ಮಿಥುನ ರಾಶಿ ಭವಿಷ್ಯ ಆಗಸ್ಟ್ 7: ವಾಹನ ಚಾಲನೆ ಮಾಡುವಾಗ ಎಚ್ಚರ ವಹಿಸಿ, ಸಂಗಾತಿಯ ಮುಂದೆ ಹಳೆ ವಿಚಾರಗಳನ್ನು ಕೆದಕದಿರಿ
Aug 07, 2024 08:58 AM IST
ಮಿಥುನ ರಾಶಿ ಭವಿಷ್ಯ ಆಗಸ್ಟ್ 7: ವಾಹನ ಚಾಲನೆ ಮಾಡುವ ಎಚ್ಚರ ವಹಿಸಿ, ಸಂಗಾತಿಯ ಮುಂದೆ ಹಳೆ ವಿಚಾರಗಳನ್ನು ಕೆದಕದಿರಿ
- Gemini Daily Horoscope August 7, 2024: ರಾಶಿಚಕ್ರಗಳ ಪೈಕಿ ಮೂರನೇಯದು ಮಿಥುನ ರಾಶಿಚಕ್ರ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ಮಿಥುನ ರಾಶಿಯಲ್ಲಿ ಸಾಗುತ್ತಿರುವ ಜನರು ಮಿಥುನ ರಾಶಿಯವರು. ಆಗಸ್ಟ್ 7ರ ಮಿಥುನ ರಾಶಿ ಭವಿಷ್ಯದ ಪ್ರಕಾರ, ವಾಹನ ಚಾಲನೆ ಮಾಡುವ ಸಂದರ್ಭ ಸಾಕಷ್ಟು ಜಾಗೃತೆ ವಹಿಸಬೇಕು. ಹಿಂದೆ ನಡೆದ ಘಟನೆ ಕೆದಕುವುದರಿಂದ ಸಂಬಂಧ ಕೆಡಲಿದೆ.
ಮಿಥುನ ರಾಶಿಯವರ ಇಂದಿನ (ಆಗಸ್ಟ್ 7, ಬುಧವಾರ) ದಿನಭವಿಷ್ಯದಲ್ಲಿ ಇಂದು ಸಂತೋಷವಾಗಿರಲು, ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಿದ್ಧರಾಗಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಶಿಸ್ತು ವೃತ್ತಿಪರ ನಿರೀಕ್ಷೆಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೆಲವು ಗುರಿಗಳು ನಿಮಗೆ ಕಷ್ಟಕರವಾಗಿ ತೋರಬಹುದು. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ಮಿಥುನ ರಾಶಿ ಲವ್ ಲೈಫ್ (Gemini Love Horoscope)
ಇಂದು ನಿಮ್ಮ ಪ್ರೇಮ ಜೀವನದಲ್ಲಿ ಜಗಳವಾಗುವ ಸಾಧ್ಯತೆಯಿದೆ. ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ದಿನವಿಡಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಜಾಗರೂಕರಾಗಿರಿ ಮತ್ತು ಹಿಂದೆ ನಡೆದ ಘಟನೆಗಳನ್ನು ಕೆದಕಬೇಡಿ. ಕೆಲವರು ಮೊದಲ ಬಾರಿಗೆ ಪ್ರೀತಿಯಲ್ಲಿ ಬೀಳಬಹುದು. ಸಂಗಾತಿಯನ್ನು ನೀವು ರೊಮ್ಯಾಂಟಿಕ್ ಡಿನ್ನರ್ಗೆ ಕರೆದೊಯ್ಯಬಹುದು, ಅಲ್ಲಿ ಸರ್ಪ್ರೈಸ್ ಗಿಫ್ಟ್ ನೀಡಿ ದಿನವನ್ನು ವರ್ಣಮಯವಾಗಿಸಬಹುದು. ಸಂಗಾತಿಯ ಮೇಲೆ ಪ್ರೀತಿ ಸುರಿಸುವುದನ್ನು ಪರಿಗಣಿಸಿ. ವೈಯಕ್ತಿಕ ಮತ್ತು ವೃತ್ತಿಪರ ಪ್ರಯತ್ನಗಳಲ್ಲಿ ನೀವಿಬ್ಬರೂ ಪರಸ್ಪರ ಬೆಂಬಲಿಸಬೇಕು.
ಮಿಥುನ ರಾಶಿ ವೃತ್ತಿ ಜಾತಕ (Gemini Professional Horoscope)
ನಿಮ್ಮ ವೃತ್ತಿಪರ ಜೀವನವು ಉತ್ಪಾದಕವಾಗಿರುತ್ತದೆ ಮತ್ತು ನೀವು ನಿರೀಕ್ಷೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲವು ಮಹಿಳೆಯರು ಸಾಧನೆಗಾಗಿ ಪ್ರಶಸ್ತಿಗಳನ್ನು ಸ್ವೀಕರಿಸುತ್ತಾರೆ. ಇಂದು ಹೆಚ್ಚು ತಿರುಗಾಟವಿರುತ್ತದೆ. ಕಚೇರಿ ರಾಜಕೀಯದಿಂದ ದೂರವಿರಿ ಮತ್ತು ನಿಮ್ಮ ಸುತ್ತಲಿನ ನಕಾರಾತ್ಮಕ ಜನರನ್ನು ಸದಾ ದೂರವಿಡಿ. ವ್ಯಾಪಾರಸ್ಥರಿಗೆ ವ್ಯಾಪಾರ ವಿಸ್ತರಿಸಲು ಅಥವಾ ಪಾರ್ಟನರ್ಶಿಪ್ನಲ್ಲಿ ಬ್ಯುಸಿನೆಸ್ ಆರಂಭಿಸಲು ದಿನ ಉತ್ತಮವಾಗಿಲ್ಲ. ಹೊಸ ಉದ್ಯೋಗಕ್ಕಾಗಿ ನೀವು ಸಂದರ್ಶನಕ್ಕೆ ಹಾಜರಾಗಬಹುದು.
ಮಿಥುನ ರಾಶಿ ಆರ್ಥಿಕ ಜಾತಕ (Gemini Money Horoscope)
ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಗಳು ಎದುರಾಗುವುದಿಲ್ಲ. ಆದಾಗ್ಯೂ, ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು. ಇಂದು ನೀವು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಪೀಠೋಪಕರಣಗಳನ್ನು ಖರೀದಿಸಲು ಆಸಕ್ತಿ ಹೊಂದಿರಬಹುದು. ಮಹಿಳೆಯರು ಆಭರಣಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದು ಹಣವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ಮಧ್ಯಪ್ರವೇಶಿಸುವಾಗ ಜಾಗರೂಕರಾಗಿರಿ, ಅದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಉದ್ಯಮಿಗಳು ಹಣದ ಒಳಹರಿವನ್ನು ನೋಡುತ್ತಾರೆ.
ಮಿಥುನ ರಾಶಿ ಆರೋಗ್ಯ ಜಾತಕ (Gemini Health Horoscope)
ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮ ದಿನ. ಕೆಲವರಿಗೆ ಕಾಲು ನೋವಿರಬಹುದು, ಆದರೆ ಅದು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳು ಸಂಭವಿಸಬಹುದು, ಹಾಗಾಗಿ ಮಕ್ಕಳು ಹೊರಗೆ ಆಡುವಾಗ ಅಥವಾ ಕ್ಯಾಂಪಿಂಗ್, ಪ್ರವಾಸಗಳಲ್ಲಿ ಜಾಗರೂಕರಾಗಿರಬೇಕು. ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಉಂಟಾಗಬಹುದು. ಹಾಗಾಗಿ ಹೊರಗಿನ ಆಹಾರ ಸೇವಿಸದೇ ಇರುವುದು. ವಾಹನ ಚಾಲನೆ ಮಾಡುವಾಗಲೂ ಎಚ್ಚರಿಕೆ ವಹಿಸಬೇಕು.
ಮಿಥುನ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಮಿಥುನ ರಾಶಿಯ ಅಧಿಪತಿ: ಬುಧ, ಮಿಥುನ ರಾಶಿಯವರಿಗೆ ಶುಭ ದಿನಾಂಕಗಳು: 1, 4, 12, 20, 29, 30. ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರ. ಮಿಥುನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಮಿಥುನ ರಾಶಿಯವರಿಗೆ ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು, ಮಿಥುನ ರಾಶಿಯವರಿಗೆ ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಮಿಥುನ ರಾಶಿಯವರಿಗೆ ಶುಭ ತಿಂಗಳು: ಜುಲೈ 15ರಿಂದ ಆಗಸ್ಟ್ 15 ಮತ್ತು ಮಾರ್ಚ್ 15ರಿಂದ ಮೇ 14. ಮಿಥುನ ರಾಶಿಯವರಿಗೆ ಶುಭ ಹರಳು: ಪಚ್ಚೆ ಹಸಿರು, ಝೆರ್ಕೋನ್ ಮತ್ತು ನೀಲಮಣಿ. ಮಿಥುನ ರಾಶಿಯವರಿಗೆ ಶುಭ ರಾಶಿ: ತುಲಾ ಮತ್ತು ಕುಂಭ. ಮಿಥುನ ರಾಶಿಯವರಿಗೆ ಅಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೇಷ.
ಮಿಥುನ ರಾಶಿಯವರಿಗೆ ಶುಭ ಫಲಕ್ಕಾಗಿ ಸರಳ ಪರಿಹಾರಗಳು
1) ವಿಷ್ಣುಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2) ಈ ದಾನಗಳಿಂದ ಶುಭ ಫಲ: ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆ ಮತ್ತು ಕಡಲೆಬೇಳೆಯನ್ನು ದಾನ ನೀಡುವುದರಿಂದ ಖರ್ಚು ಕಡಿಮೆ ಆಗಲಿವೆ.
3) ದೇವಾಲಯ ಮತ್ತು ದೇವರ ಪೂಜೆ: ದುರ್ಗಾ ದೇವಾಲಯಕ್ಕೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಿ ಹೊಸ ಕೆಲಸ ಆರಂಭಿಸಿರಿ. ಹೀಗೆ ಮಾಡುವ ಮೂಲಕ ಶುಭ ಫಲ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಲಕ್ಷ್ಮೀದೇವಿ ಅಥವಾ ಅನ್ನಪೂರ್ಣೇಶ್ವರಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಪ್ರತಿದಿನ ಮನೆಯಲ್ಲಿರುವ ಚಿಕ್ಕ ಹೆಣ್ಣುಮಕ್ಕಳಿಗೆ ಕುಡಿಯಲು ಹಾಲನ್ನುನೀಡಿ ದಿನದ ಕೆಲಸ ಆರಂಭಿಸಿರಿ. ಒಣಗಿದ ಹೂ ಬಿಡುವ ಗಿಡಗಳನ್ನು ವಿಲೇವಾರಿ ಮಾಡಿ. ಹಳದಿ ಹೂ ಬಿಡುವ ಗಿಡಗಳಿಗೆ ನೀರು ಎರೆದರೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಹೂ ಗಳನ್ನು ಕಸದಲ್ಲಿ ಎಸೆಯದಿರಿ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು, ನೀಲಿ ಅಥವಾ ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.