logo
HT ಕನ್ನಡ' ನಿಮಗೆ ನೋಟಿಫಿಕೇಶನ್ ಕಳಿಸಲಿದೆ. ಸಬ್‌ಸ್ಕ್ರೈಬ್ ಮಾಡಲು ಸರಿ ಕ್ಲಿಕ್ ಮಾಡಿ.
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 24: ಜಂಕ್‌ ಫುಡ್‌ನಿಂದ ದೂರವಿದ್ದಷ್ಟೂ ಒಳ್ಳೆಯದು, ಆಹಾರ ಕ್ರಮವೇ ಉತ್ತಮ ಆರೋಗ್ಯದ ಆಪ್ತಮಿತ್ರ

ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 24: ಜಂಕ್‌ ಫುಡ್‌ನಿಂದ ದೂರವಿದ್ದಷ್ಟೂ ಒಳ್ಳೆಯದು, ಆಹಾರ ಕ್ರಮವೇ ಉತ್ತಮ ಆರೋಗ್ಯದ ಆಪ್ತಮಿತ್ರ

HT Kannada Desk HT Kannada

Jul 24, 2024 10:35 AM IST

ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 24: ಜಂಕ್‌ ಫುಡ್‌ನಿಂದ ದೂರವಿದ್ದಷ್ಟೂ ಒಳ್ಳೆಯದು, ಆಹಾರ ಕ್ರಮವೇ ಉತ್ತಮ ಆರೋಗ್ಯದ ಆಪ್ತಮಿತ್ರ

  • ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 24: ಹನ್ನೆರಡು ರಾಶಿಗಳ ಆರೋಗ್ಯ ಭವಿಷ್ಯ ಪ್ರಕಾರ,  ಆರೋಗ್ಯ ಸಮಸ್ಯೆ ಇರುವವರು ಆಹಾರ ಕ್ರಮದತ್ತ ಗಮನ ಹರಿಸಬೇಕು. ಪೌಷ್ಠಿಕ ಆಹಾರವೇ ನಿಮ್ಮ ಆರೋಗ್ಯದ ಆಪ್ತಮಿತ್ರ ಎಂಬುದನ್ನು ಗಮನದಲ್ಲಿಡಿ. ದ್ವಾದಶ ರಾಶಿಗಳ ಆರೋಗ್ಯ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.

ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 24: ಜಂಕ್‌ ಫುಡ್‌ನಿಂದ ದೂರವಿದ್ದಷ್ಟೂ ಒಳ್ಳೆಯದು, ಆಹಾರ ಕ್ರಮವೇ ಉತ್ತಮ ಆರೋಗ್ಯದ ಆಪ್ತಮಿತ್ರ
ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 24: ಜಂಕ್‌ ಫುಡ್‌ನಿಂದ ದೂರವಿದ್ದಷ್ಟೂ ಒಳ್ಳೆಯದು, ಆಹಾರ ಕ್ರಮವೇ ಉತ್ತಮ ಆರೋಗ್ಯದ ಆಪ್ತಮಿತ್ರ

ಪಂಚಾಂಗ, ರಾಶಿ ಭವಿಷ್ಯಗಳನ್ನು ನೋಡದೆ ದಿನಚರಿ ಆರಂಭಿಸುವವರು ಕಡಿಮೆ. ಹೀಗೆ ಓದುವವರ ಗಮನ ಮೊದಲು ದಿನ ಹೇಗಿರಬಹುದು ಎಂಬುದರ ಕಡೆಗೆ ಹೋಗುತ್ತದೆ. ಅಲ್ಲಿ ಆರೋಗ್ಯ, ಕೆಲಸ, ಹಣಕಾಸು ಇತ್ಯಾದಿ ವಿಚಾರಗಳ ವಿವರಗಳ ಕಡೆಗೆ ಸಹಜವಾಗಿ ಕಣ್ಣು ಹಾಯಿಸುತ್ತಾರೆ. ಅಂತಹ ಕುತೂಹಲ ತಣಿಸುವುದಕ್ಕಾಗಿ ರಾಶಿಗಳ ಗ್ರಹಗತಿಗಳಿಗೆ ಅನುಗುಣವಾಗಿ 12 ರಾಶಿಗಳ ಆರೋಗ್ಯ ಜಾತಕವನ್ನು ಇಲ್ಲಿ ನೀಡಲಾಗಿದೆ.

ತಾಜಾ ಫೋಟೊಗಳು

ಕನ್ಯಾ ರಾಶಿಗೆ ಕೇತು ಸಂಚಾರದಿಂದ 3 ರಾಶಿಯವರಿಗೆ ಅದೃಷ್ಟ; ಇವರು ಮುಟ್ಟಿದೆಲ್ಲಾ ಬಂಗಾರ, ಸಂತೋಷ ಹೆಚ್ಚುತ್ತೆ

Oct 03, 2024 07:00 PM

ನಾಳಿನ ದಿನ ಭವಿಷ್ಯ: ವಿನಾಕಾರಣ ಕೋಪ ಮಾಡಿಕೊಳ್ಳುತ್ತೀರಿ, ಸ್ನೇಹಿತರ ಬೆಂಬಲದಿಂದ ಆರ್ಥಿಕ ಲಾಭ ಇರಲಿದೆ

Oct 03, 2024 04:56 PM

ಮೂಲ ತ್ರಿಕೋನ ರಾಜಯೋಗ: ಸಂಪತ್ತು ಈ ರಾಶಿಯವರನ್ನು ಹುಡುಕಿ ಬರುತ್ತೆ, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ

Oct 03, 2024 09:48 AM

Tomorrow Horoscope: ಆರ್ಥಿಕವಾಗಿ ಲಾಭದಾಯಕ ದಿನ; ತಾಳ್ಮೆಯಿಂದಿದ್ದರೆ ಮಾತ್ರ ನೀವಂದುಕೊಂಡಂತೆ ಆಗುತ್ತದೆ, ಕುಟುಂಬದ ಸಹಕಾರ ದೊರೆಯುತ್ತದೆ

Oct 02, 2024 04:43 PM

Tomorrow Horoscope: ಎಂದೋ ಸಾಲ ನೀಡಿದ್ದ ಹಣ ಇಂದು ನಿಮ್ಮ ಕೈ ಸೇರಬಹುದು, ವಾಹನ ಚಲಾಯಿಸುವಾಗ ಎಚ್ಚರವಿರಲಿ; ನಾಳಿನ ದಿನಭವಿಷ್ಯ

Oct 01, 2024 04:40 PM

ನಾಳಿನ ದಿನ ಭವಿಷ್ಯ: ಹಣ ಸಂಪಾದಿಸುವ ಬಗ್ಗೆ ಯೋಚಿಸುತ್ತೀರಿ, ಸ್ನೇಹಿತರು ನಿಮ್ಮ ಸಮಸ್ಯೆಗಳನ್ನ ಹೆಚ್ಚಿಸುತ್ತಾರೆ

Sep 30, 2024 04:29 PM

ಮೇಷ ರಾಶಿ

ದೈಹಿಕವಾಗಿ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದು ಉತ್ತಮ ದಿನ. ಹೊರಗೆ ಜಿಮ್‌ ಅಥವಾ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದರೆ ಜಾಗರೂಕರಾಗಿರಿ. ಅತಿಯಾದ ವರ್ಕೌಟ್‌ ಮಾಡದಂತೆ ಎಚ್ಚರವಹಿಸಿ. ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಧ್ಯಾನ ಅಥವಾ ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಸಮತೋಲಿತ ಆಹಾರದಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.

ವೃಷಭ ರಾಶಿ

ವೃಷಭ ರಾಶಿಯವರ ಆರೋಗ್ಯ ಇಂದು ಉತ್ತಮವಾಗಿರುತ್ತದೆ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡಬೇಕು. ಆರೋಗ್ಯಕರ ಆಹಾರ ಸೇವಿಸಿದರೆ ನಿಮ್ಮಷ್ಟು ಆರೋಗ್ಯವಂತ ವ್ಯಕ್ತಿಗಳು ಮತ್ತೊಬ್ಬರಿಲ್ಲ. ಪ್ರತಿದಿನ ತಪ್ಪದೆ ವ್ಯಾಯಾಮ ಮತ್ತು ಧ್ಯಾನ ಮಾಡಿ. ಆಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿಡುತ್ತದೆ.

ಮಿಥುನ ರಾಶಿ

ಇಂದು ನೀವು ನಿಮ್ಮ ಯೋಗಕ್ಷೇಮದ ಕಡೆಗೆ ಹೆಚ್ಚು ಗಮನ ನೀಡಬೇಕು. ಒತ್ತಡ ಹೆಚ್ಚಾಗಬಹುದು. ಆದ್ದರಿಂದ ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ಸಮತೋಲನವನ್ನು ಕಾಪಾಡಿಕೊಳ್ಳಲು ಧ್ಯಾನ ಅಥವಾ ಯೋಗ ಮಾಡಿ. ದೈಹಿಕ ಚಟುವಟಿಕೆಯು ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು. ಒಟ್ಟಾರೆ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಪೌಷ್ಟಿಕ ಆಹಾರ ಸೇವಿಸುವುದು ಒಳ್ಳೆಯದು.

ಕಟಕ ರಾಶಿ

ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆ ಗಮನ ಕೊಡಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡಿ. ಹೊಸ ಫಿಟ್ನೆಸ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಪ್ರಕೃತಿಯೊಂದಿಗೆ ಕೆಲವು ಕ್ಷಣಗಳನ್ನು ಕಳೆಯಿರಿ ಒತ್ತಡ ನಿರ್ವಹಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿಮ್ಮ ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡಿ. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ. ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.

ಸಿಂಹ ರಾಶಿ

ಸಿಂಹ ರಾಶಿಯವರು ದೈಹಿಕ ಚಟುವಟಿಕೆ ಮತ್ತು ಮಾನಸಿಕ ವಿಶ್ರಾಂತಿಯನ್ನು ಬ್ಯಾಲೆನ್ಸ್‌ ಮಾಡಬೇಕು. ಚುರುಕಾದ ನಡಿಗೆ, ಯೋಗ ಅಥವಾ ಜಿಮ್‌ನಲ್ಲಿ ದೇಹ ದಂಡಿಸುವುದು ನೀವು ಫಿಟ್‌ ಇರಲು ಸಹಾಯ ಮಾಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಮಾನಸಿಕ ಸ್ವಾಸ್ಥ್ಯವೂ ಅಷ್ಟೇ ಮುಖ್ಯ ಎಂಬುದನ್ನು ಗಮನದಲ್ಲಿಡಿ.

ಕನ್ಯಾ ರಾಶಿ

ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ದಿನ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ. ಅತಿಯಾದ ಒತ್ತಡವನ್ನು ತಪ್ಪಿಸಿ. ಯೋಗ ಅಥವಾ ಧ್ಯಾನ ಮಾನಸಿಕ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹದ ಅಗತ್ಯಗಳನ್ನು ಆಲಿಸಿ ಮತ್ತು ಅಗತ್ಯವಿದ್ದರೆ ವಿಶ್ರಾಂತಿಗೆ ಆದ್ಯತೆ ನೀಡಿ.

ತುಲಾ ರಾಶಿ

ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದೈಹಿಕ ಚಟುವಟಿಕೆ ಮತ್ತು ವಿಶ್ರಾಂತಿ ಎರಡಕ್ಕೂ ಸಮಯ ಮೀಸಲಿಡಿ. ಒತ್ತಡವನ್ನು ನಿರ್ವಹಿಸಲು ಯೋಗ ಅಥವಾ ಧ್ಯಾನದಂತಹ ಚಟುವಟಿಕೆಗಳತ್ತ ಗಮನ ನೀಡಿ. ಪೌಷ್ಠಿಕ ಆಹಾರ ಸೇವಿಸಿ. ಕಾಲ ಕಾಲಕ್ಕೆ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಸಿ.

ವೃಶ್ಚಿಕ ರಾಶಿ

ಆರೋಗ್ಯ, ನಿಮ್ಮ ಮೊದಲ ಆದ್ಯತೆ ಆಗಿರಬೇಕು. ನಿಮ್ಮ ದೇಹದ ಸಂಕೇತಗಳಿಗೆ ಗಮನ ಕೊಡಿ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಿ. ಇಂದು ಯೋಗ ಅಥವಾ ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡವನ್ನು ಹೋಗಲಾಡಿಸಬಹುದು.

ಮಕರ ರಾಶಿ

ಆರೋಗ್ಯ ಮತ್ತು ಸಂತೋಷಕ್ಕೆ ಇಂದು ಹೆಚ್ಚಿನ ಆದ್ಯತೆ ನೀಡುವನ್ನು ಮರೆಯದಿರಿ. ಪ್ರತಿದಿನ ತಪ್ಪದೆ ವ್ಯಾಯಾಮ ಮಾಡಿ. ನಿಮ್ಮ ದಿನಚರಿಯಲ್ಲಿ ದೈಹಿಕ ಚಟುವಟಿಕೆಗಳಿಗೆ ಆದ್ಯತೆ ನೀಡಿ. ತಪ್ಪದೆ ವಾಕಿಂಗ್‌ ಮಾಡಿ. ಜಂಕ್‌ ಫುಡ್‌ ಬಿಟ್ಟು ಪೌಷ್ಠಿಕ ಆಹಾರ ಸೇವಿಸಿ. ಒತ್ತಡ ನಿವಾರಿಸಲು ಯೋಗ ಮಾಡಿ.

ಕುಂಭ ರಾಶಿ

ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ಇಂದು ಪರಸ್ಪರ ಸಂಬಂಧ ಹೊಂದಿದೆ. ನಿಮ್ಮ ದೇಹ ಮತ್ತು ಮನಸ್ಸು ಎರಡನ್ನೂ ಉತ್ತೇಜಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿಮ್ಮನ್ನು ಸಮತೋಲನದಲ್ಲಿರಿಸಲು ಹೊಸ ಫಿಟ್ನೆಸ್‌ ದಿನಚರಿ ಆರಂಭಿಸಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಪೌಷ್ಠಿಕ ಆಹಾರ ಸೇವಿಸಿ.

ಮೀನ ರಾಶಿ

ಯೋಗಕ್ಷೇಮಕ್ಕೆ ಆದ್ಯತೆ ನೀಡಿ. ಅಗತ್ಯವಿದ್ದಾಗ ವಿರಾಮ ತೆಗೆದುಕೊಳ್ಳಿ. ಹೆಚ್ಚಿನ ಒತ್ತಡ ತಪ್ಪಿಸಿ. ಧ್ಯಾನವು ಒತ್ತಡ ನಿರ್ವಹಿಸಲು ಮತ್ತು ಮಾನಸಿಕ ಯೋಗಕ್ಷೇಮ ಸುಧಾರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಆಹಾರಗಳೊಂದಿಗೆ ನಿಮ್ಮ ದೇಹಕ್ಕೆ ಪೋಷಣೆ ನೀಡಿ. ಉತ್ತಮ ನಿದ್ರೆ ಮಾಡಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬಸಂಸ್ಕೃತಿಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

 

    ಹಂಚಿಕೊಳ್ಳಲು ಲೇಖನಗಳು

ನೋಟಿಫಿಕೇಶನ್ ಸೆಂಟರ್