ಸಾಲದ ಸಮಸ್ಯೆ ನೆಮ್ಮದಿಯಾಗಿರಲು ಬಿಡ್ತಿಲ್ವಾ?ಈ ಋಣ ವಿಮೋಚನ ಅಂಗಾರಕ ಸ್ತೋತ್ರ ಪಠಿಸಿ, ಸಾಲದ ಸುಳಿಯಿಂದ ಹೊರ ಬನ್ನಿ
Jun 08, 2024 01:51 PM IST
ಸಾಲದ ಸಮಸ್ಯೆ ನೆಮ್ಮದಿಯಾಗಿರಲು ಬಿಡ್ತಿಲ್ವಾ?ಈ ಋಣ ವಿಮೋಚನ ಅಂಗಾರಕ ಸ್ತೋತ್ರ ಪಠಿಸಿ, ಸಾಲದ ಸುಳಿಯಿಂದ ಹೊರ ಬನ್ನಿ
ಜೀವನದಲ್ಲಿ ಎಲ್ಲರೂ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುತ್ತಾರೆ. ಅದರಲ್ಲಿ ಬಹಳಷ್ಟು ಜನರು ಸಾಲದ ಸಮಸ್ಯೆಯಿಂದ ಹೊರ ಬರಲಾಗದೆ ಕಷ್ಟಪಡುತ್ತಾರೆ. ಪ್ರತಿದಿನ ಋಣ ವಿಮೋಚನ ಅಂಗಾರಕ ಸ್ತೋತ್ರ ಪಠಿಸಿದರೆ, ಈ ಶಕ್ತಿಶಾಲಿ ಮಂತ್ರದ ಪ್ರಭಾವದಿಂದ ಸಾಲದಿಂದ ವಿಮುಕ್ತಿ ಹೊಂದಬಹುದು.
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿನಂತೆ ಎಲ್ಲರೂ ಕಷ್ಟ ಬಂದಾಗ ದೇವರ ಮೊರೆ ಹೋಗುತ್ತಾರೆ. ಕಷ್ಟಪರಿಹರಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಕೆಲವರು ಒಳ್ಳೆ ವಿದ್ಯಾ ಬುದ್ಧಿ ಕೊಡು ಎಂದು ದೇವರಲ್ಲಿ ಕೇಳಿಕೊಂಡರೆ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಿರುವವರು ಒಳ್ಳೆ ಕೆಲಸ ದೊರೆಯಲಿ ಎಂದು ಪ್ರಾರ್ಥಿಸುತ್ತಾರೆ.
ತಾಜಾ ಫೋಟೊಗಳು
ವೃತ್ತಿ ಜೀವನದಲ್ಲಿ ಸೆಟಲ್ ಆದವರು ಮದುವೆ, ಸಂಸಾರ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಿದರೆ ಇನ್ನೂ ಕೆಲವರು ಶ್ರೀಮಂತಿಕೆ ದಯಪಾಲಿಸುವಂತೆ ಕೇಳಿಕೊಳ್ಳುತ್ತಾರೆ. ಹಾಗೇ ಇನ್ನೂ ಕೆಲವರು ಸಾಲದ ಸುಳಿಯಲ್ಲಿ ಸಿಲುಕಿರುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಸಾಲ ತೀರಿಸಲು ಆಗುವುದಿಲ್ಲ. ಅಂತವರು ಈ ಶಕ್ತಿಶಾಲಿ ಋಣ ವಿಮೋಚನ ಅಂಗಾರಕ ಸ್ತೋತ್ರವನ್ನು ಪಠಿಸಿದರೆ ಸಾಲದ ಸಮಸ್ಯೆಯಿಂದ ಹೊರ ಬರಬಹುದು. ಇದೊಂದು ಬಹಳ ಶಕ್ತಿಶಾಲಿ ಸ್ತೋತ್ರ. ಪ್ರತಿದಿನ ಪಾರಾಯಣ ಮಾಡುವುದರಿಂದ ಸಾಲ ಬಾಧೆ ದೂರವಾಗುತ್ತದೆ.
ಸ್ಕಂದ ಉವಾಚ
ಋಣ-ಗ್ರಸ್ತಾ ನರನಂತು ಋಣಮುಕ್ತಿಃ ಕಥಂ ಭವೇತ್ |
ಬ್ರಹ್ಮವಾಚ
ವಕ್ಷ್ಯೇಹಂ ಸರ್ವಲೋಕಾನಾಂ ಹಿತಾರ್ಥಂ ಹಿತಕಾಮದಮ್ |
ಅಸ್ಯ ಶ್ರೀ ಅಂಗಾರಕ ಸ್ತೋತ್ರ ಮಹಾಮಂತ್ರಸ್ಯ ಗೌತಮ ಋಷಿಃ ಅನು ಷ್ಟುಪ್ ಛಂದಃ ಅಂಗಾರಕೋ ದೇವತಾ ಮಮ ದ್ರಾಣ ವಿಮೋಚನಾರ್ಥೇ ಜಪೇ ವ್ಯಾಲಹಃ |
ಧ್ಯಾನಮ್
ರಕ್ತಮಾಲ್ಯಾಂಬರಧರಃ ಶೂಲಶಕ್ತಿ ಗದಾಧರಃ |
ಚತುರ್ಭುಜೋ ಮೇಷಗತೋ ವರದಶ್ಚ ಧರಸುತಃ ||
ಮಂಗಲೋ ಭೂಮಿಪುತ್ರಶ್ಚ ದ್ರಣಹರ್ತಾ ಧನಪ್ರದಃ |
ಶಿಷ್ಟಾಸನೋ ಮಹಾಕಾಯೋ ಸರ್ವಕಾಮಫಲಪ್ರದಃ ||
ಲೋಹಿತೋ ಲೋಹಿತಾಕ್ಷಶ್ಚ ಸಮಗಾನಂ ಕೃಪಾಕರಃ |
ಧರಾತ್ಮಜಃ ಕುಜೋ ಭೌಮೋ ಭೂಮಿಜೋ ಭೂಮಿನಂದನಃ ||
ಅಂಗಾರಕೋ ಯಮಶ್ಚೈವ ಸರ್ವರೋಗಪಹಾರಕಃ |
ಸೃಷ್ಟಿಃ ಕರ್ತಾ ಚ ಹರ್ತಾ ಚ ಸರ್ವದೇವೈಶ್ಚಪೂಜಿತಃ ||
ಏತಾನಿ ಕುಜ ನಾಮಾನಿ ನಿತ್ಯಂ ಯಃ ಪ್ರಯತಃ ಪರೇತ್ |
ಸಾಲ ಪಡೆದರೆ ಹಣದ ಲಭ್ಯತೆಯ ಬಗ್ಗೆ ಅನುಮಾನ ಮೂಡುತ್ತದೆ
ಅಂಗಾರಕ ಮಹಿಪುತ್ರ ಭಗವಾನ್ ಭಕ್ತವತ್ಸಲಃ |
ನಮೋಸ್ತುತೇ ಮಮಶೇಷ ದ್ರಮ್ಮಶು ವಿನಯಾಯ ||
ರಕ್ತಗಂಧೈಶ್ಚ ಪುಷ್ಪೈಶ್ಚ ಧೂಪಾಧಿಪೈರ್ಗುಡೋದಕೈಃ |
ಮಂಗಲಂ ಪೂಜೈತ್ವಾಗೆ ಮಂಗಳಹನಿ ಸರ್ವದಾ ||
ಏಕವಿಂಸತಿ ನಾಮಾನಿ ಪಠಿತ್ವಾತು ತದಂಡಕೇ |
ದ್ನರೇಖಾಃ ಪ್ರಕರ್ತವ್ಯಃ ಅಂಗರೇಣ ತದಾಗ್ರತಃ ||
ತಶ್ಚ ಪ್ರಮಾರ್ಜಯೇತ್ಪಶ್ಚಾತ್ ವಾಮಪದೇನ ಸಂಸ್ಪೃಶತ್ |
ಮೂಲಮಂತ್ರಃ |
ಅಂಗಾರಕ ಮಹಿಪುತ್ರ ಭಗವಾನ್ ಭಕ್ತವತ್ಸಲ |
ನಮೋಸ್ತುತೇ ಮಹಾಶೇಷರುಣಾಮಶು ವಿಮೋಚಾಯ ||
ಏವಂ ಕೃತೇ ನ ದುಬ್ಕು ದ್ರಾಣಾಂ ಹಿತ್ವಾ ಧನಿ ಭವೇತ್ ||
ಮಹತಿಂ ಶ್ರೀಮಾಪ್ನೋತಿ ಹ್ಯಪರೋ ಧನದೋ ಯಥಾ |
ಅರ್ಗ್ಯಂ
ಅಂಗಾರಕ ಮಹಿಪುತ್ರ ಭಗವಾನ್ ಭಕ್ತ ವತ್ಸಲ |
ನಮೋಸ್ತುತೇ ಮಮಶೇರುಣಾಮಶು ವಿಮೋಚಯ ||
ಭೂಮಿಪುತ್ರ ಮಹಾತೇಜಾಃ ಸ್ವೇದೋಭವ ಪಿನಾಕಿನಃ |
ಧಾರಾರ್ತಸ್ತ್ವಂ ಪ್ರಪನ್ನೋಸ್ಮಿ ಗ್ರಹಣಾರ್ಗ್ಯಂ ನಮೋಸ್ತುತೇ ||
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.