logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ganesha Chaturthi: ಆತ್ಮವಿಶ್ವಾಸದಿಂದ ಜ್ಞಾನದವರೆಗೆ; ಭಗವಾನ್ ಗಣಪತಿ ಜೀವನದ ಈ ಪಾಠವನ್ನು ಮಕ್ಕಳಿಗೆ ಕಲಿಸಿ

Ganesha Chaturthi: ಆತ್ಮವಿಶ್ವಾಸದಿಂದ ಜ್ಞಾನದವರೆಗೆ; ಭಗವಾನ್ ಗಣಪತಿ ಜೀವನದ ಈ ಪಾಠವನ್ನು ಮಕ್ಕಳಿಗೆ ಕಲಿಸಿ

Raghavendra M Y HT Kannada

Sep 01, 2024 12:29 PM IST

google News

ಭಗವಾನ್ ಗಣೇಶನ ಜೀವನದ ಪಾಠವನ್ನು ಮಕ್ಕಳಿಗೆ ಕಲಿಸಿ

    • Bhagavan Ganapathi Life Lesson: ಗಣೇಶನ ಜೀವನದಿಂದ ಅನೇಕ ಪಾಠಗಳನ್ನು ಕಲಿಯಬಹುದು. ವಿನಾಯಕನ ಜೀವನದಲ್ಲಿ ನಡೆದ ಘಟನೆಗಳನ್ನು ಕಥೆಗಳ ರೂಪದಲ್ಲಿ ಮಕ್ಕಳಿಗೆ ತಿಳಿಸಬಹುದು. ಇದು ಅವರಿಗೆ ತುಂಬಾ ಸ್ಪೂರ್ತಿದಾಯಕವಾಗಿರುತ್ತೆ. ಗಣಪತಿಯ ಜೀವನದಿಂದ ಮಕ್ಕಳು ಮಾತ್ರವಲ್ಲ ದೊಡ್ಡವರೂ ಕಲಿಯಬೇಕಾದ ಜೀವನ ಪಾಠಗಳು ಇಲ್ಲಿವೆ.
ಭಗವಾನ್ ಗಣೇಶನ ಜೀವನದ ಪಾಠವನ್ನು ಮಕ್ಕಳಿಗೆ ಕಲಿಸಿ
ಭಗವಾನ್ ಗಣೇಶನ ಜೀವನದ ಪಾಠವನ್ನು ಮಕ್ಕಳಿಗೆ ಕಲಿಸಿ

Bhagavan Ganapathi Life Lesson: ಮಕ್ಕಳು ಭಗವಾನ್ ಗಣೇಶನನ್ನು ತುಂಬಾ ಪ್ರೀತಿಸುತ್ತಾರೆ. ಗಣೇಶ ಚತುರ್ಥಿ ಬಂತೆಂದರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಮಕ್ಕಳೆಲ್ಲ ತಮ್ಮ ಮನಸ್ಸಿಗೆ ಬಂದಂತೆ ಹಣ ಸಂಗ್ರಹಿಸಿ ಗಣೇಶನ ಆಟಿಕೆ ಖರೀದಿಸುತ್ತಾರೆ. ಬೀದಿ ಬೀದಿಗಳಲ್ಲಿ ಹಾಕಿರುವ ಗಣೇಶ ಮಂಟಪಗಳಲ್ಲಿನ ಪೂಜೆಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಹಾಕುವ ತಮಟೆ ಸದ್ದಿಗೆ ನೃತ್ಯ ಮಾಡುತ್ತಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಮಕ್ಕಳು ಬಾಲ್ಯದಿಂದಲೂ ಗಣೇಶನ ಕಥೆಗಳನ್ನು ಕೇಳುತ್ತಾ ಬೆಳೆಯುತ್ತಾರೆ. ಗಣೇಶನಿಗೆ ಸಂಬಂಧಿಸಿದ ಕಥೆಗಳನ್ನು ಆಗಾಗ ಪುಸ್ತಕಗಳಲ್ಲಿ ಓದಲಾಗುತ್ತದೆ ಮತ್ತು ಕೇಳಲಾಗುತ್ತದೆ. ಆನೆಯ ತಲೆ, ದೊಡ್ಡ ಕಿವಿಗಳು ಮತ್ತು ಮಗುವಿನ ಹೊಟ್ಟೆಯು ಮಕ್ಕಳಿಗೆ ಬಹಳ ಜನಪ್ರಿಯವಾದ ಕಥೆಗಳು. ಆದರೆ ವಿನಾಯಕ ಚತುರ್ಥಿಯ ದಿನ ನಿಮ್ಮ ಮಕ್ಕಳು ಗಣಪತಿಯಿಂದ ಏನನ್ನು ಕಲಿಯಬೇಕು ಎಂಬುದನ್ನು ಸಹ ತಿಳಿಸಿಕೊಡಬೇಕು. ಗಣೇಶನ ಜೀವನದಿಂದ ಯಾವ ಪಾಠಗಳನ್ನು ಕಲಿಯಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ಮಕ್ಕಳಿಗೆ ಕೆಲವು ವಿಷಯಗಳನ್ನು ಹೇಳುವ ಮೂಲಕ ಹೆತ್ತವರು ಮತ್ತು ಹಿರಿಯರಿಗೆ ವಿಧೇಯರಾಗಿರಲು ನೀವು ತಯಾರಿ ಮಾಡಬೇಕು.

ಗಣೇಶನಂತೆ ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಸಿ

ಪೌರಾಣಿಕ ಕಥೆಯ ಪ್ರಕಾರ, ಗಣೇಶ ಮತ್ತು ಕುಮಾರಸ್ವಾಮಿ ನಡುವೆ ಸಣ್ಣ ಬಾಜಿ ನಡೆಯುತ್ತೆ. ಜಗತ್ತನ್ನು ಸುತ್ತಿ ಪುಣ್ಯನದಿಗಳಲ್ಲಿ ಸ್ನಾನ ಮಾಡಿ ಶೀಘ್ರವೇ ಕೈಲಾಸಕ್ಕೆ ಹಿಂದಿರುಗುವವರನ್ನು ಮೊದಲ ದೇವರಾಗಿ ಪೂಜಿಸಲಾಗುತ್ತದೆ ಎಂದು ಶಿವನು ಷರತ್ತು ವಿಧಿಸುತ್ತಾನೆ. ಕಾರ್ತಿಕೇಯನು ಜಗತ್ತನ್ನು ಸುತ್ತುತ್ತಾನೆ. ಆದರೆ ಗಣಪತಿಯು ಜಾಣತನದಿಂದ ತನ್ನ ತಂದೆ ತಾಯಿಯರಿಗೆ ಮೂರು ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ನೀನೇ ನನ್ನ ಪ್ರಪಂಚ ಎಂದು ಹೇಳಿದನು. ಪಾಲಕರು ತಮ್ಮ ಮಕ್ಕಳಿಗೆ ಗಣಪತಿಯಿಂದ ತಂದೆ ತಾಯಿಯನ್ನು ಗೌರವಿಸುವುದನ್ನು ಕಲಿಸಬೇಕು.

ಯಾರನ್ನೂ ಕೀಳು ಮಟ್ಟದಿಂದ ನೋಡಬಾರದು

ದೈತ್ಯ ಗಣೇಶನ ವಾಹನವು ಅತ್ಯಂತ ಚಿಕ್ಕ ಇಲಿಯಾಗಿದೆ. ಇಷ್ಟು ಭಾರವಿರುವ ಗಣೇಶನನ್ನು ಅದು ಹೇಗೆ ಹೊತ್ತೊಯ್ಯುತ್ತದೆ ಎಂದು ಆಶ್ಚರ್ಯ ಪಡುತ್ತಾರೆ. ವಿಶ್ವದ ಅತ್ಯಂತ ಚಿಕ್ಕ ಜೀವಿಗಳು ಕೂಡ ಪ್ರಮುಖವಾಗಿರುತ್ತವೆ. ಆದರೆ ಜೀವಿ ಎಷ್ಟು ಚಿಕ್ಕದಾಗಿದೆ, ಅದರ ಕಾರ್ಯಗಳು ಎಷ್ಟು ಎಂಬುದು ಮುಖ್ಯವಲ್ಲ ಎಂದು ಹೇಳಲಾಗುತ್ತದೆ. ಈ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯೂ ಮುಖ್ಯ. ಗಣೇಶನ ಎಲ್ಲಾ ಜೀವಿಗಳು ಸಮಾನರು. ಅದಕ್ಕೆ ಇಲಿಯೇ ಸಾಕ್ಷಿ. ಚಿಕ್ಕದಾದರೂ ಅತಿ ಭಾರವಾದ ಗಣೇಶನಿಗೆ ವಾಹನ.

ಕೋಪ ಬೇಡ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ

ಹಿಂದೆ ಅನೇಕ ರಾಕ್ಷಸರು ಗಣೇಶನ ಭೌತಿಕ ರೂಪವನ್ನು ಗೇಲಿ ಮಾಡಿದರು. ಇವರಿಗೆ ಆನೆಯ ಮುಖವಿದೆ ಎಂದು ವ್ಯಂಗ್ಯವಾಗಿ ಹೇಳುವ ಜನರಿದ್ದರು. ಆದರೆ ಬಾಲ ಗಣೇಶ ತಾಳ್ಮೆ ಕಳೆದುಕೊಳ್ಳಲಿಲ್ಲ. ರಾಕ್ಷಸರು ಆತನೊಂದಿಗೆ ತೀವ್ರವಾಗಿ ಹೋರಾಡಿದರು. ಇತರರ ಮಾತಿನಿಂದ ಪ್ರಭಾವಿತರಾಗಿ ಕೋಪಗೊಳ್ಳಬೇಡಿ. ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇತರರ ಮಾತಿನಿಂದ ನಾವು ದುರ್ಬಲರಾಗಿದ್ದರೆ, ಅದು ನಮ್ಮ ವಿವೇಚನೆಯನ್ನು ನಾಶಪಡಿಸುತ್ತದೆ. ಆದುದರಿಂದಲೇ ಸಿಟ್ಟು ಸಲ್ಲದು ಎನ್ನುತ್ತಾರೆ. ಎಲ್ಲರೂ ನಿಮ್ಮನ್ನು ಕಡಿಮೆ ಅಂದಾಜು ಮಾಡಿದಾಗ ಅದು ನೋವುಂಟು ಮಾಡುತ್ತದೆ. ಆದರೆ ನಿಮ್ಮನ್ನು ನೀವು ನಂಬಿದರೆ ನಿಮ್ಮ ಸಾಮರ್ಥ್ಯ ಏನೆಂದು ಜಗತ್ತಿಗೆ ತಿಳಿಯುತ್ತದೆ.

ಶಕ್ತಿಗಿಂತ ಯುಕ್ತಿ ಮೇಲು

ಶಕ್ತಿಯು ಹಲವು ರೂಪಗಳನ್ನು ಹೊಂದಿದೆ. ಶಕ್ತಿ ಮುಖ್ಯವಲ್ಲ ಬುದ್ಧಿಶಕ್ತಿ ಎಂದು ಹೇಳಲಾಗುತ್ತದೆ. ಶಕ್ತಿ ಎಂದರೆ ಹೊರಗೆ ಹೋಗಿ ಕತ್ತಿ ಹಿಡಿದು ಹೋರಾಡುವುದು ಎಂದಲ್ಲ. ನಿಮ್ಮ ಜ್ಞಾನದಿಂದ ನೀವು ಜಗತ್ತನ್ನು ಗೆಲ್ಲಬಹುದು. ನಿಮ್ಮ ಬುದ್ಧಿವಂತಿಕೆಯು ನಿಮ್ಮನ್ನು ಕೆಟ್ಟ ಪರಿಸ್ಥಿತಿಗಳಿಂದ ಹೊರತರುತ್ತದೆ. ನೀವು ಜ್ಞಾನದ ಶಕ್ತಿಯನ್ನು ಗುರುತಿಸಬೇಕು. ಭಗವಾನ್ ಗಣೇಶನು ಯಾವುದಕ್ಕೂ ಕುಗ್ಗದೆ ಸುಜ್ಞಾನವೆಂಬ ಅಸ್ತ್ರದಿಂದ ಎಲ್ಲರ ಪ್ರಶಂಸೆಗೆ ಪಾತ್ರನಾದ. ಪೋಷಕರ ಸುತ್ತ ಸುತ್ತುವುದೇ ಅದಕ್ಕೆ ಸಾಕ್ಷಿ. ವಿಘ್ನಗಳನ್ನು ಹೋಗಲಾಡಿಸುವ ವಿಘ್ನೇಶ್ವರನಾದನು. ಆದ್ದರಿಂದಲೇ ಯಾವುದೇ ಕೆಲಸ ಮಾಡಲು ಹೊರಟಾಗ ಯಾವುದೇ ಅಡೆತಡೆಗಳು ಬಾರದಿರಲಿ ಎಂದು ಹಾರೈಸಿ ಮೊದಲ ಪೂಜೆಯನ್ನು ಗಣೇಶನಿಗೆ ಮಾಡಲಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ