Shattila Ekadashi: ಮಾಘ ಮಾಸದಲ್ಲಿ ಬರುವ ಷಟ್ತಿಲಾ ಏಕಾದಶಿ: ಈ ದಿನ ದಾನ, ಉಪವಾಸ ಸೇರಿದಂತೆ ಏನೇನು ಮಾಡಬೇಕು? ಇಲ್ಲಿದೆ ವಿವರ
Mar 04, 2024 10:14 PM IST
ಮಹಾವಿಷ್ಣು
- Shattila Ekadashi 2024: ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಜಯ ಏಕಾದಶಿ ಎಂದು ಕರೆಯುತ್ತೇವೆ. ಹಾಗೆಯೇ ಮಾಘಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಷಟ್ತಿಲಾ ಏಕಾದಶಿ ಎಂದು ಕರೆಯುತ್ತೇವೆ. ಈ ವರ್ಷ ಮಾರ್ಚ್ ತಿಂಗಳ 6ನೇ ತಾರೀಕು ಬುಧವಾರದಂದು ಷಟ್ತಿಲಾ ಏಕಾದಶಿ ಬಂದಿದೆ. (ಲೇಖನ: ಎಚ್. ಸತೀಶ್, ಜ್ಯೋತಿಷಿ)
ಪ್ರತಿಯೊಂದು ಮಾಸದಲ್ಲಿಯೂ ಏಕಾದಶಿಯು ಬರುತ್ತದೆ. ಆದರೆ ಮಾಘ ಮಾಸದಲ್ಲಿ ಬರುವ ಏಕಾದಶಿಯಲ್ಲಿ ವಿಶೇಷವಿದೆ. ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಜಯ ಏಕಾದಶಿ ಎಂದು ಕರೆಯುತ್ತೇವೆ. ಹಾಗೆಯೇ ಮಾಘಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಷಟ್ತಿಲಾ ಏಕಾದಶಿ ಎಂದು ಕರೆಯುತ್ತೇವೆ. ಈ ವರ್ಷ ಮಾರ್ಚ್ ತಿಂಗಳ 6ನೇ ತಾರೀಕು ಬುಧವಾರದಂದು ಷಟ್ತಿಲಾ ಏಕಾದಶಿ ಬಂದಿದೆ. ಇಂದಿನ ದಿನದಂದು ಸಾಲಿಗ್ರಾಮವನ್ನು ದಾನವಾಗಿ ನೀಡಬಹುದು. ಸಾಲಿಗ್ರಾಮಗಳಿಗೆ ಪೂಜೆ ಮಾಡಿದಷ್ಟೂ ಅದರ ಶಕ್ತಿಯು ಹೆಚ್ಚುತ್ತದೆ. ಸಾಲಿಗ್ರಾಮದಿಂದ ಧನಾತ್ಮಕ ಶಕ್ತಿ ಸದಾ ಹೊರಹೊಮ್ಮುತ್ತದೆ. ಈ ದಿನ ಮಹಾವಿಷ್ಣುವಿನ ಪೂಜೆ ಮಾಡಬೇಕು.
ತಾಜಾ ಫೋಟೊಗಳು
ಕೊಳಲಿನಂತಹ ಸಂಗೀತ ವಾದ್ಯಗಳನ್ನು ದಾನ ನೀಡಬಹುದು. ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೆ, ಕುಟುಂಬದ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಉನ್ನತಿ ದೊರೆಯುತ್ತದೆ. ಮಾಘ ಮಾಸದಲ್ಲಿ ಒಮ್ಮೆಯಾದರೂ ಪುಣ್ಯ ಸ್ನಾನವನ್ನು ಮಾಡಲೇಬೇಕು. ಒಂದು ವೇಳೆ ಹುಣ್ಣಿಮೆಯಂದು ಸಾಧ್ಯವಾಗದೆ ಹೋದಲ್ಲಿ ಏಕಾದಶಿಯ ದಿನದಂದು ಪುಣ್ಯ ಸ್ಥಾನವನ್ನು ಮಾಡಬಹುದು. ಇದರಿಂದ ಸಂಪೂರ್ಣ ಪುಣ್ಯ ಫಲ ಪ್ರಾಪ್ತಿಯಾಗುವುದು.
ಈ ಏಕಾದಶಿಯ ದಿನ ಉಪವಾಸವನ್ನು ಮಾಡುವುದು ಬಲು ಶ್ರೇಷ್ಠಕರ. ಕೆಲವರು ದಿನಪೂರ್ತಿ ಉಪವಾಸವಿರುತ್ತಾರೆ. ಆದರೆ ಸಂಜೆಯ ವೇಳೆ ಉಪಹಾರ ಸೇವಿಸಿದರೆ ಯಾವುದೇ ದೋಷವಿರುವುದಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವವರು, ಚಿಕ್ಕ ಮಕ್ಕಳು ಮತ್ತು ಉಪವಾಸ ಮಾಡಲೇಬೇಕೆಂಬ ನಿಯಮವಿಲ್ಲ. ಈ ದಿನದಂದು ತಿಲಹೋಮ ಮಾಡುವುದು ಬಹು ಮುಖ್ಯ. ಇದರಿಂದಾಗಿ ಅಪಮೃತ್ಯು ಪರಿಹಾರವಾಗುತ್ತದೆ. ಈ ದಿನದಂದು ತಿಲ ಎಂದರೆ ಎಳ್ಳನ್ನು ದಾನ ನೀಡುವುದರಿಂದ ಜತಿಸಿದ ವಂಶದ ಹಿರಿಯರಿಗೆ ಮೋಕ್ಷ ದೊರೆಯುತ್ತದೆ. ಈ ದಿನದಂದು ಹರಿಹರರಲ್ಲಿ ಬೇಧ ಎಣಿಸದೆ ಪೂಜಾ ಕಾರ್ಯಗಳಲ್ಲಿ ನಿರತರಾಗಬೇಕು. ಇಂದಿನ ದಿನ ಮಾಡುವ ಯಾವುದೇ ದೇವತಾ ಕಾರ್ಯವಾದರೂ ಕುಟುಂಬದ ಎಲ್ಲರ ಸಮ್ಮುಖದಲ್ಲಿ ನಡೆಸಬೇಕು. ಇದರಿಂದಾಗಿ ಕುಟುಂಬದಲ್ಲಿರುವ ಅನಾವಶ್ಯಕ ವಾದ ವಿವಾದಗಳು ಕೊನೆಗೊಳ್ಳುತ್ತವೆ.
ಎಳ್ಳನ್ನು ಉಪಯೋಗಿಸಿ ತಯಾರಿಸುವ ಆಹಾರವನ್ನು ಕುಟುಂಬದವರು ಸೇವಿಸುವುದಲ್ಲದೆ ಬೇರೆಯವರಿಗೂ ನೀಡುವುದು ಫಲಕಾರಿಯಾಗಿರುತ್ತದೆ. ಇಂದಿನ ದಿನದ ಪೂಜೆಗೆ ಸ್ವತ: ದೇವತೆಗಳೇ ಮನೆಗೆ ಆಗಮಿಸುತ್ತಾರೆ ಎಂಬ ನಂಬಿಕೆ ಇದೆ. ಈ ದಿನ ಐದು ಜನ ದಂಪತಿಗಳಿಗೆ ಭೋಜನ ವ್ಯವಸ್ಥೆ ಮಾಡಿದರೆ ಹೆಚ್ಚಿನ ಮಟ್ಟದ ಪುಣ್ಯ ಪ್ರಾಪ್ತಿಯಾಗುತ್ತದೆ. ಓರ್ವ ದೈವಭಕ್ತೆ ಕಷ್ಟಪಟ್ಟು ಪೂಜೆ ಮಾಡಿದರು ಯಾವುದೇ ರೀತಿಯ ದಾನವನ್ನು ಮಾಡುತ್ತಿರಲಿಲ್ಲ. ಇದರಿಂದಾಗುವ ಫಲಗಳ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಸ್ವತಃ ಶ್ರೀ ವಿಷ್ಣುವೇ ಆಕೆ ಮನೆಗೆ ಬಂದು ಮಾಡಿರುವ ಅನ್ನವನ್ನು ನೀಡಲು ಕೇಳುತ್ತಾನೆ. ಆಗ ಆ ಹೆಂಗಸು ಮನೆ ಮುಂದ ಇದ್ದ ಮಣ್ಣನ್ನು ಉಂಡೆ ಮಾಡಿ ಮಾನವ ರೂಪದಲ್ಲಿದ್ದ ವಿಷ್ಣುವಿಗೆ ಕೊಟ್ಟುಬಿಡುತ್ತಾಳೆ. ನಸುನಗುತ್ತಾ ವಿಷ್ಣು ಅದನ್ನು ವೈಕುಂಠಕ್ಕೆ ಕೊಂಡೊಯ್ಯುತ್ತಾನೆ.
ಭೂಲೋಕದಲ್ಲಿ ಹುಟ್ಟಿದವರೆಲ್ಲ ಒಂದಲ್ಲ ಒಂದು ದಿನ ದೇಹ ತ್ಯಾಗ ಮಾಡಲೇಬೇಕು. ಅದೇ ರೀತಿ ವಿಧಿನಿಯಮದಂತೆ ಈಕೆಯ ಅಂತ್ಯವೂ ಆಗುತ್ತದೆ. ಆಕೆ ಮಾಡಿದ ಪೂಜೆ ಪುನಸ್ಕಾರಗಳ ಫಲವಾಗಿ ಸ್ವರ್ಗಕ್ಕೆ ತೆರಳುತ್ತಾಳೆ. ಅಲ್ಲಿ ಎಲ್ಲೋ ರೀತಿಯ ಅನುಕೂಲಗಳು ವೈಭೋಗಗಳು ದೊರೆಯುತ್ತವೆ. ಆದರೆ ತಿನ್ನಲು ಒಂದು ಅಗಳು ಅನ್ನವು ಸಿಗುವುದಿಲ್ಲ. ಆಗ ಆಕೆಗೆ ವಿಷ್ಣುವಿನಿಂದ ತನ್ನ ತಪ್ಪಿನ ಅರಿವಾಗುತ್ತದೆ. ಪಶ್ಚಾತಾಪಪಟ್ಟ ಕಾರಣ ಮಾಡಿದ ಪಾಪ ನಾಶವಾಗಿ ಸ್ವರ್ಗದಲ್ಲಿ ಮಾಡಿದ ಪುಣ್ಯಕ್ಕೆ ತಕ್ಕಂತಹ ಫಲಗಳನ್ನು ಪಡೆಯುತ್ತಾಳೆ.
ಇದೇ ರೀತಿ ಅತಿ ಕ್ರೂರಿಯಾದ ಒಬ್ಬ ರಾಜನು ತನ್ನ ಪ್ರಜೆಗಳಿಗೆ ನಾನಾ ರೀತಿಯ ತೊಂದರೆಯನ್ನು ನೀಡುತ್ತಿರುತ್ತಾನೆ. ಅವನ ಅಹಂಕಾರಕ್ಕೆ ಮಿತಿಯೇ ಇರುವುದಿಲ್ಲ. ಇಂತಹ ವ್ಯಕ್ತಿಯು ಒಮ್ಮೆ ಅರಮನೆಗೆ ಬರುತ್ತಿರುವಾಗ ಒಂದು ಹಸು ಉಲ್ಲನ್ನು ತಿನ್ನಲು ಕಷ್ಟ ಪಡುತ್ತಿರುತ್ತದೆ. ಆಗ ರಾಜನು ತನ್ನ ಕಾಲಿನಿಂದ ಹುಲ್ಲನ್ನು ಹಸುವಿನ ಬಳಿಗೆ ನೂಕುತ್ತಾನೆ. ವಿಧಿಯ ಕೈವಶದಿಂದಾಗಿ ರಾಜನು ಗತಿಸಿದ ನಂತರ ಸ್ವರ್ಗವಾಸಿಯಾಗುತ್ತಾನೆ. ರಾಜನ ಇಡೀ ದೇಹವನ್ನು ದಂಡನೆಗೆ ಒಳಪಡಿಸುತ್ತಾರೆ. ಆದರೆ ಹಸುವಿಗೆ ಹುಲ್ಲನ್ನು ನೂಕಿದ ಕಾಲನ್ನು ಮಾತ್ರ ಸಿಂಹಾಸನದ ಮೇಲೆ ಇಟ್ಟು ಗೌರವ ಸೂಚಿಸುತ್ತಾರೆ. ಇದರಿಂದಾಗಿ ಪೂಜೆ ಪುನಸ್ಕಾರದ ಜೊತೆಯಲ್ಲಿ ದಾನ ಧರ್ಮಾದಿಗಳು ಕೂಡ ಬಹು ಮುಖ್ಯ ಎಂದು ತಿಳಿಯಬಹುದು.
ಲೇಖನ: ಎಚ್. ಸತೀಶ್, ಜ್ಯೋತಿಷಿ -ಬೆಂಗಳೂರು
ಮೊಬೈಲ್: 8546865832