ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 13; ಕರ್ಕದವರಿಗೆ ಆರೋಗ್ಯ ಸಮಸ್ಯೆ, ಮೇಷ ರಾಶಿಯವರು ಮನಸ್ಸು ಕೆಡಿಸಿಕೊಳ್ಳಬೇಡಿ, ಉಳಿದವರಿಗೇನು ಆರೋಗ್ಯಫಲ
Jul 13, 2024 01:49 PM IST
ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಜುಲೈ 13; ಕರ್ಕದವರಿಗೆ ಆರೋಗ್ಯ ಸಮಸ್ಯೆ, ಮೇಷ ರಾಶಿಯವರು ಮನಸ್ಸು ಕೆಡಿಸಿಕೊಳ್ಳಬೇಡಿ, ಉಳಿದವರಿಗೇನು ಆರೋಗ್ಯಫಲ ವಿವರ ಇಲ್ಲಿದೆ.
Health Horoscope Today July 13, 2024: ಹನ್ನೆರಡು ರಾಶಿಗಳ ಜುಲೈ 13 ರ ಹೆಲ್ತ್ ಫಿಟ್ನೆಸ್ ರಾಶಿ ಭವಿಷ್ಯ ಪ್ರಕಾರ, ಈ ದಿನ ಕರ್ಕದವರಿಗೆ ಆರೋಗ್ಯ ಸಮಸ್ಯೆ, ಮೇಷ ರಾಶಿಯವರು ಮನಸ್ಸು ಕೆಡಿಸಿಕೊಳ್ಳಬೇಡಿ, ಉಳಿದವರಿಗೇನು ಆರೋಗ್ಯಫಲ ಎಂಬುದರ ವಿವರ ಇಲ್ಲಿದೆ.
Health Horoscope Today July 13, 2024: ಪಂಚಾಂಗ, ರಾಶಿ ಭವಿಷ್ಯಗಳನ್ನು ನೋಡದೆ ದಿನಚರಿ ಆರಂಭಿಸುವವರು ಕಡಿಮೆ. ಹೀಗೆ ಓದುವವರ ಗಮನ ಮೊದಲು ದಿನ ಹೇಗಿರಬಹುದು ಎಂಬುದರ ಕಡೆಗೆ ಹೋಗುತ್ತದೆ. ಅಲ್ಲಿ ಆರೋಗ್ಯ, ಕೆಲಸ, ಹಣಕಾಸು ಇತ್ಯಾದಿ ವಿಚಾರಗಳ ವಿವರಗಳ ಕಡೆಗೆ ಸಹಜವಾಗಿ ಕಣ್ಣು ಹಾಯಿಸುತ್ತಾರೆ. ಅಂತಹ ಕುತೂಹಲ ತಣಿಸುವುದಕ್ಕಾಗಿ ರಾಶಿಗಳ ಗ್ರಹಗತಿಗಳಿಗೆ ಅನುಗುಣವಾಗಿ 12 ರಾಶಿಗಳ ಆರೋಗ್ಯ ಜಾತಕವನ್ನು ಇಲ್ಲಿ ಒದಗಿಸಲಾಗಿದೆ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ಮೇಷ ರಾಶಿ ಆರೋಗ್ಯ ರಾಶಿ ಭವಿಷ್ಯ
ಇಂದು ನೀವು ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ. ಇದು ನಿಮ್ಮ ಮಾನಸಿಕ ನೆಮ್ಮದಿ ಮತ್ತು ಸಂತೋಷವನ್ನು ಕಾಪಾಡುತ್ತದೆ. ದೀರ್ಘಕಾಲದ ಕಾಯಿಲೆಗಳು ನಿಯಂತ್ರಣದಲ್ಲಿರಬಹುದು. ನಿಮ್ಮ ಗೊಂದಲಮಯ ಆಲೋಚನೆಗಳನ್ನು ಶಾಂತಗೊಳಿಸಲು ನಿಮ್ಮ ವ್ಯಾಯಾಮ ಮತ್ತು ಧ್ಯಾನ ಅಭ್ಯಾಸಗಳನ್ನು ಮುಂದುವರಿಸಿ.
ಲವ್ ಟಿಪ್ಸ್: ರೊಮಾನ್ಸ್ ಭಾವ ಹೆಚ್ಚಿಸಲು ನೀವು ನಿಮ್ಮ ಸಂಗಾತಿಯೊಂದಿಗೆ ಕಿರು ಪ್ರವಾಸ, ಖಾಸಗಿಯಾಗಿ ಔತಣ ಸವಿಯುವುದರ ಕಡೆಗೆ ಗಮನಹರಿಸಬಹುದು.
ಚಟುವಟಿಕೆ ಸಲಹೆ: ಖಿನ್ನತೆ ನಿವಾರಿಸಲು ಸಹಾಯ ಮಾಡುವ ವಿಷಯಗಳ ಕುರಿತು ವೆಬ್ ಸರಣಿಯನ್ನು ವೀಕ್ಷಿಸಿ.
ಪ್ರೀತಿಗೆ ಅದೃಷ್ಟದ ಬಣ್ಣ: ಬಿಳಿ.
ಕೆಲಸಕ್ಕೆ ಅದೃಷ್ಟದ ಬಣ್ಣ: ಬೂದು.
ಆರೋಗ್ಯ ಸಲಹೆ: ಸಹಿಷ್ಣುಗಳಾಗಿರಿ
ವೃಷಭ ರಾಶಿ ಆರೋಗ್ಯ ಭವಿಷ್ಯ
ಇಂದು ನಿಮ್ಮ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ನೀವು ಗಮನಿಸಬಹುದು. ನಿಮ್ಮ ಮಾನಸಿಕ ಯೋಗಕ್ಷೇಮವು ಎಲ್ಲಕ್ಕಿಂತ ಆದ್ಯತೆಯನ್ನು ಪಡೆಯುವ ಸಾಧ್ಯತೆಯಿದೆ. ಯೋಗ ಮತ್ತು ಆಧ್ಯಾತ್ಮಿಕತೆಯು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ಮತ್ತು ನಿಮ್ಮ ಚಕ್ರಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಲವ್ ಟಿಪ್ಸ್: ನಿಮ್ಮ ಪ್ರೀತಿಯ ಜೀವನಕ್ಕೆ ರಂಗು ತುಂಬಲು ನಿಮ್ಮ ಸಂಗಾತಿಯೊಂದಿಗೆ ಕೆಲವು ಮನರಂಜನಾ ಚಟುವಟಿಕೆಗಳನ್ನು ಯೋಜಿಸಿ. ಚಟುವಟಿಕೆ ಸಲಹೆ: ಈಜು ಅಥವಾ ಕ್ರೀಡೆಯಲ್ಲಿ ತೊಡಗಿದರೆ ಉತ್ತಮ.
ಪ್ರೀತಿಗೆ ಅದೃಷ್ಟದ ಬಣ್ಣ: ಕೆಂಪು.
ಕೆಲಸಕ್ಕೆ ಅದೃಷ್ಟದ ಬಣ್ಣ: ತಿಳಿ ಹಳದಿ.
ಆರೋಗ್ಯ ಸಲಹೆ: ಉತ್ತಮ ಕೇಳುಗರಾಗಿರಿ.
ಮಿಥುನ ರಾಶಿ ಆರೋಗ್ಯ ಭವಿಷ್ಯ
ಇಂದು ನೀವು ಆರೋಗ್ಯ ಪ್ರಜ್ಞೆಯ ಸ್ನೇಹಿತರೊಂದಿಗೆ ಫಿಟ್ನೆಸ್ ತರಗತಿಗೆ ಸೇರಬಹುದು. ಆದಾಗ್ಯೂ, ನಿಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು, ಕಠಿಣ ಚಟುವಟಿಕೆಗಳನ್ನು ಅತಿಯಾಗಿ ಮಾಡಬೇಡಿ. ಇದು ನಿಮ್ಮ ಆರೋಗ್ಯವನ್ನು ಋಣಾತ್ಮಕ ರೀತಿಯಲ್ಲಿ ಹಾನಿಗೊಳಿಸಬಹುದು. ದೇಹ ನೀಡುವ ಎಚ್ಚರಿಕೆ ಚಿಹ್ನೆಗಳಿಗೆ ಗಮನ ಕೊಡಿ.
ಲವ್ ಟಿಪ್ಸ್ : ಸಂಬಂಧವು ಹೆಚ್ಚು ಕಾಲ ಉಳಿಯಲು, ಸಂತೋಷದ ಸಮಯವನ್ನು ಆನಂದಿಸಲು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭವಿಷ್ಯದ ಕುರಿತು ಚರ್ಚಿಸಿ.
ಚಟುವಟಿಕೆ ಸಲಹೆ: ನಿಮ್ಮನ್ನು ಹುರಿದುಂಬಿಸುವ ಸಂಗೀತವನ್ನು ಆಲಿಸಿ. ಪ್ರೀತಿಗೆ ಅದೃಷ್ಟ ಬಣ್ಣ: ತಿಳಿ ಹಸಿರು.
ಕೆಲಸಕ್ಕೆ ಅದೃಷ್ಟದ ಬಣ್ಣ: ಗುಲಾಬಿ ಕಂದು.
ಆರೋಗ್ಯ ಸಲಹೆ : ಸೌಮ್ಯಭಾವದಿಂದ ಇರಿ
ಕರ್ಕಾಟಕ ರಾಶಿ ಆರೋಗ್ಯ ಭವಿಷ್ಯ
ಇಂದು ಸಣ್ಣ ರೋಗಗಳು ಮತ್ತು ಅಲರ್ಜಿಗಳು ಉಂಟಾಗಬಹುದಾಗಿದ್ದು, ಮುಂಜಾಗ್ರತೆ ವಹಿಸಬೇಕು. ಅವುಗಳು ನಿಮ್ಮ ಆರೋಗ್ಯಕರ ಮನಸ್ಸು ಮತ್ತು ಉತ್ತಮ ದೇಹದ ನಡುವಿನ ಸಮತೋಲನಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಹೊಟ್ಟೆಯ ಅಸ್ವಸ್ಥತೆಯು ಒಟ್ಟಾರೆ ಆರೋಗ್ಯ ಕೆಡಿಸಬಹುದು. ಆದರೆ ಇದು ತಾತ್ಕಾಲಿಕವಾಗಿರಬಹುದು.
ಲವ್ ಟಿಪ್ಸ್: ನೀವು ಒಂಟಿಯಾಗಿದ್ದರೆ, ಹಿಂದಿನ ನೋವಿನ ಅನುಭವಗಳಿಂದಾಗಿ ನೀವು ತುಂಬಾ ಮೂಡ್ ಮತ್ತು ಮಾನಸಿಕವಾಗಿ ಕುಗ್ಗುವಿರಿ.
ಚಟುವಟಿಕೆಯ ಸಲಹೆ: ಸ್ನೇಹಿತನೊಂದಿಗೆ ಉದ್ಯಾನವನದಲ್ಲಿ ಅಡ್ಡಾಡುವುದು ಸಹಾಯ ಮಾಡುತ್ತದೆ.
ಪ್ರೀತಿಗೆ ಅದೃಷ್ಟದ ಬಣ್ಣ: ಬೀಜ್.
ಕೆಲಸಕ್ಕೆ ಅದೃಷ್ಟದ ಬಣ್ಣ: ನೇರಳೆ.
ಆರೋಗ್ಯ ಸಲಹೆ: ನಿಮ್ಮ ನಿರ್ಧಾರದ ಮೇಲೆ ನಂಬಿಕೆ ಇಡಿ.
ಸಿಂಹ ರಾಶಿ ಆರೋಗ್ಯ ಭವಿಷ್ಯ
ಇಂದು ಕೆಲಸದ ಹೊರೆ ಹೆಚ್ಚಾದಂತೆ, ಇದು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ಕಳವಳಕ್ಕೆ ಕಾರಣವಾಗಬಹುದು. ವ್ಯಾಯಾಮ ಮಾಡಿ ವಿಶ್ರಾಂತಿ ಪಡೆಯಬೇಕಾಗಬಹುದು. ಹೊಸ ಧ್ಯಾನ ತಂತ್ರಗಳನ್ನು ಕಲಿಯುವುದರಿಂದ ನಿಮ್ಮ ಗಮನವನ್ನು ಏಕಾಗ್ರಗೊಳಿಸುವುದನ್ನು ಹೆಚ್ಚಿಸಬಹುದು
ಲವ್ ಟಿಪ್ಸ್ : ನಿಮ್ಮ ಪ್ರೀತಿಯ ಜೀವನವು ಸ್ವಲ್ಪ ಒತ್ತಡದಿಂದ ಕೂಡಿರುತ್ತದೆ. ಅದನ್ನು ಸಹಜ ಸ್ಥಿತಿಗೆ ತರಲು ನಿಮ್ಮ ಸಂಗಾತಿಗೆ ಸಮಯವನ್ನು ನೀಡುವುದು ಮುಖ್ಯವಾಗಬಹುದು.
ಚಟುವಟಿಕೆಯ ಸಲಹೆ: ನಿಮ್ಮ ಬೀರುವನ್ನು ನೀಟಾಗಿ ಜೋಡಿಸಿ.
ಪ್ರೀತಿಗಾಗಿ ಅದೃಷ್ಟದ ಬಣ್ಣ: ನೀಲಿ.
ಕೆಲಸಕ್ಕೆ ಅದೃಷ್ಟದ ಬಣ್ಣ: ತಿಳಿ ಹಳದಿ.
ಆರೋಗ್ಯ ಸಲಹೆ: ಕುಗ್ಗಬೇಡಿ, ಎದೆಗುಂದದೆ ಮುನ್ನುಗ್ಗಿ
ಕನ್ಯಾ ರಾಶಿ ಆರೋಗ್ಯ ಭವಿಷ್ಯ
ಇಂದು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಸಹಾಯ ಬೇಕಾಗಬಹುದು. ಸಮಸ್ಯೆ ಮರುಕಳಿಸುವ ಸಾಧ್ಯತೆ ಹೆಚ್ಚು. ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಕಡೆಯಿಂದ ಹೆಚ್ಚುವರಿ ಪ್ರಯತ್ನ ಬೇಕಾಗಬಹುದು. ಆರೋಗ್ಯಕರ ಅಭ್ಯಾಸಗಳು ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಬಹುದು.
ಲವ್ ಟಿಪ್ಸ್: ಒಂಟಿಯಾಗಿರುವವರು ಶೀಘ್ರದಲ್ಲೇ ಹೊಂದಾಣಿಕೆಯ ಮತ್ತು ಅರ್ಥಮಾಡಿಕೊಳ್ಳುವ ಸಂಗಾತಿಯನ್ನು ಕಂಡುಕೊಳ್ಳಬಹುದು.
ಚಟುವಟಿಕೆಯ ಸಲಹೆ: ದೈಹಿಕ ಚಟುವಟಿಕೆ ಮತ್ತೆ ಶುರುಮಾಡಿ
ಪ್ರೀತಿಗೆ ಅದೃಷ್ಟದ ಬಣ್ಣ: ತಿಳಿ ಗುಲಾಬಿ.
ಕೆಲಸಕ್ಕೆ ಅದೃಷ್ಟದ ಬಣ್ಣ: ಪೀಚ್.
ಆರೋಗ್ಯ ಸಲಹೆ: ವಿವೇಚನೆಯಿಂದಿರಿ.
ತುಲಾ ರಾಶಿ ಆರೋಗ್ಯ ಭವಿಷ್ಯ
ನೀವು ಸಣ್ಣ ಆರೋಗ್ಯ ತೊಂದರೆಗಳನ್ನು ನಿರ್ಲಕ್ಷಿಸಿದರೆ, ಅವು ಆರೋಗ್ಯವನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಯಿದೆ. ದುರ್ಬಲಗೊಂಡ ಪ್ರತಿರಕ್ಷಣಾ ವ್ಯವಸ್ಥೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಟ್ಟುನಿಟ್ಟಾದ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ನಿಮ್ಮ ಆಹಾರಕ್ರಮದ ಮೇಲೆ ನಿಗಾವಹಿಸುವುದು ಅಗತ್ಯ.
ಲವ್ ಟಿಪ್ಸ್: ನಿಮ್ಮ ಉತ್ಸಾಹವು ಸಾರ್ವಕಾಲಿಕ ಉತ್ತುಂಗದಲ್ಲಿರಬಹುದು.
ಚಟುವಟಿಕೆಯ ಸಲಹೆ: ಬೆಳಿಗ್ಗೆ ಪಠಣ ಅಥವಾ ಪ್ರಾರ್ಥನೆ ಹೇಳುವುದರಿಂದ ಮನಸ್ಸು ಉಲ್ಲಾಸದಿಂದ ಇರಲು ಸಾಧ್ಯ.
ಅದೃಷ್ಟದ ಬಣ್ಣ ಪ್ರೀತಿ: ಹಳದಿ.
ಕೆಲಸಕ್ಕೆ ಅದೃಷ್ಟದ ಬಣ್ಣ: ತಿಳಿ ಬೂದು.
ಆರೋಗ್ಯ ಸಲಹೆ: ಸಮ ಭಾವ ಕಾಪಾಡಿಕೊಳ್ಳಿ.
ವೃಶ್ಚಿಕ ರಾಶಿ ಆರೋಗ್ಯ ಭವಿಷ್ಯ
ಇಂದು ನಿಮ್ಮ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವ ಸಾಧ್ಯತೆ ಇದೆ. ಕೆಲವು ಕಾಯಿಲೆಗಳಿಂದ ಮುಕ್ತರಾಗಿರಬಹುದು. ನೀವು ಉತ್ತಮ ಮೂಡ್ನಲ್ಲಿರುವ ಸಾಧ್ಯತೆಯಿದೆ. ನಿಮ್ಮ ದೈಹಿಕ ಸ್ಥಿತಿಯಲ್ಲಿ ಸಕಾರಾತ್ಮಕ ಮನೋಭಾವವು ಸ್ವತಃ ಪ್ರಕಟವಾಗಬಹುದು.
ಲವ್ ಟಿಪ್ಸ್: ಪ್ರೀತಿಯನ್ನು ನೈಜವಾಗಿಟ್ಟುಕೊಂಡು, ಒಂದೊಂದೇ ಹೆಜ್ಜೆ ಮುಂದಿಡುತ್ತ ಸಾಗುವ ನಿಮ್ಮ ಶೈಲಿ ಪ್ರಶಂಸೆಗೆ ಒಳಗಾಗಲಿದೆ.
ಚಟುವಟಿಕೆಯ ಸಲಹೆ : ಪ್ರಕೃತಿಯ ನಡುವೆ ಸಮಯ ಕಳೆಯಿರಿ.
ಪ್ರೀತಿಗೆ ಅದೃಷ್ಟದ ಬಣ್ಣ: ಆಲಿವ್ ಹಸಿರು.
ಕೆಲಸಕ್ಕೆ ಅದೃಷ್ಟದ ಬಣ್ಣ: ನೀಲಿ.
ಆರೋಗ್ಯ ಸಲಹೆ: ವಿವೇಚನೆಯ ವರ್ತನೆ ತೋರಿ.
ಧನು ರಾಶಿ ಆರೋಗ್ಯ ಜಾತಕ
ನಿಮ್ಮ ವ್ಯಾಯಾಮದ ದಿನಚರಿಯಿಂದಾಗಿ ನೀವು ಫಿಟ್ನೆಸ್ ಕಾಪಾಡುತ್ತೀರಿ. ನಿಮ್ಮ ಆಲೋಚನೆಗಳನ್ನು ವಿಶ್ರಾಂತಿ ಮತ್ತು ಶಾಂತಗೊಳಿಸಲು ಧ್ಯಾನವು ನಿಮಗೆ ಸಹಾಯ ಮಾಡುತ್ತದೆ. ಆಹಾರದ ಹೊಂದಾಣಿಕೆಗಳು ನಿಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.
ಲವ್ ಟಿಪ್ಸ್: ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ತಪ್ಪು ತಿಳಿವಳಿಕೆಯುಂಟಾಗುವ ಸಾಧ್ಯತೆಯಿದೆ. ಅದನ್ನು ನೀವು ಶಾಂತವಾಗಿ ಪರಿಹರಿಸಿಕೊಳ್ಳಬೇಕು.
ಚಟುವಟಿಕೆಯ ಸಲಹೆ: ಕೆಲಸದ ಮೊದಲು ಕೆಲವು ದೈಹಿಕ ವ್ಯಾಯಾಮ ಮಾಡುವುದರಿಂದ ಫಿಟ್ ಆಗಿರಲು ಸಹಾಯ ಮಾಡುತ್ತದೆ.
ಪ್ರೀತಿಗೆ ಅದೃಷ್ಟ ಬಣ್ಣ: ಮೆಜೆಂಟಾ.
ಕೆಲಸಕ್ಕೆ ಅದೃಷ್ಟದ ಬಣ್ಣ: ನಿಂಬೆ.
ಆರೋಗ್ಯ ಸಲಹೆ: ಅಚ್ಚುಕಟ್ಟುತನ ರೂಢಿಸಿಕೊಳ್ಳಿ
ಮಕರ ರಾಶಿ ಆರೋಗ್ಯ ಭವಿಷ್ಯ
ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ನಿತ್ಯದ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡುವ ಮೂಲಕ ನೀವು ಅನಗತ್ಯ ಒತ್ತಡದಿಂದ ಪರಿಹಾರವನ್ನು ಪಡೆಯಬಹುದು. ಆಹ್ಲಾದಕರ ಮಸಾಜ್ ಥೆರಪಿ ಸೆಷನ್ ಕೇವಲ ದೈಹಿಕ ಪರಿಹಾರವನ್ನು ನೀಡುವುದಿಲ್ಲ, ಆದರೆ ನಿಮ್ಮ ಇಂದ್ರಿಯಗಳನ್ನು ಶಮನಗೊಳಿಸುತ್ತದೆ.
ಲವ್ ಟಿಪ್ಸ್: ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳನ್ನು ಕ್ರಮೇಣ ಗ್ರಹಿಸಬಹುದು ಮತ್ತು ಪರಸ್ಪರ ಪ್ರತಿಕ್ರಿಯಿಸಬಹುದು.
ಚಟುವಟಿಕೆಯ ಸಲಹೆ: ಬೇಗ ಮಲಗಿ, ವಿಶ್ರಾಂತಿ ಪಡೆಯಿರಿ
ಪ್ರೀತಿಗೆ ಅದೃಷ್ಟದ ಬಣ್ಣ: ಕಡು ನೀಲಿ.
ಕೆಲಸಕ್ಕೆ ಅದೃಷ್ಟದ ಬಣ್ಣ: ಬೇಬಿ ಪಿಂಕ್.
ಆರೋಗ್ಯ ಸಲಹೆ: ಜಾಗೃತ ಭಾವ ಹೆಚ್ಚಿಸಿಕೊಳ್ಳಿ
ಕುಂಭ ರಾಶಿ ಆರೋಗ್ಯ ಜಾತಕ
ಇಂದು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದ ಸಂತೋಷದ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ದೀರ್ಘಕಾಲದ ಕಾಯಿಲೆಗಳನ್ನು ಪರಿಹರಿಸದಿದ್ದರೆ, ಅವು ಮರುಕಳಿಸಬಹುದು. ಲಘು ಚಟುವಟಿಕೆಗಳನ್ನು ಮಾಡುವ ಮೂಲಕ ಮತ್ತು ಆಹಾರದ ಮಾರ್ಪಾಡುಗಳನ್ನು ಮಾಡುವ ಮೂಲಕ ನೀವು ಆರೋಗ್ಯಕರ ಜೀವನಶೈಲಿಯನ್ನು ಸಾಧಿಸಬಹುದು.
ಲವ್ ಟಿಪ್ಸ್: ಇಂದು, ನೀವು ಖಚಿತ ನಿರ್ಧಾರವನ್ನು ತೆಗೆದುಕೊಳ್ಳಬೇಕು. ನಿಮ್ಮ ಪ್ರೀತಿಯ ಜೀವನವನ್ನು ಪ್ರಾರಂಭಿಸಲು ಯೋಜನೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ.
ಚಟುವಟಿಕೆ ಸಲಹೆ: ಪುಸ್ತಕವನ್ನು ಓದಿ.
ಪ್ರೀತಿಗೆ ಅದೃಷ್ಟ ಬಣ್ಣ: ಚಾಕೊಲೇಟ್.
ಕೆಲಸಕ್ಕೆ ಅದೃಷ್ಟದ ಬಣ್ಣ: ತಿಳಿ ಹಳದಿ.
ಆರೋಗ್ಯ ಸಲಹೆ: ಒಂದು ಸಲಕ್ಕೆ ಒಂದೇ ಕೆಲಸ ಮಾಡಿ, ಮಲ್ಟಿಟಾಸ್ಕಿಂಗ್ ಬೇಡ.
ಮೀನ ರಾಶಿ ಆರೋಗ್ಯ ಜಾತಕ
ಇಂದು ನಿಮ್ಮನ್ನು ಕಾಡುವ ಯಾವುದೇ ಪ್ರಮುಖ ಕಾಯಿಲೆಗಳಿಲ್ಲದಿರಬಹುದು. ನಿಮ್ಮ ಸ್ಥಿರ ವ್ಯಾಯಾಮ ಕಟ್ಟುಪಾಡು, ವಿಶ್ರಾಂತಿ ತಂತ್ರಗಳೊಂದಿಗೆ ಉತ್ತಮ ಆರೋಗ್ಯವು ಸಂಯೋಜಿಸಲ್ಪಟ್ಟಿದೆ. ಇದು ಆರೋಗ್ಯಕರ ಶರೀರ ಮತ್ತತು ಮನಸ್ಸುಗಳನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಕ್ರೀಡಾ ಚಟುವಟಿಕೆಗಳು ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡಬಹುದು.
ಲವ್ ಟಿಪ್ಸ್ : ನಿಮ್ಮ ಹಂಚಿಕೆಯ ಆಸಕ್ತಿಗಳು ನಿಮ್ಮನ್ನು ನಿಮ್ಮ ಸಂಗಾತಿಗೆ ಹತ್ತಿರ ತರಬಹುದು.
ಚಟುವಟಿಕೆಯ ಸಲಹೆ: ಚದುರಂಗ ಆಟ.
ಪ್ರೀತಿಗೆ ಅದೃಷ್ಟದ ಬಣ್ಣ: ಲ್ಯಾವೆಂಡರ್.
ಕೆಲಸಕ್ಕೆ ಅದೃಷ್ಟದ ಬಣ್ಣ: ಅರಣ್ಯ ಹಸಿರು.
ಆರೋಗ್ಯ ಸಲಹೆ: ಹೊಂದಾಣಿಕೆ ಮನೋಭಾವ ರೂಢಿಸಿಕೊಳ್ಳಿ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.