Finance Horoscope 2025: ಆಸ್ತಿಯಿಂದ ಆದಾಯ ಬರಲಿದೆ, ಖರ್ಚು ಹೆಚ್ಚಾಗುತ್ತೆ; ಮಕರ, ಕುಂಭ, ಮೀನ ರಾಶಿಯವರ 2025ರ ಹಣಕಾಸು ಭವಿಷ್ಯ
Nov 29, 2024 04:57 PM IST
2025ರ ಹೊಸ ವರ್ಷದಲ್ಲಿಲ ಮಕರ, ಕುಂಭ ಹಾಗೂ ಮೀನ ರಾಶಿಯವರ ಆರ್ಥಿಕ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ
- ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ಕೆಲವರಿಗೆ ತಮ್ಮ ಆರ್ಥಿಕ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. 2025 ರಲ್ಲಿ ಮಕರ, ಕುಂಭ ಹಾಗೂ ಮೀನ ರಾಶಿಯವರ ಹಣಕಾಸು ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.
2024ರ ಹಳೆಯ ವರ್ಷ ಮುಗಿಸಿ 2025ರ ಹೊಸ ವರ್ಷವನ್ನು ಸ್ವಾಗತಿಸಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂದಿನ ಹೊಸ ವರ್ಷದಲ್ಲಿ ಯಾರ ಆರ್ಥಿಕ ಭವಿಷ್ಯ ಹೇಗಿರಲಿದೆ, ಹಣಕಾಸಿನ ಭದ್ರತೆಯ ಸಂಬಂಧ ಏನೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, 2025ರಲ್ಲಿ ನೀವು ಹೂಡಿಕೆ ಮಾಡಬೇಕಾ ಅಥವಾ ಬೇಡವೇ, ಖರ್ಚು ವೆಚ್ಚಗಳು ಹಾಗೂ ಹಣಕಾಸಿಗೆ ಸಂಬಂಧಿಸಿದ ಯಾವುದೇ ರೀತಿಯ ಏರಿಳಿತಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳುವ ಆಸಕ್ತಿ ಸಾಕಷ್ಟು ಮಂದಿಗೆ ಇರುತ್ತದೆ. 12 ರಾಶಿಯವರ ಪೈಕಿ ಮಕರ, ಕುಂಭ ಹಾಗೂ ಮೀನ ರಾಶಿಯವರ 2025ರ ಆರ್ಥಿಕ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯೋಣ.
ತಾಜಾ ಫೋಟೊಗಳು
ಮಕರ ರಾಶಿ
ಮಕರ ರಾಶಿಯವರಿಗೆ 2025ರ ಹೊಸ ವರ್ಷವು ಆರ್ಥಿಕವಾಗಿ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಮೇ ತಿಂಗಳಲ್ಲಿ ಗುರು ನಿಮ್ಮ ರಾಶಿಯ ಆರನೇ ಮನೆಗೆ ಪ್ರವೇಶಿಸುತ್ತಾನೆ. ಗುರುವು ಇಲ್ಲಿ ದುರ್ಬಲ ಸ್ಥಾನದಲ್ಲಿರುತ್ತೆ, ಆದರೆ ಒಂಬತ್ತನೇ ಅಂಶದಿಂದಾಗಿ ನೀವು ಹಣಕಾಸಿನ ಲಾಭಗಳನ್ನು ಪಡೆಯುತ್ತೀರಿ. ಸಂಪತ್ತು ಹೆಚ್ಚಾಗುತ್ತದೆ. ಭೂಮಿಗೆ ಸಂಬಂಧಿಸಿದ ಕೋರ್ಟ್ ಪ್ರಕರಣಗಳು ಇತ್ಯಾರ್ಥವಾಗುವುದರಿಂದ ಹೆಚ್ಚಿನ ಹಣವನ್ನು ಕಾಣುತ್ತೀರಿ. ಜನವರಿಯಿಂದ ಮಾರ್ಚ್ ವರೆಗೆ ಹಣದ ಮನೆಯ ಮೇಲೆ ರಾಹು ಮತ್ತು ಶನಿಯ ಸ್ಥಾನಗಳು ಅನುಕೂಲಕರವಾಗಿರುವುದಿಲ್ಲ. ಈ ವೇಳೆ ನೀವು ಸಂಪತ್ತವನ್ನು ಹೆಚ್ಚಿಸಲು ಶಕ್ತಿ ಮೀರಿ ಪ್ರಯತ್ನಗಳನ್ನು ಹಾಕಬೇಕಾಗುತ್ತದೆ. ಈ ಅವಧಿಯಲ್ಲಿ ನಿಮಗೆ ಯಶಸ್ಸಿನ ಪ್ರಮಾಣ ತುಂಬಾ ಕಡಿಮೆ ಇರುತ್ತವೆ. ಕೆಲಸಗಳಲ್ಲಿ ಹೇಳಿಕೊಳ್ಳುವಂತಹ ಹಣ ಸಿಗುವುದಿಲ್ಲ.
ವ್ಯಾಪಾರದಲ್ಲಿ ಲಾಭ ಬರುವುದಿಲ್ಲ. ಹೂಡಿಕೆಗಳು ಆದಾಯವನ್ನು ತರುವುದಿಲ್ಲ. ಈ ಸಮಯದಲ್ಲಿ ನೀವು ಆರ್ಥಿಕವಾಗಿ ತುಂಬಾ ಸವಾಲುಗಳನ್ನು ಎದುರಿಸುತ್ತೀರಿ. 2025ರ ಮಾರ್ಚ್ ಕಳೆದ ನಂತರ ನಿಮಗೆ ತಕ್ಕ ಮಟ್ಟಿಗೆ ಹಣಕಾಸಿನ ಲಾಭಗಳು ಇರುತ್ತವೆ. ಹಳೆಯ ಹೂಡಿಕೆಗಳು ಆದಾಯವನ್ನು ತರಲು ಪ್ರಾರಂಭಿಸುತ್ತವೆ. ಬಾಕಿ ಮೊತ್ತಗಳು ಒಂದೊಂದಾಗಿ ಬರಲು ಶುರುವಾಗುತ್ತವೆ. ಎರಡ್ಮೂರು ತಿಂಗಳು ದುಡ್ಡಿಗೆ ಕೊರತೆಯೇ ಇರುವುದಿಲ್ಲ. ಸಂಪತ್ತಿನ ಹೆಚ್ಚಳವನ್ನು ಕಾಣುತ್ತೀರಿ. ಒಟ್ಟಾರೆಯಾಗಿ ಮಕರ ರಾಶಿಯವರಿಗೆ 2025ರ ವರ್ಷವು ಮಿಶ್ರಫಲಗಳಿಂದ ಕೂಡಿರುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ 2025 ರ ವರ್ಷದ ಮೊದಲಾರ್ಧದಲ್ಲಿ ಆರ್ಥಿಕ ಭವಿಷ್ಯ ಹೇಳಿಕೊಳ್ಳುವಷ್ಟು ಉತ್ತಮವಾಗಿರುವುದಿಲ್ಲ. ಹಣಕಾಸು ಜಾತಕ 2025ರ ಪ್ರಕಾರ, ಆರಂಭದಲ್ಲಿ ಸಾಕಷ್ಟು ಕಳೆದುಕೊಳ್ಳುತ್ತೀರಿ, ಇದಾಗ ಕೆಲವು ದಿನಗಳ ಬಳಿಕ ನಿಧಾನವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಕೊಟ್ಟ ಸಾಲುಗಳು ವಾಪಸ್ ಬರುತ್ತವೆ. ನಿಮ್ಮ ಸಾಲದ ಹೊರೆ ಕಡಿಮೆಯಾಗುತ್ತವೆ. ಮನೆಯಲ್ಲಿನ ಕೆಲವು ಶುಭ ಸಮಾರಂಭಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದು ನಿಮ್ಮ ಆರ್ಥಿಕ ಶಿಸ್ತಿನ ಮೇಲೆ ಪರಿಣಾಮ ಬೀರುತ್ತದೆ. ಲಾಭದ ಮನೆಯ ಅಧಿಪತಿ ಜನವರಿಯಿಂದ ಮೇ ಮಧ್ಯದವರೆಗೆ ನಾಲ್ಕನೇ ಮನೆಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ನೀವು ಸರಾಸರಿ ಹಣಕಾಸಿನ ಫಲಿತಾಂಶಗಳನ್ನು ಕಾಣುತ್ತೀರಿ.
ಲಾಭದ ಮನೆಯ ಅಧಿಪತಿಯು ಮೇ ಮಧ್ಯದದ ನಂತರ ಐದನೆ ಮನೆಗೆ ಹೋಗುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಸ್ವೀಕರಿಸುತ್ತೀರಿ. ವರ್ಷದ ಆರಂಭದಿಂದ ಮೇ ತಿಂಗಳವರೆಗೆ ಹಣದ ಮನೆಯ ಮೇಲೆ ರಾಹು ಪ್ರಭಾವ ಇರುತ್ತದೆ. ಹಣದ ಮನೆಯ ಮೇಲೆ ಶನಿಯ ಪ್ರಭಾವವು 2025ರ ಮಾರ್ಚ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಈ ಎರಡೂ ಗ್ರಹಗಳ ಕಾರಣದಿಂದಾಗಿ ಈ ವರ್ಷದಲ್ಲಿ ನೀವು ಹಣವನ್ನು ಉಳಿಸುವುದು ಸವಾಲಿನ ಕೆಲಸ ವಾಗಿರುತ್ತದೆ. ಆದರೆ ಹೊಸ ಯೋಜನೆಗಳ ಮೂಲಕ ಆರ್ಥಿಕ ಸ್ಥಿತಿಯನ್ನು ನಿಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಮೀನ ರಾಶಿ
2025 ರಲ್ಲಿ ಮೀನ ರಾಶಿಯರ ಆರ್ಥಿಕ ಭವಿಷ್ಯ ಅತ್ಯುತ್ತಮವಾಗಿದೆ. ಮೀನ ರಾಶಿಚಕ್ರ ಚಿಹ್ನೆಯಡಿ ಜನಿಸಿದವರಿಗೆ ಈ ವರ್ಷದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಫಲಿತಾಂಶಗಳು ಇರುತ್ತವೆ. ಆಸ್ತಿಯಿಂದ ದೊಡ್ಡ ಮಟ್ಟದ ಆದಾಯವನ್ನು ಕಾಣುತ್ತೀರಿ. ಕಳೆದ ಕೆಲವು ವರ್ಷಗಳ ಹಿಂದೆ ಖರೀದಿಸಿರುವ ನಿವೇಶನಗಳು ಈ ವರ್ಷ ನಿರೀಕ್ಷೆಗೂ ಮೀರಿದ ಮೌಲ್ಯವನ್ನು ಹೆಚ್ಚಿಸಿಕೊಂಡಿರುತ್ತವೆ. ಇದರಿಂದ ನಿಮ್ಮ ಆಸ್ತಿ ದುಪ್ಪಟ್ಟು ಆಗುತ್ತದೆ. ಕೆಲವರಿಗೆ ವ್ಯಾಪಾರದಲ್ಲಿ ಹೇಳಿಕೊಳ್ಳುವಂತ ಲಾಭ ಸಿಗುವುದಿಲ್ಲ. ರಿಯಲ್ ಎಸ್ಟ್ರೇಟ್ ವ್ಯವಹಾರದಲ್ಲಿ ಕೆಲವರು ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಆದರೆ ಅಷ್ಟೇ ಖರ್ಚುಗಳನ್ನು ಎದುರಿಸಬೇಕಾಗುತ್ತದೆ.
ಕೆಲವೊಂದು ಸಮಾರಂಭಗಳಿಗೆ ನೀವು ಹಣವನ್ನು ವೆಚ್ಚ ಮಾಡುತ್ತೀರಿ. ಕೆಲವು ತಿಂಗಳುಗಳ ಕಾಲ ಹಣದ ಮನೆಯ ಅಧಿಪತಿಯಾ ಮಂಗಳವು ನಿಮ್ಮ ಕಡೆ ಇರುತ್ತದೆ. ಆದರೆ ಉಳಿದ ತಿಂಗಳುಗಳಲ್ಲಿ ಇದು ನಿಮ್ಮ ಪರವಾಗಿ ಇರುವುದಿಲ್ಲ. ಆಗ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತೀರಿ. ಬರಬೇಕಾದ ಹಣ ಸಕಾಲಕ್ಕೆ ಬರುವುದಿಲ್ಲ. ಎಷ್ಟೇ ಕಠಿಣ ಶ್ರಮ ಹಾಕಿದರೂ ಲಾಭ ಇರುವುದಿಲ್ಲ. ಇದರ ಪರಿಣಾಮವಾಗಿ ನೀವು ಹಣಕಾಸಿನ ತೊಂದರೆಗೆ ಸಿಲುಕಬೇಕಾಗುವ ಸಾಧ್ಯತೆ ಇರುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.