logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾ ಭಾರತ ಯುದ್ಧಕ್ಕೆ ಕಾರಣವಾಯ್ತು ದ್ರೌಪದಿಯ ನಗು; ಪಾಂಡವರನ್ನು ಸರ್ವನಾಶ ಮಾಡಲು ದುರ್ಯೋಧನ ನಿರ್ಧರಿಸಿದ್ದೇಕೆ?

ಮಹಾ ಭಾರತ ಯುದ್ಧಕ್ಕೆ ಕಾರಣವಾಯ್ತು ದ್ರೌಪದಿಯ ನಗು; ಪಾಂಡವರನ್ನು ಸರ್ವನಾಶ ಮಾಡಲು ದುರ್ಯೋಧನ ನಿರ್ಧರಿಸಿದ್ದೇಕೆ?

Rakshitha Sowmya HT Kannada

Aug 10, 2024 02:18 PM IST

google News

ಮಹಾ ಭಾರತ ಯುದ್ಧಕ್ಕೆ ಕಾರಣವಾಯ್ತು ದ್ರೌಪದಿಯ ನಗು; ಪಾಂಡವರನ್ನು ಸರ್ವನಾಶ ಮಾಡಲು ದುರ್ಯೋಧನ ನಿರ್ಧರಿಸಿದ್ದೇಕೆ?

  • 18 ದಿನಗಳ ಕಾಲ ಮಹಾಭಾರತ ಯುದ್ಧ ನಡೆದದ್ದು ಗೊತ್ತೇ ಇದೆ. ದುರ್ಯೋಧನನ್ನು ನೋಡಿ ದ್ರೌಪದಿ ನಕ್ಕಿದ್ದರಿಂದ ದುರ್ಯೋಧನನಿಗೆ ಅವಮಾನ ಮಾಡಿದಂತೆ ಆಯ್ತು. ಜೊತೆಗೆ ಪಾಂಡವರ ಏಳಿಗೆಯನ್ನು ದುರ್ಯೋಧನನಿಗೆ ಸಹಿಸಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ದುರ್ಯೋಧನ ಪಾಂಡವರನ್ನು ನಾಶ ಮಾಡಲು ನಿರ್ಧರಿಸುತ್ತಾನೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾ ಭಾರತ ಯುದ್ಧಕ್ಕೆ ಕಾರಣವಾಯ್ತು ದ್ರೌಪದಿಯ ನಗು; ಪಾಂಡವರನ್ನು ಸರ್ವನಾಶ ಮಾಡಲು ದುರ್ಯೋಧನ ನಿರ್ಧರಿಸಿದ್ದೇಕೆ?
ಮಹಾ ಭಾರತ ಯುದ್ಧಕ್ಕೆ ಕಾರಣವಾಯ್ತು ದ್ರೌಪದಿಯ ನಗು; ಪಾಂಡವರನ್ನು ಸರ್ವನಾಶ ಮಾಡಲು ದುರ್ಯೋಧನ ನಿರ್ಧರಿಸಿದ್ದೇಕೆ?

ಮಹಾಭಾರತದ ಪಾತ್ರಗಳು, ಘಟನೆಗಳು, ಕೃಷ್ಣನು ಅರ್ಜುನನನಿಗೆ ಹೇಳಿದ ತತ್ವಗಳು ಇಂದಿಗೂ ಬಹಳ ಮಹತ್ವ ಪಡೆದಿದೆ. 18 ದಿನಗಳ ಕಾಲ ಮಹಾಭಾರತ ಯುದ್ಧ ನಡೆದು ಸಾಕಷ್ಟು ಸಾವು ನೋವುಗಳಾಗುತ್ತದೆ. ಮಹಭಾರತ ಯುದ್ಧಕ್ಕೆ ಕಾರಣವಾದ ಘಟನೆ ಹೀಗಿದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಪಾಂಡವರಿಂದ ರಾಜಸೂಯ ಯಾಗ

ಕೃಷ್ಣನು ಹೇಳಿದಂತೆ ಭೀಮನು ಜರಾಸಂಧನ ವಧೆ ಮಾಡುತ್ತಾನೆ. ಜರಾಸಂಧನ ಸೆರೆಮನೆಯಲ್ಲಿ ಇದ್ದ ಎಲ್ಲರನ್ನೂ ಬಿಡುಗಡೆ ಮಾಡುತ್ತಾನೆ. ನಂತರ ಪಾಂಡವರು ರಾಜಸೂಯ ಯಾಗವನ್ನು ಮಾಡಬೇಕೆಂಬ ನಿರ್ಧಾರಕ್ಕೆ ಬರುತ್ತಾರೆ. ಇದಕ್ಕೆ ಶ್ರೀಕೃಷ್ಣನ ಅನುಮತಿಯು ದೊರೆಯುತ್ತದೆ. ಆನಂತರ ಧರ್ಮರಾಯನು ಯೋಚನೆ ಮಾಡಿ ಅರ್ಜುನನನ್ನು ಉತ್ತರ ದಿಕ್ಕಿಗೂ, ಭೀಮನನ್ನು ಪೂರ್ವ ದಿಕ್ಕಿಗೂ, ಸಹದೇವನನ್ನು ದಕ್ಷಿಣ ದಿಕ್ಕಿಗೂ ಮತ್ತು ನಕುಲನನ್ನು ಪಶ್ಚಿಮ ದಿಕ್ಕಿಗೂ ಯುದ್ಧ ಮಾಡಲೆಂದು ಕಳಿಸುತ್ತಾರೆ. ಧರ್ಮರಾಜನ ನಿರೀಕ್ಷೆಯಂತೆ ಈ ನಾಲ್ವರೂ ಎದುರಾಗುವ ರಾಜ ಮಹಾರಾಜರನ್ನು ಗೆದ್ದು ಬರುತ್ತಾರೆ. ಇದರಿಂದ ಆಯೋಜಿಸಿದ್ದ ರಾಜಸೂಯ ಯಾಗಕ್ಕೆ ಯಾವುದೇ ಅಡ್ಡಿ ಇಲ್ಲದಂತಾಗುತ್ತದೆ.

ಧರ್ಮರಾಯನು ಯಾಗಕ್ಕೆ ಒಳ್ಳೆಯ ಮುಹೂರ್ತವನ್ನು ನಿಶ್ಚಯಿಸುತ್ತಾನೆ. ಎಲ್ಲಾ ರಾಜ ಮಹಾರಾಜರು ಮತ್ತು ಸಾಮಂತರನ್ನು ಆಹ್ವಾನಿಸುತ್ತಾನೆ. ಅದೇ ರೀತಿ ಹಸ್ತಿನಾಪುರದಿಂದ ನೂರು ಜನ ಕೌರವರು ಬರುತ್ತಾರೆ. ಧರ್ಮರಾಜನ ಈ ಯಜ್ಞಕ್ಕೆ ಕೌರವರ ಸಹಾಯವು ದೊರೆಯುತ್ತದೆ. ಯಾಗವು ಕೊನೆಗೆ ನಿರೀಕ್ಷೆಗೂ ಮೀರಿದಂತೆ ಯಶಸ್ಸನ್ನು ಗಳಿಸುತ್ತದೆ. ಸಂತಸ ಪಡುವ ಹಲವು ಮಂದಿ ಇದ್ದರೂ ಪಾಂಡವರ ಬಗ್ಗೆ ಅಸೂಯೆ ಪಡುವವರು ಇರುತ್ತಾರೆ. ಪಾಂಡವರ ಶಕ್ತಿ ಸಾಮರ್ಥ್ಯವನ್ನು ಬಲ್ಲವರಾದ್ದರಿಂದ ಅದನ್ನು ನೇರವಾಗಿ ವ್ಯಕ್ತಪಡಿಸಲು ವಿಫಲರಾಗುತ್ತಾರೆ.

ಪಾಂಡವರು ಮಾಡಿದ ಯಾಗದಲ್ಲಿ ಪಾಲ್ಗೊಳ್ಳುವ ಕೌರವರು

ಯಾಗವು ಪೂರ್ತಿಯಾದ ನಂತರ ಶ್ರೇಷ್ಠವಾದ ವ್ಯಕ್ತಿ ಒಬ್ಬನಿಗೆ ಅಗ್ರ ಪೂಜೆಯನ್ನು ಮಾಡಬೇಕಾಗುತ್ತದೆ. ಹಾಗೆಯೇ ಹರಿಗೆ ಅರ್ಘ್ಯವನ್ನು ನೀಡಬೇಕಾಗುತ್ತದೆ. ಆಗ ಭೀಷ್ಮನು ಶ್ರೀ ಕೃಷ್ಣನು ಸೂರ್ಯನಿಗೆ ಸಮಾನವಾದಂತ ತೇಜಸ್ಸನ್ನು ಹೊಂದಿರುತ್ತಾನೆ. ಆದ್ದರಿಂದ ಶ್ರೀ ಕೃಷ್ಣನಿಗೆ ಮೊದಲ ಅರ್ಘ್ಯವನ್ನು ನೀಡು ಎಂದು ಹೇಳುತ್ತಾನೆ. ಇದನ್ನು ಶಿಶು ಪಾಲನು ಒಪ್ಪುವುದಿಲ್ಲ. ಆದ್ದರಿಂದ ಶಿಶುಪಾಲನ ವಧೆಯಾಗುತ್ತದೆ. ನಂತರ ಎಲ್ಲರೂ ಸಂಭ್ರಮಾಚರಣೆಯಲ್ಲಿ ಇರುತ್ತಾರೆ. ದುರ್ಯೋಧನ ಆದಿಯಾಗಿ ಕೌರವರು ಸಹ ಸಂತಸದಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.

ಧರ್ಮರಾಯನ ಅರಮನೆಯು ನೋಡಲು ಆಕರ್ಷಕವಾಗಿರುತ್ತದೆ. ಉದಾಹರಣೆಗೆ ನಿಜವಾದ ಬಾಗಿಲು ಎಲ್ಲಿದೆ ಅಥವಾ ಬಾಗಿಲಿನ ರೀತಿಯ ಕೆತ್ತನೆ ಎಲ್ಲಿದೆ ಎಂಬುದನ್ನು ಸುಲಭವಾಗಿ ತಿಳಿಯಲಾಗದಂತಿರುತ್ತದೆ. ಕರ ಕೌಶಲ್ಯದ ಬಗ್ಗೆ ಆಸಕ್ತಿ ಮೂಡುವ ಕಾರಣ ದುರ್ಯೋಧನನು ಅರಮನೆಯನ್ನು ನೋಡಿ ಬರಲು ಹೊರಡುತ್ತಾನೆ. ಹೆಜ್ಜೆ ಹೆಜ್ಜೆಗೂ ದುರ್ಯೋಧನನಿಗೆ ಆಶ್ಚರ್ಯ ಕಾದಿರುತ್ತದೆ. ವಿಶಾಲವಾದ ಭವನವನ್ನು ಸುತ್ತಾಡಿ ಸುಸ್ತಾದ ದುರ್ಯೋಧನನನ್ನು ಅಲ್ಲಿಯೇ ಇದ್ದ ಶಿಲೆಯ ಮೇಲೆ ಕುಳಿತುಕೊಳ್ಳುತ್ತಾನೆ. ಆದರೆ ಅದು ನೀರಾಗಿರುತ್ತದೆ. ನೀರಿನಲ್ಲಿ ಬಿದ್ದ ದುರ್ಯೋಧನನು ಸಂಪೂರ್ಣ ನೆನೆಯುತ್ತಾನೆ. ಸುತ್ತಮುತ್ತಲೂ ನೋಡಿ ಯಾರು ಗಮನಿಸಿಲ್ಲವೆಂದು ಮುಂದೆ ನಡೆಯುತ್ತಾನೆ. ಅಲ್ಲಿ ನೀರಿರುವ ಸ್ಥಳವೊಂದು ಎದುರಾಗುತ್ತದೆ. ಭಯದಿಂದ ಮತ್ತೊಮ್ಮೆ ಬೀಳಬಾರದೆಂದು ನಿಧಾನವಾಗಿ ನಡೆಯುತ್ತಾನೆ. ಆದರೆ ಅದು ನೀರಿನ ಚಿತ್ರಣವಾಗಿರುತ್ತದೆ.

ದುರ್ಯೋಧನನ್ನು ನೋಡಿ ನಕ್ಕ ದ್ರೌಪದಿ

ಸೋತರೂ ಗೆದ್ದವನಂತೆ ತನ್ನನ್ನು ಯಾರು ನೋಡುತ್ತಿಲ್ಲ ಎಂಬ ಭ್ರಮೆಯಿಂದ ದುರ್ಯೋಧನನು ಅರಮನೆಯನ್ನು ವೀಕ್ಷಿಸಲು ಮುಂದುವರೆಯುತ್ತಾನೆ. ಆದರೆ ದುರ್ಯೋನನ ಎಲ್ಲಾ ಹಾವ ಭಾವಗಳನ್ನು ದ್ರೌಪದಿಯು ಪತಿಯರ ಸಂಗಡ ಕುಳಿತುಕೊಂಡು ನೋಡುತ್ತಿರುತ್ತಾಳೆ. ದುರ್ಯೋಧನನು ಅರಮನೆಯ ಸೊಬಗು ನೋಡಿ ಮೋಡಿಗೆ ಒಳಗಾಗಿ ಕೆಳಗೆ ಬೀಳುತ್ತಿದ್ದದ್ದು ದ್ರೌಪದಿಗೆ ನಗು ತಡೆಯಲಾಗುವುದಿಲ್ಲ. ದುರ್ಯೋಧನನ ಕಡೆ ಕೈ ತೋರಿಸುತ್ತಾ ಜೋರಾಗಿ ನಗುತ್ತಾಳೆ. ದ್ರೌಪದಿಯ ಜೊತೆಗೆ ಪಾಂಡವರು ಸಹ ದುರ್ಯೋಧನನ ಕಡೆ ಕೈ ತೋರಿ ನಗುತ್ತಾರೆ. ಆದರೆ ಧರ್ಮರಾಯನು ಎಲ್ಲರನ್ನೂ ಸುಮ್ಮನಿರಿಸಿ ದುರ್ಯೋಧನನಿಗೆ ಒಡವೆ ಮತ್ತು ಪೀತಾಂಬರವನ್ನು ಕೊಟ್ಟು ಸತ್ಕರಿಸಿ ಕಳಿಸುತ್ತಾನೆ.

ಆದರೆ ದ್ರೌಪದಿ ಮತ್ತು ಇತರರ ವರ್ತನೆ ದುರ್ಯೋಧನನಿಗೆ ಮನಸ್ಸಿಗೆ ನೋವುಂಟು ಮಾಡುತ್ತದೆ. ಹಸ್ತಿನಾಪುರಕ್ಕೆ ಮರಳಿದ ನಂತರ ತನ್ನನ್ನು ನೋಡಿ ನಕ್ಕ ಪ್ರಸಂಗವೇ ದುರ್ಯೋಧನನ್ನು ಬಹುವಾಗಿ ಕಾಡುತ್ತದೆ. ಇತ್ತ ಪಾಂಡವರು ದಿನೇ ದಿನೇ ಅಭಿವೃದ್ಧಿಯ ಪಥದತ್ತ ಸಾಗುತ್ತಾರೆ. ಇದನ್ನು ನೋಡಿ ದುರ್ಯೋಧನನಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಕೊನೆಗೆ ಏನಾದರೂ ಮಾಡಿ ಪಾಂಡವರನ್ನು ಸರ್ವನಾಶ ಮಾಡಲೇಬೇಕೆಂಬ ತೀರ್ಮಾನಕ್ಕೆ ಬರುತ್ತಾನೆ. ಈ ರೀತಿ ದ್ರೌಪದಿಯ ಆ ಒಂದು ನಗು ಮಹಾಭಾರತದ ಯುದ್ಧಕ್ಕೆ ಕಾರಣವಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ