಲಂಕಾರ 1: ಮೊದಲಿಗೆ ಒಂದು ಸಣ್ಣ ಟೇಬಲ್ ಸಿದ್ಧಮಾಡಿಕೊಳ್ಳಿ. ಆ ಟೇಬಲ್ ಮೇಲೆ ಬಿಳಿ ಬಣ್ಣದ ಪಂಚೆಯನ್ನು ಹಾಕಿ ಅದರ ಮೇಲೆ ಗಣೇಶ ಮೂರ್ತಿಯನ್ನು ಕೂರಿಸಿ. ನಂತರ ಹಿಂಭಾಗದ ಅಲಂಕಾರಕ್ಕಾಗಿ ಕೆಂಪು ಅಥವಾ ಕೇಸರಿ ಬಣ್ಣ ಸೀರಿಯನ್ನು ತೆಗೆದುಕೊಂಡು ತ್ರಿಭುಜದ ಆಕಾರದಲ್ಲಿ ಇಳಿಬಿಡಿ ಮೇಲಿನ ತುದಿಯಲ್ಲಿ ದಾರದಿಂದ ಕಟ್ಟಿ. ಸೀರೆಯ ಸುತ್ತಲೂ ಲೈಟಿಂಗ್ ಬಿಡಿ. ಗಣಪತಿ ಮೂರ್ತಿಯ ಎರಡು ಬದಿಗಳಲ್ಲಿ ಕಮಲದ ಹೂಗಳನ್ನು ಇಟ್ಟರೆ ಅಂದ ಮತ್ತಷ್ಟು ಹೆಚ್ಚಾಗುತ್ತದೆ.

ಸರಳ ಅಲಂಕಾರ 2: ಮೂರೂವರೆಯಿಂದ ನಾಲ್ಕು ಅಡಿ ಎತ್ತರದ ಟೇಬಲ್ ರೆಡಿ ಮಾಡಿಕೊಳ್ಳಿ. ಟೇಬಲ್ ಮೇಲೆ ಹಾಕಲು ಒಂದು ಬಿಳಿ ಬಣ್ಣದ ಬಟ್ಟೆಯನ್ನು ಸಿದ್ಧಮಾಡಿಕೊಳ್ಳಿ. ಆ ಟೇಬಲ್ ಕಾಣದಂತೆ ಅದರ ಮೇಲೆ ಮತ್ತು ಸುತ್ತಲೂ ಇಳಿ ಬರುವಂತೆ ಬಳಿ ಬಣ್ಣದ ಬಟ್ಟೆಯನ್ನು ಹಾಕಿ. ಅದರ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ. ಇನ್ನ ಹಿಂಭಾಗದ ಅಲಂಕಾರಕ್ಕಾಗಿ ಬಿಳಿ ಬಣ್ಣದ ದೊಡ್ಡ ಬಟ್ಟೆಯನ್ನು ಸಿದ್ಧಮಾಡಿಕೊಳ್ಳಿ. ಒಂದು ದಾರವನ್ನು ಎರಡೂ ಬದಿಗಳಿಗೆ ಕಟ್ಟಿ. ನಂತರ ಕಟ್ಟಿರುವ ದಾರಕ್ಕೆ ಬಿಳಿ ಬಟ್ಟೆಯನ್ನು ಇಳಿ ಬಿಡಿ. ಈ ಬಗ್ಗೆ ಅಲ್ಲಲ್ಲಿ ಹೂವುಗಳನ್ನು ಅಂಟಿಸಬಹುದು. ನಂತರ ಎರಡು ಹಳದಿ ಬಣ್ಣದ ಬಟ್ಟೆ ಅಥವಾ ಸೀರೆಗಳನ್ನು ತೆಗೆದುಕೊಂಡು ಎಡ ಮತ್ತು ಬಲಗಡೆ ಕೊನೆಯಲ್ಲಿ ಇಳಿ ಬಿಡಿ. ನಂತರ ಅದೇ ಹಳದಿ ಬಣ್ಣದ ಬಟ್ಟೆಯನ್ನು ಮಧ್ಯಕ್ಕೆ ಎಳೆದು ಕೊನೆಗೆ ಕಟ್ಟಿ. ಇದಕ್ಕೆ ಚೆಂಡು ಹೂವುಗಳ ಹಾರವನ್ನು ಇಳಿ ಬಿಟ್ಟರೆ ನೋಡಲು ತುಂಬಾ ಚೆನ್ನಾಗಿ ಕಾಣುತ್ತದೆ.

ಸರಳ ಅಂಲಕಾರ 3: ಸಣ್ಣ ಟೇಬಲ್ ಮೇಲೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬ್ಯಾಗ್ರೌಂಡ್ ಡೆಕೋರೇಷನ್‌ಗಾಗಿ ಹಿಂಭಾಗದಲ್ಲಿ ಒಂದು ಹಳದಿ ಬಟ್ಟೆಯನ್ನು ಕಟ್ಟಿ. ಅದಕ್ಕೆ ಚೆಂಡು ಹೂವಿನ ಹಾರಗಳನ್ನು 2 ಅಡಿಗಳ ಅಂತರದಲ್ಲಿ 1 ಬಾರ್ ಹೂವುಗಳನ್ನು ಇಳಿ ಬಿಡಬೇಕು. ಮಧ್ಯದಲ್ಲಿ ಇತರೆ ಬಣ್ಣದ ಹೂವುಗಳನ್ನು ಅಂಟಿಸಬಹುದು. ವೀಳ್ಯದೆಲೆ ಅಂಟಿಸಿದರೂ ಅಂಲಕಾರ ಹೆಚ್ಟಾಗುತ್ತೆ.

ಸರಳ ಅಂಲಕಾರ 4: ಮೂರೂವರೆಯಿಂದ ನಾಲ್ಕು ಅಡಿ ಎತ್ತರದ ಟೇಬಲ್ ರೆಡಿ ಮಾಡಿಕೊಳ್ಳಿ. ಅದರ ಮೇಲೆ ಒಂದು ಬಿಳಿ ಬಟ್ಟೆಯನ್ನು ಹಾಸಿ, ಹಿಂಭಾಗದ ಅಲಂಕಾರಕ್ಕಾಗಿ ಒಂದಷ್ಟು ಬಾಳೆ ಎಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಿ. ಒಂದು ತೆಳುವಾದ ಶೀಟ್ ಮೇಲೆ ಬಾಳೆ ಎಲೆಗಳನ್ನು ಹಾಕಿ ಒಂದರ ಪಕ್ಕದಲ್ಲಿ ಒಂದರಂತೆ ಪೋಣಿಸಬೇಕು. ನಂತರ ಗಣೇಶ ಮೂರ್ತಿಯ ಹಿಂದೆ ಬಾಳೆ ಎಳೆಗಳ ಶೀಟ್ ಅನ್ನು ನಿಲ್ಲಿಸಬಹುದು ಅಥವಾ ಗಟ್ಟಿಯಾದ ತರದಿಂದ ಕಟ್ಟಬೇಕು. ಬಾಳೆ ಎಲೆಗಳ ಶೀಟ್‌ಗೆ ಅಲ್ಲಲ್ಲಿ ಒಂದು ಗುಲಾಬಿ ಹೂವು ಹಾದೂ ಚೆಂಡು ಹೂವುಗಳನ್ನು ಅಂಟಿಸಿದರೆ ನೋಡೊಕೆ ತುಂಬಾ ಅಂದವಾಗಿ ಕಾಣಿಸುತ್ತದೆ.

ಬಾಳೆ ಎಲೆ ಬದಲಾಗಿ ಬಿಳಿ ಬಟ್ಟೆಯ ಮೇಲೂ ಹೀಗೆ ಹೂಗಳಿಂದ ಅಲಂಕರಿಸಿ ಬ್ಯಾಗ್ರೌಂಡ್ ಡೆಕೋರೇಷನ್ ಮಾಡಬಹುದು. ದೇವಾಲಯಗಳಲ್ಲಿ ವಿವಿಧ ಬಣ್ಣಗಳ ಹೂವುಗಳು ಹಾಗೂ ದೀಪಗಳಿಂದ ಅಲಂಕರಿಸಲಾಗುತ್ತದೆ. ವಿದ್ಯುತ್ ದೀಪಗಳಿದ್ದರೆ ರಾತ್ರಿಯ ವೇಳೆ ದೇವಾಲಯ ಅಥವಾ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಸ್ಥಳ ಸುಂದರವಾಗಿ ಕಾಣುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ