ಶ್ರೀಮದ್ ಭಗವದ್ಗೀತೆ ಮಾತ್ರವಲ್ಲ, ಬ್ರಹ್ಮಗೀತೆ, ಜನಕ ಗೀತೆ ಸೇರಿದಂತೆ ಹಿಂದೂ ಧರ್ಮದಲ್ಲಿದೆ ಒಟ್ಟು 60 ಗೀತೆಗಳು
Jul 07, 2024 07:15 AM IST
ಶ್ರೀಮದ್ ಭಗವದ್ಗೀತೆ ಮಾತ್ರವಲ್ಲ, ಬ್ರಹ್ಮಗೀತೆ, ಜನಕ ಗೀತೆ ಸೇರಿದಂತೆ ಹಿಂದೂ ಧರ್ಮದಲ್ಲಿದೆ ಒಟ್ಟು 60 ಗೀತೆಗಳು
ಮಹಾಭಾರತಕ್ಕೆ ಸಂಬಂಧಿಸಿದ ಶ್ರೀಮದ್ ಭಗವದ್ಗೀತೆ ಎಲ್ಲರಿಗೂ ಗೊತ್ತು. ಆದರೆ ಹಿಂದೂ ಧರ್ಮದಲ್ಲಿ ಅದಕ್ಕೂ ಹೆಚ್ಚು ಗೀತೆಗಳಿವೆ. ಬಕ ಗೀತೆ, ಭಿಕ್ಷುಗೀತೆ ,ಗೋಪಿ ಗೀತೆ, ಹಂಸಗೀತೆ ಸೇರಿದಂತೆ ಒಟ್ಟು 60 ಗೀತೆಗಳು ಇವೆ. ಅವುಗಳ ಹೆಸರು ಈ ರೀತಿ ಇವೆ.
ಭಗವದ್ಗೀತೆ ಎಲ್ಲರಿಗೂ ಗೊತ್ತು. ಇದರಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಅನೇಕ ಉಪದೇಶಗಳಿವೆ. ಗೀತೆಯನ್ನು ಪಾರಾಯಣ ಮಾಡಿದರೆ ಜನ್ಮ ಜನ್ಮಾಂತರಗಳ ಪಾಪ ನಿವಾರಣೆ ಆಗುತ್ತದೆ. ಮನೆ ಮನದಲ್ಲಿ ಸಕಾರಾತ್ಮಕತೆ ತುಂಬಿರುತ್ತದೆ. ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಮನಸ್ಸು ಶಾಂತಿಯಿಂದ ಇರುತ್ತದೆ ಎಂದು ನಂಬಲಾಗಿದೆ.
ತಾಜಾ ಫೋಟೊಗಳು
ನಮಗೆ ಗೊತ್ತಿರುವಂತೆ ಮಹಾಭಾರತ, ರಾಮಾಯಣ ಮತ್ತು ಮಹಾಪುರಾಣಗಳೊಂದಿಗೆ ಒಟ್ಟು ಸುಮಾರು 60 ಗೀತೆಗಳನ್ನು ಹೊಂದಿದೆ, ಅದರಲ್ಲಿ ಹೆಚ್ಚಿನವರಿಗೆ ತಿಳಿದಿರುವುದು, ಶ್ರೀಮದ್ ಭಗವದ್ಗೀತೆ ಮಾತ್ರ. ಆದರೆ ಹಿಂದೂ ಸಾಹಿತ್ಯದಲ್ಲಿ ಒಟ್ಟು 60 ಗೀತೆಗಳಿವೆ. ಗೀತಾ ಎಂಬ ಪದವು ದೀರ್ಘವಾದ ಪ್ರಾಚೀನ ಸಂಸ್ಕೃತ ಬರಹಗಳ ಒಳಗೆ ಇರುವ ಮಾಧುರ್ಯವನ್ನು ಸೂಚಿಸಲು ಬಳಸಲಾಗುವ ಸಾಮಾನ್ಯ ಪದಗುಚ್ಛವನ್ನು ಉಲ್ಲೇಖಿಸುತ್ತದೆ. ಇದರ ಜೊತೆಗೆ, ಅಷ್ಟಾವಕ್ರ, ಗಾಯತ್ರಿ ಮತ್ತು ಪಿಂಗಲ ಗೀತೆಗಳನ್ನು ಒಳಗೊಂಡಂತೆ ಏಕವ್ಯಕ್ತಿ ಗೀತೆಗಳು ಇವೆ, ಅವುಗಳು ದೀರ್ಘ ಪಠ್ಯಗಳಿಂದ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿವೆ.
ಹಿಂದೂ ಧರ್ಮದಲ್ಲಿರುವ ಒಟ್ಟು 60 ಗೀತೆಗಳ ಹೆಸರು ಈ ರೀತಿ ಇದೆ.
ಗುರು ಗೀತೆ
ಅಷ್ಟಾವಕ್ರ ಗೀತೆ
ಅವಧೂತ ಗೀತೆ
ಶೀಮದ್ ಭಗವದ್ಗೀತೆ
ಅನುಗೀತೆ
ಬ್ರಹ್ಮಗೀತೆ
ಜನಕ ಗೀತೆ
ರಾಮಗೀತೆ 1
ರಾಮಗೀತೆ 2
ರಿಭುಗೀತೆ
ಸಿದ್ಧಗೀತೆ
ಉತ್ತರಗೀತೆ
ಬಕ ಗೀತೆ
ಭಿಕ್ಷುಗೀತೆ
ಗೋಪಿ ಗೀತೆ
ಹಂಸಗೀತೆ
ಜೀವನ್ಮುಕ್ತ ಗೀತೆ
ಕಪಿಲ ಗೀತೆ
ನಹುಶ ಗೀತೆ
ನಾರದ ಗೀತೆ
ಪಾಂಡವಗೀತೆ
ರಿಷಭ ಗೀತೆ
ಶೌನಕ ಗೀತೆ
ಶ್ರುತಿ ಗೀತೆ
ಯುಗಳ ಗೀತೆ
ವ್ಯಾಧ ಗೀತೆ
ಯುಧಿಷ್ಠಿರ ಗೀತೆ
ಮೋಕ್ಷ ಗೀತೆ
ರಮಣ ಗೀತೆ
ಈಶ್ವರಗೀತೆ
ಗಣೇಶ ಗೀತೆ
ದೇವಿ ಗೀತೆ
ಪರಾಶರ ಗೀತೆ
ಪಿಂಗಳಾ ಗೀತೆ
ಬೋಧ ಗೀತೆ
ಯಮಗೀತೆ
ವಿಚಕ್ಷು ಗೀತೆ
ಮಂಕಿ ಮುನಿ ಗೀತೆ
ವ್ಯಾಸಗೀತೆ
ವೃತ್ರಗೀತೆ
ಶಿವಗೀತೆ
ಸಂಪಕ ಗೀತೆ
ಸೂತ ಗೀತೆ
ಸೂರ್ಯ ಗೀತೆ
ಹರಿತ ಗೀತೆ
ವಿಭೀಷಣ ಗೀತೆ
ಹನುಮದ್ ಗೀತೆ
ಅಗಸ್ತ್ಯ ಗೀತೆ
ಭರತ ಗೀತೆ
ಭೀಷ್ಮ ಗೀತೆ
ಬ್ರಾಹ್ಮಣ ಗೀತೆ
ರುದ್ರಗೀತೆ
ಸನತ್ಸುಜಾತ ಗೀತೆ
ಯೋಗಿ ಗೀತೆ
ವಲ್ಲಭ ಗೀತೆ
ವಿದುರ ಗೀತೆ
ವಿದ್ಯಾ ಗೀತೆ
ಭ್ರಮರ ಗೀತೆ
ವೇಣು ಗೀತೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.