logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಪ್ಪು ಬಣ್ಣ ಅಶುಭವೇ? ಕೈ, ಕಾಲಿಗೆ ಕಪ್ಪು ದಾರ ಕಟ್ಟುವುದೇಕೆ, ಮಂಗಳ ಸೂತ್ರದಲ್ಲಿ ಕಪ್ಪು ಮಣಿಗಳನ್ನು ಏಕೆ ಪೋಣಿಸಲಾಗುತ್ತದೆ?

ಕಪ್ಪು ಬಣ್ಣ ಅಶುಭವೇ? ಕೈ, ಕಾಲಿಗೆ ಕಪ್ಪು ದಾರ ಕಟ್ಟುವುದೇಕೆ, ಮಂಗಳ ಸೂತ್ರದಲ್ಲಿ ಕಪ್ಪು ಮಣಿಗಳನ್ನು ಏಕೆ ಪೋಣಿಸಲಾಗುತ್ತದೆ?

Rakshitha Sowmya HT Kannada

May 13, 2024 01:32 PM IST

google News

ಕಪ್ಪು ಬಣ್ಣ ಅಶುಭವೇ? ಕೈ, ಕಾಲಿಗೆ ಕಪ್ಪು ದಾರ ಧರಿಸುವುದೇಕೆ, ಮಂಗಳ ಸೂತ್ರದಲ್ಲಿ ಕಪ್ಪು ಮಣಿಗಳನ್ನು ಏಕೆ ಪೋಣಿಸಲಾಗುತ್ತದೆ?

  • Hindu Religion: ಕಪ್ಪು ಬಣ್ಣ ಅಶುಭ ಎಂದು ಬಹುತೇಕರು ತಪ್ಪು ತಿಳಿದಿದ್ದಾರೆ. ಆದರೆ ಶನಿಯ ಬಣ್ಣ ಕೂಡಾ ಕಪ್ಪು ಎಂಬುದನ್ನು ಮರೆಯಬಾರದು. ನಿಜವಾಗಿಯೂ ಕಪ್ಪು ಬಣ್ಣ ಅಶುಭವೇ? ಕೈ, ಕಾಲಿಗೆ ಕಪ್ಪು ದಾರ ಧರಿಸುವುದೇಕೆ, ಮಂಗಳ ಸೂತ್ರದಲ್ಲಿ ಕಪ್ಪು ಮಣಿಗಳನ್ನು ಏಕೆ ಪೋಣಿಸಲಾಗುತ್ತದೆ? ಇಲ್ಲಿದೆ ಉತ್ತರ. 

ಕಪ್ಪು ಬಣ್ಣ ಅಶುಭವೇ? ಕೈ, ಕಾಲಿಗೆ ಕಪ್ಪು ದಾರ ಧರಿಸುವುದೇಕೆ, ಮಂಗಳ ಸೂತ್ರದಲ್ಲಿ ಕಪ್ಪು ಮಣಿಗಳನ್ನು ಏಕೆ ಪೋಣಿಸಲಾಗುತ್ತದೆ?
ಕಪ್ಪು ಬಣ್ಣ ಅಶುಭವೇ? ಕೈ, ಕಾಲಿಗೆ ಕಪ್ಪು ದಾರ ಧರಿಸುವುದೇಕೆ, ಮಂಗಳ ಸೂತ್ರದಲ್ಲಿ ಕಪ್ಪು ಮಣಿಗಳನ್ನು ಏಕೆ ಪೋಣಿಸಲಾಗುತ್ತದೆ?

ಸನಾತನ ಧರ್ಮದಲ್ಲಿ ಬಣ್ಣಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ಆದರೆ ಕಪ್ಪು ಬಣ್ಣವನ್ನು ಅಶುಭದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇಷ್ಟಾದರೂ ಕೆಲವೊಂದು ಧಾರ್ಮಿಕ ಆಚರಣೆಗಳಲ್ಲಿ ಕಪ್ಪು ಬಣ್ಣ ಬಳಸಲಾಗುತ್ತದೆ. ಮಂಗಳಸೂತ್ರದಲ್ಲಿ ಕೂಡಾ ಕೆಂಪು ಹವಳಗಳೊಂದಿಗೆ ಕಪ್ಪು ಮಣಿಯನ್ನು ಪೋಣಿಸಲಾಗುತ್ತದೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಶುಭ ಸಮಾರಂಭಗಳು , ಹಬ್ಬಗಳು, ಮದುವೆಗಳು ಮತ್ತು ಪೂಜೆಗಳಂತಹ ಧಾರ್ಮಿಕ ಸಮಾರಂಭಗಳಿಗೆ ಕಪ್ಪು ಬಟ್ಟೆಗಳನ್ನು ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ . ಆದರೆ ಅಚ್ಚರಿಯ ವಿಷಯವೆಂದರೆ ಮದುವೆಯಲ್ಲಿ ವಧು ಧರಿಸುವ ಮಂಗಳಸೂತ್ರದಲ್ಲಿ ಕಪ್ಪು ಮಣಿಗಳು ಇರಲೇಬೇಕು.

ಮಂಗಳಸೂತ್ರದಲ್ಲಿ ಕಪ್ಪು ಮಣಿಗಳನ್ನು ಬಳಸುವುದೇಕೆ?

ಮಂಗಳ ಸೂತ್ರದಲ್ಲಿ ಕಪ್ಪು ಮಣಿಗಳು ಏಕೆ ಇರುತ್ತವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಪ್ರತಿ ವಿವಾಹಿತ ಮಹಿಳೆ ಮಂಗಳ ಸೂತ್ರದ ಜೊತೆಗೆ ಕಪ್ಪು ಮಣಿಗಳನ್ನು ಧರಿಸುತ್ತಾರೆ. ಹಿಂದೂ ಧರ್ಮದ ಪ್ರಕಾರ, ದೇವರುಗಳು ಸ್ವತಃ ಕಪ್ಪು ಬಣ್ಣವನ್ನು ಸರ್ವೋಚ್ಚ ಬಣ್ಣ ಎಂದು ಕರೆಯುತ್ತಾರೆ. ಇದನ್ನು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗಿದೆ. ದಾಂಪತ್ಯ ಜೀವನಕ್ಕೆ ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಎಂದು ಕಪ್ಪು ಮಣಿಗಳನ್ನು ಧರಿಸಲಾಗುತ್ತದೆ. ಪತಿ-ಪತ್ನಿಯರ ಸಂಬಂಧವು ಏಳು ಜನ್ಮಗಳವರೆಗೆ ಇರುತ್ತದೆ ಎಂಬುದು ಇದರ ಹಿಂದಿನ ಕಾರಣ. ದಂಪತಿಗಳ ಮೇಲೆ ಯಾವುದೇ ದುಷ್ಟ ಕಣ್ಣು ಅಥವಾ ಶತ್ರುಗಳ ಕಣ್ಣುಗಳನ್ನು ತಪ್ಪಿಸಲು ಕಪ್ಪು ಮಣಿಗಳನ್ನು ಮಂಗಳಸೂತ್ರದಲ್ಲಿ ಪೋಣಿಸಲಾಗುತ್ತದೆ. ಇವುಗಳನ್ನು ಧರಿಸುವುದು ಆಶೀರ್ವಾದ, ರಕ್ಷಣೆ ಮತ್ತು ದೀರ್ಘಾಯುಷ್ಯದ ಸಂಕೇತವಾಗಿದೆ .

ಮಣಿ ಮಾತ್ರವಲ್ಲ ಮಕ್ಕಳಿಗೆ ಹಣೆ ಮೇಲೆ ಕಪ್ಪು ಇಡುವುದು ಕೂಡಾ ಒಳ್ಳೆಯದು. ಯಾರ ದೃಷ್ಟಿಯೂ ಬೀಳದಿರಲಿ ಎನ್ನುವುದೇ ಇದಕ್ಕೆ ಕಾರಣ. ಕಪ್ಪು ಬಣ್ಣವು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಸಮಸ್ಯೆ ಬಾರದಂತೆ ತಡೆಯುತ್ತದೆ. ಈ ಬಣ್ಣವು ನಿಮ್ಮ ಸ್ಥಿತಿಯನ್ನು, ನಿಮ್ಮ ಶಕ್ತಿಯನ್ನು ತೋರಿಸುತ್ತದೆ. ಕಪ್ಪು ಬಣ್ಣ ಶನಿ ದೇವರಿಗೆ ಪ್ರಿಯವಾಗಿದೆ . ಯಾರ ಮೇಲೂ ತಾರತಮ್ಯವಿಲ್ಲ ಎನ್ನುವುದನ್ನು ಈ ಬಣ್ಣದ ಪ್ರಕೃತಿ ತೋರಿಸುತ್ತದೆ. ಅದಕ್ಕಾಗಿಯೇ ನ್ಯಾಯಾಧೀಶರು ಮತ್ತು ವಕೀಲರು ಕಪ್ಪು ಕೋಟ್ ಧರಿಸುತ್ತಾರೆ.

ಕಪ್ಪು ನಿಜವಾಗಿಯೂ ಅಶುಭವೇ?

ದುರ್ಗಾ ದೇವಿಯ ಏಳನೇ ರೂಪವಾದ ಮಹಾಕಾಳಿ ಅತ್ಯಂತ ಶಕ್ತಿಶಾಲಿ. ಅವಳ ಕೋಪವನ್ನು ಶಮನಗೊಳಿಸಲು ಶಿವನೇ ಅವಳ ಪಾದಕ್ಕೆ ಬರಬೇಕಾಯಿತು ಎಂದು ಹೇಳಲಾಗುತ್ತದೆ . ವಿಷ್ಣುವಿನ ಸಾಲಿಗ್ರಾಮ ರೂಪವೂ ಕಪ್ಪು ಬಣ್ಣದ್ದಾಗಿದೆ. ಇವುಗಳನ್ನು ಮನೆಯಲ್ಲಿಟ್ಟರೆ ಮನೆಯಿಂದ ನಕಾರಾತ್ಮಕ ಶಕ್ತಿ ದೂರಾಗುತ್ತದೆ. ಕಪ್ಪು ಬಣ್ಣವನ್ನು ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ಕಪ್ಪು ಬಣ್ಣದ ಹಸುಗಳನ್ನು ಪೂಜಿಸುವುದು ಉತ್ತಮ ಎಂದು ಘೋಷಿಸಲಾಗಿದೆ. ಶನಿ ಮತ್ತು ಕೇತು ಪ್ರತಿಕೂಲ ಪರಿಸ್ಥಿತಿಗಳಿಂದ ತೊಂದರೆಗಳನ್ನು ಎದುರಿಸುತ್ತಿದ್ದರೆ, ಹಿರಿಯರು ಕಪ್ಪು ನಾಯಿಗೆ ಆಹಾರ ತಿನ್ನಿಸಲು ಹೇಳುತ್ತಾರೆ. ಅಲ್ಲದೆ ಜನರು ನಿತ್ಯ ಪೂಜಿಸುವ ಶಿವಲಿಂಗವೂ ಕಪ್ಪು ಬಣ್ಣದ್ದಾಗಿದೆ. ಕಾಲ ಭೈರವ ಹಾಗೂ ಆತನ ವಾಹನ ಶ್ವಾನ ಕೂಡಾ ಕಪ್ಪು ಬಣ್ಣದ್ದಾಗಿದೆ.

ಶಗುಣ ಶಾಸ್ತ್ರದ ಪ್ರಕಾರ, ಮನೆಗೆ ಕಪ್ಪು ಇರುವೆಗಳು ಬಂದರೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಮನೆಗೆ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಕಪ್ಪು ತುಂಬಾ ಶಕ್ತಿಶಾಲಿ. ದುಷ್ಟ ಕಣ್ಣುಗಳನ್ನು ತೊಡೆದುಹಾಕಲು ಅನೇಕ ಜನರು ಶನಿ ದೇವಸ್ಥಾನ ಅಥವಾ ಭೈರವ ದೇವಸ್ಥಾನದಿಂದ ತಮ್ಮ ಕಾಲು, ಕೈ ಅಥವಾ ಕುತ್ತಿಗೆಗೆ ಕಪ್ಪು ದಾರ ಕಟ್ಟಿಕೊಳ್ಳುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಕಪ್ಪು ಬಣ್ಣವನ್ನು ಸಹ ಉಲ್ಲೇಖಿಸಲಾಗಿದೆ.

ಯಾರು ಕಪ್ಪು ಬಣ್ಣ ಧರಿಸಬಾರದು?

ಜಾತಕದಲ್ಲಿ ಶನಿಯು ನೀಚ ಸ್ಥಾನದಲ್ಲಿದ್ದು ಸಂಕಟಗಳನ್ನು ಅನುಭವಿಸುತ್ತಿರುವವರು ಕಪ್ಪು ಬಣ್ಣವನ್ನು ಧರಿಸಬಾರದು. ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ಮ ದಿನಾಂಕದಲ್ಲಿ ಸಂಖ್ಯೆ 8 ಅಧಿಕವಾಗಿದ್ದರೆ ಕಪ್ಪು ಬಣ್ಣವನ್ನು ತಪ್ಪಿಸಬೇಕು. ಹಾಗೇ ಯಾರಾದರೂ ನಿಧನರಾಗಿದ್ದರೆ ಅವರನ್ನು ನೋಡಲು ಹೋಗುವಾಗ ಕೂಡಾ ಕಪ್ಪು ಬಣ್ಣ ಧರಿಸಬಾರದು ಎಂಬ ನಂಬಿಕೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ