logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Finance Horoscope 2025: ವರ್ಷದ ಮೊದಲಾರ್ಧದಲ್ಲಿ ಸಂಪತ್ತು ಗಳಿಸಲು ಸಾಧ್ಯವಾಗುತ್ತೆ; ತುಲಾ, ವೃಶ್ಚಿಕ,ಧನು ರಾಶಿಯವರ 2025ರ ಹಣಕಾಸು ಭವಿಷ್ಯ

Finance Horoscope 2025: ವರ್ಷದ ಮೊದಲಾರ್ಧದಲ್ಲಿ ಸಂಪತ್ತು ಗಳಿಸಲು ಸಾಧ್ಯವಾಗುತ್ತೆ; ತುಲಾ, ವೃಶ್ಚಿಕ,ಧನು ರಾಶಿಯವರ 2025ರ ಹಣಕಾಸು ಭವಿಷ್ಯ

Raghavendra M Y HT Kannada

Nov 29, 2024 02:56 PM IST

google News

2025ರ ಹೊಸ ವರ್ಷದಲ್ಲಿ ತುಲಾ, ವೃಶ್ಚಿಕ ಹಾಗೂ ಧನು ರಾಶಿಯವರ ಆರ್ಥಿಕ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ

    • ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ಕೆಲವರಿಗೆ ತಮ್ಮ ಆರ್ಥಿಕ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. 2025 ರಲ್ಲಿ ತುಲಾ, ವೃಶ್ಚಿಕ, ಧನು ರಾಶಿಯವರ ಹಣಕಾಸು ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.
2025ರ ಹೊಸ ವರ್ಷದಲ್ಲಿ ತುಲಾ, ವೃಶ್ಚಿಕ ಹಾಗೂ ಧನು ರಾಶಿಯವರ ಆರ್ಥಿಕ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ
2025ರ ಹೊಸ ವರ್ಷದಲ್ಲಿ ತುಲಾ, ವೃಶ್ಚಿಕ ಹಾಗೂ ಧನು ರಾಶಿಯವರ ಆರ್ಥಿಕ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ

2024ರ ಮುಗಿಯುತ್ತಾ ಬಂತು. 2025ರ ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತೇ ಕಾತುರದಿಂದ ಕಾಯುತ್ತಿದೆ. ಹೊಸ ವರ್ಷದಲ್ಲಿ ಯಾರ ಆರ್ಥಿಕ ಭವಿಷ್ಯ ಹೇಗಿರಲಿದೆ, ಹಣಕಾಸಿನ ಭದ್ರತೆಯ ಸಂಬಂಧ ಏನೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, 2025ರಲ್ಲಿ ನೀವು ಹೂಡಿಕೆ ಮಾಡಬೇಕಾ ಅಥವಾ ಬೇಡವೇ, ಖರ್ಚು ವೆಚ್ಚಗಳು ಹಾಗೂ ಹಣಕಾಸಿಗೆ ಸಂಬಂಧಿಸಿದ ಯಾವುದೇ ರೀತಿಯ ಏರಿಳಿತಗಳ ಬಗ್ಗೆ ಮುಂಚಿತವಾಗಿಯೇ ತಿಳಿದುಕೊಳ್ಳುವ ಆಸಕ್ತಿ ಸಾಕಷ್ಟು ಮಂದಿಗೆ ಇರುತ್ತದೆ. 12 ರಾಶಿಯವರ ಪೈಕಿ ತುಲಾ, ವೃಶ್ಚಿಕ ಹಾಗೂ ಧನು ರಾಶಿಯವರ 2025ರ ಆರ್ಥಿಕ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯೋಣ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ತುಲಾ ರಾಶಿ

2025ರ ವರ್ಷವು ತುಲಾ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟವನ್ನು ನೀಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ವಿಭಿನ್ನವಾಗಿ ಇರುತ್ತದೆ. ವರ್ಷದ ಮೊದಲಾರ್ಧದಲ್ಲಿ ಫಲಿತಾಂಶಗಳು ಸರಾಸರಿಯಾಗಿರುತ್ತವೆ. ಮಾಡುವ ಪ್ರತಿಯೊಂದು ಕೆಲಸದಲ್ಲೂ ಲಾಭವನ್ನು ನಿರೀಕ್ಷೆ ಮಾಡುತ್ತೀರಿ. ಆದರೆ ಕೆಲವೊಂದು ಮಾತ್ರ ನಿಮಗೆ ಹಣವನ್ನು ತಂದು ಕೊಡುತ್ತವೆ. 2025ರ ವರ್ಷದ ದ್ವಿತೀಯಾರ್ಧದಲ್ಲಿ ನಿಮ್ಮ ಜೀನವದಲ್ಲಿ ಬಹಳಷ್ಟು ಧನಾತ್ಮಕವಾದ ಬದಲಾವಣೆಗಳು ಇರುತ್ತವೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ವ್ಯಾಪಾರದಲ್ಲಿ ಲಾಭಗಳು ಇರುತ್ತವೆ. ನೀವು ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗುತ್ತೀರಿ. ಉಳಿತಾಯವನ್ನು ಹೆಚ್ಚಿಸಿಕೊಳ್ಳುತ್ತೀರಿ. ನಷ್ಟದ ಮುನ್ಸೂಚನೆಗಳಿರುವ ಕಾರಣ ತಪ್ಪು ಸ್ಥಳಗಳಲ್ಲಿ ಹೂಡಿಕೆ ಮಾಡಬೇಡಿ. ಅನಿರೀಕ್ಷಿತ ವೆಚ್ಚಗಳನ್ನು ಇರುತ್ತವೆ. ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಮೂಲಕ ನಿಮ್ಮ ಹಣವನ್ನು ಸಂವೇದನಾಶೀಲವಾಗಿ ನಿರ್ವಹಿಸಬೇಕು.

ವೃಶ್ಚಿಕ ರಾಶಿ

ಹಣಕಾಸು ಜಾತಕದ ಪ್ರಕಾರ 2025ರ ವೃಶ್ಚಿಕ ರಾಶಿಯವರಿಗೆ ಮಿಶ್ರ ಫಲಗಳಿವೆ. ಬುಧನ ಸಂಚಾರದಿಂದಾಗಿ ಈ ವರ್ಷದ ಬಹುಪಾಲು ಅತ್ಯುತ್ತಮ ಫಲಿತಾಂಶಗಳನ್ನು ಹೊಂದಿರುತ್ತೀರಿ. ಹಣದ ಮನೆಯ ಅಧಿಪತಿಯಾದ ಗುರುವು ಲಾಭದ ಮನೆಯಲ್ಲಿ ಮೇ ತಿಂಗಳ ಮಧ್ಯದವರಿಗೆ ಇರುತ್ತಾನೆ. ಇದರ ಪರಿಣಾಮದಿಂದಾಗಿ ನೀವು ಶ್ರೀಮಂತರಾಗಲು ಯಾವುದೇ ಮಹತ್ವದ ಸಮಸ್ಯೆಗಳು ಎದುರಾಗುವುದಿಲ್ಲ. ಉದ್ಯೋಗ ಮಾಡುತ್ತಿರುವವರಿಗೆ 2025 ರಲ್ಲಿ ವೇತನ ಹೆಚ್ಚಾಗುತ್ತದೆ.

ಸಂಬಂಳದಲ್ಲಿನ ಒಂದು ಭಾಗವನ್ನು ಗಣನೀಯವಾಗಿ ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಆದರೆ ಮೇ ತಿಂಗಳ ನಂತರ ಖರ್ಚುಗಳು ಉಳಿತಾಯದ ಮೇಲೆ ಪರಿಣಾಮ ಬೀರುತ್ತವೆ. ಆದಾಯದಲ್ಲಿ ಗಣನೀಯ ಏರಿಕೆ ಇರುವುದಿಲ್ಲ. ವರ್ಷದ ಆರಂಭದಿಂದ ಮೇ ತಿಂಗಳ ವರಿಗೆ ಅವಧಿಯಲ್ಲಿ ಆದಾಯ ಅನುಕೂಲಕರವಾಗಿರುತ್ತದೆ. ಆ ನಂತರ ಆದಾಯದ ಕೊರತೆಯಾಗುತ್ತದೆ. ಮನೆಯಲ್ಲಿನ ಕೆಲವು ಕಾರ್ಯಕ್ರಮಗಳು, ಆರೋಗ್ಯದ ಸಮಸ್ಯೆಗಳು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುತ್ತವೆ. ವಿಪರೀತ ಖರ್ಚು ಇರುತ್ತದೆ.

ಧನು ರಾಶಿ

ಧನು ರಾಶಿಯವರಿಗೆ 2025ರ ವರ್ಷದ ಆರ್ಥಿಕ ಭವಿಷ್ಯವು ಸಾಧಾರಣವಾಗಿರುತ್ತದೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿಕೊಂದರೆ ಕೆಲವರಿಗೆ ಉತ್ತಮವಾಗಿರುತ್ತದೆ ಎಂದೇ ಹೇಳಲಾಗಿದೆ. ಹಣಕಾಸು ಜಾತಕದ ಪ್ರಕಾರ 2025ರ ನಿಮ್ಮ ಆರ್ಥಿಕ ಭವಿಷ್ಯದಲ್ಲಿ ಬದಲಾವಣೆಗಳನ್ನು ಕಾಣುತ್ತೀರಿ. ಗುರು ಗ್ರಹ ನಿಮ್ಮ ಆರನೇ ಮನೆಯಲ್ಲಿ ಜನವರಿಯಿಂದ ಮೇ ತಿಂಗಳವರಿಗೆ ಇರುತ್ತಾನೆ. ಈ 5 ತಿಂಗಳ ಅವಧಿಯಲ್ಲಿ ನೀವು ಸಂಪತ್ತನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಮಾರ್ಚ್ ತಿಂಗಳಲ್ಲಿ ಸಂಪೂರ್ಣವಾಗಿ ಶನಿ ಮೂರನೇ ಮನೆಯಲ್ಲಿರುತ್ತಾನೆ. ಆಗ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

2025ರ ಮಾರ್ಚ್ ನಂತರ ನೀವು ಹಣಕಾಸಿನ ವಿಚಾರದಲ್ಲಿ ಕೆಲವೊಂದು ಹಿನ್ನಡೆಗಳನ್ನು ಕಾಣುತ್ತೀರಿ. ಶನಿಯು ದುರ್ಬಲ ಸ್ಥಾನದಲ್ಲಿ ಇದ್ದಾಗ ನಿಮಗೆ ಬರಬೇಕಾದ ಹಣವು ಸರಿಯಾ ಸಮಯಕ್ಕೆ ಬರುವುದಿಲ್ಲ. ಪ್ರತಿ ತಿಂಗಳ ನಿರ್ವಹವಣೆಯೂ ಕಷ್ಟವಾಗುತ್ತದೆ. ಈ ಸಮಯದಲ್ಲಿ ನಿಮಗೆ ಕೆಲವರು ಸಹಾಯ ಮಾಡುತ್ತಾರೆ. ವರ್ಷದ ಮೊದಲಾರ್ಧದಲ್ಲಿ ನೀವು ಸಂಪತ್ತನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತೀರಿ. ಇದನ್ನು ಮುಂದುವರಿಸಲು ಪ್ರಯತ್ನಿಸಬೇಕು. ಖರ್ಚುಗಳ ನಿಯಂತ್ರ ಬಹಳ ಮುಖ್ಯವಾಗಿರುತ್ತದೆ. ಗಳಿಯ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ