logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Hanuman Jayanti: ಇಂದಿನಿಂದ ದ್ವಿಗುಣಗೊಳ್ಳಲಿದೆ ಈ ರಾಶಿಯವರ ಅದೃಷ್ಟ; ಕುಜನ ಜೊತೆ ಹನುಮನ ವಿಶೇಷ ಆಶೀರ್ವಾದ ನಿಮ್ಮ ಪಾಲಿಗಿದೆ

Hanuman Jayanti: ಇಂದಿನಿಂದ ದ್ವಿಗುಣಗೊಳ್ಳಲಿದೆ ಈ ರಾಶಿಯವರ ಅದೃಷ್ಟ; ಕುಜನ ಜೊತೆ ಹನುಮನ ವಿಶೇಷ ಆಶೀರ್ವಾದ ನಿಮ್ಮ ಪಾಲಿಗಿದೆ

Rakshitha Sowmya HT Kannada

Apr 23, 2024 07:05 AM IST

google News

ಹನುಮಾನ್ ಜಯಂತಿ ಶುಭಾಶಯಗಳು

  • Hanuman Jayanti 2024:  ಭಕ್ತರು ನಾಡಿನಾದ್ಯಂತ ಶ್ರದ್ದಾ ಭಕ್ತಿಯಿಂದ ಹನುಮ ಜಯಂತಿಯನ್ನು ಆಚರಿಸುತ್ತಿದ್ದಾರೆ. ರಾಮಭಂಟ ಹನುಮನನ್ನು ಭಕ್ತರು ಜೀನವದಲ್ಲಿ ಸುಖ, ಸಂತೋಷ ನೀಡುವಂತೆ ಪ್ರಾರ್ಥಿಸುತ್ತಿದ್ದಾರೆ. ಇದೇ ಸಮಯದಲ್ಲಿ ಹನುಮ ಜಯಂತಿಯಿಂದ ಕೆಲವು ರಾಶಿಚಕ್ರದವರ ಜೀವನ ಸಾಕಷ್ಟು ಬದಲಾಗುತ್ತಿದೆ.

ಹನುಮಾನ್ ಜಯಂತಿ ಶುಭಾಶಯಗಳು
ಹನುಮಾನ್ ಜಯಂತಿ ಶುಭಾಶಯಗಳು

ಹನುಮ ಜಯಂತಿ: ಶ್ರೀರಾಮ ನವಮಿಯ ನಂತರ ಚೈತ್ರ ಹುಣ್ಣಿಮೆಯ ದಿನದಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವಾರ ಹನುಮಂತನ ಪೂಜೆಗೆ ಮೀಸಲಾದ ದಿನ. ಹೀಗಾಗಿ ಮಂಗಳವಾರ ಹನುಮ ಜಯಂತಿ ಬಂದಿರುವುದರಿಂದ ಈ ಬಾರಿಯ ಹನುಮ ಜಯಂತಿಗೆ ಇನ್ನಷ್ಟು ಪ್ರಾಮುಖ್ಯತೆ ಹೆಚ್ಚಾಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳವನ್ನು ಎಲ್ಲಾ ಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹನುಮ ಜಯಂತಿಯ ದಿನದಂದು ಕುಂಭ ರಾಶಿಯಿಂದ ಮಂಗಳನು ​​ಮೀನರಾಶಿಗೆ ಪ್ರವೇಶ ಮಾಡಲಿದ್ದಾನೆ. ಹನುಮ ಜಯಂತಿ, ಕುಜು ಸಂಕ್ರಮಣ, ಚೈತ್ರ ಪೌರ್ಣಮಿಯಂತಹ ಶುಭ ಸಂದರ್ಭಗಳು ಕೆಲವು ರಾಶಿಚಕ್ರದವರಿಗೆ ತುಂಬಾ ಪ್ರಯೋಜನಕಾರಿ. ಈ ನಾಲ್ಕು ರಾಶಿಯವರು ಕುಜ ಗ್ರಹದ ಜೊತೆಗೆ ಹನುಮಂತನ ವಿಶೇಷ ಆಶೀರ್ವಾದವನ್ನು ಹೊಂದಿರುತ್ತಾರೆ. ಇಂದಿನಿಂದ ಈ ರಾಶಿಚಕ್ರದ ಚಿಹ್ನೆಗಳ ಅದೃಷ್ಟವು ದ್ವಿಗುಣಗೊಳ್ಳಲಿದೆ

ವೃಷಭ ರಾಶಿ

ಹನುಮ ಜಯಂತಿಯ ದಿನದಂದು ಮಂಗಳವು ರಾಶಿಚಕ್ರದ ಮೂಲಕ ಸಾಗುತ್ತದೆ ಮತ್ತು ವೃಷಭ ರಾಶಿಯು ಉತ್ತಮ ಫಲಿತಾಂಶಗಳನ್ನು ಪಡೆಯುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿಗೆ ಅವಕಾಶವಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ಹೊಸ ಆದಾಯ ಮಾರ್ಗಗಳು ಲಭ್ಯವಿವೆ. ಆರೋಗ್ಯ ಸುಧಾರಿಸುತ್ತದೆ. ಕಷ್ಟಪಟ್ಟು ಕೆಲಸ ಮಾಡುವ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇದು ಅತ್ಯುತ್ತಮ ಸಮಯ. ವ್ಯಾಪಾರದಲ್ಲಿ, ನೀವು ದೊಡ್ಡ ಲಾಭವನ್ನು ಪಡೆಯುತ್ತೀರಿ. ಶತ್ರುಗಳು ನಿಮಗೆ ಕಠಿಣ ಸ್ಪರ್ಧೆಯನ್ನು ನೀಡಿದರೂ, ಶಕ್ತಿಯುತ ಸಾಮರ್ಥ್ಯದಿಂದ ನೀವು ಜಯಶಾಲಿಯಾಗಲಿದ್ದೀರಿ.

ತುಲಾ ರಾಶಿ

ಮಂಗಳ ಸಂಕ್ರಮಣ ಹಾಗೂ ಹನುಮಂತನ ಕೃಪೆಯಿಂದ ತುಲಾ ರಾಶಿಯವರಿಗೆ ಉತ್ತಮ ಲಾಭಗಳು ಸಿಗಲಿವೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಭೌತಿಕ ಯಶಸ್ಸನ್ನು ಪಡೆಯುತ್ತೀರಿ. ಸಂಗಾತಿಯ ಬೆಂಬಲ ದೊರೆಯುತ್ತದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಹಣದ ಹರಿವು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ದೊರೆಯಲಿದೆ. ಈ ಸಮಯದಲ್ಲಿ ಭೂಮಿ ಅಥವಾ ವಾಹನ ಖರೀದಿಗೆ ಅವಕಾಶವಿದೆ. ವಿದೇಶಿ ಮೂಲಗಳಿಂದ ನೀವು ಅನಿರೀಕ್ಷಿತ ಲಾಭವನ್ನು ಪಡೆಯುತ್ತೀರಿ. ಆದಾಯದಲ್ಲಿ ಹೆಚ್ಚಳವಾಗಲಿದೆ. ಕೆಲಸದಲ್ಲಿ ನೀವು ಸಹೋದ್ಯೋಗಿಗಳಿಂದ ಸಹಾಯ ಪಡೆಯುತ್ತೀರಿ.

ಧನು ರಾಶಿ

ಹನುಮ ಜಯಂತಿಯಿಂದ ಧನು ರಾಶಿಯವರಿಗೆ ಹಣದ ಸಮಸ್ಯೆ ದೂರವಾಗಲಿದೆ. ಭೌತಿಕ ಸೌಲಭ್ಯಗಳು ಹೆಚ್ಚುತ್ತವೆ. ಕಠಿಣ ಪರಿಶ್ರಮ ಪ್ರತಿಫಲ ಕೊಡುತ್ತದೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನೀವು ದೀರ್ಘಕಾಲ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರ ಬೆಂಬಲ ಸಿಗುತ್ತದೆ. ಉದ್ಯೋಗಿಗಳಿಗೆ ಬಡ್ತಿಯ ಹೆಚ್ಚಿನ ಅವಕಾಶಗಳಿವೆ. ಕೆಲಸದ ಮೇಲಿನ ನಿಮ್ಮ ಸಮರ್ಪಣೆಯು ಮೇಲಧಿಕಾರಿಗಳ ಮೆಚ್ಚುಗೆಯನ್ನು ಗಳಿಸುತ್ತದೆ.

ಕುಂಭ ರಾಶಿ

ಕುಂಭ ರಾಶಿಯವರು ಅನಿರೀಕ್ಷಿತ ಆದಾಯದ ಮೂಲಗಳಿಂದ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ವ್ಯಾಪಾರ ಪರಿಸ್ಥಿತಿಗಳು ಪ್ರಬಲವಾಗಿವೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವೃತ್ತಿ ವ್ಯವಹಾರದಲ್ಲಿ ಪ್ರಗತಿ ಅಧಿಕವಾಗಿರಲಿದೆ. ವೃತ್ತಿಪರ ಜೀವನದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ನಿಮ್ಮನ್ನು ಸಂತೋಷಪಡಿಸುತ್ತವೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನೇಕ ಬದಲಾವಣೆಗಳು ನಿಮ್ಮ ಮನಸ್ಸನ್ನು ಸಂತೋಷಪಡಿಸುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ