logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಾಗರ ಪಂಚಮಿಯಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ -Nagara Panchami 2024

ನಾಗರ ಪಂಚಮಿಯಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ -Nagara Panchami 2024

Raghavendra M Y HT Kannada

Aug 02, 2024 02:26 PM IST

google News

ನಾಗರ ಪಂಚಮಿಯಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ

    • 2024 ರ ಆಗಸ್ಟ್ 9 ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ. ನಾಗ ದೇವರ ಜೊತೆಗೆ ಶಿವನ ಪೂಜೆ ಮಾಡುವ ಈ ಹಬ್ಬದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ವಿವರನ್ನು ಇಲ್ಲಿ ತಿಳಿಯೋಣ.
ನಾಗರ ಪಂಚಮಿಯಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ
ನಾಗರ ಪಂಚಮಿಯಂದು ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನ ಮಾಡಬೇಡಿ

ಪ್ರಾದೇಶಿಕ ಪದ್ಧತಿಗಳಿಗೆ ಅನುಗುಣವಾಗಿ ಭಾರತದಾದ್ಯಂತ ನಾಗರ ಪಂಚಮಿಯನ್ನು (Nagara Panchami 2024) ಆಚರಿಸಲಾಗುತ್ತದೆ. ನಾಗರ ಪಂಚಮಿಯ ಹಬ್ಬದ ದಿನ ಶಿವನನ್ನು ಪೂಜಿಸುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. 2024 ರ ಆಗಸ್ಟ್ 9 ರಂದು ಎಲ್ಲೆಡೆ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ನಾಗರ ಪಂಚಮಿ ಹಬ್ಬದ ದಿನ ಯಾವ ಕೆಲಸಗಳನ್ನು ಮಾಡಬೇಕು, ಯಾವ ಕೆಲಸಗಳನ್ನು ಮಾಡಬಾರದು. ಇದರ ಹಿಂದಿನ ಕಾರಣವೇನು? ಏನೆಲ್ಲಾ ಸಕಾರಾತ್ಮಕ ಫಲಗಳಿವೆ, ಜೀನದಲ್ಲಿ ಏನೆಲ್ಲಾ ನಕಾರಾತ್ಮಕ ಫಲಿತಾಂಶಗಳು ಇವೆ ಎಂಬುದನ್ನು ಇಲ್ಲಿ ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಅತಿ ಮುಖ್ಯವಾಗಿ ಎಲ್ಲಾ ಭಕ್ತರು ಗಮನಿಸಲೇಬೇಕಾದ ಮುಖ್ಯ ವಿಚಾರವೆಂದರೆ ನಾಗಪಂಚಮಿಯ ದಿನದಂದು ಯಾವುದೇ ಕಾರಣಕ್ಕೂ ಹಾವಿಗೆ ಅಪ್ಪಿ-ತಪ್ಪಿಯೂ ಹಾವು ಉಣಿಸಬೇಡಿ. ನಾಗರ ಹಬ್ಬದ ದಿನದಂದು ಮಾತ್ರವೇ ಅಲ್ಲ, ಯಾವುದೇ ದಿನವೂ ಹಾವಿಗೆ ಹಾಲು ಹಾಕಬಾರದು. ಕಬ್ಬಿಣದ ಬಾಣಲೆಯಲ್ಲಿ ಅಡುಗೆ ಮಾಡಬಾರದು.

ನಾಗಪಂಚಮಿಯಂದು ನಾಗದೇವತೆಗೆ ಹಾಲನ್ನು ಉಣಿಸಬೇಕು ಎಂಬುದನ್ನು ಜನಪ್ರಿಯ ನಂಬಿಕೆ, ಆದರೆ ಹಾಗೆ ಮಾಡುವುದು ಒಳ್ಳೆಯದಲ್ಲ. ಹಾವಿಗೆ ಹಾಲವು ವಿಷಕ್ಕಿಂತ ಕಡಿಮೆಯಿಲ್ಲ ಎಂಬುದು ವೈಜ್ಞಾನಿಕ ಕಾರಣ. ಹೀಗಾಗಿ ಜೀವಂತ ನಾಗರ ಹಾವಿಗೆ ಹಾಲು ಉಣಿಸಬಾರದು. ನಿಮ್ಮ ಭಕ್ತಿಗಾಗಿ ನಾಗರ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಬಹುದು.

ನಾಗರ ಪಂಚಮಿಯ ದಿನ ಭೂಮಿ ಅಗೆಯುವುದು ಅಥವಾ ಹೊಲಗಳನ್ನು ಉಳುಮೆ ಮಾಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಈ ವೇಳೆ ಹಾವುಗಳಿಗೆ ಹಾನಿ ಮಾಡುತ್ತದೆ. ನಾಗರ ಪಂಚಮಿಯಿಂದು ಸೊಪ್ಪನ್ನು ಕೀಳಬಾರದು. ನಂಬಿಕೆಗಳ ಪ್ರಕಾರ, ನಾಗ ಪಂಚಮಿಯ ದಿನದಂದು ಸೂಚಿ, ಚಾಕು ಮುಂತಾದ ಹರಿತಾವದ ಮತ್ತು ಚೂಪಾದ ವಸ್ತುಗಳನ್ನು ಬಳಸಬಾರದು ಎಂಬ ನಂಬಿಕೆ ಇದೆ.

ನಾಗರ ಪಂಚಮಿಯಂದು ಏನೆಲ್ಲಾ ಮಾಡಬೇಕು?

ಇನ್ನು ನಾಗರ ಪಂಚಮಿ ಹಬ್ಬದ ದಿನ ಏನೆಲ್ಲಾ ಮಾಡಬೇಕು ಅನ್ನೋದನ್ನು ನೋಡುವುದಾದರೆ, ಮಂಗಳಕರವಾದ ಈ ದಿನ ಕೆಲವು ಆಚರಣೆಗಳನ್ನು ಮಾಡಲಾಗುತ್ತದೆ. ಇದು ಹೆಚ್ಚು ಪ್ರಯೋಚನಕಾರಿ ಎಂದು ಪರಿಗಣಿಸಲಾಗುತ್ತದೆ. ನಾಗದೇವತೆಗಳ ಆರಾಧನೆ ಮಾಡುವುದು ಹಬ್ಬದ ಪ್ರಮುಖ ಉದ್ದೇಶವಾಗಿದ್ದು, ಭಕ್ತರು ನಾಗದೇವತೆಗಳಿಗೆ ಸಮರ್ಪಿತವಾದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಮನೆಯಲ್ಲಿ ಪೂಜೆ ಮಾಡಲು ಇಷ್ಟಪಡುವವರು ಸಣ್ಣ ನೈವೇದ್ಯದೊಂದಿಗೆ ಹಾಲು, ಹೂವು ಮತ್ತು ಅರಿಶಿನವನ್ನು ಅರ್ಪಿಸಿ ಧಾರ್ಮಿಕ ಕ್ರಿಯೆಗಳನ್ನು ನಡೆಸುತ್ತಾರೆ. ಪೂಜೆ ಜೊತೆಗೆ ಸರ್ಪ ದೇವತೆಗಳಿಗೆ ಮೀಸಲಾದ ನಿರ್ದಿಷ್ಟ ಮಂತ್ರಗಳನ್ನು ಪಠಿಸುತ್ತಾರೆ. ಇದು ಅದೃಷ್ಟ ಮತ್ತು ದುಷ್ಟರ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ನಂಬಲಾಗುತ್ತದೆ. ನಾಗರ ಪಂಚಮಿಯಂದು ಉಪವಾಸವನ್ನು ಆಚರಿಸಲಾಗುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ