logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Panchangam: ಪಂಚಾಂಗವನ್ನು ಹೇಗೆ ಓದಬೇಕು, ಪಂಚಾಂಗ ಶ್ರವಣದಿಂದ ದೊರೆಯುವ ಪ್ರತಿಫಲವೇನು? ಇಲ್ಲಿದೆ ಮಾಹಿತಿ

Panchangam: ಪಂಚಾಂಗವನ್ನು ಹೇಗೆ ಓದಬೇಕು, ಪಂಚಾಂಗ ಶ್ರವಣದಿಂದ ದೊರೆಯುವ ಪ್ರತಿಫಲವೇನು? ಇಲ್ಲಿದೆ ಮಾಹಿತಿ

Rakshitha Sowmya HT Kannada

Apr 07, 2024 06:30 AM IST

google News

ಪಂಚಾಂಗ ಓದುವ ವಿಧಾನ

  • Hindu Religion: ಹಿಂದೂ ಧರ್ಮದಲ್ಲಿ ಪಂಚಾಂಗಕ್ಕೆ ಬಹಳ ಪ್ರಾಮುಖ್ಯತೆ ಇದೆ. ಭಗವದ್ಗೀತೆ ಆಗಲೀ, ದೇವರ ಕಥೆಯನ್ನಾಗಲೀ ಪಾರಾಯಣ ಮಾಡಲು ನಿರ್ದಿಷ್ಟ ನಿಯಮವಿದೆ. ಅದೇ ರೀತಿ ಪಂಚಾಂಗವನ್ನು ಓದಲು ಕೂಡಾ ಒಂದು ಕ್ರಮ ಇದೆ. ಪಂಚಾಂಗ ಓದುವಾಗ ಏನೆಲ್ಲಾ ಕ್ರಮ ಅನುಸರಿಸಬೇಕು ನೋಡೋಣ.

ಪಂಚಾಂಗ ಓದುವ ವಿಧಾನ
ಪಂಚಾಂಗ ಓದುವ ವಿಧಾನ (PC: Sankara Subramanian @rsankaras)

Hindu Religion: ಪಂಚಾಂಗ ಶ್ರವಣ ಆರಂಭಿಸುವ ಮುನ್ನ ಪಂಚಾಂಗ ಮತ್ತು ತಾಂಬೂಲದ ಜೊತೆಯಲ್ಲಿ ದಕ್ಷಿಣ ಇಟ್ಟು ದಾನ ನೀಡಬೇಕು. ಆನಂತರವಷ್ಟೇ ಪಂಚಾಂಗವನ್ನು ಓದಲು ಶುರು ಮಾಡಬೇಕು. ಪಂಚಾಂಗ ಶ್ರವಣವನ್ನು ಬೆಳಗಿನ ವೇಳೆ ಮಾಡುವುದು ಬಲು ಸೂಕ್ತ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ಅವಿವಾಹಿತರಿಗೆ ಮದುವೆಯಾಗುವ ಯೋಗವಿದೆ, ಆದಾಯದ ಹೊಸ ಮೂಲ ಹುಡುಕುವುದು ಅನಿವಾರ್ಯವಾಗಿರುತ್ತೆ

Nov 29, 2024 04:10 PM

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ದೇವರ ಬಳಿಗೆ ಇಟ್ಟು ಪೂಜೆ ಮಾಡಿರುವ ಪಂಚಾಂಗವನ್ನು ಇನ್ನೊಮ್ಮೆ ಪೂಜಿಸಿ ತೆಗೆದುಕೊಳ್ಳಬೇಕು. ಮೊದಲು ಕುಲ ದೇವರಿಗೆ ಸಂಬಂಧಪಟ್ಟ ಯಾವುದೇ ಶ್ಲೋಕ ಅಥವಾ ಮಂತ್ರವನ್ನು ಪಠಿಸಬೇಕು. ಕಾರಣವೆಂದರೆ ಕುಲದೇವರ ಅನುಗ್ರಹ ಇಲ್ಲದೆ ಯಾವುದೇ ಪೂಜೆ ಪುನಸ್ಕಾರಗಳು ಪೂರ್ಣಗೊಳ್ಳುವುದಿಲ್ಲ ಹಾಗೆಯೇ ನಿರೀಕ್ಷಿಸಿದಂತಹ ಶುಭ ಫಲಗಳು ದೊರೆಯುವುದಿಲ್ಲ. ಅನಂತರ ಅಡೆತಡೆಗಳನ್ನು ನಿವಾರಿಸುವ ಗಣಪತಿಗೆ ಸಂಬಂಧಿಸಿದ ಶ್ಲೋಕ ಅಥವಾ ಮಂತ್ರವನ್ನು ಪಠಿಸಬೇಕು. ಯಾವುದೇ ಕೆಲಸವನ್ನು ಆರಂಭಿಸಲು ಮುನ್ನ ಶಕ್ತಿ ಸ್ವರೂಪಿಣಿಯಾದ ದುರ್ಗಾದೇವಿಯ ಯಾವುದೇ ಶ್ಲೋಕ ಅಥವಾ ಮಂತ್ರವನ್ನು ಪಠಿಸಬೇಕು.

ಪ್ರತಿಯೊಂದು ನಕ್ಷತ್ರಗಳಿಗೂ ತನ್ನದೇ ಆದ ಅಭಿಮಾನಿ ದೇವತೆಗಳಿದ್ದಾರೆ. ಯುಗಾದಿಯ ದಿನದಂದು ರೇವತಿ ನಕ್ಷತ್ರವಿದೆ. ಆದ್ದರಿಂದ ನಕ್ಷತ್ರ ಸೂಕ್ತದಲ್ಲಿ ಇರುವ ರೇವತಿ ನಕ್ಷತ್ರದ ಮಂತ್ರವನ್ನು ಹೇಳಿಕೊಳ್ಳಬೇಕು.

ರೇವತಿ ನಕ್ಷತ್ರದ ಮಂತ್ರ ಹೀಗಿದೆ

ಪೂಷಾ ರೇವತ್ಯನ್ವೇತಿ ಪಂಥಾಮ್ | ಪುಷ್ಟಿಪತೀ ಪಶುಪಾ ವಾಜಬಸ್ತ್ಯೌ |

ಇಮಾನಿ ಹವ್ಯಾ ಪ್ರಯತಾ ಜುಷಾಣಾ | ಸುಗೈರ್ನೋ ಯಾನೈರುಪಯಾತಾಂ ಯಙ್ಞಮ್ |

ಕ್ಷುದ್ರಾನ್ ಪಶೂನ್ ರಕ್ಷತು ರೇವತೀನಃ | ಗಾವೋ ನೋ ಅಶ್ವಾಗ್ಮ್ ಅನ್ವೇತು ಪೂಷಾ |

ಅನ್ನಗ್ಂ ರಕ್ಷಂತೌ ಬಹುಧಾ ವಿರೂಪಮ್ | ವಾಜಗ್ಮ್ ಸನುತಾಂ ಯಜಮಾನಾಯ ಯಙ್ಞಮ್

ಇದರ ಬದಲು ವಿಷ್ಣುವಿಗೆ ಸಂಬಂಧಿಸಿದ ಯಾವುದೇ ಮಂತ್ರ ಅಥವ ಶ್ಲೋಕವನ್ನು ಪಠಿಸಬಹುದು. ಕುಟುಂಬದ ಮೂಲದ ಊರಿನಲ್ಲಿರುವ ದುರ್ಗಾದೇವಿಯ ಸ್ತುತಿಯನ್ನು ಜಪಿಸಬೇಕು. ಆನಂತರ ಪ್ರತಿಯೊಬ್ಬರಿಗೂ ಜ್ಞಾನವನ್ನು ನೀಡುವ ಶ್ರೀ ಗುರು ಸ್ತುತಿಯನ್ನು ಜಪಿಸಬೇಕು. ಮೊದಲು ರಾಜಾದಾಯದ ಬಗ್ಗೆ ಓದಬೇಕು

ಪ್ರತಿಯೊಂದು ಸಂವತ್ಸರದಲ್ಲಿಯೂ ನವ ನಾಯಕರು ಇರುತ್ತಾರೆ

ರಾಜ

ಮಂತ್ರಿ

ಸೇನಾಧಿಪತಿ

ಸಸ್ಯಾಧಿಪತಿ

ಧಾನ್ಯಾಧಿಪತಿ

ಅರ್ಘ್ಯಾಧಿಪತಿ

ಮೇಘಾಧಿಪತಿ

ರಸಾಧಿಪತಿ

ನೀರಸಾಧಿಪತಿ ಮತ್ತು

ಪಶುಪಾಲಕರು

ಇರುತ್ತಾರೆ. ರಾಜನಿಂದ ಹಿಡಿದು ಸಾಮಾನ್ಯ ಜನರು ದೈನಂದಿನ ಜೀವನವನ್ನು ಹೇಗೆ ನಡೆಸುತ್ತಾರೆ ಎಂದು ತಿಳಿಯಬಹುದು. ಮಂತ್ರಿಯಿಂದ ದೇಶಕ್ಕೆ ಉಂಟಾಗುವ ಅನುಕೂಲಗಳು ಮತ್ತು ತೊಂದರೆಗಳನ್ನು ತಿಳಿದುಕೊಳ್ಳಬಹುದು. ಸೇನಾಧಿಪತಿಯಿಂದ ದೇಶ ವಿದೇಶಗಳೊಂದಿನ ಜನಗಳ ನಡುವೆ ಇರುವ ಪ್ರೀತಿ ವಿಶ್ವಾಸಗಳ ಬಗ್ಗೆ ತಿಳಿಯಬಹುದು. ಸಸ್ಯಾಧಿಪತಿಯಿಂದ ಪ್ರಸಕ್ತ ಸಂವತ್ಸರದಲ್ಲಿ ಬೆಳೆಗಳ ವಿಚಾರದಲ್ಲಿ ಉಂಟಾಗುವ ಬದಲಾವಣೆಗಳ ವಿಚಾರವನ್ನು ತಿಳಿಯಬಹುದು.

ಅರ್ಘ್ಯಾಧಿಪತಿಯಿಂದ ರಸವಸ್ತುಗಳ ಬಗ್ಗೆ ತಿಳಿದುಕೊಳ್ಳಬಹುದು. ಇದರಲ್ಲಿ ಮಳೆಯ ಬಗ್ಗೆ ಜನರ ಯೋಗಕ್ಷೇಮದ ವಿಚಾರವೂ ದೊರೆಯುತ್ತದೆ. ರಸಾಧಿಪತಿಯಿಂದ ಕೃಷಿ ಉತ್ಪನ್ನಗಳ ಬಗ್ಗೆ ಮಾತ್ರವಲ್ಲದೆ, ಜನಗಳ ಜೀವನದಲ್ಲಿನ ಸುಖ ದುಃಖಗಳನ್ನು ತಿಳಿಯಬಹುದು. ನಿರಸಾಧಿಪತಿಗಳಿಂದ ತೇಜಿ ಮಂದಿ ವಿಚಾರವನ್ನು ತಿಳಿಯಬಹುದು. ಪಶು ಪಾಲಕನಿಂದ ಸಾಕು ಪ್ರಾಣಿಗಳ ಬಗ್ಗೆ ಅರಿಯಬಹುದು.ಇದಲ್ಲದೆ ಉಪನಾಯಕರು ಸಹ ಇರುತ್ತಾರೆ. ಅವರ ಹೆಸರುಗಳು ಸಹ ಓದುವುದು ಬಲು ಮುಖ್ಯವಾಗಿದೆ.

ಗುರು ಮತ್ತು ಶನಿ ಸ್ಥಾನ

ಇದಾದ ನಂತರ ಪ್ರತಿಯೊಂದು ನಕ್ಷತ್ರದ ಕಂದಾಯ ಫಲವನ್ನು ಮತ್ತು ಅದರ ಫಲಿತಾಂಶವನ್ನು ಪಠಿಸಬೇಕು. ಮೇಘ ಫಲದಿಂದ ಮಳೆಯು ಯಾವ ದಿಕ್ಕಿನಿಂದ ಉತ್ಪತ್ತಿಯಾಗುತ್ತದೆ ಎಂಬ ವಿಚಾರವನ್ನು ತಿಳಿಯಬಹುದು. ಪ್ರತಿ ರಾಶಿಗಳಿಗೂ ಆದಾಯ ವ್ಯಯಗಳ ಪಟ್ಟಿ ಮಾಡಿರುತ್ತದೆ. ಇದರ ಪಠಣೆ ಅಗತ್ಯವಾಗಿ ಮಾಡಬೇಕಾಗುತ್ತದೆ. ನಂತರ ಸಂಕ್ರಾಂತಿಯ ಫಲವನ್ನು ಓದಬೇಕಾಗುತ್ತದೆ. ಇದರಲ್ಲಿ ಮುಖ್ಯವಾಗಿ ಸಸ್ಯ ಸಂಪತ್ತಿನ ಬಗ್ಗೆ ತಿಳಿದು ಬರುತ್ತದೆ. ರವಿಯು ಆರಿದ್ರ ನಕ್ಷತ್ರಕ್ಕೆ ಪ್ರವೇಶ ಮಾಡಿದಾಗ ದೊರೆಯುವ ವಿಶೇಷ ಬದಲಾವಣೆಗಳ ಬಗ್ಗೆ ತಿಳಿಯಬೇಕು. ಇದಾದ ನಂತರ ಜೇಷ್ಠ ಮಾಸದ ಶುಭ ಪಾಡ್ಯದ ಬಗ್ಗೆ, ಆಷಾಢ ಮಾಸದ ಸ್ವಾತಿ ನಕ್ಷತ್ರದ ಬಗ್ಗೆ ಮತ್ತು ರೋಹಿಣಿ ನಕ್ಷತ್ರ ಬಗ್ಗೆ ತಿಳಿಯಬಹುದು. ಇದಾದ ನಂತರ ಮಂಗಳ ಕಾರ್ಯಗಳಿಗೆ ಬಲು ಮುಖ್ಯವಾದ ಗುರು ಮತ್ತು ಶುಕ್ರ ಗ್ರಹಗಳ ಉದಯ ಮತ್ತು ಅಸ್ತದ ಬಗ್ಗೆ ಓದಬೇಕು. ಗ್ರಹಗಳ ಸಂಚಾರದಲ್ಲಿ ಮುಖ್ಯವಾದ ಗುರು ಮತ್ತು ಶನಿಗಳ ಸ್ಥಾನ ಬದಲಾವಣೆಯ ಬಗ್ಗೆ ತಿಳಿಯಬೇಕು.

ಅಂದಿನ ದಿನ ಶುದ್ದಿ ಅಂದರೆ, ಸಂವತ್ಸರ, ಆಯನ, ಋತು, ಮಾಸ, ಪ್ಲಕ್ಷ, ತಿಥಿ, ನಕ್ಷತ್ರ, ಯೋಗ,ಕರಣಗಳನ್ನು ಹೇಳಿಕೊಳ್ಳಬೇಕು.

ಪಂಚಾಂಗ ಶ್ರವಣದಿಂದ ದೊರೆಯುವ ಪ್ರತಿಫಲಗಳು ಕೆಳಕಂಡಂತಿವೆ

  • ರಾಜನ ಫಲದಿಂದ ಸ್ಥಿರವಾದ ಸಂಪತ್ತು
  • ಮಂತ್ರಿಯ ಫಲದಿಂದ ಕ್ಷೇಮ
  • ಧನ್ಯಾಧಿಪತಿಯ ಫಲದಿಂದ ಧರ್ಮಬುದ್ಧಿ ದೊರೆಯುತ್ತದೆ

ಯುಗಾದಿಯ ದಿನ ಪಂಚಾಂಗವನ್ನು ಓದುವುದಾಗಲಿ ಅಥವಾ ಕೇಳುವುದಾಗಲಿ ಮಾಡಿದಲ್ಲಿ ಜನ್ಮಜನ್ಮಾಂತರದ ಪಾಪಗಳು ನಶಿಸಿ ಹೋಗುತ್ತವೆ. ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಜೀವನದಲ್ಲಿ ಎದುರಾಗುವ ಅನಾವಶ್ಯಕ ತೊಂದರೆಗಳು ದೂರವಾಗುತ್ತದೆ. ಉತ್ತಮ ಆರೋಗ್ಯ ಲಭಿಸುತ್ತದೆ. ಅಂದಿನ ತಿಥಿಯ ಫಲವಾಗಿ ಸ್ಥಿರವಾದ ವೈಭವದ ಜೀವನ, ವಾರದಿಂದ ದೀರ್ಘಾಯುಷ್ಯ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ಹಿರಿಯರ ಅಪಮೃತ್ಯು ಪರಿಹಾರ , ಕರಣದಿಂದ ಮನಸ್ಸಿನಲ್ಲಿ ಇಚ್ಚಿಸಿದ ಎಲ್ಲಾ ರೀತಿಯ ಆಸೆ ಆಕಾಂಕ್ಷಿಗಳು ಈಡೇರುತ್ತವೆ.

ಪಂಚಾಂಗ ಶ್ರವಣವನ್ನು ಮಾಡಿದ ನಂತರ ಮಾರನೆಯ ದಿನದ ಸೂರ್ಯೋದಯದವರೆಗೂ ಪಂಚಾಂಗವನ್ನು ದೇವರ ಕೋಣೆಯಲ್ಲಿ ಇಡಬೇಕು. ಯಾವುದೇ ಕಾರಣಕ್ಕೂ ಪಂಚಾಂಗದಲ್ಲಿ ಕಪ್ಪು ಅಥವಾ ಕೆಂಪು ಬಣ್ಣದಲ್ಲಿ ಯಾವುದೇ ವಿಚಾರವನ್ನು ಬರೆಯಬಾರದು. ಹಾಗೆಯೇ ನಮ್ಮ ಹೆಸರನ್ನು ಸಹ ಬರೆಯುವುದು ತಪ್ಪು ಎಂಬ ನಿಯಮ ಕೆಲವು ಕಡೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ