logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Health Horoscope 2024: ಶ್ವಾಸಕೋಶಕ್ಕೆ ಸಂಬಂಧಿಸಿದ ದೋಷ, ಕಬ್ಬಿಣದ ವಸ್ತುವಿನಿಂದ ಸೋಂಕು; ಧನು, ಮಕರ ಆರೋಗ್ಯ ಭವಿಷ್ಯ

Health Horoscope 2024: ಶ್ವಾಸಕೋಶಕ್ಕೆ ಸಂಬಂಧಿಸಿದ ದೋಷ, ಕಬ್ಬಿಣದ ವಸ್ತುವಿನಿಂದ ಸೋಂಕು; ಧನು, ಮಕರ ಆರೋಗ್ಯ ಭವಿಷ್ಯ

HT Kannada Desk HT Kannada

Feb 07, 2024 06:09 AM IST

google News

ಧನು, ಮಕರ ಆರೋಗ್ಯ ಭವಿಷ್ಯ

  • Health Horoscope 2024: ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಆದರೆ ಕೆಲವೊಮ್ಮೆ ಎಷ್ಟೇ ಮುನ್ನೆಚರಿಕೆ ವಹಿಸಿದರೂ ಆರೋಗ್ಯ ಏರುಪೇರಾಗುತ್ತದೆ. ಇದಕ್ಕೆ ಆಹಾರ ಕ್ರಮ ಒಂದೆಡೆ ಆದರೆ, ಗ್ರಹಗತಿಗಳ ಪ್ರಭಾವ ಕೂಡಾ ಕಾರಣವಾಗಿರಬಹುದು. 2024ರಲ್ಲಿ ದ್ವಾದಶ ರಾಶಿಗಳ ಆರೋಗ್ಯ ಹೇಗಿರಲಿದೆ? ಇಲ್ಲಿದೆ ಮಾಹಿತಿ.

ಧನು, ಮಕರ ಆರೋಗ್ಯ ಭವಿಷ್ಯ
ಧನು, ಮಕರ ಆರೋಗ್ಯ ಭವಿಷ್ಯ

ಆರೋಗ್ಯ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Health Horoscope 2024).

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ಧನಸ್ಸು

ಉಪಯೋಗವಿಲ್ಲದ ವಿಚಾರಕ್ಕೆ ಯೋಚನೆ ಮಾಡುವುದು ಬಿಡಬೇಕು. ವಿಶ್ರಾಂತಿ ಇಲ್ಲದೆ ಕೆಲಸ ನಿರ್ವಹಿಸುವುದು ನಿಮ್ಮ ಸಹಜ ಗುಣವಾಗುತ್ತದೆ. ಇದರಿಂದಾಗಿ ಮಾನಸಿಕವಾಗಿ ನೆಮ್ಮದಿ ಮರೆಯಾಗುತ್ತದೆ. ಇದರಿಂದಾಗಿ ಅರೆ ತಲೆಶೂಲೆ ನಿಮ್ಮನ್ನು ಕಾಡಬಹುದು. ಕರುಳುಬೇನೆಯಿಂದ ತೊಂದರೆ ಅನುಭವಿಸುವಿರಿ. ಕಲುಷಿತ ನೀರಿನಿಂದ ರೋಗ ಉಂಟಾಗುತ್ತದೆ. ಅಜೀರ್ಣದ ತೊಂದರೆ ಇರುತ್ತದೆ. ಸಾಧ್ಯವಾದಷ್ಟು ಕರಿದ ಪದಾರ್ಥಗಳನ್ನು ಕಡಿಮೆ ಸೇವಿಸುವುದು ಒಳ್ಳೆಯದು. ರಕ್ತದ ದೋಷದಿಂದ ಮುಖದ ಸೌಂದರ್ಯ ಕೆಡಬಹುದು.

ಏಪ್ರಿಲ್ ನಂತರದ ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಆದರೆ ಉಸಿರಿಗೆ ಸಂಬಂಧಿಸಿದ ಮುಖ್ಯವಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ದೋಷವಿರುತ್ತದೆ. ಆರೋಗ್ಯ ಸಮಸ್ಯೆಯಿಂದ ಹೊರ ಬರಲು ದ್ರವರೂಪದ ಔಷಧಿಗಳು ಸಹಾಯ ಮಾಡುತ್ತವೆ. ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು ಬಹು ದಿನಗಳ ಕಾಲ ಕಾಡಿಸಬಹುದು. ಆದ್ದರಿಂದ ದೇಹದ ಶುದ್ಧತೆ ಬಗ್ಗೆ ಗಮನ ಹರಿಸಿ. ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ದೀರ್ಘ ಕಾಲ ಕಾಡುವ ರೋಗಗಳಿಂದ ಮುಕ್ತರಾಗುವಿರಿ. ಕುಟುಂಬದ ಹಿರಿಯರೊಬ್ಬರ ಮಾರ್ಗದರ್ಶನ ಮತ್ತು ಸಮಾಧಾನದ ಮಾತು ಇದಕ್ಕೆ ಕಾರಣವಾಗಬಹುದು. ಸ್ತ್ರೀಯರಿಗೆ ಹಾರ್ಮೋನ್‌ ಸಮಸ್ಯೆ ಕಂಡುಬರುತ್ತದೆ. ಇದರಿಂದ ಹೊರ ಬರಲು ದೈಹಿಕ ಕಸರತ್ತು ಬಹಳ ಮುಖ್ಯ.

ಆಹಾರ ಸೇವನೆಯ ಬದಲಾವಣೆಗಳು ಉತ್ತಮ ಆರೋಗ್ಯ ನೀಡುತ್ತದೆ. ಅಕ್ಟೋಬರ್ ಮತ್ತು ನವಂಬರ್ ತಿಂಗಳಿನಲ್ಲಿ ಮೂಲವ್ಯಾಧಿಯಂತಹ ತೊಂದರೆ ಉಂಟಾಗುತ್ತದೆ. ಪಿತ್ತಕೋಶ ಅಥವಾ ಮೂತ್ರಕೋಶದಲ್ಲಿ ಇರುವ ಕಲ್ಲುಗಳು ಶಸ್ತ್ರಚಿಕಿತ್ಸೆ ಇಲ್ಲದೆ ಕರಗುತ್ತವೆ. ಆರೋಗ್ಯದ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ವೈದ್ಯಕೀಯ ಸಲಹೆ ಮತ್ತು ಸಹನೆಯಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ಮಕರ

ಮಕರ ರಾಶಿಯವರನ್ನು ಬಹುತೇಕ ಪಿತ್ತದ ತೊಂದರೆಯಿಂದ ನರಳುತ್ತಾರೆ. ಧೂಳಿನಿಂದ ಉಂಟಾಗುವ ಸೋಂಕಿನ ಕಾರಣ ಒಣ ಕೆಮ್ಮು ಮತ್ತು ಗಂಟಲ ಕೆರೆತ ನಿಮ್ಮನ್ನು ಕಾಡಬಹ್ಕುದು. ಕೆಲವರಿಗೆ ಶ್ವಾಸಕೋಶದ ತೊಂದರೆ ಉಂಟಾಗಲಿದೆ. ಹೊಸ ಬಗೆಯ ಜೀವನಶೈಲಿ ಆರೋಗ್ಯದಲ್ಲಿ ತೊಂದರೆ ಉಂಟು ಮಾಡುತ್ತದೆ. ಮಾಡುವ ಕೆಲಸಕ್ಕೆ ತಕ್ಕಷ್ಟು ವಿಶ್ರಾಂತಿ ತೆಗೆದುಕೊಳ್ಳುವಿರಿ. ಹೆಚ್ಚಿನ ಹೊತ್ತು ನಿದ್ದೆಯನ್ನು ಮಾಡುವಿರಿ. ಇದರಿಂದ ಆರೋಗ್ಯದಲ್ಲಿ ಬದಲಾವಣೆಗಳು ಕಾಣುತ್ತವೆ. ಕಬ್ಬಿಣದ ವಸ್ತುವಿನಿಂದ ಸೋಂಕು ಉಂಟಾಗಬಹುದು. ಎಚ್ಚರಿಕೆ ಇರಲಿ. ಕೆಲವೊಮ್ಮೆ ಯಾವುದೇ ಔಷಧಿಗಳಿಂದ ಪ್ರಯೋಜನ ಆಗದಿರಬಹುದು.

ಏಪ್ರಿಲ್ ತಿಂಗಳ ನಂತರ ಕ್ರಮೇಣ ಆತ್ಮಸ್ಥೈರ್ಯ ಹೆಚ್ಚುತ್ತದೆ. ಅತಿಯಾದ ಯೋಚನೆಯಿಂದ ಹೊರ ಬಂದು ಕ್ರಿಯಾಶೀಲರಾಗಿ ನಡೆದುಕೊಳ್ಳುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಮಾರ್ಪಾಟುಗಳು ಕಂಡು ಬರುತ್ತವೆ. ದೇಹವು ಔಷಧಿಗಳಿಗೆ ಸ್ಪಂದಿಸುವ ಕಾರಣ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಸಾಧ್ಯವಾದಷ್ಟು ಒಂಟಿತನದಿಂದ ಮುಕ್ತರಾಗಬೇಕು. ಜೀವನದಲ್ಲಿ ಸಂತೋಷಕರ ವಾತಾವರಣವಿದ್ದರೆ ಹಾರ್ಮೋನ್ ಮತ್ತು ಎಂಝೈಮ್‌ಗಳ ಸ್ರವಿಕೆ ಹತೋಟಿಗೆ ಬರುತ್ತದೆ. ಸ್ತ್ರೀಯರು ಆರೋಗ್ಯ ಕಾಪಾಡಿಕೊಳ್ಳಲು ಕೆಲಸ ಕಾರ್ಯದ ನಡುವೆ ವಿಶ್ರಾಂತಿಯನ್ನು ಪಡೆಯಲೇಬೇಕು. ಮಧುಮೇಹದ ತೊಂದರೆ ಇದ್ದವರು ಆರೋಗ್ಯದ ಬಗ್ಗೆ ಅಸಡ್ಡೆ ತೋರಬಾರದು. ಸಮಯಕ್ಕೆ ಸರಿಯಾಗಿ ದೊರೆಯುವ ವೈದ್ಯಕೀಯ ಚಿಕಿತ್ಸೆ ಆರೋಗ್ಯವನ್ನು ಕಾಪಾಡುತ್ತದೆ. ತಿನ್ನುವ ಆಹಾರ ಜೀರ್ಣವಾಗುವಂತೆ ನೋಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ಆಹಾರ ಅಥವಾ ಔಷಧಿ ಸೇವಿಸದೆ ಹೋದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ.

ಹಸುಕೂಸುಗಳಿಗೆ ಕಫ ಕಟ್ಟುವ ಅಥವಾ ನೆಗಡಿಯ ಸಮಸ್ಯೆ ತಲೆದೋರಲಿದೆ. ಒಳ್ಳೆಯ ವಾತಾವರಣ ಮತ್ತು ಉಸಿರಾಡಲು ಶುದ್ಧ ಗಾಳಿಯನ್ನು ಒದಗಿಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ವಿದ್ಯಾರ್ಥಿಗಳು ಖಿನ್ನತೆಗೆ ಜಾರದಂತೆ ನೋಡಿಕೊಳ್ಳಬೇಕು. ಕೆಲಸ ಕಾರ್ಯದ ನಡುವೆ ನಗುನಗುತ್ತಾ ಬಾಳಿದರೆ ಉತ್ತಮ ಆರೋಗ್ಯ ದೊರೆಯುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ