logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Finance Horoscope 2025: ಸಂಪತ್ತು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ; ಮಿಥುನ, ಸಿಂಹ, ಕನ್ಯಾ ರಾಶಿಯವರ 2025ರ ಹಣಕಾಸು ಭವಿಷ್ಯ

Finance Horoscope 2025: ಸಂಪತ್ತು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ; ಮಿಥುನ, ಸಿಂಹ, ಕನ್ಯಾ ರಾಶಿಯವರ 2025ರ ಹಣಕಾಸು ಭವಿಷ್ಯ

Raghavendra M Y HT Kannada

Nov 29, 2024 12:51 PM IST

google News

2025 ರ ಹೊಸ ವರ್ಷದಲ್ಲಿ ಮಿಥುನ, ಸಿಂಹ ಹಾಗೂ ಕನ್ಯಾ ರಾಶಿಯವರ ಆರ್ಥಿಕ ಭವಿಷ್ಯವನ್ನು ತಿಳಿಯಿರಿ

    • ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ಕೆಲವರಿಗೆ ತಮ್ಮ ಆರ್ಥಿಕ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. 2025 ರಲ್ಲಿ ಮಿಥುನ, ಸಿಂಹ ಹಾಗೂ ಕನ್ಯಾ ರಾಶಿಯವರ ಹಣಕಾಸು ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿಯೋಣ.
2025 ರ ಹೊಸ ವರ್ಷದಲ್ಲಿ ಮಿಥುನ, ಸಿಂಹ ಹಾಗೂ ಕನ್ಯಾ ರಾಶಿಯವರ ಆರ್ಥಿಕ ಭವಿಷ್ಯವನ್ನು ತಿಳಿಯಿರಿ
2025 ರ ಹೊಸ ವರ್ಷದಲ್ಲಿ ಮಿಥುನ, ಸಿಂಹ ಹಾಗೂ ಕನ್ಯಾ ರಾಶಿಯವರ ಆರ್ಥಿಕ ಭವಿಷ್ಯವನ್ನು ತಿಳಿಯಿರಿ

2024ರ ಹಳೆಯ ವರ್ಷ ಮುಗಿಸಿ 2025ರ ಹೊಸ ವರ್ಷವನ್ನು ಸ್ವಾಗತಿಸಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂದಿನ ಹೊಸ ವರ್ಷದಲ್ಲಿ ಯಾರ ಆರ್ಥಿಕ ಭವಿಷ್ಯ ಹೇಗಿರಲಿದೆ, ಹಣಕಾಸಿನ ಭದ್ರತೆಯ ಸಂಬಂಧ ಏನೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, 2025ರಲ್ಲಿ ನೀವು ಹೂಡಿಕೆ ಮಾಡಬೇಕಾ ಅಥವಾ ಬೇಡವೇ, ಖರ್ಚು ವೆಚ್ಚಗಳು ಹಾಗೂ ಹಣಕಾಸಿಗೆ ಸಂಬಂಧಿಸಿದ ಯಾವುದೇ ರೀತಿಯ ಏರಿಳಿತಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳುವ ಆಸಕ್ತಿ ಸಾಕಷ್ಟು ಮಂದಿಗೆ ಇರುತ್ತದೆ. 12 ರಾಶಿಯವರ ಪೈಕಿ ಮೇಷ, ವೃಷಭ ಹಾಗೂ ಕಟಕ ರಾಶಿಯವರ 2025ರ ಆರ್ಥಿಕ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಮಿಥುನ ರಾಶಿ

2025 ರಲ್ಲಿ ಮಿಥುನ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಮಿಶ್ರ ಫಲಿತಾಂಶಗಳಿವೆ. ಹಣಕಾಸು ಜಾತಕ 2025ರ ಪ್ರಕಾರ, ನಿಮ್ಮ ಯಾವುದೇ ರೀತಿಯ ಮಹತ್ವದ ಆರ್ಥಿಕ ಸಮಸ್ಯೆಗಳು ಎದುರಾಗುವುದಿಲ್ಲ. ಆದರೆ ನಿಮ್ಮ ಹಣಕಾಸಿನ ಸಾಧನೆಗಳ ಬಗ್ಗೆ ಸ್ವಲ್ಪ ಅತೃಪ್ತಿ ಇರುತ್ತದೆ. ಈ ಬಗ್ಗೆ ನೀವು ಮೊದಲೇ ಗಮನಿಸಿ ಎಲ್ಲಿ ನಾನು ಎಡವಿದ್ದೇನೆ ಎಂಬುದನ್ನು ತಿಳಿದುಕೊಂಡರೆ ಮುಂದಾಗುವ ಆರ್ಥಿಕ ನಷ್ಟ ಅಥವಾ ಸಮಸ್ಯೆಗಳನ್ನು ತಪ್ಪಿಸುತ್ತೀರಿ. ಕಠಿಣ ಕೆಲಸ ಮಾಡುತ್ತಿದ್ದರೂ ನಿರೀಕ್ಷೆಯ ಹಣಕಾಸಿನ ಫಲಿತಾಂಶಗಳು ಸಿಗುತ್ತಿಲ್ಲ ಎಂದು ನೀವು ಭಾವಿಸುತ್ತೀರಿ.

2025ರ ಜನವರಿಯಿಂ ಮೇ ತಿಂಗಳ ಮಧ್ಯದವರಿಗೆ ಗುರುವು ನಿಮ್ಮ ರಾಶಿಯ 12ನೇ ಮನೆಯಲ್ಲಿ ಇರುತ್ತಾನೆ. ಇದರ ಪರಿಣಾಮವಾಗಿ ನಿಮಗೆ ವೆಚ್ಚಗಳು ಹೆಚ್ಚಾಗುತ್ತವೆ. ಮೇ ತಿಂಗಳ ಮಧ್ಯದ ಅವಧಿಯ ನಂತರ ಗುರುವು ಉತ್ತಮ ನಿಮ್ಮ ರಾಶಿಯ ಸ್ಥಾನಕ್ಕೆ ಬರುತ್ತಾನೆ. ಆಗ ನಿಮ್ಮ ಖರ್ಚುಗಳು ಕಡಿಮೆಯಾಗಿ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಸಂಪತ್ತನ್ನು ಯಶಸ್ವಿಯಾಗಿ ಹೆಚ್ಚಿಸಿಕೊಳ್ಳುತ್ತೀರಿ. ಹಣ ಗಳಿಸುವ ಸಂಬಂಧ ರೂಪಿಸುವ ಯೋಜನೆಗಳನ್ನು ತಕ್ಕ ಮಟ್ಟಿಗೆ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುತ್ತೀರಿ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಳ್ಳುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ 2025 ರ ವರ್ಷವು ಮಿಶ್ರಫಲಗಳಿಂದ ಕೂಡಿದ ಅದೃಷ್ಟವನ್ನು ತಂದಿದೆ. ನಿಮ್ಮ ಆದಾಯವು ಹೆಚ್ಚಾಗುತ್ತದೆ. ಆದಾಯ ಮೂಲಗಳು ಹೆಚ್ಚಾಗುವ ಕಾರಣ ಸಂಪತ್ತು ಹೆಚ್ಚಿಸಿಕೊಳ್ಳುತ್ತೀರಿ. ಸಾಲ ಪಡೆಯುವುದಕ್ಕಿಂತ ಹಳೆಯ ಸಾಲವನ್ನು ತೀರಿಸಲು ಮುಂದಾಗುತ್ತೀರಿ. ಇದು ಸಾಲದ ಪ್ರಮಾಣ ಕಡಿಮೆಯಾಗುತ್ತದೆ. ಈ ವರ್ಷದಲ್ಲಿ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಹೂಡಿಕೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೀರಿ. ಹೂಡಿಕೆಗೂ ಮುನ್ನ ತಜ್ಞರ ಸಲಹೆ, ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಲೇ ಹೋಗುತ್ತದೆ.

ರಾಹು ಕೇತು ವರ್ಷದ ಆರಂಭದಿಂದ ಹಿಡಿದ ಮೇ ವರೆಗೆ ನಿಮ್ಮ ಎರಡನೇ ಮನೆಯಲ್ಲಿರುತ್ತಾನೆ. ಮಾರ್ಚ್ ನಿಂದ ಶನಿ ಎರಡನೇ ಮನೆಯಲ್ಲಿರುತ್ತಾನೆ. ಇದು ನಿಮ್ಮ ಜೀವನದಲ್ಲಿ ಸವಾಲುಗಳನ್ನು ತರುತ್ತಾರೆ. ಈ ಸಮಯದಲ್ಲಿ ನೀವು ತಾಳ್ಮೆಯಿಂದ ಹಣಕಾಸಿನ ವ್ಯವಹಾರಗಳನ್ನು ಮಾಡಬೇಕಾಗುತ್ತದೆ. ಕೋಪ ಅಥವಾ ಸಿಟ್ಟಿನಲ್ಲಿ ಯಾವುದೇ ರೀತಿಯ ಆರ್ಥಿಕ ನಿರ್ಧಾರಗಳು ಒಳ್ಳೆಯದಲ್ಲ. ರಾಹು, ಕೇತು ಹಾಗೂ ಶನಿ ನಿಮ್ಮ ಜೀವನದಲ್ಲಿ ಕೆಲವು ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆ ಸಮಯದಲ್ಲಿ ಎಚ್ಚರಿಕೆಯ ನಡೆಯನ್ನು ಅನುಸರಿಬೇಕು.

ಕನ್ಯಾ ರಾಶಿ

2025 ರಲ್ಲಿ ಕನ್ಯಾ ರಾಶಿಯವರು ಆರ್ಥಿಕವಾಗಿ ಯಶಸ್ವಿಯಾಗುತ್ತಾರೆ. ಸಂಪತ್ತ ಮತ್ತು ಲಾಭಗಳು ಎರಡೂ ನಿಮ್ಮ ಪರವಾಗಿಯೇ ಇರುತ್ತವೆ. ಈ ಫಲಿತಾಂಶಗಳಿಗೆ ನಿಮ್ಮ ಕಠಿಣ ಪರಿಶ್ರಮ ಕಾರಣವಾಗಿರುತ್ತದೆ. ಕಷ್ಟಪಟ್ಟು ಕೆಲಸ ಮಾಡುತ್ತೀರಿ. ದೊಡ್ಡ ಮಟ್ಟದಲ್ಲಿ ವ್ಯಾಪಾರವನ್ನು ವಿಸ್ತರಿಸುತ್ತೀರಿ. ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಸವಾಲುಗಳು ಇರುತ್ತವೆ. ಆದರೆ ಅವುಗಳನ್ನು ಜಾಣತನದಿಂದ ಬಗೆಹರಿಸುತ್ತೀರಿ.

ಹೆಚ್ಚು ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ. 2025ರಲ್ಲಿ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಗುರು ಗ್ರಹವು ಹಣದ ಮನೆಯ ಮೇಲೆ ಒಂದು ಅಂಶವನ್ನು ಹೊಂದಿರುತ್ತಾನೆ. ಇದರಿಂದ ನೀವು ಸಂಪತ್ತು ಸಂಗ್ರಹಿಸಲು ಸಹಾಯ ಮಾಡುತ್ತದೆ. ಶುಕ್ರನ ಸಂಕ್ರಮಣದಿಂದ ಸಂಪತ್ತನ್ನು ರಕ್ಷಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ನಿಮಗೆ 2025 ರ ವರ್ಷವು ಆರ್ಥಿಕವಾಗಿ ಅತ್ಯುತ್ತವಾಗಿದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ